Site icon Vistara News

Physical Abuse : ಮಾಲ್‌ನಲ್ಲಿ ಯುವತಿಗೆ ಡಿಕ್ಕಿ ಹೊಡೆದು ಹಿಂಭಾಗ ಮುಟ್ಟಿ ಎಸ್ಕೇಪ್‌ ಆದ ಕಾಮುಕ!

Physical Abuse in Bengaluru Mala

ಬೆಂಗಳೂರು: ಸಾಮಾನ್ಯವಾಗಿ ರಶ್‌ ಇರುವ ಬಸ್‌ನಲ್ಲಿ, ರಸ್ತೆಯಲ್ಲಿ ನಡೆದು ಹೋಗುವಾಗ, ಗುಂಪಿನಲ್ಲಿ ಇದ್ದರೆ ಕೆಲ ಕಾಮಪಿಶಾಚಿಗಳು ಡಿಕ್ಕಿ ಹೊಡೆದಂತೆ ಹೆಣ್ಮಕ್ಕಳ ಮೈ-ಕೈ ಮುಟ್ಟಿ ಕಿರುಕುಳ ನೀಡುತ್ತಾರೆ. ಸದ್ಯ ಬೆಂಗಳೂರಿನ ಪ್ರತಿಷ್ಠಿತ ಮಾಲ್‌ವೊಂದರಲ್ಲಿ ಲೈಂಗಿಕ ಕಿರುಕುಳದ (Physical Abuse) ಆರೋಪ ಕೇಳಿ ಬಂದಿದೆ.

ಮಾಲ್‌ನಲ್ಲಿ ಯುವತಿಯೊಬ್ಬಳು ನಡೆದು ಬರುವಾಗ ವ್ಯಕ್ತಿಯೊಬ್ಬ ಬೇಕಂತಲೇ ಹಿಂದಿನಿಂದ ಹೋಗಿ ಆಕೆಗೆ ಡಿಕ್ಕಿ ಹೊಡೆದಿದ್ದಾನೆ. ಬಳಿಕ ಆಕೆ ಹಿಂಭಾಗವನ್ನು ಮುಟ್ಟಿದ್ದಾನೆ. ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೊ ವೈರಲ್ ಆಗುತ್ತಿದೆ. ನಗರದ ಲುಲು ಮಾಲ್‌ನಲ್ಲಿ ಭಾನುವಾರ ಸಂಜೆ ನಡೆದಿದೆ ಎನ್ನಲಾದ ವಿಡಿಯೊ ಇದಾಗಿದೆ.

ಇನ್ಸ್ಟಾಗ್ರಾಮ್‌ನ yesh_Fitspiration ಎನ್ನುವ ಖಾತೆಯಿಂದ ಈ ವಿಡಿಯೊ ಅಪ್ಲೋಡ್‌ ಮಾಡಲಾಗಿದೆ. ಅ. 29ರ ಭಾನುವಾರ ಸಂಜೆ 6.30ರ ಸುಮಾರಿಗೆ ಬೆಂಗಳೂರಿನ ಲುಲು ಮಾಲ್‌ನಲ್ಲಿ ಈ ಘಟನೆ ನಡೆದಿದೆ. ವಿಡಿಯೊದಲ್ಲಿ ಕಾಣುತ್ತಿರುವ ಈ ವ್ಯಕ್ತಿ ಮಾಲ್‌ಗೆ ಬಂದ ಮಹಿಳೆಯರು ಮತ್ತು ಹುಡುಗಿಯರ ಹಿಂದೆ ಓಡಾಡುತ್ತಿದ್ದ. ಮೊದಲಿಗೆ ಅವನು ಜನನಿಬಿಡ ಪ್ರದೇಶದಲ್ಲಿ ಇದ್ದುದನ್ನು ನೋಡಿದ ನಾನು ಅನುಮಾನಗೊಂಡು ವಿಡಿಯೊ ರೆಕಾರ್ಡ್ ಮಾಡುತ್ತಾ ಹಿಂಬಾಲಿಸಿದೆ.

ಇದನ್ನೂ ಓದಿ: Fertility Fraud : ತನ್ನದೇ ವೀರ್ಯವನ್ನು ಕೃತಕ ಗರ್ಭಧಾರಣೆಗೆ ಬಳಸಿದ್ದ ವೈದ್ಯ 34 ವರ್ಷದ ಬಳಿಕ ಸಿಕ್ಕಿ ಬಿದ್ದ!

ಈ ವೇಳೆ ಹುಡುಗಿಯೊಬ್ಬಳ ಹಿಂಭಾಗ ಮುಟ್ಟುವುದು ಮಾಡುತ್ತಿದ್ದ. ಕೂಡಲೇ ಈ ಬಗ್ಗೆ ಸೆಕ್ಯುರಿಟಿಗೆ ಹೋಗಿ ದೂರು ನೀಡಿದ್ದು, ಆತನನ್ನು ಹುಡುಕಿಕೊಂಡು ಬಂದಾಗ ತಪ್ಪಿಸಿಕೊಂಡಿದ್ದ. ಸದ್ಯ ಮಾಲ್ ಆಡಳಿತ ಮಂಡಳಿ ಮತ್ತು ಸೆಕ್ಯೂರಿಟಿಗೆ ಮಾಹಿತಿ ನೀಡಿದ್ದು, ಆ ವ್ಯಕ್ತಿಯನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ ಎಂದು ಆತ ಬರೆದುಕೊಂಡಿದ್ದಾರೆ.

ಸೋಶಿಯಲ್‌ ಮೀಡಿಯಾದಲ್ಲಿ ಈ ವಿಡಿಯೊ ವೈರಲ್‌ ಆಗುತ್ತಿದ್ದಂತೆ ‌ಬೆಂಗಳೂರು ನಗರ ಪೊಲೀಸರು ಪೋಸ್ಟ್‌ ಮಾಡಿದ ವ್ಯಕ್ತಿಯನ್ನು ಸಂಪರ್ಕಿಸಿದ್ದಾರೆ. ವಿಡಿಯೊ ಅಧಾರದ ಮೇಲೆ ಪರಿಶೀಲನೆ ನಡೆಸುತ್ತಿದ್ದಾರೆ. ಸದ್ಯ ವಿಡಿಯೊ ಎಲ್ಲಿಯದ್ದು, ಯಾವಾಗ ನಡೆದಿದ್ದು ಎಂಬುದರ ಬಗ್ಗೆ ಮಾಹಿತಿಯನ್ನು ಕಲೆಹಾಕುತ್ತಿದ್ದಾರೆ.

ಇನ್ನು ವ್ಯಕ್ತಿ ಬೇಕಂತಲೆ ಯುವತಿಯ ಹಿಂಭಾಗಕ್ಕೆ ಹೋಗಿ ಡಿಕ್ಕಿ ಹೊಡೆದು ಮುಟ್ಟಿದ್ದಾನೆ. ಈತನಿಗೆ ಸರಿಯಾದ ಶಿಕ್ಷೆ ಆಗಬೇಕೆಂದು ಕಮೆಂಟ್‌ಗಳನ್ನು ಮಾಡಿದ್ದಾರೆ. ಜನರೆಲ್ಲರೂ ಇರುವಾಗಲೇ ಈ ರೀತಿ ಲೈಂಗಿಕ ಕಿರುಕುಳ ಮಾಡಿ ತಮ್ಮ ಕಾಮದಾಸೆಯನ್ನು ತೀರಿಸಿಕೊಳ್ಳಲು ಕಾಮುಕರು ಇರುತ್ತಾರೆ. ಮಹಿಳೆಯರು, ಯುವತಿಯರು ಹುಷಾರಾಗಿರಿ ಎಂದು ಸಲಹೆಯನ್ನೂ ನೀಡಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version