ಬೆಂಗಳೂರು: ರಾಜಧಾನಿಯಲ್ಲಿ ಸುಮಾರು ಒಂದೂವರೆ ವರ್ಷದ ಬಳಿಕ ಪೊಲೀಸರಿಂದ ಶೂಟೌಟ್ (Police Shoot out) ಸಂಭವಿಸಿದೆ. ಖತರ್ನಾಕ್ ರಾಬರ್ (robber) ಯಾಸರ್(26) ಎಂಬಾತನ ಕಾಲಿಗೆ ಪೊಲೀಸರ ಗುಂಡು ಬಿದ್ದಿದೆ.
ಸದಾಶಿವನಗರ ಪೊಲೀಸ್ ಠಾಣೆ ವ್ಯಾಪ್ತಿಯ ಪ್ಯಾಲೇಸ್ ಬಳಿ ಘಟನೆ ನಡೆದಿದೆ. ಶೇಷಾದ್ರಿಪುರಂ ಪೊಲೀಸರಿಗೆ ಬೇಕಾಗಿದ್ದ ಖತರ್ನಾಕ್ ಆಸಾಮಿಯಾಗಿರುವ ಯಾಸರ್ ಎಂಬಾತನನ್ನು ಹಿಡಿಯಲು ಹೋದಾಗ ಈ ಶೂಟ್ ಔಟ್ ಘಟಿಸಿದೆ.
ಮಾರಾಕಾಸ್ತ್ರಗಳಿಂದ ಹಲ್ಲೆ ಮಾಡಿ ರಾಬರಿ ಮಾಡುತ್ತಿದ್ದ ಈ ಕುಖ್ಯಾತ ಆಸಾಮಿ ಯಾಸರ್, ಏಳಕ್ಕೂ ಹೆಚ್ಚು ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಸುಳ್ತಾನ್ ಪಾಳ್ಯದ ಭುವನೇಶ್ವರ್ ನಗರದ ನಿವಾಸಿಯಾಗಿರುವ ಆರೋಪಿ ಅಪ್ರಾಪ್ತನಾಗಿದ್ದಾಗಿನಿಂದಲೇ ರೌಡಿಯಿಸಂ, ಹಲ್ಲೆ, ಸುಲಿಗೆಯಲ್ಲಿ ನಿಪುಣನಾಗಿದ್ದ.
ಇಂದು ಬೆಳಗ್ಗೆ ಆರೋಪಿಯನ್ನು ಹಿಡಿಯಲು ಹೋದಾಗ ಈತ ಪೊಲೀಸರಿಂದ ತಪ್ಪಿಸಿಕೊಂಡು ಎಸ್ಕೇಪ್ ಆಗಲು ಯತ್ನಿಸಿದ್ದಾನೆ. ಪ್ಯಾಲೇಸ್ ರೋಡ್ ಬಳಿ ಪರಾರಿಗೆ ಯತ್ನಿಸಿದ್ದು, ಹಿಡಿಯಲು ಹೋದ ಪೊಲೀಸರ ಮೇಲೆ ಮಾರಕಾಸ್ತ್ರ ಹಿಡಿದು ಅಟ್ಯಾಕ್ ಮಾಡಿದ್ದಾನೆ. ಈ ವೇಳೆ ಶೇಷಾದ್ರಿಪುರಂ ಇನ್‌ಸ್ಪೆಕ್ಟರ್ ಆತ್ಮರಕ್ಷಣೆಗೆ ಆತನ ಬಲಗಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಶೇಷಾದ್ರಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Shoot Out | ಎಎಸ್ಐ ಮನೆಗೆ ನುಗ್ಗಿ ಗುಂಡಿನ ದಾಳಿ ನಡೆಸಿದ ದುಷ್ಕರ್ಮಿಗಳು; ಪುತ್ರನ ಸ್ಥಿತಿ ಗಂಭೀರ