ಬೆಂಗಳೂರು: ಪ್ರೌಢ ಶಾಲಾ ಶಿಕ್ಷಕನಿಂದ ಬಾಲಕಿಗೆ ಲೈಂಗಿಕ ಕಿರುಕುಳದ (Physical Abuse) ಆರೋಪ ಕೇಳಿ ಬಂದಿದೆ. ಕಳೆದ ಶನಿವಾರ ಕಮಲಾನಗರದ ಶಾಲೆಯೊಂದರಲ್ಲಿ ಇಂತಹ ಅನಾಚಾರ ನಡೆದಿದೆ.
ಮಗಳ ಮೇಲೆ ಶಿಕ್ಷಕ ಲೈಂಗಿಕ ದೌರ್ಜನ್ಯ ನಡೆಸಿದ ಹಿನ್ನೆಲೆಯಲ್ಲಿ ಬಾಲಕಿ ತಂದೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಈ ಸಂಬಂಧ ಮಕ್ಕಳ ಹಕ್ಕುಗಳ ಆಯೋಗವು ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ. ಜತೆಗೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದಿಂದ ದೂರು ದಾಖಲಾಗಿದೆ.
ಕಾಮುಕನ ಶಿಕ್ಷಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಬಾಲಕಿಯ ತಂದೆ ಮನವಿ ಮಾಡಿದ್ದಾರೆ. ಕಾಮುಕ ಶಿಕ್ಷಕ ಶಾಲೆಯಲ್ಲಿ ಯಾರು ಇಲ್ಲದ ವೇಳೆ ಬಾಲಕಿ ಮೇಲೆ ಎರಗಿದ್ದಾನೆ. ಬಳಿಕ ಈ ವಿಷಯವನ್ನು ಹೊರಗೆ ಹೇಳದಂತೆ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಸದ್ಯ ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ. ಶಿಕ್ಷಕನ ವರ್ತನೆಗೆ ವ್ಯಾಪಕ ಖಂಡನೆ ವ್ಯಕ್ತವಾಗಿದ್ದು, ತಮ್ಮ ಮಕ್ಕಳನ್ನು ಶಾಲೆಗೆ ಕಳಿಸಲು ಇತರೆ ಪೋಷಕರು ಹಿಂದೇಟು ಹಾಕುತ್ತಿದ್ದಾರೆ.
ಇದನ್ನೂ ಓದಿ: Physical Abuse : ಆಟವಾಡುತ್ತಿದ್ದ 6 ವರ್ಷದ ಬಾಲಕಿ ಮೇಲೆ 17 ವರ್ಷದ ಬಾಲಕನಿಂದ ಅತ್ಯಾಚಾರ
ಎಚ್‌ಐವಿ ಪೀಡಿತ ವ್ಯಕ್ತಿಯ ಪ್ರಜ್ಞೆ ತಪ್ಪಿಸಿ ಅತ್ಯಾಚಾರ, ಚಿನ್ನಾಭರಣ ದರೋಡೆ
ಬೆಂಗಳೂರು: ಬೆಂಗಳೂರಿನ ಹೊರವಲಯದಲ್ಲಿ ಒಂದು ಶಾಕಿಂಗ್ ಘಟನೆ (shocking incident) ನಡೆದಿದೆ. 56 ವರ್ಷದ ಎಚ್‌ಐವಿ ಪೀಡಿತ (HIV) ವ್ಯಕ್ತಿಯೊಬ್ಬರನ್ನು ಅವರ ನಿವಾಸದಲ್ಲೇ ಅತ್ಯಾಚಾರ (Physical Abuse) ಎಸಗಿ ದರೋಡೆ (Robbery) ಮಾಡಿರುವ ಆಘಾತಕಾರಿ ಘಟನೆ ಮಾದನಾಯಕನಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸೋಮವಾರ ವರದಿಯಾಗಿದೆ.
ಬೆಂಗಳೂರು ಉತ್ತರ ತಾಲೂಕಿನ ನೆಲಮಂಗಲ (bangalore rural) ಸಮೀಪದ ಹಳ್ಳಿಯಲ್ಲಿ ಈ ಘಟನೆ ನಡೆದಿದೆ. ಪೊಲೀಸರ ಪ್ರಕಾರ, ಎನ್‌ಜಿಒವೊಂದರಲ್ಲಿ ಕೆಲಸ ಮಾಡುತ್ತಿದ್ದ ಸಂತ್ರಸ್ತ ಒಂದು ವರ್ಷದ ಹಿಂದೆ ಆರೋಪಿ ಶ್ಯಾಮ್ ಪಾಟೀಲ್ ಎಂಬಾತನ ಜತೆ ಸ್ನೇಹ ಬೆಳೆಸಿದ್ದ. ಪಾಟೀಲ್ ತಾನು ಕ್ಷಯರೋಗದಿಂದ ಬಳಲುತ್ತಿದ್ದೇನೆ ಎಂದು ಹೇಳಿಕೊಂಡು ಸಂತ್ರಸ್ತನ ವಿಶ್ವಾಸ ಗಳಿಸಿದ್ದ. ಇತ್ತೀಚೆಗಷ್ಟೇ ಸಂತ್ರಸ್ತನ ಪತ್ನಿ ಮತ್ತು ಮಕ್ಕಳು ಸ್ವಗ್ರಾಮಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಆರೋಪಿ ಪರಿಸ್ಥಿತಿಯ ಲಾಭ ಪಡೆದು ಕೃತ್ಯ ಎಸಗಿದ್ದಾನೆ.
ಸಂತ್ರಸ್ತ ಒಂಟಿಯಾಗಿರುವ ವಿಚಾರ ತಿಳಿದ ಪಾಟೀಲ್ ಅವರ ಮನೆಗೆ ಭೇಟಿ ನೀಡಿ ಜ್ಯೂಸ್‌ನಲ್ಲಿ ನಿದ್ದೆ ಮಾತ್ರೆ ಬೆರೆಸಿ ಕೊಟ್ಟಿದ್ದಾನೆ. ಸಂತ್ರಸ್ತ ಪ್ರಜ್ಞಾಹೀನರಾಗುತ್ತಿದ್ದಂತೆ, ಪಾಟೀಲ್ ಅವರ ಮುಖಕ್ಕೆ ಪ್ರಜ್ಞೆ ತಪ್ಪಿಸುವ ಲಿಕ್ವಿಡ್ ಸಿಂಪಡಿಸಿದ್ದಾನೆ. ನಂತರ ಅವರ ಮೇಲೆ ಅತ್ಯಾಚಾರ ಎಸಗಿ, ಕಬೋರ್ಡ್‌ನಲ್ಲಿಟ್ಟಿದ್ದ 88 ಗ್ರಾಂ ಚಿನ್ನಾಭರಣ, 20 ಸಾವಿರ ನಗದು, ಮೊಬೈಲ್ ಹ್ಯಾಂಡ್ ಸೆಟ್ ದೋಚಿ ಪರಾರಿಯಾಗಿದ್ದಾನೆ.
ಸಂತ್ರಸ್ತ ಮರುದಿನ ಬೆಳಗ್ಗೆ ಎಚ್ಚೆತ್ತಾಗ ತಾನು ದರೋಡೆಯಾಗಿರುವುದು ಗಮನಕ್ಕೆ ಬಂದಿದೆ. ಅವರು ಮಾದನಾಯಕನಹಳ್ಳಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಆರೋಪಿ ಶ್ಯಾಮ್ ಪಾಟೀಲ್‌ಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ