Site icon Vistara News

Bengaluru Ring Road : ಬೆಂಗಳೂರಿನ 2 ರಿಂಗ್‌ ರೋಡ್‌ ಲೋಕಾರ್ಪಣೆ ಮಾಡಿದ ಮೋದಿ: ಏನೇನು ಲಾಭ?

bengaluru Outer Ring Road1

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಬೆಂಗಳೂರಿನ ಮಹತ್ವಾಕಾಂಕ್ಷಿ ಸೆಟಲೈಟ್‌ ಟೌನ್‌ ರಿಂಗ್‌ ರೋಡ್‌ನ (Satellite Town Ring Road- STRR) ಎರಡು ಪ್ರಮುಖ ರಸ್ತೆಗಳ (Bengaluru Ring Road) ಲೋಕಾರ್ಪಣೆ ಮಾಡುವ ಮೂಲಕ ನಗರದ ಜನಸಂಚಾರಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ದಾಬಸ್‌ಪೇಟೆಯಿಂದ ದೊಡ್ಡ ಬಳ್ಳಾಪುರವನ್ನು (Dobbaspet – Doddaballapur section) ಸಂಪರ್ಕಿಸುವ 42 ಕಿ.ಮೀ. ಉದ್ದದ ರಸ್ತೆ, ದೊಡ್ಡಬಳ್ಳಾಪುರದಿಂದ ಹೊಸಕೋಟೆ (Doddaballapura-Hoskote section) ನಡುವಿನ 37 ಕಿ.ಮೀ ಉದ್ದದ ರಸ್ತೆಯನ್ನು ಅವರು ವರ್ಚ್ಯುವಲ್‌ (Virtual Inauguration) ಆಗಿ ಉದ್ಘಾಟಿಸಿದರು.

ಬೆಂಗಳೂರಿನ ಸಂಚಾರ ದಟ್ಟಣೆ, ಟ್ರಾಫಿಕ್‌ ಸಮಸ್ಯೆಗೆ ದೊಡ್ಡ ಪರಿಹಾರವಾಗಿ ಸೆಟಲೈಟ್‌ ಟೌನ್‌ ಟೌನ್‌ ರಿಂಗ್‌ ರೋಡನ್ನು ರೂಪಿಸಲಾಗಿದ್ದು, ದಾಬಸ್‌ಪೇಟೆಯಿಂದ ದೊಡ್ಡ ಬಳ್ಳಾಪುರವನ್ನು ಸಂಪರ್ಕಿಸುವ 42 ಕಿ.ಮೀ. ಉದ್ದದ ರಸ್ತೆಯನ್ನು 1438 ಕೋಟಿ ರೂ. ಮತ್ತು ದೊಡ್ಡಬಳ್ಳಾಪುರದಿಂದ ಹೊಸಕೋಟೆ ನಡುವಿನ 37 ಕಿ.ಮೀ ಉದ್ದದ ರಸ್ತೆಯನ್ನು 1317 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.

ಈ ಸೆಟಲೈಟ್‌ ರಿಂಗ್‌ ರೋಡ್‌ನ ನಿರ್ಮಾಣದಿಂದಾಗಿ ಇನ್ನು ಮುಂದೆ ಬೆಂಗಳೂರು ನಗರದಲ್ಲಿ ಸಂಚಾರ ದಟ್ಟಣೆ ಕಡಿಮೆಯಾಗಲಿದೆ. ಅದರಲ್ಲೂ ಮುಖ್ಯವಾಗಿ ನಗರದ ಹೊರಭಾಗದಿಂದ ‌ ಬಂದು ವಿಮಾನ ನಿಲ್ದಾಣ ಕಡೆಗೆ ಹೋಗುವವರಿಗೆ ಅನುಕೂಲವಾಗಲಿದೆ ಎಂದು ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ತಿಳಿಸಿದ್ದಾರೆ.

ಹೊಸಕೋಟೆ, ಕೋಲಾರ, ಚಿತ್ತೂರು, ಚಿಂತಾಮಣಿ, ಮಾಲೂರು ಭಾಗಗಳಿಂದ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವವರಿಗೆ ಇದರಿಂದ ಭಾರಿ ಅನುಕೂಲವಾಗಲಿದೆ. ಇಲ್ಲಿನ ಜನರು ಬೆಂಗಳೂರು ನಗರವನ್ನು ಪ್ರವೇಶ ಮಾಡದೆಯೇ ವಿಮಾನ ನಿಲ್ದಾಣಕ್ಕೆ ತಲುಪಬಹುದು. ಈ ಮೂಲಕ ಬೆಂಗಳೂರಿನ ಟ್ರಾಫಿಕ್‌ ಸಮಸ್ಯೆಯೂ ಭಾರಿ ಕಡಿಮೆಯಾಗಲಿದೆ.

Bengaluru Ring Road : ಹೆಬ್ಬಾಳ ಪ್ರದೇಶದ ಮೇಲಿನ ಒತ್ತಡ ಕಡಿಮೆಯಾಗಲಿದೆ

ದಾಬಸ್‌ಪೇಟೆ -ದೊಡ್ಡಬಳ್ಳಾಪುರವನ್ನು ಸಂಪರ್ಕಿಸುವ ರಿಂಗ್‌ ರೋಡ್‌ನಿಂದಾಗಿ ಬೆಂಗಳೂರಿನ ಹೆಬ್ಬಾಳ ಪ್ರದೇಶ ಮೇಲೆ ಉಂಟಾಗುತ್ತಿರುವ ಟ್ರಾಫಿಕ್‌ ಒತ್ತಡವನ್ನು ಕಡಿಮೆ ಮಾಡಲಿದೆ. ಆಂಧ್ರ ಪ್ರದೇಶ ಮತ್ತು ಇತರ ಗಡಿ ಭಾಗಗಳಿಗೆ ಸಾಗುವವರಿಂದಾಗಿ ಹೆಬ್ಬಾಳ ಭಾಗದಲ್ಲಿ ಭಾರಿ ಒತ್ತಡ ಸೃಷ್ಟಿಯಾಗುತ್ತದೆ. ದಾಬಸ್‌ಪೇಟೆ ದೊಡ್ಡಬಳ್ಳಾಪುರ ರಿಂಗ್‌ ರೋಡ್‌ನಿಂದಾಗಿ ಅವರು ಹೆಬ್ಬಾಳ ಭಾಗಕ್ಕೆ ಪ್ರವೇಶ ಪಡೆಯದೆಯೇ ನೇರವಾಗಿ ಔಟರ್‌ ರಿಂಗ್‌ ರೋಡ್‌ ಮೂಲಕ ಸಂಚರಿಸಬಹುದಾಗಿದೆ.

ಇದು 17000 ಕೋಟಿ ರೂ ವೆಚ್ಚದ ಬೃಹತ್‌ ಯೋಜನೆಯಾಗಿದ್ದು, ದಾಬಸ್‌ ಪೇಟೆಯಿಂದ ಹೊಸೂರು ವರೆಗಿನ ಸುಮಾರು 288 ಕಿ.ಮೀ. ಭಾಗವನ್ನು ಸಂಪರ್ಕಿಸಲಿದೆ. ದಾಬಸ್‌ ಪೇಟೆ, ದೊಡ್ಡಬಳ್ಳಾಪುರ, ದೇವನಹಳ್ಳಿ, ಸೂಲಿಬೆಲೆ, ಹೊಸಕೋಟೆ, ಸರ್ಜಾಪುರ, ಅತ್ತಿಬೆಲೆ, ಆನೇಕಲ್‌, ತಟ್ಟಕೆರೆ, ರಾಮನಗರ, ಕನಕಪುರ, ಮಾಗಡಿ ಮೂಲಕ ಹೊಸೂರನ್ನು ಅದು ಸಂಪರ್ಕಿಸಲಿದೆ. ದಾಬಸ್‌ಪೇಟೆಯಿಂದ ದೊಡ್ಡ ಬಳ್ಳಾಪುರವನ್ನು ಸಂಪರ್ಕಿಸುವ 42 ಕಿ.ಮೀ. ಉದ್ದದ ರಸ್ತೆ, ದೊಡ್ಡಬಳ್ಳಾಪುರದಿಂದ ಹೊಸಕೋಟೆ ನಡುವಿನ 37 ಕಿ.ಮೀ ಉದ್ದದ ರಸ್ತೆ ಈಗ ಲೋಕಾರ್ಪಣೆಗೊಂಡಿದೆ. ಇದರಿಂದ ಹಲವಾರು ವಾಹನದಟ್ಟಣೆಯ ಭಾಗಗಳಿಗೆ ನಿರಾಳತೆ ದೊರೆಯಲಿದೆ.

ಇದನ್ನು ಓದಿ : PM Narendra Modi: ಮೋದಿ ಜನಪ್ರಿಯತೆ ಮತ್ತೂ 10% ಹೆಚ್ಚಳ; ಜಾಗತಿಕ ನಾಯಕರ ಪಟ್ಟಿಯಲ್ಲಿ ಮೊದಲಿಗ

ಈ ಯೋಜನೆಯ ಪ್ರಸ್ತಾವನೆಯನ್ನು 2005ರಲ್ಲೇ ಮಂಡಿಸಲಾಗಿದ್ದರೂ, ಇದು ಒಂದು ಸ್ಪಷ್ಟ ಸ್ವರೂಪವನ್ನು ಪಡೆದುಕೊಂಡಿದ್ದು 2022ರಲ್ಲಿ. 2022ರ ಜೂನ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಸೆಟಲೈಟ್‌ ರಿಂಗ್‌ ರೋಡ್‌ಗೆ ಅಡಿಗಲ್ಲು ಹಾಕಿದ್ದೃು. ಮತ್ತು ಇದನ್ನು ಪೂರ್ಣಗೊಳಿಸಲು 40 ತಿಂಗಳ ಗಡುವನ್ನು ವಿಧಿಸಲಾಗಿತ್ತು.

Exit mobile version