ಬೆಂಗಳೂರು: ರಾಜಧಾನಿಯ ಸಂಪಿಗೆಹಳ್ಳಿ, ಆಡುಗೋಡಿ ಪೊಲೀಸರಿಂದ ಸಾರ್ವಜನಿಕರ ಸುಲಿಗೆ ಪ್ರಕರಣ ಮಾಸುವ ಮುನ್ನ ಮತ್ತೊಂದು ಘಟನೆ ನಡೆದಿದೆ. ಪಾರ್ಕ್‌ನಲ್ಲಿ ಕುಳಿತಿದ್ದ ಯುವತಿಯಿಂದ ಪೊಲೀಸನೊಬ್ಬ ಸುಲಿಗೆ ಮಾಡಿದ್ದಾನೆ.
ಯುವತಿ ಬಳಿ ಒಂದು ಸಾವಿರ ರೂಪಾಯಿ ಸುಲಿಗೆ ಮಾಡಿರುವ ಬಗ್ಗೆ ಟ್ವಿಟರ್‌ನಲ್ಲಿ ಯುವತಿ ಅಳಲು ತೋಡಿಕೊಂಡಿದ್ದಾರೆ. ಇದು ಜನವರಿ 29ರಂದು ನಡೆದಿರುವ ಘಟನೆ. ವೈಟ್‌ಫೀಲ್ಡ್ ವಿಭಾಗದ ಕುಂದನಹಳ್ಳಿ ಲೇಕ್ ಪಾರ್ಕ್‌ನಲ್ಲಿ ಘಟನೆ ನಡೆದಿದೆ. ಅರ್ಷ ಲತೀಫ್ ಹಾಗೂ ಆಕೆಯ ಗೆಳೆಯ ಕುಂದನಹಳ್ಳಿ ಲೇಕ್ ಪಾರ್ಕ್ ಕುಳಿತಿದ್ದರು. ಈ ವೇಳೆ ಸ್ಥಳಕ್ಕೆ ಬಂದು ಯುವತಿ ಹಾಗೂ ಆಕೆಯ ಗೆಳೆಯನ ಪೋಟೋವನ್ನು ಪೊಲೀಸಪ್ಪ ಕ್ಲಿಕ್ಕಿಸಿದ್ದ.
ನಂತರ ಸ್ಥಳದಲ್ಲೇ ವಿಚಾರಣೆ ಮಾಡಿ ಸ್ಟೇಷನ್‌ಗೆ ಬರುವಂತೆ ಹೆದರಿಸಿದ್ದ. ಪಾರ್ಕ್‌ನಲ್ಲಿ ಕುಳಿತುಕೊಳ್ಳಲು ಪರ್ಮಿಷನ್ ಬೇಕು. ಠಾಣೆಗೆ ಬಂದ್ರೆ ಹಿರಿಯ ಅಧಿಕಾರಿಗಳಿಗೆ ಉತ್ತರಿಸಬೇಕಾಗುತ್ತೆ. ಇಲ್ಲೇ ಆದರೆ ಸಾವಿರ ರೂ. ಫೈನ್ ಕಟ್ಟುವಂತೆ ಹೇಳಿದ್ದ. ಯುವತಿ ಹಾಗೂ ಆಕೆಯ ಗೆಳೆಯ ಹೆದರಿ 1000 ರೂಪಾಯಿ ದುಡ್ಡು ಕೊಟ್ಟಿದ್ದರು. ಘಟನೆಯಿಂದ ಬೇಸತ್ತ ಅರ್ಷ ಲತೀಫ್ ಪೊಲೀಸರ ನಡವಳಿಕೆ ಕುರಿತು ಟ್ವಿಟರ್‌ನಲ್ಲಿ ಅಳಲು ತೋಡಿಕೊಂಡಿದ್ದಾರೆ.