Site icon Vistara News

Drink and Drive: ಕುಡಿದು ವಾಹನ ಓಡಿಸಿದರೆ ಎರಡೆರಡು ಕಡೆ ಸಿಕ್ಕಿಹಾಕಿಕೊಳ್ತೀರಿ ಹುಷಾರ್!‌

drink and drive RTO check

ಬೆಂಗಳೂರು: ಇನ್ನು ಮುಂದೆ ಮದ್ಯಪಾನ ಮಾಡಿ ವಾಹನ ಚಲಾಯಿಸುವವರು (Drink and Drive) ಪಾರಾಗುವುದು ಬಹಳ ಕಷ್ಟ. ರಸ್ತೆಯ ಒಂದು ಕಾರ್ನರ್‌ನಲ್ಲಿ ಟ್ರಾಫಿಕ್ ಪೊಲೀಸರು (Traffic Police) ಡ್ರಿಂಕ್‌ ಆಂಡ್‌ ಡ್ರೈವ್‌ ಟೆಸ್ಟ್‌ (Drink and Drive test) ನಡೆಸುತ್ತಿರುವಾಗ ಅವರಿಂದ ಹೇಗೋ ಪಾರಾಗಿ ಬಂದೆ ಎಂದು ಬೀಗಬೇಡಿ. ಮುಂದಿನ ತಿರುವಿನಲ್ಲಿ ಸಾರಿಗೆ ಇಲಾಖೆ ಅಧಿಕಾರಿಗಳೇ (RTO Officers) ನಿಮ್ಮನ್ನು ಚೆಕ್‌ ಮಾಡಲು ನಿಂತಿರಬಹುದು. ಅಲ್ಲೂ ನೀವು ಸಿಕ್ಕಿಹಾಕಿಕೊಳ್ಳಬಹುದು.

ಹೌದು, ಇನ್ನು ಮೇಲೆ ಲಿಕ್ಕರ್‌ ಸೇವಿಸಿ ಡ್ರೈವ್‌ ಮಾಡುವ ಚಾಲಕರನ್ನು ಹಿಡಿದುಹಾಕಲು ಆರ್‌ಟಿಒದಿಂದಲೂ (RTO) ಡ್ರಿಂಕ್ ಆಂಡ್ ಡ್ರೈವ್ (Drink and Drive) ಆಪರೇಷನ್ ನಡೆಸಲಾಗುತ್ತದೆ. ಸಾರಿಗೆ ಇಲಾಖೆ ಅಧಿಕಾರಿಗಳಿಂದ ಈ ತಪಾಸಣೆ ನಡೆಯಲಿದೆ. ಸಿಕ್ಕಿಬಿದ್ದವರಿಗೆ ಹೆಚ್ಚಿನ ದಂಡ ಬೀಳಲಿದೆ.

ಇಷ್ಟು ದಿನ ಕೇವಲ ಸಂಚಾರಿ ಪೊಲೀಸರು ಮಾತ್ರ ಈ ಚೆಕ್‌ ಮಾಡುತ್ತಿದ್ದರು. ಇನ್ನು ಮೇಲೆ ಸಾರಿಗೆ ಇಲಾಖೆ ಅಧಿಕಾರಿಗಳಿಂದಲೂ ತಪಾಸಣೆ ನಡೆಸಲಾಗುವುದು. ಕುಡಿದು ವಾಹನ ಚಾಲನೆ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಬೆಂಗಳೂರಿನ (Bengaluru) 10 ಆರ್‌ಟಿಓ ಕಚೇರಿ ವ್ಯಾಪ್ತಿಯಲ್ಲಿ ತಪಾಸಣೆ ನಡೆಸಲಾಗುವುದು. ಬೆಂಗಳೂರಲ್ಲಿ ಕುಡಿದು ವಾಹನ ಓಡಿಸಿ ಅಪಘಾತ ಎಸಗುವವರ ಸಂಖ್ಯೆ ಹೆಚ್ಚಳವಾಗುತ್ತಿರುವುದು ಚಿಂತೆಯ ವಿಷಯವಾಗಿದೆ. ಇದಕ್ಕೆ ತಡೆಹಾಕಲು ಹೊಸ ಉಪಕ್ರಮ ಬರುತ್ತಿದೆ.

ಪ್ರಯಾಣಿಕರ ಪಿಕಪ್‌ಗೂ ಕೆಂಪೇಗೌಡ ಏರ್‌ಪೋರ್ಟ್‌ನಲ್ಲಿ ಶುಲ್ಕ, ಪ್ರತಿಭಟನೆ ಬಳಿಕ ರದ್ದು

ದೇವನಹಳ್ಳಿ: ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ- Kempegowda International Airport- KIA) ಪ್ರಯಾಣಿಕರನ್ನು ಹತ್ತಿಸಿಕೊಳ್ಳಲು (pickup vehicles) ಬರುವ ವಾಹನಗಳೂ ಇನ್ನು ಮುಂದೆ ನಿಲುಗಡೆ ಶುಲ್ಕ (Parking fees) ಕೊಡಬೇಕು ಎಂಬ ನಿಯಮ ಮಾಡಿ ಏರ್ಪೋರ್ಟ್‌ ಆಡಳಿತ ಮಂಡಳಿ ನಿನ್ನೆ ವಸೂಲಿ ಶುರು ಮಾಡಿತ್ತು. ಇದೀಗ ಎದುರಾದ ಪ್ರತಿರೋಧವನ್ನು ಕಂಡು ಬೆಚ್ಚಿಬಿದ್ದು ತಾತ್ಕಾಲಿಕವಾಗಿ ವಸೂಲಿ ಸ್ಥಗಿತಗೊಳಿಸಿದೆ.

ಕೆಂಪೇಗೌಡ ಏರ್ಪೋರ್ಟ್‌ನಲ್ಲಿ ಪ್ರಯಾಣಿಕರ ಪಿಕ್ ಅಪ್‌ಗೂ ದರ ನಿಗದಿ ಮಾಡಿದ್ದರಿಂದ ಪ್ರಯಾಣಿಕರು ಹಾಗೂ ಬಾಡಿಗೆ ವಾಹನ ಚಾಲಕರು ಬೆಚ್ಚಿ ಬಿದ್ದಿದ್ದಾರೆ. ಆಗಮನದ ದ್ವಾರದ ಬಳಿ ವಾಹನಗಳಲ್ಲಿ ಪಿಕಪ್ ಮಾಡುವುದಕ್ಕೆ ದರ ನಿಗದಿ ಮಾಡಿದ ಪರಿಣಾಮ ಕೆಂಪೇಗೌಡ ಏರ್ಪೋರ್ಟ್‌ ಮತ್ತಷ್ಟು ದುಬಾರಿಯಾಗಿತ್ತು. ಇಷ್ಟು ದಿನ ವಾಹನ ಚಾಲಕರು ಪ್ರಯಾಣಿಕರನ್ನು ಉಚಿತವಾಗಿ ಪಿಕಪ್ ಮಾಡುತ್ತಿದ್ದರು.

ಪಿಕಪ್‌ಗೆ ಹೆಚ್ಚುವರಿ ಲೈನ್ ಮಾಡಿ ಹಣ ವಸೂಲಿ ಮಾಡಲು ಶುರು ಮಾಡಲಾಗಿತ್ತು. ಕಾರು, ಜೀಪ್ ಪಿಕಪ್ ಪ್ರವೇಶಕ್ಕೆ 7 ನಿಮಿಷದವರೆಗೂ 150 ರೂ. ದರ, 7ರಿಂದ 14 ನಿಮಿಷಕ್ಕೆ 300 ರೂ., ಬಸ್ಸಿಗೆ 600 ರೂಪಾಯಿ, ಟಿಟಿಗೆ 300 ರೂಪಾಯಿ ಪ್ರವೇಶ ದರ ನಿಗದಿ ಮಾಡಲಾಗಿತ್ತು. ನೂತನ ವಸೂಲಿ ಕಂಡು ಪ್ರಯಾಣಿಕರಿಗೆ ತಲೆ ತಿರುಗಿತ್ತು.

ಪಿಕಪ್‌ಗೂ ಹಣ ಕೊಡಬೇಕಾ ಎಂದು ರೊಚ್ಚಿಗೆದ್ದ ಚಾಲಕರು ಹಾಗೂ ಪ್ರಯಾಣಿಕರು ಏರ್ಪೋರ್ಟ್‌ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಚಾಲಕರು ಆಕ್ರೋಶ ಹೊರ ಹಾಕುತ್ತಿದ್ದಂತೆ ಮಂಡಳಿ ತಾತ್ಕಾಲಿಕವಾಗಿ ವಸೂಲಿ ನಿಲ್ಲಿಸಿದೆ. ನಾಳೆ ದರ ನಿಗದಿ ವಿರುದ್ಧ ಏರ್ಪೋರ್ಟ್‌ನಲ್ಲಿ ಪ್ರತಿಭಟನೆಗೆ ಚಾಲಕರು ಸಜ್ಜಾಗಿದ್ದಾರೆ.

ಭಾರಿ ಮಳೆಗೆ ಬೆಂಗಳೂರು ವಿಮಾನ ನಿಲ್ದಾಣದ 2ನೇ ಟರ್ಮಿನಲ್‌ ಸೋರಿಕೆ

ಇತ್ತೀಚೆಗೆ ಸುರಿದ ಭಾರೀ ಮಳೆಗೆ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Kempegowda International Airport – KIA) ನೂತನ ಟರ್ಮಿನಲ್ 2 (Terminal 2, T2) ಇದರಲ್ಲಿ ಭಾರಿ ಸೋರಿಕೆ (leakage) ಕಂಡುಬಂತು. ಭಾರಿ ಮಳೆಯ ಪರಿಣಾಮ ಇಲ್ಲಿಗೆ ಬರಬೇಕಿದ್ದ ಹಲವು ವಿಮಾನಗಳನ್ನು ಬೇರೆ ಕಡೆಗೆ ಕಳಿಸಲಾಯಿತು.

ಇದನ್ನೂ ಓದಿ: ನನ್ನ ದೇಶ ನನ್ನ ದನಿ ಅಂಕಣ: ಅಂಬೇಡ್ಕರ್, ಮುಸ್ಲಿಂ ಲೀಗ್ ಒತ್ತಾಯಿಸಿದರೂ ಜನಸಂಖ್ಯಾ ವಿನಿಮಯ ಆಗಲಿಲ್ಲ!

Exit mobile version