ಬೆಂಗಳೂರು: ಬೆಂಗಳೂರಿನಲ್ಲಿ ದಿನೇದಿನೆ ಮೊಬೈಲ್ ಕಳ್ಳರು ಹೆಚ್ಚಾಗುತ್ತಿದ್ದಾರೆ. ಪಕ್ಕ ಪ್ಲ್ಯಾನ್ ಮಾಡಿ ಮೊಬೈಲನ್ನು ಇವರು ದೋಚುತ್ತಾರೆ. ಸಂಚಾರ ದಟ್ಟಣೆ ಇರುವ ಏರಿಯಾಗಳನ್ನೆ ಹೆಚ್ಚು ಟಾರ್ಗೆಟ್ ಮಾಡಿ ಮೊಬೈಲ್ ಕಳವು ಮಾಡುತಿದ್ದ ಮೂವರು ಮೊಬೈಲ್ ಕಳ್ಳರು ಮಾರತ್ತಹಳ್ಳೀ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ.
ಶಾಂತಕುಮಾರ್, ನಾಸೀರ್, ಗಣೇಶ್ ಈ ಮೂವರು ಬಂಧಿತ ಆರೋಪಿಗಳು. ಯಾರಿಗೂ ತಿಳಿಯದಹಾಗೆ ಮೊಬೈಲನ್ನು ಕಳವು ಮಾಡುತ್ತಿದ್ದರು. ಸಿಲ್ಕ್ ಬೋರ್ಡ್‌ನಿಂದ ಮಾರತ್ತಹಳ್ಳಿಗೆ ಸಂಚರಿಸುವ ಬಸ್‌ಗಳಲ್ಲಿ ಕೆಲಸ ಮುಗಿಸಿ ಮನೆಗೆ ಹೋಗುವವರನ್ನು ಮೊಬೈಲ್ ಕಳ್ಳರು ಟಾರ್ಗೆಟ್ ಮಾಡುತ್ತಿದ್ದರು. ಪ್ರತಿದಿನ ನಿತ್ಯ ಸಂಜೆ ವೇಳೆ ಈ ಗ್ಯಾಂಗ್ ಆ್ಯಕ್ಟಿವ್ ಆಗುತಿತ್ತು.
ಪ್ರತಿ ದಿನ 12 ಮೊಬೈಲ್ ದೋಚಲೇ ಬೇಕು ಎಂದು ಈ ಆರೋಪಿಗಳು ಟಾರ್ಗೆಟ್ ಮಾಡಿಕೊಳ್ಳುತಿದ್ದರು. ಜನದಟ್ಟಣೆ ಇರುವ ಬಸ್‌ಗೆ ಹತ್ತುತಿದ್ದ ಮೂರು ಜನರ ತಂಡ, ಟೆಕ್ಕಿಗಳ ಮೊಬೈಲ್ ದೋಚಲು ಸಂಚು ರೂಪಿಸುತ್ತಿದ್ದರು. ಬಸ್‌ನಲ್ಲಿ ನಿಂತಿರುವವರನ್ನೇ ಇವರು ಗುರಿ ಮಾಡುತ್ತಿದ್ದರು. ಗಮನ ಬೇರಡೆ ಸೆಳೆದು ಕ್ಷಣಾರ್ಧದಲ್ಲಿ ಮೊಬೈಲ್ ಕದ್ದು ಪರಾರಿಯಾಗುತ್ತಿದ್ದರು. ಮೂವರು ಬಸ್‌ನಲ್ಲಿ ಇದ್ದರೆ ಇನ್ನೊಬ್ಬ ಆಟೋದಲ್ಲಿ ಫಾಲೋ ಮಾಡುತಿದ್ದ.
ಕದ್ದ ಮೊಬೈಲ್‌ಗಳನ್ನ ಒಬ್ಬ ಹೋಗಿ ಆಟೋದಲ್ಲಿ ಇಟ್ಟು, ಆಟೋ ಓಡಿಸುತಿದ್ದವನ್ನು ಮೊಬೈಲ್ ದೋಚಲು ಕಳುಹಿಸುತ್ತಿದ್ದ. ಮಾರತ್ತಹಳ್ಳಿಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು. ಇದೀಗ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಕಳವು ಮಾಡುತಿದ್ದ ವೇಳೆಯೇ ಮೊಬೈಲ್ ಕಳ್ಳರು ರೆಡ್ ಹ್ಯಾಂಡ್ ಆಗಿ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾರೆ. ಸದ್ಯ ಬಂಧಿತರಿಂದ 7 ಮೊಬೈಲ್ ಫೋನ್, ಒಂದು ಆಟೋವನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಮಾರತ್ತಹಳ್ಳಿ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ| ರೈಲಿನಲ್ಲಿ ಮಹಿಳೆಯ ಗಮನ ಬೇರೆಡೆ ಸೆಳೆದು ಆಭರಣ ದೋಚುವ ಕಳ್ಳಿಯರು