ಬೆಂಗಳೂರು: ಸಾಮಾನ್ಯವಾಗಿ ಸೀನಿಯರ್ ಅಧಿಕಾರಿಗಳು ಹೊಸದಾಗಿ ಕೆಲಸಕ್ಕೆ ಸೇರಿದ ಹೆಣ್ಮಕ್ಕಳನ್ನು ಪುಸಲಾಯಿಸುವುದು, ಬಳಸಿಕೊಳ್ಳಲು ಯತ್ನಿಸುವುದು, ಲೈಂಗಿಕ ಕಿರುಕುಳ ನೀಡುವುದರ ಬಗ್ಗೆ ದೂರುಗಳು ದಾಖಲಾಗುತ್ತವೆ. ಆದರೆ, ಇನ್ನೊಬ್ಬ ಜೂನಿಯರ್ ಸಿಬ್ಬಂದಿ (Junior Doctor Harass Senior) ತನ್ನ ವಿಭಾಗದ ಮುಖ್ಯಸ್ಥರಾಗಿರುವ ಮಹಿಳೆಗೇ ಲೈಂಗಿಕ ಕಿರುಕುಳ (Physical Abuse) ನೀಡುತ್ತಿದ್ದಾನಂತೆ.
ಬೆಂಗಳೂರಿನ ಕೆಂಪೇಗೌಡ ವೈದ್ಯಕೀಯ ಕಾಲೇಜು (Kempegowda Institute of Medical sciences-KIMS) ನಲ್ಲಿ ಇಂಥ ಘಟನೆಯೊಂದು ನಡೆದಿರುವ ಗಂಭೀರ ಆಪಾದನೆ ಕೇಳಿಬಂದಿದೆ. ಫಾರ್ಮಾ ಕಾಗ್ನಸಿ ವಿಭಾಗದ ಮುಖ್ಯಸ್ಥೆಯಾಗಿರುವ ಮಹಿಳಾ ಡಾಕ್ಟರ್‌ಗೆ (Woman Doctor) ಅದೇ ವಿಭಾಗದಲ್ಲಿ ಕೆಲಸ ಮಾಡುತ್ತಿರುವ ಡಾ. ರಾಜು ಎಂಬುವವರು ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎಂದು ದೂರು ದಾಖಲಾಗಿದೆ.
ನನ್ನ ಜೂನಿಯರ್ ಆಗಿರುವ ಡಾ. ರಾಜು ನನ್ನ ಬಗ್ಗೆ ಕೆಟ್ಟ ಮಾತುಗಳನ್ನು ಆಡಿಕೊಂಡು ಬರುತ್ತಿದ್ದಾನೆ. ನನ್ನನ್ನು ಫಾಲೋ ಮಾಡ್ತಾನೆ, ಮೈಕೈ ಮುಟ್ಟಿ ಕಿರುಕುಳ ನೀಡುತ್ತಾನೆ ಎಂದು ಕಿಮ್ಸ್ ವೈದ್ಯೆ ಬನಶಂಕರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಒಬ್ಬ ಜೂನಿಯರ್ ಡಾಕ್ಟರ್ ನಿಜಕ್ಕೂ ಹಿರಿಯ ಮಹಿಳಾ ವೈದ್ಯೆಯ ಮೈಮುಟ್ಟಿ ಲೈಂಗಿಕ ಕಿರುಕುಳ ನೀಡುತ್ತಿದ್ದಾನೆ ಎನ್ನುವುದು ಭಯಾನಕ ವಿಚಾರವಾಗಿದೆ. ಇಂಥ ಪವರ್ ಫುಲ್ ಹುದ್ದೆಗಳಲ್ಲಿ ಇರುವ ಮಹಿಳೆಯರೇ ಈ ರೀತಿ ಹಿಂಸೆಗೆ ಒಳಗಾದರೆ ಉಳಿದವರ ಪಾಡೇನು ಎಂಬ ಪ್ರಶ್ನೆ ಇದೆ. ಅದೇ ಹೊತ್ತಿಗೆ ಇದು ನಿಜವಾದ ಪ್ರಕರಣವೋ ಅಥವಾ ತಮ್ಮ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದಾನೆ ಎಂಬ ಕಾರಣಕ್ಕೆ ನೀಡಿದ ದೂರಾಗಿರಬಹುದಾ ಎಂಬ ಸಂಶಯವೂ ಇದೆ. ಹೀಗಾಗಿ ಪೊಲೀಸರು ಎರಡೂ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: Love Jihad: ಅಪ್ರಾಪ್ತೆ ಜತೆಗೆ ಲವ್; ಮುಸ್ಲಿಂ ಯುವಕನ ಕೂಡಿಹಾಕಿ ಹಿಗ್ಗಾಮುಗ್ಗಾ ಥಳಿಸಿದ ಹಿಂದೂ ಕಾರ್ಯಕರ್ತರು
ಒಂದೇ ಶಾಲೆಯ ಶಿಕ್ಷಕ-ಶಿಕ್ಷಕಿ ನಡುವೆ ಲವ್ವಿ ಡವ್ವಿ; ರೆಡ್ ಹ್ಯಾಂಡ್ ಆಗಿ ಹಿಡಿದ ಹೆಂಡ್ತಿ!
ತುಮಕೂರು: ಅವನು ಒಂದು ಶಾಲೆಯ ಶಿಕ್ಷಕ, ಇವಳೂ ಅದೇ ಶಾಲೆಯಲ್ಲಿ ಸಹಶಿಕ್ಷಕಿ. ಮಕ್ಕಳಿಗೆ ಒಳಿತಿನ ಪಾಠ ಮಾಡಬೇಕಾದ ಇವರಿಬ್ಬರು ತಾವಿಬ್ಬರೇ ಕೋಣೆಯಲ್ಲಿ ಕುಳಿತು ಕಾಮದಾಟ ಆಡಲು ಶುರು ಮಾಡಿದ್ದರು. ಆದರೆ, ಕದ್ದು ಮುಚ್ಚಿ ನಡೆಯೋ ಈ ವ್ಯವಹಾರಗಳೆಲ್ಲ ಎಷ್ಟು ದಿನಾಂತ ನಡೀತದೆ.. ಒಂದು ಒಳ್ಳೆಯ ದಿನ ಶಿಕ್ಷಕನ ಹೆಂಡತಿ ರೆಡ್ ಹ್ಯಾಂಡ್ ಆಗಿ, ಬೆತ್ತಲೆಯಾಗಿಯೆ ಇಬ್ಬರನ್ನು ಹಿಡಿದು ಬಿಟ್ಟಿದ್ದಾರೆ!
ಘಟನೆ ನಡೆದಿರುವುದು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ದಸೂಡಿ ಗ್ರಾಮದಲ್ಲಿ. ಹೆಂಡ್ತಿ ಕೈಲಿ ಸಿಕ್ಕಾಕಿಕೊಂಡ ಶಿಕ್ಷಕನ ಹೆಸರು ರಂಗನಾಥ್, ಅವನ ಜತೆ ಲವ್ವಿ ಡವ್ವಿ ಆಟದಲ್ಲಿ ತೊಡಗಿದ್ದವಳು ಶಿಕ್ಷಕಿ ಲಾವಣ್ಯ.
ರಂಗನಾಥ ಅದ್ಯಾವಾಗ ಲಾವಣ್ಯಳ ಲಾವಣ್ಯಕ್ಕೆ ಮರುಳಾಗಿ ಕೈ ಹಿಡಿದನೋ ಗೊತ್ತಿಲ್ಲ. ಕೆಲವು ಸಮಯದಿಂದ ಅವರಿಬ್ಬರೂ ಕದ್ದು ಮುಚ್ಚಿ ಕುಚಿಕು ನಡೆಸುತ್ತಿದ್ದರು. ಒಂದೇ ಶಾಲೆಯಲ್ಲಿ ಕೆಲಸ ಮಾಡುವ ಇವರು ಒಂದೇ ಮನೆಯಲ್ಲಿರುವಂತೆ ವರ್ತಿಸುತ್ತಿದ್ದರು!
ಅದೊಂದು ದಿನ ಹೆಂಡತಿ ಚಂದ್ರಮ್ಮ ಊರಿಗೆ ಹೋಗುತ್ತೇನೆ ಎಂದು ಹೇಳಿದಾಗ ರಂಗನಾಥ ಆಕಾಶಕ್ಕೆ ಮೂರೇ ಗೇಣು ಎಂಬಂತೆ ಸಂತೋಷಪಟ್ಟಿದ್ದ. ಆಕೆಯನ್ನು ಊರಿಗೆ ಕಳುಹಿಸಿದವನೇ ಸಹಶಿಕ್ಷಕಿ ಲಾವಣ್ಯಳನ್ನು ಮನೆಗೆ ಕರೆದುಕೊಂಡು ಬಂದಿದ್ದ. ಆದರೆ, ಚಂದ್ರಮ್ಮನಿಗೆ ಮೊದಲೇ ಈ ವಾಸನೆ ಬಡಿದಿತ್ತು. ಅವರಿಬ್ಬರನ್ನು ಒಂದೇ ಕೋಣೆಯೊಳಗೆ ಹಿಡಿಯಬೇಕು ಎಂಬ ಕಾರಣಕ್ಕಾಗಿಯೇ ಆಕೆ ತಾಯಿ ಮನೆಗೆ ಹೋಗುವ ಪ್ಲ್ಯಾನ್ ಮಾಡಿದ್ದಳು. ಅವಳು ಯೋಚನೆ ಮಾಡಿದಂತೆ ಮನೆಗೆ ಬಂದು ನೋಡಿದರೆ ಇವರಿಬ್ಬರು ಲೋಕವನ್ನೇ ಮರೆತಿದ್ದಾರೆ.!
ರಾತ್ರೋರಾತ್ರಿ ಮನೆಗೆ ಮರಳಿದ ಚಂದ್ರಮ್ಮ ಅವರಿಬ್ಬರನ್ನು ರೆಡ್ ಹ್ಯಾಂಡಾಗಿ ಹಿಡಿದಿದ್ದಾಳೆ. ರಂಗನಾಥ ಮತ್ತು ಲಾವಣ್ಯ ಗುಟ್ಟಾಗಿ ಸೇರುವುದು ಮಾತ್ರವಲ್ಲ ಮದುವೆಯೇ ಆಗಿದ್ದಾರೆ ಎಂಬ ಗಂಭೀರ ಆರೋಪವನ್ನೇ ಮಾಡಿದ್ದಾಳೆ. ಅಕ್ರಮ ಸಂಬಂಧಕ್ಕೆ ಸಂಬಂಧಿಸಿ ಶಿಕ್ಷಕ ರಂಗನಾಥ್ ಮತ್ತು ಲಾವಣ್ಯ ಇರುದ್ಧ ವಿರುದ್ಧ ಪತ್ನಿ ಹುಳಿಯಾರು ಪೋಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಕೂಡಲೇ ಶಿಕ್ಷಕಿ ಲಾವಣ್ಯಳನ್ನು ಬೇರಡೆಗೆ ವರ್ಗಾವಣೆ ಮಾಡುವಂತೆ ಇಲಾಖೆಗೂ ಒತ್ತಾಯಿಸಿದ್ದಾಳೆ.