ಬೆಂಗಳೂರು: ಬೆಂಗಳೂರಿನ ಬಸವನಗುಡಿಯಲ್ಲಿರುವ ದಿ ನ್ಯಾಶನಲ್ ಕೋಪರೇಟಿವ್ ಬ್ಯಾಂಕ್‌ನಲ್ಲಿ (The National Co-operative Bank Ltd) ಗ್ರಾಹಕರು ತಮ್ಮ ಖಾತೆಯಿಂದ 50,000 ರೂ.ಗಿಂತ ಹೆಚ್ಚು ಹಣವನ್ನು ಹಿಂತೆಗೆದುಕೊಳ್ಳುವಂತಿಲ್ಲ. (deposit withdrawal) ಆರ್‌ಬಿಐ ಈ ಮಿತಿಯನ್ನು ನಿಗದಿಪಡಿಸಿದೆ.
ಬಸವನಗುಡಿಯ ದಿ ನ್ಯಾಷನಲ್ ಕೋ-ಆಪರೇಟಿವ್ ಆರ್‌ಬಿಐ ವಿಧಿಸಿರುವ ಇತರ ನಿರ್ಬಂಧಗಳು ಯಾವುದು? ಇಲ್ಲಿದೆ ವಿವರ. ಬ್ಯಾಂಕ್ ಹೊಸದಾಗಿ ಸಾಲವನ್ನು ನೀಡುವಂತಿಲ್ಲ. ಯಾವುದೇ ಹೊಸಹೂಡಿಕೆಯನ್ನ ಮಾಡುವಂತಿಲ್ಲ. ಯಾವ ಬ್ಯಾಂಕ್ ಅಥವಾ ಬೇರೆ ಸೆಕ್ಟರ್ ನಿಂದ ಸಾಲ ಪಡೆಯುವಂತಿಲ್ಲ. ಹೊಸದಾಗಿ ಠೇವಣಿಯನ್ನ ಸ್ವೀಕರಿಸುವಂತಿಲ್ಲ. ದೊಡ್ಡ ಮೊತ್ತದ ಹಣವನ್ನ ಬೇರೆಡೆ ಪಾವತಿಮಾಡುವಂತಿಲ್ಲ. RBI ಅನುಮತಿಯಿಲ್ಲದೆ ಬ್ಯಾಂಕ್ ಆಸ್ತಿಯನ್ನು ಮಾರಾಟ ಮಾಡುವಂತಿಲ್ಲ ಎಂದು ಆರ್‌ಬಿಐ ನಿರ್ಬಂಧಿಸಿದೆ. ಅಷ್ಟೇ ಅಲ್ಲ RBI ನಿರ್ಬಂಧಗಳನ್ನ ಸೊಸೈಟಿ ತನ್ನ ವೆಬ್ ಸೈಟ್ ನಲ್ಲಿ ಪ್ರಕಟಿಸಬೇಕು ಎಂದು ಸೂಚಿಸಲಾಗಿದೆ. ದಿ ನ್ಯಾಷನಲ್ ಕೋ-ಆಪರೇಟಿವ್ ಕಳೆದ ಒಂದು ತಿಂಗಳ ಹಿಂದೆ ಜಾಹೀರಾತನ್ನು ನೀಡಿತ್ತು. ಆ ಜಾಹಿರಾತಿನಲ್ಲಿ 30 ಪರ್ಸೆಂಟ್ ನಷ್ಟು ಸಾಲ ಮರುಪಾವತಿ ಆಗಿಲ್ಲ ಎಂದು ಹೇಳಲಾಗಿತ್ತು.
ಈ ಜಾಹಿರಾತು ಬಂದ ಒಂದೇ ತಿಂಗಳಲ್ಲಿ ನ್ಯಾಷನಲ್ ಬ್ಯಾಂಕ್ ಗೆ RBI ನಿರ್ಬಂಧ ವಿಧಿಸಿದೆ. ಬ್ಯಾಂಕ್ ಕೊಟ್ಟಿರುವ ಸಾಲ ಇನ್ನೂ ರಿಕವರಿ ಆಗಿಲ್ಲ. ಆರ್ ಬಿಐ ಹೂಡಿಕೆದಾರರ ಹಿತದೃಷ್ಟಿಯಿಂದ ಈ ಆದೇಶ ಜಾರಿ ಮಾಡಿದೆ. ರಿಕವರಿ ಲೋಪ ಬ್ಯಾಂಕ್ ಮೇಲಿದೆ. ಹೀಗಾಗಿ ಆರ್‌ಬಿಐ ಮಧ್ಯ ಪ್ರವೇಶ ಮಾಡಿದೆ.
ಬ್ಯಾಂಕ್ ಮುಖ್ಯಸ್ಥರು ಹೇಳುವುದೇನು? ನ್ಯಾಶನಲ್ ಕೋಪರೇಟಿವ್ ಬ್ಯಾಂಕ್ ದಿವಾಳಿ ಆಗಿಲ್ಲ. 870 ಕೋಟಿ ರೂ. ಸಾಲ ನೀಡಲಾಗಿದೆ. ಜುಲೈ 22 ರ ವರೆಗಿನ ಸಾಲ 870 ಕೋಟಿ ರೂ.ಗಳಾಗಿದೆ. ಆರು ತಿಂಗಳಲ್ಲಿ ಸಾಲ ವಸೂಲಿ ಮಾಡುವಂತೆ ಸೂಚನೆ ನೀಡಲಾಗಿದೆ. ಸಾಲ ಮರುಪಾವತಿ ಮಾಡದವರ ಆಸ್ತಿ ಹರಾಜು ಹಾಕಿಕೊಳ್ಳಲಾಗುವುದು. 1200 ಕೋಟಿಯಷ್ಟು ಆಸ್ತಿ ಬ್ಯಾಂಕ್ ಒಡೆತನದಲ್ಲಿದೆ. ಆರು ತಿಂಗಳೊಳಗೆ ಸಾಲ ವಸೂಲಿ ಮಾಡಲಾಗುವುದು. 10 ದಿನಗಳ ನಂತರ ಹರಾಜು ಪ್ರಕ್ರಿಯೆ ಆರಂಭ ಮಾಡಲಾಗುವುದು. ಸಾಲ ಪಡೆದವರಿಗೆ 10 ದಿನ ಕಾಲಾವಕಾಶ ನೀಡುತ್ತಿದ್ದೇವೆ. ಮುಂದಿನ ದಿನಗಳಲ್ಲಿ ಹೂಡಿಕೆದಾರರ ಸಭೆ ಮಾಡಲಾಗುವುದು. ಕಳೆದ 48 ವರ್ಷದಿಂದ ಬ್ಯಾಂಕ್ ವಹಿವಾಟು ಮಾಡುತ್ತಿದೆ. ಕರೋನಾ ಬಂದಾಗ ಸಾಲ ವಸೂಲಿಯಲ್ಲಿ ಹಿನ್ನಡೆಯಾಯಿತು ಎಂದು ನ್ಯಾಶನಲ್ ಕೋಪರೇಟಿವ್ ಬ್ಯಾಂಕ್ ಅಧ್ಯಕ್ಷ ಕೃಷ್ಣ ಹೇಳಿಕೆ ನೀಡಿದ್ದಾರೆ.