ಬೆಂಗಳೂರು: ಬ್ರಿಟನ್‌ನಲ್ಲಿ ಕೆಲಸ ಕೊಡಿಸುವುದು ಸೇರಿದಂತೆ ವಿವಿಧ ನೆಪದಲ್ಲಿ ಜನರಿಂದ ಹಣ ವಸೂಲಿ ಮಾಡಿ ವಂಚಿಸುತ್ತಿದ್ದ ನೈಜೀರಿಯಾ ಮೂಲದ ವ್ಯಕ್ತಿಯನ್ನು ಬಂಧಿಸಲಾಗಿದೆ.
ನೈಜೀರಿಯಾ ಮೂಲದ ನೋಕೋಚಾ ಕಾಸ್ಮೀರ್ ಇಕೆಂಬಾ ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ. ಯುಕೆ ದೇಶದ ಶೆಲ್ ಆಯಿಲ್ ಕಂಪನಿಯಲ್ಲಿ ಮ್ಯಾನೇಜ್ಮೆಂಟ್ ಹುದ್ದೆ, ಸ್ಟಾಫ್ ನರ್ಸ್, ಶೆಫ್ ಮುಂತಾದ ಹುದ್ದೆ ಕೊಡಿಸುವುದಾಗಿ ಬೆಂಗಳೂರಿನ ದೊಡ್ಡಗುಬ್ಬಿ ಮೂಲದ ಮಲರ್ ಕೋಡಿ ಅವರಿಗೆ ಈತ ಮೋಸ ಎಸಗಿದ್ದ.
basilboyack@shelloilok.comನಿಂದ ಮೇಲ್ ಮಾಡಿದ್ದ ಈ ಆರೋಪಿ ಸ್ಟಾಫ್ ನರ್ಸ್ ಕೆಲಸ ಕೊಡಿಸುವುದಾಗಿ ಹೇಳಿದ್ದ. ಇದನ್ನು ನಂಬಿ ವ್ಯಕ್ತಿಯನ್ನು ಸಂಪರ್ಕಿಸಿದ್ದ ಮಹಿಳೆಯಿಂದ ವಿವಿಧ ಶುಲ್ಕ ಹಾಗೂ ಕ್ಲಿಯರೆನ್ಸ್ ನೆಪದಲ್ಲಿ ಹಂತ ಹಂತವಾಗಿ ಬರೋಬ್ಬರಿ 34 ಲಕ್ಷಕ್ಕೂ ಅಧಿಕ ಹಣ ಪಡೆದಿದ್ದ. ವಂಚನೆ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿಸಿದ ಈಶಾನ್ಯ ವಿಭಾಗದ ಸೈಬರ್ ಕ್ರೈಂ ಪೊಲೀಸರು ಆರೋಪಿಯಿಂದ ಸಿಮ್ ಕಾರ್ಡ್, 6 ಮೊಬೈಲ್ ಫೋನ್, ೧ ಲ್ಯಾಪ್‌ಟ್ಯಾಪ್, ೨ ಡೆಬಿಟ್ ಕಾರ್ಡ್, ಪಾಸ್‌ಪೋರ್ಟ್ ವಶಪಡಿಸಿಕೊಳ್ಳಲಾಗಿದೆ.
ಇದನ್ನೂ ಓದಿ: Fake Car Fraud: ಅದೇ ನಂಬರ್, ಬೇರೆ ಕಾರು: ನಕಲಿ ಕಾರು ಮಾರಾಟ ದಂಧೆಗೆ ಶಾಸಕರೇ ತಬ್ಬಿಬ್ಬು!