ಬೆಂಗಳೂರು: ನವರಾತ್ರಿಯ(Navaratri) ಸಂಭ್ರಮ ಎಲ್ಲೆಡೆ ಕಳೆಕಟ್ಟಿದೆ. ದೇವಿಯನ್ನು ವಿವಿಧ ರೂಪದಲ್ಲಿ ಆರಾಧಿಸಲಾಗುತ್ತದೆ. ನವರಾತ್ರಿಯ ಇನ್ನೊಂದು ವಿಶೇಷ ಎಂದರೆ 9 ದಿನಗಳಿಗೆ 9 ಬಣ್ಣದ ಬಟ್ಟೆ. ಒಂದೊಂದು ದಿನ ಒಂದೊಂದು ಬಣ್ಣದ ಬಟ್ಟೆ ಧರಿಸುವುದು ವಾಡಿಕೆ. ಹೀಗೆ ನವರಾತ್ರಿಯ ವೈಭವ ಜೋರಾಗಿದ್ದು, ಹೆಂಗಳೆಯರು ಒಂದೇ ತರಹದ ಸೀರೆಯನ್ನುಟ್ಟು ಮಿಂಚಿದ್ದಾರೆ.
ಜೆ.ಎಸ್.ಎಸ್ ಪದವಿ ಮಹಾವಿದ್ಯಾಲಯದ ಬೋಧಕ – ಬೋಧಕೇತರ ಮಹಿಳಾ ಸಿಬ್ಬಂದಿ ಶರನ್ನವರಾತ್ರಿ ಸಂಭ್ರಮದ ಮೊದಲ ದಿನ .
ಶರನ್ನವರಾತ್ರಿ ಸಂಭ್ರಮದ ಎರಡನೇ ದಿನ ಹಸಿರು ಸೀರೆಯಲ್ಲಿ ಮಿಂಚಿ ಸಂಭ್ರಮಿಸಿ ಮಹಿಳಾಮಣಿಯರು
ತರ್ಮಾಕೋಲ್‌ನಲ್ಲಿ ಮೂಡಿ ಬಂತು ಅಂಬಾರಿ
ನಾಡ ಹಬ್ಬ ದಸರಾ ಹಾಗೂ ನವರಾತ್ರಿ ಸಂಭ್ರಮ ಶುರುವಾಗಿದೆ. ವಿಜಯ ದಶಮಿಯಂದು ಗರ್ಜಿಸಲು ತರ್ಮಾಕೋಲ್ ಆನೆಗಳು, ಅಂಬಾರಿ ಸಹ ರಗಡ್ಡಗಿದ್ದು, ಗತಿಸಿ ಹೋದ ಇತಿಹಾಸ ಇಲ್ಲಿ ಕಾಣಸಿಗುತ್ತಿವೆ. ಒಂಬತ್ತು ದಿನಗಳ ನವರಾತ್ರಿ ವಿಜೃಂಭಣೆಯಿಂದ ಆಚರಿಸಲಾಗುತ್ತಿದ್ದು, ಹೆಂಗಳೆಯರು ಕಲರ್ ಕಲರ್ ಸೀರೆಯುಟ್ಟು ಮಸ್ತಿ ಮಾಡುತ್ತಿದ್ದರೆ, ಇತ್ತ ವಿಜಯದಶಮಿ ದಿನಕ್ಕೆ ತರ್ಮಾಕೋಲ್‌ನಲ್ಲಿ ಅಂಬಾರಿ ಮೂಡಿ ಬಂದಿದೆ. ಇದನ್ನು ನೋಡಿದರೆ ಸೇಮ್ ಮೈಸೂರು ಅಂಬಾರಿಯಂತೆ ಭಾಸವಾಗುತ್ತದೆ.
ಅಂದಹಾಗೆ ವುಡ್‌ನಲ್ಲಿ ಬೇಕಾದಂತಹ ಐಟಮ್ಸ್ ತಯಾರಿಸೋದು ಕಷ್ಟವಲ್ಲ ಆದರೆ ಅದನ್ನು ಮೆಂಟೇನ್ ಮಾಡೋದು ಕಷ್ಟಕರವೆಂದು ಜನರು ತರ್ಮಾಕೋಲ್ ಗೊಂಬೆಗಳಿಗೆ ಮೊರೆ ಹೋಗಿದ್ದಾರೆ. ತರ್ಮಾಕೋಲ್‌ನಲ್ಲಿ ಅಂಬಾರಿ, ಜೋಡಿ ಗೊಂಬೆಗಳು, ಹಂಪಿಯ ದೇವಸ್ಥಾನ, ಯಕ್ಷಗಾನದ ಮಂಟಪ, ಆನೆ, ಕಮಲದ ಹೂಗಳು ಮಾತ್ರವಲ್ಲ ಮೈಸೂರು ಅರಮನೆ ಸೇರಿದಂತೆ ಹಲವಾರು ವಿಭಿನ್ನವಾದ ಕಲೆಗಳು ಮೂಡಿ ಬಂದೀವೆ. ಸಿಲಿಕಾನ್ ಸಿಟಿ ಜನರಿಗೆ ಹಬ್ಬದ ಸಂಭ್ರಮಕ್ಕೆ ತರ್ಮಾಕೋಲ್‌ನಿಂದ ಮಾಡಿರುವ ವಸ್ತುಗಳು ಗಮನ ಸೆಳೆಯುತ್ತಿವೆ.