ಬೆಂಗಳೂರು: ಆನ್‌ಲೈನ್‌ನಲ್ಲಿ (Online Fraud) ಮದ್ಯ ಖರೀದಿ ಮಾಡುವವರನ್ನು ಟಾರ್ಗೆಟ್ ಮಾಡುವ ವಂಚಕರ ಜಾಲವೊಂದು ಆಕ್ಟಿವ್ ಆಗಿದೆ. ಪ್ರತಿಷ್ಠಿತ ಮದ್ಯ ಮಾರಾಟ ಮಳಿಗೆಗಳ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ಗಳನ್ನು ಕ್ರಿಯೇಟ್ ಮಾಡಿ ಜನರಿಗೆ ವಂಚಿಸುವ ಪ್ರಕರಣ ಹೆಚ್ಚಾಗುತ್ತಿದೆ.
ಬೆಂಗಳೂರಿನ ಎಂ.ಜಿ.ರಸ್ತೆಯಲ್ಲಿರುವ ಟಾನಿಕ್ ಲಿಕ್ಕರ್ ಶಾಪ್‌ನ ನಕಲಿ ವೆಬ್‌ಸೈಟ್‌ಅನ್ನು ವಂಚಕರು ಕ್ರಿಯೇಟ್ ಮಾಡಿದ್ದಾರೆ. ಗ್ರಾಹಕರಿಂದ ಆರ್ಡರ್ ಪಡೆದು ಪೇಮೆಂಟ್‌ಗಾಗಿ ಗೂಗಲ್ ಪೇ, ಫೋನ್ ಪೇಯ ನಕಲಿ ಕ್ಯೂ ಆರ್ ಕೋಡ್ ಮೂಲಕ ಹಣ ಪಡೆದು ಜತೆಗೆ ಅಕೌಂಟ್ ಬ್ಯಾಲೆನ್ಸ್‌ಗೂ ಕನ್ನ ಹಾಕಿ, ಸಾವಿರಾರು ರೂಪಾಯಿ ಡ್ರಾ ಮಾಡಿಕೊಂಡಿದ್ದಾರೆ.
ಇಂತಹ ಕೃತ್ಯಗಳು ಬೆಂಗಳೂರು ಹಾಗೂ ಹೈದರಾಬಾದ್‌ನಲ್ಲಿ ಬೆಳಕಿಗೆ ಬಂದಿದ್ದು, ಬೆಂಗಳೂರಿನಲ್ಲಿ ವಂಚನೆಗೊಳಗಾದ ಗ್ರಾಹಕರೊಬ್ಬರು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದು, ಈವರೆಗೆ 50ಕ್ಕೂ ಹೆಚ್ಚು ಜನರಿಗೆ ಈ ರೀತಿ ಮೋಸ ಹೋಗಿರುವುದು ಬೆಳಕಿಗೆ ಬಂದಿದೆ. ನಕಲಿ ವೆಬ್ ಸೈಟ್‌ಗಳ ಬಗ್ಗೆ ಗ್ರಾಹಕರು ಎಚ್ಚರಿಕೆಯಾಗಿ ಇರುವಂತೆ ಪೊಲೀಸರು ಎಚ್ಚರಿಸಿದ್ದಾರೆ.
ಇದನ್ನೂ ಓದಿ | Customs fraud | ಬ್ಯಾಂಕಾಕ್‌ನಿಂದ 16 iPhone ತಂದು ಸುಂಕ ತಪ್ಪಿಸಲೆತ್ನಿಸಿದವ ಏರ್‌ಪೋರ್ಟಲ್ಲಿ ಸಿಕ್ಕಿಬಿದ್ದ