ಬೆಂಗಳೂರು: ನಗರದಲ್ಲಿ ಬೀದಿ ಕಾಮುಕರ ಕಾಟ ಹೆಚ್ಚಾಗಿದೆ. ವಿದ್ಯಾರ್ಥಿನಿಯೊಬ್ಬಳು (College Student) ಕಾಲೇಜಿಗೆ ನಡೆದುಕೊಂಡು ಹೋಗುತ್ತಿದ್ದಾಗ, ಆಕೆಯನ್ನು ಹಿಂಬಾಲಿಸಿ ಬಂದ ಕಾಮುಕನೊಬ್ಬ ಖಾಸಗಿ ಅಂಗವನ್ನು ಮುಟ್ಟಿ ಅಸಭ್ಯವಾಗಿ (Physical Abuse) ವರ್ತಿಸಿದ್ದಾನೆ. ಬೆಂಗಳೂರಿನ ಜಯನಗರ (Jayanagar) ಸುರಾನ ಕಾಲೇಜು (Surna College) ಸಮೀಪದ ಚಾಯ್ ಪಾಯಿಂಟ್ (Chai point) ಬಳಿ ಘಟನೆ ನಡೆದಿದೆ.
ರಾಜಧಾನಿ ಬೆಂಗಳೂರು ಹೆಣ್ಮಕ್ಕಳಿಗೆ ಸೇಫ್ ಸಿಟಿ (Bengaluru Safe City) ಎಂಬ ಮಾತಿದೆ. ಆದರೆ ಕೆಲ ಬೀದಿ ಕಾಮುಕರಿಂದ ಬೆಂಗಳೂರಿಗೆ ಕೆಟ್ಟ ಹೆಸರು ತರುತ್ತಿದ್ದಾರೆ. ಜನಜಂಗುಳಿ ಮಧ್ಯೆಯೇ ಯಾರ ಭಯವು ಇಲ್ಲದೇ ಯುವತಿಯರಿಗೆ ಲೈಂಗಿಕ ಕಿರುಕುಳ (Physical Abuse) ನೀಡುತ್ತಿದ್ದಾರೆ. ಬಿಎಂಟಿಸಿ ಬಸ್‌ನಿಂದ ಹಿಡಿದು ನಮ್ಮ ಮೆಟ್ರೋ ರೈಲಿನಲ್ಲೂ ಯುವತಿಯರಿಗೆ ಬೇಕಂತಲೇ ಸ್ಪರ್ಶಿಸಿ ವಿಕೃತಿ ಮೆರೆಯುತ್ತಿದ್ದಾರೆ.
ಕಾಮುಕ ಸ್ಪರ್ಶಿಸುತ್ತಿದ್ದಂತೆ ಬೆಚ್ಚಿದ ವಿದ್ಯಾರ್ಥಿನಿ ಕೂಡಲೇ ಸಹಾಯಕ್ಕೆ ಕೂಗಿದ್ದಾಳೆ. ಅಲ್ಲೇ ಇದ್ದ ಕಾಲೇಜು ವಿದ್ಯಾರ್ಥಿಗಳು ಸಹಾಯಕ್ಕೆ ಧಾವಿಸಿ, ಕಾಮುಕನನ್ನು ಹಿಡಿದಿದ್ದಾರೆ. ಜಯನಗರದ ನಿವಾಸಿ ಸುರೇಶ್ (26) ಎಂಬಾತ ಕೀಟಲೆ ಮಾಡಿದ ಪುಂಡನಾಗಿದ್ದಾನೆ.
ಸ್ಥಳೀಯರು ಹಾಗೂ ಕಾಲೇಜು ವಿದ್ಯಾರ್ಥಿಗಳು ಕಾಮುಕ ಸುರೇಶ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಜಯನಗರ ಪೊಲೀಸರು ಲೈಂಗಿಕ ದೌರ್ಜನ್ಯ ಪ್ರಕರಣದ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ.
ಯುವತಿಯನ್ನು ಹಿಂಬಾಲಿಸಿ ಹಿಂದಿನಿಂದ ಬಂದು ತಬ್ಬಿಕೊಂಡ ಕಾಮುಕ!
ಬೆಂಗಳೂರು: ವಿಕೃತ ಮನಸ್ಥಿತಿಯ ವ್ಯಕ್ತಿಗಳು ಹೆಚ್ಚಾಗುತ್ತಿದ್ದಾರೆ. ಯಾರ ಭಯವು ಇಲ್ಲದೇ ಸಾರ್ವಜನಿಕವಾಗಿಯೇ ಅಸಭ್ಯವಾಗಿ ನಡೆದುಕೊಳ್ಳುತ್ತಿದ್ದಾರೆ. ಮಹಿಳೆಯರು ಇದರಿಂದ ಮುಜುಗರಕ್ಕೀಡಾಗುತ್ತಿರುವುದು ಮಾತ್ರವಲ್ಲ ಅವರಿಗೆ ಭದ್ರತೆಯೇ ಇಲ್ಲದಂತಾಗಿದೆ. ಯುವತಿಯನ್ನು ಹಿಂಬಾಲಿಸಿಕೊಂಡು ಬಂದ ಕಾಮುಕನೊಬ್ಬ, ಹಿಂದಿನಿಂದ ತಬ್ಬಿಕೊಂಡು ಅಸಭ್ಯವಾಗಿ (Physical Abuse) ವರ್ತಿಸಿದ್ದಾನೆ.
ಶೃತಿ ಸಿಂಗ್ ಎಂಬಾಕೆ ತಮಗಾದ ಅನುಭವವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಶೃತಿ ಅವರು ತಮ್ಮ ಸ್ನೇಹಿತನ ಜತೆ ಡ್ರಾಪ್ ಪಡೆದು ಮನೆ ಬಳಿ ಬರುತ್ತಿದ್ದರು. ಆಕೆ ಒಬ್ಬಂಟಿಯಾಗಿದ್ದನ್ನು ಗಮನಿಸಿದ ಕಾಮುಕ ಹಿಂಬಾಲಿಕೊಂಡು ಬಂದಿದ್ದ. ನಂತರ ಆಕೆ ನಡೆದುಕೊಂಡು ಹೋಗುವ ಸಂದರ್ಭದಲ್ಲಿ ಬೈಕ್‌ನಿಂದ ಇಳಿದು, ಓಡಿ ಬಂದವನೇ ಹಿಂಭಾಗದಿಂದ ತಬ್ಬಿ ಅಸಭ್ಯವಾಗಿ ವರ್ತಿಸಿದ್ದಾನೆ.
ಇದರಿಂದ ಆತಂಕಗೊಂಡ ಯುವತಿ ಗಾಬರಿಯಾಗಿ ಕಿರುಚಾಡಿದ್ದಾಳೆ. ಕೂಡಲೇ ಜನರನ್ನು ಸೇರಿದ್ದಾಳೆ. ಇದನ್ನು ವಿರೋಧಿಸಿದ ಯುವತಿ ಅಲ್ಲಿದ್ದ ಸ್ಥಳೀಯರ ಸಹಕಾರದಿಂದ ಆತನನ್ನು ಪೊಲೀಸರಿಗೆ ಒಪ್ಪಿಸಿದ್ದಾಳೆ. ಅಷ್ಟಲ್ಲದೆ ಆತನ ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿದ್ದಾಳೆ. ಮಹಿಳೆಯರಿಗೆ ನಗರದಲ್ಲಿ ಸುರಕ್ಷತೆ ಎಲ್ಲಿದೆ ಎಂದು ಪ್ರಶ್ನೆ ಮಾಡಿದ್ದಾರೆ.
ಈ ಘಟನೆ ಬಗ್ಗೆ ನಾನು ಯಾವುದೇ ರೀತಿಯ ದೂರು ಕೊಡುವುದಿಲ್ಲ. ಒಂದು ವೇಳೆ ದೂರು ಕೊಟ್ಟರೆ ಕೋರ್ಟ್, ಕಛೇರಿ ಎಂದು ಅಲೆಯಬೇಕಾಗುತ್ತದೆ. ಇದರಿಂದ ಇನ್ನಷ್ಟು ಮಾನಸಿಕವಾಗಿ ಹಿಂಸೆಯಾಗುತ್ತೆ ಎಂದು ಬರೆದುಕೊಂಡಿದ್ದಾಳೆ. ಇಂತಹ ಬೀದಿ ಕಾಮಣ್ಣರನ್ನು ಪೊಲೀಸರು ನಿರ್ನಾಮ ಮಾಡಬೇಕು. ಹೆಣ್ಮಕ್ಕಳು ನೆಮ್ಮದಿಯಾಗಿ ನಿರ್ಭಿತಿಯಾಗಿ ಓಡಾಡುವಂತಾಗಬೇಕೆಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: Physical Abuse: ಲೈಂಗಿಕ ದೌರ್ಜನ್ಯವಾದ್ರೆ ಅಡ್ಜಸ್ಟ್ ಮಾಡ್ಕೋ; ಇದು ಅಕ್ಕಮಹಾದೇವಿ ಮಹಿಳಾ ವಿವಿಯ ಕಾಮಕಾಂಡ
ಬೇಕಂತಲೆ ಯುವತಿಗೆ ಟಚ್ ಮಾಡಿ ಅರೆಸ್ಟ್ ಆದ ವಿಕೃತಿಗಳು
ಹಿಂದೊಮ್ಮೆ ಬೆಂಗಳೂರಿನ ವಿಜಯನಗರದ ಕೃಷ್ಣ ಸಾಗರ್ ಹೋಟೆಲ್ ಬಳಿ ಯುವತಿಗೆ ಲೈಂಗಿಕ ಕಿರುಕುಳ ನೀಡಿದ ಘಟನೆ ನಡೆದಿತ್ತು. ಯುವತಿಯೊಬ್ಬಳು ತನ್ನ ಸ್ನೇಹಿತೆಯೊಂದಿಗೆ ತಿಂಡಿ ಪಾಸರ್ಲ್ ಪಡೆಯಲು ನಿಂತಿದ್ದಳು. ಈ ವೇಳೆ ಅಲ್ಲಿಗೆ ಬಂದಿದ್ದ ಮೂವರು ಪುಂಡರು, ಕೀಟಲೆ ಮಾಡುವ ಶುರು ಮಾಡಿದ್ದರು. ಯುವತಿ ನಿಂತಿದ್ದನ್ನು ಗಮನಿಸಿದ ಯುವಕರು ಕೀಟಲೆ ಮಾಡುವ ಉದ್ದೇಶದಿಂದ ಪ್ಲ್ಯಾನ್ ಮಾಡಿಕೊಂಡು ಯುವತಿಯನ್ನು ಟಚ್ ಮಾಡಿದ್ದ. ಫೋನ್‌ನಲ್ಲಿ ಮಾತಾಡುತ್ತಿದ್ದ ಯುವತಿಗೆ ಹಿಂದಿನಿಂದ ಬಂದ ಕಾಮುಕ ಬೇಕು ಬೇಕಂತಲೇ ಟಚ್ ಮಾಡಿದ್ದಾನೆ. ಯುವಕನಿಂದ ಸ್ಪರ್ಶಿಸುತ್ತಿದ್ದಂತೆ ಯುವತಿ ಬೆಚ್ಚಿದ್ದಾಳೆ, ನಂತರ ಪ್ರಶ್ನಿಸಲು ಮುಂದಾಗಿದ್ದಳು. ತಮ್ಮದೇನು ತಪ್ಪೇ ಇಲ್ಲ ಎಂಬಂತೆ ವಾದ ಮಾಡಿ ಅಲ್ಲಿಂದ ಕಾಲ್ಕಿತ್ತಿದ್ದರು.
ಆದರೆ ಇದೆಲ್ಲವೂ ಸಿಸಿಟಿವಿಯಲ್ಲಿ ಸಂಪೂರ್ಣ ದೃಶ್ಯ ಸೆರೆಯಾಗಿತ್ತು. ಹೋಟೆಲ್‌ಗೆ ಬಂದಿದ್ದ ಮೂವರು ಯುವಕರ ಪೈಕಿ, ಒಬ್ಬ ಮೊಬೈಲ್‌ನಲ್ಲಿ ಮುಳುಗಿದ್ದ. ಮತ್ತಿಬ್ಬರು ಕುಚೇಷ್ಠೆಗೆ ಮುಂದಾಗಿದ್ದರು. ಯುವತಿಗೆ ಕಿರುಕುಳ ಕೊಡುವ ಉದ್ದೇಶದಿಂದಲೇ ಯೆಲ್ಲೋ ಶರ್ಟ್ ಧರಿಸಿದ್ದ ಯುವಕ ಮೊದಲಿಗೆ ಯುವತಿಯನ್ನು ನೋಡಿಕೊಂಡು ತನ್ನ ಸ್ನೇಹಿತನೊಂದಿಗೆ ಕಿವಿಯಲ್ಲಿ ಏನೋ ಗುಟ್ಟಾಗಿ ಮಾತನಾಡಿಕೊಂಡಿದ್ದರು.
ಪರಸ್ಪರ ಇಬ್ಬರು ಗುಟ್ಟು ಗುಟ್ಟಾಗಿ ಮಾತಾಡಿಕೊಂಡ ಬಳಿಕ ಕೂದಲು ಹೇರ್ ಸ್ಟೈಲ್ ಮಾಡಿಕೊಂಡು ಯುವತಿ ಬಳಿ ಹೋಗಿದ್ದ. ಯಾವುದೋ ತಿಂಡಿ ಆರ್ಡರ್ ಮಾಡುವಂತೆ ಹೋಗಿ ಯುವತಿಯ ಹಿಂಭಾಗವನ್ನು ಸ್ಪರ್ಶಿಸಿದ್ದ. ಒಬ್ಬ ಯುವಕ ಯುವತಿಯನ್ನು ಬೇಕಂತಲೇ ಟಚ್ ಮಾಡಿ ವಿಕೃತ ಮೆರೆದಿದ್ದರೆ, ಮತ್ತೊಬ್ಬ ದೂರದಿಂದಲೇ ಇದೆಲ್ಲವನ್ನೂ ಕಂಡು ವಿಕೃತ ಸುಖ ಪಡೆಯುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು. ಘಟನೆ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ