ಬೆಂಗಳೂರು: ಸೀರೆಗಳೆಂದರೆ ಹೆಂಗಳೆಯರಿಗೆ ಪಂಚಪ್ರಾಣ. ಅದರಲ್ಲೂ ಮೈಸೂರ್ ಸಿಲ್ಕ್ ಸ್ಯಾರಿ ಎಂದರೆ ಕೇಳಬೇಕಾ? ಒಂದು ರೀತಿಯ ವಿಶೇಷ ಆಕರ್ಷಣೆ ಇರುವುದು ಸತ್ಯ. ಈ ಸೀರೆಗಳು ಕಡಿಮೆ ದರದಲ್ಲಿ ಸಿಗುತ್ತದೆ ಎಂದರೆ ಸಾಕು ನಾ ಮುಂದು ತಾ ಮುಂದು ಎಂದು ಊಟ, ನಿದ್ದೆ ಬಿಟ್ಟು ಕ್ಯೂನಲ್ಲಿ ನಿಂತು ಬಿಡುತ್ತಾರೆ. ಮೈಸೂರು ಸಿಲ್ಕ್ ಸೀರೆಗೆ (Mysuru silk sarees) ಸಿಕ್ಕಾಪಟ್ಟೆ ಡಿಮ್ಯಾಂಡ್ ಶುರುವಾಗಿದ್ದು, ಕಿಲೋ ಮೀಟರ್ ಗಟ್ಟಲೇ ಕ್ಯೂ ನಿಂತರೂ ಸಿಗದಂತಾಗಿದೆ.
ಹೀಗೆ ಈ ಸಿಲ್ಕ್ ಸೀರೆಗಾಗಿ (Mysuru silk sarees) ಶನಿವಾರ ಎಲ್ಲ ಮಳಿಗೆಗಳಲ್ಲಿ ಸ್ತ್ರೀಯರ ದಂಡು ದಾಳಿ ನಡೆಸಿದ್ದರು. ಹಣ ಕೊಟ್ಟರು ಮೈಸೂರು ಸಿಲ್ಕ್ ಸೀರೆ ಮಹಿಳೆಯರಿಗೆ ಸಿಗುತ್ತಿಲ್ಲ. ಬೇಡಿಕೆಗೆ ತಕ್ಕಂತೆ ಮೈಸೂರು ಸಿಲ್ಕ್ ಸೀರೆ ಉತ್ಪಾದನೆ ಆಗುತ್ತಿಲ್ಲ. ಮದುವೆ, ಹಬ್ಬ ಸೇರಿದಂತೆ ವಿಶೇಷ ದಿನಗಳಿಗೂ ಮೈಸೂರು ಸ್ಕಿಲ್ ಸೀರೆ ಸಿಗುತ್ತಿಲ್ಲ.
ಹೀಗಾಗಿ ವಾರಕ್ಕೊಮ್ಮೆ ಸಿಗುವ ವೆರೈಟಿ ವೆರೈಟಿ ಸೀರೆಗಳಿಗೆ ಸರ್ಕಾರದ ಮೈಸೂರು ಸಿಲ್ಕ್ ಮಳಿಗೆಗಳ ಮುಂದೆ ಮಹಿಳೆಯರು ಜಮಾಯಿಸಿದ್ದಾರೆ. ಮಳಿಗೆಗಳು ಓಪನ್ ಆಗುವ ಮುಂಚೆಯೇ ಹೆಣ್ಮಕ್ಕಳು ಬಂದು ಕ್ಯೂ ನಿಂತಿರುವ ದೃಶ್ಯ ಕಂಡು ಬಂತು. ಬೆಂಗಳೂರಿನ ಎಂ.ಜಿ ರಸ್ತೆಯ ಕೆಎಸ್‌ಐಸಿ ಮಳಿಗೆ ಎದುರು ಹೆಣ್ಣುಮಕ್ಕಳು ದಂಡು ಕಂಡು ಕರ್ನಾಟಕ ರೇಷ್ಮೆ ಉದ್ಯಮಗಳ ನಿಗಮದ ಸಿಬ್ಬಂದಿಯೇ ಶಾಕ್ ಆಗಿದ್ದರು.
ಇದನ್ನೂ ಓದಿ: Silk Saree Maintanance: ಬೆಲೆಬಾಳುವ ರೇಷ್ಮೆ ಸೀರೆಗಳ ನಿರ್ವಹಣೆ ಹೀಗಿರಲಿ
ಇನ್ನು ಕೇವಲ 7 ನಿಮಿಷದಲ್ಲಿ 200ಕ್ಕೂ ಹೆಚ್ಚು ಸೀರೆಗಳು ಸೇಲ್ ಆಗಿದ್ದವು. ಮೈಸೂರು ಸಿಲ್ಕ್ ಸೀರೆಗೆ ಡಿಮ್ಯಾಂಡ್ ಹಿನ್ನೆಲೆ ಕೇವಲ ಮೂರೇ ಸೀರೆ ಸಿಕ್ತು ಅಂತಾ ಕೆಲ ಮಹಿಳೆಯರು ನಿರಾಸೆ ಪಟ್ಟುಕೊಂಡರು. ಒಂದೊಂದು ಸೀರೆ 30 ಸಾವಿರ ರೂ.ಯಿಂದ ಆರಂಭವಾಗಲಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ