ಬೆಂಗಳೂರು: ನಮ್ಮ ಮೆಟ್ರೋದಲ್ಲಿ (Namma Metro ) ಮಕ್ಕಳಿಗೆ ಸೇಫ್ಟಿ ಇಲ್ವಾ?? ಇಂತಹದೊಂದು ಅನುಮಾನ ಸಹಜವಾಗಿಯೇ ಕಾಡುತ್ತದೆ. ಕೆಲವೊಮ್ಮೆ ಸಿಬ್ಬಂದಿ ಇದ್ದರೂ ಅಚಾರ್ತುಯಗಳು ನಡೆದು ಹೋಗಿ ಬಿಡುತ್ತವೆ. ಸದ್ಯ ನಿನ್ನೆ ಗುರುವಾರ ನಾಲ್ಕು ವರ್ಷದ ಮಗುವೊಂದು ಆಟವಾಡುತ್ತಾ ಮೆಟ್ರೋ ಟ್ರ್ಯಾಕ್‌ಗೆ ಜಿಗಿದಿದೆ.
ಬೆಂಗಳೂರಿನ ಬೈಯಪ್ಪನಹಳ್ಳಿ ಮೆಟ್ರೋ ಸ್ಟೇಷನ್‌ನಲ್ಲಿ (Baiyappanahalli Metro) ರಾತ್ರಿ 9 ಗಂಟೆ ಸುಮಾರಿಗೆ ಘಟನೆ ನಡೆದಿದೆ. ಮೆಟ್ರೋ ರೈಲು ಬರಲು ನಾಲ್ಕೈದ ನಿಮಿಷಗಳು ಬಾಕಿ ಇದ್ವು. ಈ ವೇಳೆ ಆಟವಾಡುತ್ತಾ ಮಗು ಟ್ರ್ಯಾಕ್ ಮುಂದೆ ಬಂದಿದೆ. ಬಗ್ಗಿ ನೋಡುವಾಗ ಆಕಸ್ಮಿಕವಾಗಿ ಆಯತಪ್ಪಿ ಟ್ರ್ಯಾಕ್‌ಗೆ ಬಂದಿದೆ. ಮಗು ಟ್ರ್ಯಾಕ್‌ಗೆ ಬಿದ್ದ ತಕ್ಷಣ ಅಲರ್ಟ್ ಆದ ಮೆಟ್ರೋ ಸಿಬ್ಬಂದಿ, ಮೆಟ್ರೋ ಟ್ರ್ಯಾಕ್‌ನ ಪವರ್ ಕಟ್ ಮಾಡಿಸಿದ್ದಾರೆ.
ಇದನ್ನೂ ಓದಿ: Gold Rate Today: ಸ್ವರ್ಣಪ್ರಿಯರಿಗೆ ಶಾಕ್; ಮತ್ತೆ ಏರಿಕೆ ಕಂಡ ಚಿನ್ನದ ದರ
ಕೂಡಲೇ ಟ್ರ್ಯಾಕ್‌ಗೆ ಇಳಿದು ಮಗುವನ್ನು ರಕ್ಷಣೆ ಮಾಡಿದ್ದಾರೆ. ಅದೃಷ್ಟವಶಾತ್ ಮಗುವಿಗೆ ಯಾವುದೇ ಅಪಾಯವಾಗಿಲ್ಲ. ಇನ್ನೂ ಈ ಘಟನೆಯಿಂದ ಬೈಯಪ್ಪನಹಳ್ಳಿ ನೇರಳೆ ಮಾರ್ಗದಲ್ಲಿ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿತ್ತು. ನಿನ್ನೆ (ಆ.1) ರಾತ್ರಿ 9 ಗಂಟೆ 8 ನಿಮಿಷದಿಂದ 9 ಗಂಟೆ 16 ನಿಮಿಷದ ವರೆಗೆ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿ, 2 ರೈಲು ಸಂಚಾರವನ್ನು ಬಿಎಂಆರ್‌ಸಿಎಲ್ ಸ್ಥಗಿತಗೊಳಿಸಿತ್ತು. ಬಳಿಕ ಎಂದಿನಂತೆ ಮೆಟ್ರೋ ಸಂಚಾರಾರಂಭವಾಗಿತ್ತು.
ಇಬ್ಬರೂ ಮೆಟ್ರೋ ಸೆಕ್ಯುರಿಟಿ ಗಾರ್ಡ್‌ಗಳಿಂದ ಮಗುವಿನ ಪ್ರಾಣ ಉಳಿದಿದೆ. ಮಗುವಿಗೆ ಯಾವುದೇ ಗಾಯಗಳು ಆಗದ ರೀತಿಯಲ್ಲಿ ಮೆಟ್ರೋ ವಿದ್ಯುತ್ ಲೈನ್ ಆಫ್ ಮಾಡಿದ್ದಾರೆ. ಮೆಟ್ರೋ ಸೆಕ್ಯುರಿಟಿಗಳು, ಸಿಬ್ಬಂದಿ ಚೂರು ಯಾಮಾರಿದರೂ ಮಗುವಿನ ಪ್ರಾಣ ಹೋಗುತ್ತಿತ್ತು ಎಂಬ ಮಾಹಿತಿ ಇದೆ.
ಈ ಕುರಿತು ಬಿಎಂಆರ್‌ಸಿಎಲ್ ಮಾಹಿತಿ ನೀಡಿದೆ. ನಿನ್ನೆ ಗುರುವಾರ ರಾತ್ರಿ 9 ಗಂಟೆ 8 ನಿಮಿಷಕ್ಕೆ ಈ ಘಟನೆ ಸಂಭವಿಸಿದೆ. 4 ವರ್ಷದ ಮಗು ಹಳಿಗೆ ಬಿದ್ದ ತಕ್ಷಣ ಭದ್ರತಾ ಸಿಬ್ಬಂದಿ ಅಲರ್ಟ್ ಆಗಿದ್ದಾರೆ. ಫ್ಲಾಟ್‌ಫಾರಂ ಎರಡು ಬದಿಯಿದ್ದ ತುರ್ತು ನಿಲುಗಡೆ ವ್ಯವಸ್ಥೆ ಬಳಕೆ ಮಾಡಲಾಗಿದೆ. ಸಣ್ಣಪುಟ್ಟ ಗಾಯ ಬಿಟ್ಟರೆ ಯಾವುದೇ ಗಂಭೀರ ಸಮಸ್ಯೆ ಮಗುವಿಗೆ ಆಗಿಲ್ಲ. 9 ಗಂಟೆ 15 ನಿಮಿಷಕ್ಕೆ ರೈಲು ಸಂಚಾರ ಪುನರ್ ಆರಂಭವಾಗಿದೆ. ಮಗುವಿಗೆ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಸಹ ಅಗತ್ಯ ಪ್ರಾಥಮಿಕ ಚಿಕಿತ್ಸೆ ಕೊಡಿಸಲಾಗಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ