ಬೆಂಗಳೂರು: ನಗರದ ಚರ್ಚ್ ಸ್ಟ್ರೀಟ್‌ನಲ್ಲಿ ಹೊಸ ವರ್ಷದ ಸಂಭ್ರಮಾಚರಣೆ (New Year 2023) ವೇಳೆ ತನ್ನ ಹುಡುಗಿಯನ್ನು ಮುಟ್ಟಿದ್ದಕ್ಕೆ ಯುವಕನೊಬ್ಬ ಮತ್ತೊಬ್ಬ ಯುವಕನ ಮೇಲೆ ಹಲ್ಲೆ ಮಾಡಿದ್ದಾನೆ. ನೂಕುನುಗ್ಗಲಿನಲ್ಲಿ ಯುವತಿಯೊಂದಿಗೆ ಅಸಭ್ಯ ವರ್ತನೆ ಮಾಡಿದ್ದಕ್ಕೆ ಹಿಡಿದು ಥಳಿಸಲಾಗಿದೆ.
ಎಂಜಿ ರಸ್ತೆ, ಚರ್ಚ್ ಸ್ಟ್ರೀಟ್‌ನಲ್ಲಿ ಹೊಸ ವರ್ಷದ ಹಿನ್ನೆಲೆಯಲ್ಲಿ ಸಂಭ್ರಮಾಚರಣೆ ಮಿತಿಮೀರಿದೆ. ಈ ನಡುವೆ ಯುವತಿಯರಿಗೆ ಕೆಲವರು ತೊಂದರೆ ನೀಡುತ್ತಿದ್ದಾರೆ. ಇಷ್ಟೆಲ್ಲ ಆದರೂ ಇಲ್ಲಿ ಯಾವೊಬ್ಬ ಪೊಲೀಸ್ ಕೂಡ ಇಲ್ಲ ಎಂದು ಕೆಲ ಯುವಕರು ಅಸಮಾಧಾನ ಹೊರಹಾಕಿದ್ದಾರೆ. ಇದೇ ವೇಳೆ ಮತ್ತೊಂದು ಪ್ರಕರಣದಲ್ಲಿ ಯುವಕನೊಬ್ಬ ಯುವತಿಯ ಜಡೆ ಎಳೆದು ಪರಾರಿಯಾಗಿರುವ ಘಟನೆ ನಡೆದಿದೆ.
ಚರ್ಚ್ ಸ್ಟ್ರೀಟ್‌ನಲ್ಲಿ ಭಾರಿ ಜನಸಂದಣಿ ಹಿನ್ನೆಲೆಯಲ್ಲಿ ಸ್ಥಳಕ್ಕೆ ಡಿಸಿಪಿ ಶ್ರೀನಿವಾಸ್ ಗೌಡ ಆಗಮಿಸಿ, ಪಬ್ ಮುಂಭಾಗದಲ್ಲಿ ಸೇರಿದ್ದ ಜನರನ್ನು ಲಾಠಿ ಚಾರ್ಜ್ ಮಾಡಿ ಚದುರಿಸಿದರು. ಬಳಿಕ ಲಿಟ್ ಪಬ್ ಮಾಲೀಕರಿಗೆ ಜನರನ್ನು ಗುಂಪುಗೂಡಲು ಅವಕಾಶ ಮಾಡಿಕೊಡಬಾರದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ | New Year 2023 | ಚರ್ಚ್ ಸ್ಟ್ರೀಟ್‌ನಲ್ಲಿ ಯುವತಿಯಿಂದ ಅಪ್ಪಿಕೋ ಅಭಿಯಾನ; ಪೋಸ್ಟರ್ ಹಿಡಿದವರನ್ನು ಅಟ್ಟಿದ ಪೊಲೀಸರು