Site icon Vistara News

Physical Abuse: ಸೋಶಿಯಲ್‌ ಮೀಡಿಯಾದಲ್ಲಿ ಗೆಳೆತನ; ಪ್ರೀತಿಯ ನಾಟಕವಾಡಿ ವಿದ್ಯಾರ್ಥಿನಿಯ ಗ್ಯಾಂಗ್‌ರೇಪ್

andy george shashi santosh

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ (social media) ಗೆಳೆತನ ಬೆಳೆಸಿದ ಯುವತಿಯನ್ನು ಪ್ರೀತಿಸುವ ನಾಟಕವಾಡಿ, ಕರೆಸಿಕೊಂಡು ಗ್ಯಾಂಗ್‌ರೇಪ್‌ (Physical Abuse) ನಡೆಸಿದ ಡ್ಯಾನ್ಸ್ ಮಾಸ್ಟರ್ ಹಾಗು ದೇವಸ್ಥಾನದ ಇನ್ ಚಾರ್ಜ್ ಸೇರಿ ಮೂವರನ್ನು ಬಂಧಿಸಲಾಗಿದೆ.

ಕಾಲೇಜು ವಿದ್ಯಾರ್ಥಿನಿ ಹೀಗೆ ಕಾಮುಕನಿಂದ ವಂಚನೆ ಹಾಗೂ ಅತ್ಯಾಚಾರಕ್ಕೆ ಒಳಗಾಗಿದ್ದಾಳೆ. ಆ್ಯಂಡಿ ಜಾರ್ಜ್, ಸಂತೋಷ್, ಶಶಿ ಬಂಧಿತ ಆರೋಪಿಗಳು. ಆ್ಯಂಡಿ ಜಾರ್ಜ್ ಖಾಸಗಿ ಶಾಲೆಯ ಡ್ಯಾನ್ಸಿಂಗ್ ಟೀಚರ್ ಆಗಿದ್ದಾನೆ. ಯುವತಿ ನೀಡಿದ ದೂರು ಆಧರಿಸಿ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಎರಡು ವರ್ಷಗಳ ಹಿಂದೆ ಆ್ಯಂಡಿ ಸಾಮಾಜಿಕ ಜಾಲತಾಣದಲ್ಲಿ ವಿದ್ಯಾರ್ಥಿನಿಯನ್ನು ಪರಿಚಯ ಮಾಡಿಕೊಂಡಿದ್ದ. ನಂತರ ಆಕೆಯೊಂದಿಗೆ ಪ್ರೀತಿ ಹೆಸರಲ್ಲಿ ಸುತ್ತಾಡಿದ್ದ. ಈ ವೇಳೆ ಆಕೆಯ ಜೊತೆ ಕೆಲ ಖಾಸಗಿ ಸಂದರ್ಭಗಳ ಫೋಟೊಗಳನ್ನು ಸೆರೆಹಿಡಿದುಕೊಂಡಿದ್ದ. ಬಳಿಕ ಅದೇ ಫೋಟೊ ಬಳಸಿಕೊಂಡು ಆಕೆಗೆ ಬೆದರಿಕೆ ಒಡ್ಡಿದ್ದ. ಯುವತಿ ಆತಂಕಗೊಂಡು ಆತನಿಂದ ದೂರವಾಗಿದ್ದಳು. ಬಳಿಕ ಫೋಟೊಗಳನ್ನು ಶೇರ್ ಮಾಡುವುದಾಗಿ ಬೆದರಿಸಿ ಅತ್ಯಾಚಾರ ಮಾಡಿದ್ದ. ಈ ವೇಳೆ ಮೊಬೈಲ್ ಬಳಸಿ ವಿಡಿಯೋ ಮಾಡಿಕೊಂಡಿದ್ದು, ಅದನ್ನು ಇಟ್ಟುಕೊಂಡು ಮತ್ತೆ ಮತ್ತೆ ಕರೆಸಿ ಹಲವು ಬಾರಿ ಅತ್ಯಾಚಾರ ಮಾಡಿದ್ದಾನೆ.

ಬಳಿಕ ಈ ಪಾಪಿ ತನ್ನ ಗೆಳೆಯರನ್ನೂ ಕರೆಸಿಕೊಂಡು ಆಕೆಯ ಮೇಲೆ ಅತ್ಯಾಚಾರ ಮಾಡಿದ್ದಾನೆ. ಪ್ರತ್ಯೇಕವಾಗಿ ಹಾಗೂ ಗುಂಪಾಗಿ ಮೂವರೂ ಅತ್ಯಾಚಾರ ಎಸಗಿದ್ದಾರೆ. ಇದರ ಬಳಿಕವೂ ಆ್ಯಂಡಿ ಜಾರ್ಜ್‌ ಸಾಮಾಜಿಕ ಜಾಲತಾಣದಲ್ಲಿ ಆಕೆಯ ಫೋಟೊ, ವಿಡಿಯೋ ಹಾಕಿದ್ದಾನೆ. ನೊಂದ ಯುವತಿ ಪೊಲೀಸರಿಗೆ ದೂರು ನೀಡಿದ್ದು, ಮೂವರನ್ನು ಕೊಡಿಗೆಹಳ್ಳಿ ಪೊಲೀಸರು (bangalore police) ಬಂಧಿಸಿದ್ದಾರೆ. ಆರೋಪಿಗಳ ಬಳಿ ಇದ್ದ ಮೊಬೈಲ್, ಪೆನ್ ಡ್ರೈವ್ ಸೇರಿದಂತೆ ಟೆಕ್ನಿಕಲ್ ಸಾಕ್ಷಿಗಳನ್ನು ವಶಪಡಿಸಿಕೊಳ್ಳಲಾಗಿದೆ. ಖಾಸಗಿ ಶಾಲೆಯಲ್ಲಿ ಶಿಕ್ಷಕನಾಗಿರುವ ಆರೋಪಿ ಇದೇ ಮಾದರಿಯ ಬೇರೆ ಕೃತ್ಯಗಳನ್ನೂ ನಡೆಸಿದ್ದಾನೆಯೇ ಎಂಬ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ.

ಇದನ್ನೂ ಓದಿ: physical abuse : ಅಪ್ರಾಪ್ತ ವಯಸ್ಸಿನ ಹೆತ್ತ ಮಗಳ ಮೇಲೆಯೇ ನಿರಂತರ ಅತ್ಯಾಚಾರ ನಡೆಸಿದ ಪಾಪಿ

Exit mobile version