ಬೆಂಗಳೂರು: ಅಮಾನ್ಯವಾಗಿರುವ ಹಳೆಯ ನೋಟುಗಳನ್ನು ಮತ್ತೆ ಚಲಾವಣೆಗೆ ಯತ್ನಿಸಿದ್ದ ಮೂವರು ಆರೋಪಿಗಳನ್ನು ಬೆಂಗಳೂರಿನ ಬನಶಂಕರಿಯ ಪೊಲೀಸರು (Old notes) ಬಂಧಿಸಿದ್ದಾರೆ.
ಯೋಗನಂದ , ವೆಂಕಟರಮಣ, ಹರಿಪ್ರಸಾದ್ ಬಂಧಿತರು. 500 ರೂ. ಮುಖಬೆಲೆಯ 88 ಲಕ್ಷ ರೂ.ಗಳ ಹಳೆಯ ನೋಟುಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಕದಿರೇನಗಳ್ಳಿ ಫ್ಲೈಓವರ್ ಬಳಿ ಆರೋಪಿಗಳು ಹಣದ ಸಮೇತ ಬಂದಿದ್ದರು. ಆಂಧ್ರಪ್ರದೇಶದ ಪುಟ್ಟಪರ್ತಿ ಯಿಂದ ಬೆಂಗಳೂರಿಗೆ ಹಣ ಬದಲಾವಣೆ ಗೆ ಬಂದಿದ್ದರು. ಈ ವೇಳೆ ಖಚಿತ ಮಾಹಿತಿ ಅಧರಿಸಿ ಪೊಲೀಸರು ದಾಳಿ ನಡೆಸಿದ್ದರು. ಬನಶಂಕರಿ ಪೊಲೀಸ್ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ.