Site icon Vistara News

ಮರ್ಮಾಂಗ ಕತ್ತರಿಸಿ ವ್ಯಕ್ತಿಯ ಬರ್ಬರ ಹತ್ಯೆ, ಪತ್ನಿ ಮೇಲೆ ಶಂಕೆ

murder

ಬೆಂಗಳೂರು: ಮರ್ಮಾಂಗ ಕತ್ತರಿಸಿ, ತಲೆಗೆ ಹಲ್ಲೆ ಮಾಡಿ ವ್ಯಕ್ತಿಯೊಬ್ಬನನ್ನು ಕೊಲೆ ಮಾಡಲಾಗಿದೆ. ಈ ಘಟನೆ ಯಲಹಂಕದ ಕೊಂಡಪ್ಪ ಲೇಔಟ್‌ನಲ್ಲಿ ನಡೆದಿದೆ.

ಮೃತ ವ್ಯಕ್ತಿಯ ಮನೆಯ ಟೆರೇಸ್ ಮೇಲೆಯೇ ಈ ಅಕೃತ್ಯ ನಡೆದಿದೆ. ಶುಕ್ರವಾರ ರಾತ್ರಿ ಈ ಘಟನೆ ನಡೆದಿದೆ. ಚಂದ್ರಶೇಖರ್ ಮೂಲತಃ ಆಂಧ್ರಪ್ರದೇಶದವರಾಗಿದ್ದು, ಎಂಟು ವರ್ಷಗಳಿಂದ ಯಲಹಂಕದಲ್ಲಿ ವಾಸವಾಗಿದ್ದರು. ಹೆಂಡತಿಯೇ ತನ್ನ ಸ್ನೇಹಿತನ ಜೊತೆ ಸೇರಿ‌ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಯಲಹಂಕ ಸರ್ಕಾರಿ ಅಸ್ಪತ್ರೆಗೆ ಮೃತ ದೇಹವನ್ನು ರವಾನಿಸಲಾಗಿದ್ದು, ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮೃತ ವ್ಯಕ್ತಿಯ ಪತ್ನಿ ಶ್ವೇತಾ ಎಂಬಾಕೆಯನ್ನು ಪೊಲೀಸರು ವಶಕ್ಕೆ ಪಡೆದು ತನಿಖೆ ಮಾಡುತ್ತಿದ್ದಾರೆ. ಶ್ವೇತಾಳ ಗೆಳೆಯ ಮಧು ಎಂಬಾತ ತಲೆಮರೆಸಿಕೊಂಡಿದ್ದು, ಆತನಿಗಾಗಿ ಶೋಧ ನಡೆಸಲಾಗುತ್ತಿದೆ.

ಆದರೆ ಲೋಕೇಶ್ ಎಂಬ ವ್ಯಕ್ತಿ ಕೊಲೆ ಮಾಡಿರುವ ಶಂಕೆಯಿದೆ ಎಂದು ಶ್ವೇತಾಳ ತಮ್ಮ, ಮೃತ ಚಂದ್ರಶೇಖರ್‌ ಬಾವಮೈದ ಭಾಸ್ಕರ್‌ ಎಂಬವರು ಆರೋಪಿಸಿದ್ದಾರೆ. ತನ್ನನ್ನು ಪ್ರೀತಿಸುವಂತೆ ಅಕ್ಕನ ಹಿಂದೆ ಹಿಂದೂಪುರ ನಿವಾಸಿ ಲೋಕೇಶ್ ಬೆನ್ನು ಬಿದ್ದಿದ್ದ. ಮದುವೆ ಆದರೂ ಬೆನ್ನುಬಿಡದೆ, ಪ್ರೀತಿ ನಿರಾಕರಿಸಿದ್ದರೂ ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದ. ಹೀಗಾಗಿ ಹಿಂದೂಪುರ ಠಾಣೆಯಲ್ಲಿ ದೂರು ನೀಡಲಾಗಿತ್ತು. ಈ ವೇಳೆ ಠಾಣೆಯ ಬಳಿಯೇ ನನ್ನ ಅಕ್ಕ ಆತನಿಗೆ ಚಪ್ಪಲಿಯಲ್ಲಿ ಹೊಡೆದಿದ್ದರು. ಇದರಿಂದ ಅಕ್ಕ ಬಾವನನ್ನು ಬೆಂಗಳೂರಿಗೆ ಕಳುಹಿಸಿದ್ದೆವು. ಮೂರು ತಿಂಗಳ ಹಿಂದೆ ಯಲಹಂಕಕ್ಕೆ ಬಂದಿದ್ದರು. ಲೋಕೇಶನೇ ಆರೋಪಿ ಎಂದು ಭಾಸ್ಕರ್ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ | ಮೂರು ಜನರ ಸಾವಿಗೆ ಕಾರಣವಾಯಿತು ಕುಡಿದ ಅಮಲು!

Exit mobile version