Site icon Vistara News

Police Extortion: ಪೊಲೀಸ್‌ ಇನ್‌ಸ್ಪೆಕ್ಟರ್‌ ಕಿರುಕುಳ, ವಸೂಲಿ: ಸಿಬ್ಬಂದಿಯಿಂದ ರಾಷ್ಟ್ರಪತಿ, ಪ್ರಧಾನಿಗೆ ದೂರು

police extortion sharana gowda

ಬೆಂಗಳೂರು: ಪೊಲೀಸ್ ಇನ್‌ಸ್ಪೆಕ್ಟರ್ ಒಬ್ಬರ ವಸೂಲಿ ಕರ್ಮಕಾಂಡ, ಒತ್ತಡ, ಕಿರುಕುಳಗಳ ಬಗ್ಗೆ ರಾಷ್ಟ್ರಪತಿ ಹಾಗೂ ಪ್ರಧಾನಿಗಳಿಗೆ ದೂರು ಠಾಣೆ ಸಿಬ್ಬಂದಿಯೇ ದೂರು ನೀಡಿದ್ದಾರೆ. ಬೆಂಗಳೂರಿನ ಕೆಲವು ಪೊಲೀಸ್ ಠಾಣೆಗಳು ವಸೂಲಿ ಕೇಂದ್ರಗಳಾಗಿವೆಯಾ ಎಂಬ ಅನುಮಾನವನ್ನು ಈ ಪತ್ರದ ಅಂಶಗಳು ಬಿಚ್ಚಿಟ್ಟಿದೆ.

ಸುಬ್ರಮಣ್ಯ ನಗರ ಠಾಣೆ ಇನ್‌ಸ್ಪೆಕ್ಟರ್ ವಿರುದ್ಧ ನೀಡಿರುವ ಅನೇಕ ದೂರುಗಳನ್ನು ಹೊಂದಿರುವ ಈ ಪತ್ರ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ರಾಷ್ಟ್ರಪತಿ ಕಾರ್ಯಾಲಯ, ಪ್ರಧಾನಿ ಕಾರ್ಯಾಲಯ, ಗೃಹ ಸಚಿವರು, ಮಾನವ ಹಕ್ಕು ಆಯೋಗಗಳಿಗೆ ಪತ್ರ ನೀಡಲಾಗಿದೆ ಎಂದು ತಿಳಿಸಲಾಗಿದೆ.

ಇನ್‌ಸ್ಪೆಕ್ಟರ್ ಶರಣಗೌಡ ವಿರುದ್ಧ ಬರೆಯಲಾಗಿರುವ ಈ ಪತ್ರದಲ್ಲಿ ಯಾವ ಹೊಟೇಲ್, ಯಾವ ಮಾಲ್ ಹಾಗೂ ಪಬ್‌ನಿಂದ ಎಷ್ಟೆಷ್ಟು ಮಾಮೂಲಿ ಬರುತ್ತದೆ ಎಂದು ಉಲ್ಲೇಖಿಸಲಾಗಿದೆ. ಜೊತೆಗೆ ಹಣ ಪಡೆದು ಮುಚ್ಚಿಹಾಕಿರುವ ಪ್ರಕರಣಗಳ ಬಗ್ಗೆಯೂ ಉಲ್ಲೇಖಿಸಲಾಗಿದೆ. ಇವುಗಳನ್ನು ಎಫ್‌ಐಆರ್ ಹಾಗೂ ಯುಡಿಆರ್ ನಂಬರ್ ಸಮೇತ ದೂರುದಾರರು ಉಲ್ಲೇಖ ಮಾಡಿದ್ದು, ಈ ಮಾಹಿತಿ ಅಧಿಕೃತವೆಂದು ತಿಳಿಯಲಾಗಿದೆ.

ಜೊತೆಗೆ ಸಿಬ್ಬಂದಿ ರಜೆ ಕೇಳಿದರೆ, ಎಷ್ಟು ಹಣ ಮಾಡಿಕೊಟ್ಟಿದ್ದಿಯಾ ಎಂದು ಇನ್‌ಸ್ಪೆಕ್ಟರ್ ಪ್ರಶ್ನೆ ಮಾಡುತ್ತಾರೆ. ರಜೆ ಕೇಳಿದ ಮಹಿಳಾ ಸಿಬ್ಬಂದಿ ಜೊತೆಯೂ ಕೆಟ್ಟದಾಗಿ ನಡೆದುಕೊಳ್ಳುತ್ತಾರೆ ಎಂದು ಗಂಭೀರ ಆರೋಪ ಮಾಡಲಾಗಿದೆ. ಸದ್ಯ ಪೊಲೀಸ್ ಇಲಾಖೆಯಲ್ಲಿ ಈ ದೂರಿನ ಪ್ರತಿ ಸಂಚಲನ ಮೂಡಿಸಿದೆ.

ಇದನ್ನೂ ಓದಿ: Police Extortion: ಪೊಲೀಸರಿಂದಲೇ ಕಿಡ್ನ್ಯಾಪ್‌, ಸುಲಿಗೆ! ಪಿಎಸ್‌ಐ ಸೇರಿ ನಾಲ್ವರು ಸಸ್ಪೆಂಡ್, ಪರಾರಿ

Exit mobile version