ಬೆಂಗಳೂರು: ಹಾಡಹಗಲೆ ಯುವಕನ ಬರ್ಬರ ಹತ್ಯೆ (Murder case) ನಡೆದಿದೆ. ಬೆಂಗಳೂರಿನ ಶೇಷಾದ್ರಿ ಪುರಂ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲಿ ಘಟನೆ ನಡೆದಿದೆ. ಅಜಿತ್ ಕುಮಾರ್ (25) ಕೊಲೆಯಾದವನು.
ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ರಶಿಲ್ಲಾರ್ ಸ್ಟ್ರೀಟ್‌ನಲ್ಲಿ ಅಜಿತ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕೊಲೆಗೆ ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಸ್ಥಳಕ್ಕೆ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಭೇಟಿ ನೀಡಿದ್ದಾರೆ.
ಸ್ಥಳದಲ್ಲಿ ಮೃತ ಕುಟುಂಬಸ್ಥರ ಆಕ್ರಂದನ ನಡೆದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಹಂತಕರಿಗಾಗಿ ಹುಡುಕಾಟ ನಡೆಸಿರುವ ಪೊಲೀಸರು, ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.
ಕೊಲೆ ಕೇಸ್‌ನಲ್ಲಿ ಆರೋಪಿಯಾಗಿದ್ದ ಅಜಿತ್
ಬ್ಲಡ್ ಬ್ಯಾಂಕ್‌ನಲ್ಲಿ ಕೆಲಸ ಮಾಡುತ್ತಿದ್ದ ಅಜಿತ್, 2022ರಲ್ಲಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದ. ಸಂಜೆ 4:15ರ ವೇಳೆಗೆ ಮನೆಯಿಂದ ಊಟ ಮುಗಿಸಿ ಹೊರಬಂದಿದ್ದ ಅಜಿತ್ ಮೇಲೆ ಏಕಾಏಕಿ ಹಂತಕರ ಗ್ಯಾಂಗ್ ಅಟ್ಯಾಕ್ ಮಾಡಿದೆ. ಮಚ್ಚು ಬೀಸಿದ ರಭಸಕ್ಕೆ ಅಜಿತ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಶೇಷಾದ್ರಿಪುರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದ. ಸದ್ಯ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಬೌರಿಂಗ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಅಜಿತ್ ಹಾಗೂ ಸೋದರ ಕಾರ್ತಿಕ್ ಇಬ್ಬರು ಗಣೇಶ್ ಎಂಬಾತನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದರು. ಏರಿಯಾದಲ್ಲಿ ನಾನೇ ಡಾನ್ ಎಂದು ಅಜಿತ್ ಮೆರೆಯುತ್ತಿದ್ದ. ಸಮಯ ಕಾದು ನೋಡಿ ಎದುರಾಳಿಗಳು ಸೇಡು ತೀರಿಸಿಕೊಂಡಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ