Site icon Vistara News

POCSO Case: ಬೆಂಗಳೂರಲ್ಲಿ ಬಾಲಕಿ ಮೇಲೆ ಅತ್ಯಾಚಾರಿವೆಸಗಿದ್ದವನಿಗೆ 20 ವರ್ಷ ಜೈಲು

Pocso Case in bengaluru

ಬೆಂಗಳೂರು: ಬಾಲಕಿಯನ್ನು ಕಾಮದ ಕಣ್ಣಿಂದ ನೋಡಿದ ದುಷ್ಟನೊಬ್ಬನಿಗೆ 20 ವರ್ಷ ಜೈಲು ಶಿಕ್ಷೆ (20 years of sentence) ವಿಧಿಸಲಾಗಿದೆ. ಪುಟ್ಟ ಬಾಲಕಿಯ ಮೇಲೆ (POCSO Case) ಪೈಶಾಚಿಕವಾಗಿ ಅತ್ಯಾಚಾರ ಮಾಡಿದ್ದ.

ಬೆಂಗಳೂರಿನ ನಂದಿನಿ ಲೇಔಟ್ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು. 2022ರ ಜನವರಿ 22ರಂದು ಮನೆಯಲ್ಲಿ ಯಾರು ಇಲ್ಲದ ಸಮಯ ನೋಡಿ ಒಬ್ಬಂಟಿಯಾಗಿದ್ದ 8 ವರ್ಷದ ಬಾಲಕಿ ಮೇಲೆ ಪಕ್ಕದ ಮನೆಯವನೇ ಲೈಂಗಿಕ ದೌರ್ಜನ್ಯವೆಸಗಿದ್ದ.

ಈ ಸಂಬಂಧ ನಂದಿನಿ ಲೇಔಟ್ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಮತ್ತು ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿ ಸೂಕ್ತ ಸಾಕ್ಷ್ಯಾಧಾರಗಳನ್ನು ನ್ಯಾಯಾಲಯಕ್ಕೆ ಒದಗಿಸಲಾಗಿತ್ತು. ವಾದ ಆಲಿಸಿದ ನ್ಯಾಯಾಲಯವು 2024ರ ಏಪ್ರಿಲ್ 2ರಂದು ತೀರ್ಪು ಪ್ರಕಟಿಸಿದೆ.

ಆರೋಪಿಗೆ 20 ವರ್ಷ ಕಾರಾಗೃಹ ಶಿಕ್ಷೆ ಮತ್ತು ಹತ್ತು ಸಾವಿರ ದಂಡವನ್ನು ನ್ಯಾಯಾಲಯವು ವಿಧಿಸಿದೆ. ಬಾಲಕಿಯ ಪಕ್ಕದ ಮನೆಯಲ್ಲಿದ್ದ ಆರೋಪಿ, ಒಬ್ಬಳೆ ಮನೆಯಲ್ಲಿ ಇದ್ದಾಗ ಕೃತ್ಯ ಎಸಗಿದ್ದ.

ಇದನ್ನೂ ಓದಿ: Assault Case : ಪರ ಪುರುಷನೊಟ್ಟಿಗೆ ಮಾತನಾಡಿದ್ದಕ್ಕೆ ಪತ್ನಿಗೆ ಚಾಕು ಹಾಕಿದ ಸೈಕೋ ಪತಿ

ಬೆಂಗಳೂರಲ್ಲಿ ಮಹಿಳೆಯನ್ನು ಎಳೆದೊಯ್ದು ಅತ್ಯಾಚಾರವೆಸಗಿ, ವಿಕೃತವಾಗಿ ಕೊಂದ 18 ವರ್ಷದ ಕಾಮುಕ

ಬೆಂಗಳೂರು: 18 ವರ್ಷದ ಯುವಕನೊಬ್ಬ ಮಹಿಳೆಯನ್ನು ಬಲವಂತವಾಗಿ ಎಳೆದೋಗಿ ಅತ್ಯಾಚಾರವೆಸಗಿ (Physical Abuse), ಹತ್ಯೆಗೈದಿರುವ (Murder Case) ಪೈಶಾಚಿಕ ಕೃತ್ಯ ರಾಜಧಾನಿ ಬೆಂಗಳೂರಲ್ಲಿ (Bengaluru News) ನಡೆದಿದೆ. ಬೆಂಗಳೂರಿನ ಅಮೃತಹಳ್ಳಿಯ ಕಾಫಿ ಬೋರ್ಡ್ (Coffee Board) ಬಳಿ ಈ ಘೋರ ಘಟನೆ ನಡೆದಿದೆ.

ರಾಯಚೂರು ಮೂಲದ ಮಹಿಳೆ ಕೊಲೆಯಾದ ದುರ್ದೈವಿ‌. ಹದಿನೆಂಟು ವರ್ಷದ ಸಚಿನ್ ಅಲಿಯಾಸ್‌ ಕರಣ್ ಎಂಬಾತನಿಂದ ಕೃತ್ಯ ನಡೆದಿದೆ. ಗಾರೆ ಕೆಲಸ ಮಾಡುತ್ತಿದ್ದ ‌ಮಹಿಳೆಯನ್ನು ನಿರ್ಜನ ಪ್ರದೇಶಕ್ಕೆ ಎಳೆದೊಯ್ದು ಅತ್ಯಾಚಾರವೆಸಗಿದ್ದಾನೆ. ನಂತರ ಮಾರ್ಮಾಂಗದ ಮೇಲೆ ವಿಕೃತವಾಗಿ ಹಲ್ಲೆ ಮಾಡಿ, ಹತ್ಯೆಗೈದಿದ್ದಾನೆ. ಮೊನ್ನೆ ಮಂಗಳವಾರ ರಾತ್ರಿ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

ಅಮೃತಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಅಮೃತಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version