Site icon Vistara News

ಬೀದಿಯಲ್ಲಿ ರಾಜಾರೋಷವಾಗಿ ತಿರುಗಿದರೂ ಸಿಸಿಬಿಗೆ ಸಿಗದ ರೌಡಿಗಳು!

rowdy sheeters

ಬೆಂಗಳೂರು: ರಾಜಧಾನಿಯ ಸ್ವಯಂಘೋಷಿತ ಡಾನ್‌ಗಳನ್ನು ಪೊಲೀಸರೇ ಬೆಳೆಸುತ್ತಿದ್ದಾರಾ ಎಂಬ ಶಂಕೆ ವ್ಯಕ್ತವಾಗಿದೆ. ಸಿಸಿಬಿಗೆ ಸಿಗದ ಈ ರೌಡಿಗಳು ರಾಜಕಾರಣಿಗಳಿಗೆ ಬೇಕಾದಂತೆ ಸಿಗುತ್ತಿದ್ದಾರೆ ಹಾಗೂ ಸಾರ್ವಜನಿಕವಾಗಿ ಮೆರವಣಿಗೆ ಮಾಡುತ್ತಾರೆ ಎಂಬುದು ಕುತೂಹಲಕರ ಸಂಗತಿ.

ರೌಡಿ ಶೀಟ್‌ನಲ್ಲಿ 86 ಜನರ ಮನೆಗಳ ಮೇಲೆ ಇತ್ತೀಚೆಗೆ ಸಿಸಿಬಿ ತಂಡಗಳು ದಾಳಿ ಮಾಡಿದ್ದವು. 26 ಜನ ಪುಡಿ ರೌಡಿಗಳನ್ನು ಕರೆತಂದು ವಾರ್ನಿಂಗ್‌ ನೀಡುವ ಹೆಸರಿನಲ್ಲಿ 3 ಗಂಟೆಗಳ ಕಾಲ ಕೂಡಿ ಹಾಕಲಾಗಿತ್ತು. ಆ ವೇಳೆ ಕುಖ್ಯಾತ ರೌಡಿಗಳಾದ ಸೈಲೆಂಟ್ ಸುನೀಲ, ವಿಲ್ಸನ್ ಗಾರ್ಡನ್ ನಾಗ, ಸೈಕಲ್ ರವಿ ಸಿಕ್ಕಿಲ್ಲ ಎಂದು ಪ್ರೆಸ್‌ನೋಟ್ ರಿಲೀಸ್‌ ಮಾಡಿದ್ದರು.

ಆದರೆ ಚುನಾವಣೆ ಹತ್ತಿರ ಬರುತ್ತಿರುವಂತೆ ಈ ರೌಡಿಗಳು ಸಾರ್ವಜನಿಕ ಕಾಣಿಸಿಕೊಳ್ಳುವಿಕೆಯೂ ಜಾಸ್ತಿಯಾಗಿದೆ. ಕೆಲವರು ಕಾರ್ಪೊರೇಟರ್‌ಗಳ ಜತೆಗೆ, ಕೆಲವರು ಶಾಸಕರ ಜತೆಗೆ ಕಾಣಿಸಿಕೊಳ್ಳುತ್ತಿದ್ದಾರೆ. ಪುಡಿ ರೌಡಿಗಳನ್ನು ಸಿಸಿಬಿ ಎಳೆತಂದರೂ ಇವರಲ್ಲಿ ಕುಖ್ಯಾತರಾಗಿರುವ ಸುನೀಲ್ ಕುಮಾರ್@ ಸೈಲೆಂಟ್ ಸುನೀಲ, ಮಾರ್ಕೇಟ್ ವೇಡಿ, ಸೈಕಲ್ ರವಿ, ನಾಗ ಸೇರಿದಂತೆ ಹಲವರು ಸಿಸಿಬಿಯ ಕೈಗೆ ಸಿಗುತ್ತಲೇ ಇಲ್ಲ.

ರಕ್ತ ಹರಿಸಿದವನು ಎರಡೂವರೆ ಸಾವಿರ ಜನಕ್ಕೆ ರಕ್ತದಾನ ಶಿಬಿರ ಮಾಡುತ್ತಾನೆ; ಬೆಂಬಲಿಗರಿಂದ ಹಾರ ಹಾಕಿಸಿಕೊಳ್ಳುತ್ತಾನೆ. ಆದರೂ ಸಿಸಿಬಿಯವರಿಗೆ ಕಾಣಿಸುತ್ತಿಲ್ಲ ಎಂದರೆ ಪೊಲೀಸರು ರಾಜಕೀಯ ಒತ್ತಡಕ್ಕೆ ಮಣಿಯುತ್ತಿದ್ದಾರಾ ಎಂಬ ಅನುಮಾನ ಮೂಡಿದೆ. ಸಿಸಿಬಿ ಆರ್ಭಟ ಪುಡಿ ರೌಡಿಗಳ ಮೇಲೆ ಮಾತ್ರ ಎನ್ನುವಂತಾಗಿದೆ.

ಇದನ್ನೂ ಓದಿ | ದೇವರ ದರ್ಶನಕ್ಕೆ ಬಂದು ಪೊಲೀಸರ ಖೆಡ್ಡಕ್ಕೆ ಬಿದ್ದ ಕುಖ್ಯಾತ ರೌಡಿ ಶೀಟರ್

Exit mobile version