Site icon Vistara News

Physical Abuse : ಮಹಿಳಾ ಡಾಕ್ಟರ್ಸ್‌, ನರ್ಸ್‌ಗಳ ಮೈಸವರೋ ಬೌರಿಂಗ್‌ ಆಸ್ಪತ್ರೆ ಹಿರಿಯ ವೈದ್ಯರು!

Bowring and Curzon Hospital Physical harassment

ಬೆಂಗಳೂರು: ರಾಜ್ಯದ ಪ್ರತಿಷ್ಠಿತ ಬೌರಿಂಗ್‌ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ (Bowring and Lady Curzon Hospital) ಹಿರಿಯ ಅಧಿಕಾರಿಗಳ ಮೇಲೆ (Accusation on senior officers) ಗಂಭೀರ ಆರೋಪ ಕೇಳಿಬಂದಿದೆ. ಅವರು ತಮ್ಮ ಕೆಳಗೆ ಕೆಲಸ ಮಾಡುವ ಮಹಿಳಾ ವೈದ್ಯರು, ನರ್ಸ್‌ಗಳು ಮತ್ತು ಮಹಿಳಾ ಸಿಬ್ಬಂದಿಗಳ ಮೈಸವರುವುದೂ ಸೇರಿದಂತೆ ಅನುಚಿತವಾಗಿ ವರ್ತಿಸುತ್ತಿದ್ದಾರೆ (Physical Abuse) ಎಂದು ಆರೋಪಿಸಲಾಗಿದೆ. ಈ ಸಂಬಂಧ ಏಳು ಮಂದಿ ಸಿಬ್ಬಂದಿ ನೇರವಾಗಿ ವೈದ್ಯಕೀಯ ಶಿಕ್ಷಣ ಸಚಿವ ಶರಣು ಪ್ರಕಾಶ್ ಪಾಟೀಲ್‌ (Minister Sharanu prakash Pateel) ಅವರಿಗೆ ಪತ್ರದ ಮೂಲಕ ದೂರು ನೀಡಿದ್ದಾರೆ.

ವೈದ್ಯಕೀಯ ಅಧೀಕ್ಷಕ ಡಾ.ಕೆಂಪರಾಜ್ (Medical superintendent Dr Kemparaj) ಮತ್ತು ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಶ್ರೀಕಾಂತ್ (Public Relation officer Dr. Shrikant) ಅವರ ವಿರುದ್ಧ ಈ ಗಂಭೀರ ಆರೋಪ ಕೇಳಿಬಂದಿದೆ. ಜವಾಬ್ದಾರಿಯುತ ಸ್ಥಾನದಲ್ಲಿರುವ ಈ ಇಬ್ಬರು ವ್ಯಕ್ತಿಗಳು ಮಹಿಳಾ ಸಿಬ್ಬಂದಿಯ ಜೊತೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎಂದು ಏಳು ಸಿಬ್ಬಂದಿ ದೂರು ನೀಡಿದ್ದಾರೆ. ಮೈ ಕೈ ಮುಟ್ಟಿ ಅಸಭ್ಯವಾಗಿ ವರ್ತಿಸುತ್ತಾರೆ ಎಂದು ಹೇಳಿದ್ದಾರೆ.

ಪತ್ರದಲ್ಲಿ ಏನಿದೆ?

ಬೌರಿಂಗ್ &ಲೇಡಿ ಕರ್ಜನ್ ಆಸ್ಪತ್ರೆ, ಅಟಲ್ ಬಿಹಾರಿ ವಾಜಪಾಯಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಸಂಶೋಧನಾ ಸಂಸ್ಥೆ ಶಿವಾಜಿನಗರ ಬೆಂಗಳೂರು. ಇಲ್ಲಿ ಕೆಲಸ ಮಾಡುತ್ತಿರುವ ನಾವುಗಳು ತಮ್ಮಲ್ಲಿ ವಿನಂತಿ ಮಾಡಿಕೊಳ್ಳುವುದೇನೆಂದರೆ, ಬೌರಿಂಗ್ ಆಸ್ಪತ್ರೆ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ.ಕೆಂಪರಾಜ್ ಹಾಗೂ ಪಿ ಆರ್ ಓ ಶ್ರೀಕಾಂತ್ ಇವರುಗಳು ಮಹಿಳಾ ವೈದ್ಯರು, ಶ್ರುಶ್ರೂಷಕರು, ಇತರೆ ಸಿಬ್ಬಂದಿಗಳೊಂದಿಗೆ ಅಸಭ್ಯವಾಗಿ ವರ್ತಿಸಿರುತ್ತಾರೆ. ಇವರು ಹೆಂಗಸರ ಮೈ ಕೈ ಮುಟ್ಟದೆ ಮಾತನಾಡುವುದೇ ಇಲ್ಲ. ಇವರನ್ನು ಎದುರು ಹಾಕಿಕೊಕೊಳ್ಳಲು ಆಗುತ್ತಿಲ್ಲ.. ಕೆಲವು ಗುತ್ತಿಗೆ ಸಿಬ್ಬಂದಿ ಇವರ ಕಪಿಮುಷ್ಠಿಯಲ್ಲಿದ್ದಾರೆ. ಇವರಿಗೆ ಸರ್ಕಾರಿ ಅಧಿಕಾರಿಗಳು ರಾಜಕೀಯ ಬಲ‌ ಇದೆ ಎಂದು ಸಂತ್ರಸ್ತರಾದ ಏಳು ಮಂದಿ ಬರೆದ ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: Physical Abuse : ಹಾನಗಲ್‌ ಕೇಸ್‌; ದುಡ್ಡು ಕೊಟ್ಟು ಮುಚ್ಚಿಹಾಕಲು ಯತ್ನ ಎಂದ ಬಸವರಾಜ ಬೊಮ್ಮಾಯಿ

ವೈದ್ಯರ ಮೇಲೆ ಆರೋಪ: ತನಿಖಾ ತಂಡ ರಚನೆ

ಬೌರಿಂಗ್‌ ಆಸ್ಪತ್ರೆ ಮತ್ತು ಲೇಡಿ ಕರ್ಜನ್‌ ಆಸ್ಪತ್ರೆಯ ಮುಖ್ಯಸ್ಥರ ಮೇಲೆ ಕೇಳಿಬಂದಿರುವ ಈ ಗಂಭೀರ ಆರೋಪದ ಬಗ್ಗೆ ತನಿಖೆ ನಡೆಸಲು ವೈದ್ಯಕೀಯ ಇಲಾಖೆಯಿಂದ ತನಿಖಾ ತಂಡ ರಚನೆ ಮಾಡಲಾಗಿದೆ. ವೈದ್ಯಕೀಯ ಇಲಾಖೆಯ ನಿರ್ದೇಶಕಿ ಸುಜಾತಾ ನೇತೃತ್ವದಲ್ಲಿ ತನಿಖಾ ತಂಡ ರಚನೆಯಾಗಿದ್ದು, ಇದು ನರ್ಸ್ ಗಳಿಗೆ ವೈದ್ಯರಿಂದ ಲೈಂಗಿಕ ಕಿರುಕುಳ ವಿಚಾರ‌ದ ಬಗ್ಗೆ ತನಿಖೆ ನಡೆಸಲಿದೆ. ಬೆಂಗಳೂರು ಮೆಡಿಕಲ್ ಕಾಲೇಜು ಡೀನ್ ಹಾಗೂ ಇತರೆ ಸದಸ್ಯರು ಇರುವ ಸಮಿತಿ ಇದಾಗಿದ್ದು, ಸಮಗ್ರ ತನಿಖೆ ನಡೆಸಿ ವರದಿ ನೀಡುವಂತೆ ಈ ಸಮಿತಿಗೆ ಸೂಚನೆ ನೀಡಲಾಗಿದೆ.

ಇದರ ಹಿಂದೆ ಬೇರೆಯವರ ಕೈವಾಡ ಎಂದ ಡಾ. ಶ್ರೀಕಾಂತ್‌

ಈ ನಡುವೆ, ಆರೋಪಿತರಲ್ಲಿ ಒಬ್ಬರಾದ ಬೌರಿಂಗ್ ಆಸ್ಪತ್ರೆ ವೈದ್ಯ ಡಾ. ಶ್ರೀಕಾಂತ್ ಅವರು ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿ, ಆರೋಪದ ಬಗ್ಗೆ ನಮಗೆ ನಿನ್ನೆಯಷ್ಟೇ ಗೊತ್ತಾಗಿದೆ. ತನಿಖಾ ಸಮಿತಿ ರಚನೆ ಆದ ನಂತರ, ಅದು ಮಾಹಿತಿ ಕೇಳಿದಾಗ ನಮ್ಮ ಮೇಲೆ ಇಂಥ ಆರೋಪಗಳಿವೆ ಎಂಬುದು ಗೊತ್ತಾಗಿದೆ. ಪತ್ರ ಯಾರು ಬರೆದಿದ್ದಾರೆ ಅನ್ನುವ ವಿಚಾರ ನಿಜವಾಗಿಯೂ ನಮಗೆ ಗೊತ್ತಿಲ್ಲ. ತನಿಖೆ ನಡೆಯಲಿ, ಇದರ ಹಿಂದೆ ಬೇರೆಯವರ ಕೈವಾಡ ಇದೆ ಅನಿಸುತ್ತಿದೆ. ಇಲ್ಲಿಗೆ ಅನುದಾನ ಬಂದ ಕಾರಣ ಕೆಲವರು ಹೀಗೆ ಮಾಡಿಸುತ್ತಿದ್ದಾರೆ ಎಂದು ಹೇಳಿದರು.

Exit mobile version