Site icon Vistara News

Poster War : ಹಿಂದುಗಳಿಗೆ ಶೂನ್ಯ, ಮುಸ್ಲಿಮರಿಗೆ ಬಂಪರ್‌; ಕಾಂಗ್ರೆಸ್‌ ವಿರುದ್ಧ ಬಿಜೆಪಿ ಪೋಸ್ಟರ್‌

BJP Congress muslim Poster War

ಬೆಂಗಳೂರು: ರಾಜ್ಯದಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ (Congress Government) ಬರುತ್ತಿದ್ದಂತೆಯೇ ಮುಸ್ಲಿಮರ ತುಷ್ಟೀಕರಣ (Muslim appeasement) ಅತಿಯಾಗಿದೆ ಎಂದು ಬಿಜೆಪಿ ಆರೋಪಿಸಿದೆ ಮತ್ತು ಈ ಸರ್ಕಾರದಲ್ಲಿ ಬಹುಸಂಖ್ಯಾತ ಹಿಂದುಗಳಿಗೆ ಶೂನ್ಯ (Zero to Majority hindus), ಅಲ್ಪಸಂಖ್ಯಾತರಿಗೆ ಬಂಪರ್‌ (Bumper to Minorities) ಎಂಬ ಪೋಸ್ಟರ್‌ ಬಿಡುಗಡೆ (BJP Poster release) ಮೂಲಕ ವಾರ್‌ (Poster War) ಶುರು ಮಾಡಿದೆ.

ಕಾಂಗ್ರೆಸ್‌ ಅಧಿಕಾರದಲ್ಲಿದೆ, ಬಹಳ ಅಪಾಯಕಾರಿಯಾಗಿದೆ. ಅಂಬೇಡ್ಕರ್‌ ಅವರು ರಚಿಸಿದ ಸಂವಿಧಾನದ ಅನ್ವಯ ಇರುವ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಕಾಂಗ್ರೆಸ್ಸಿನ ಪಾರ್ಥೇನಿಯಂ ಬೆಳೆದಿದೆ. ತುಷ್ಟೀಕರಣದ ರಾಜಕಾರಣವನ್ನು ಎಂದಿಗೂ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಒಪ್ಪುತ್ತಿರಲಿಲ್ಲ ಎಂದು ಹೇಳಿರುವ ಬಿಜೆಪಿ ಹಿಂದುಗಳಿಗೆ ಕಾಂಗ್ರೆಸ್‌ ಮೋಸ ಮಾಡಿ ಮುಸ್ಲಿಮರನ್ನು ತುಷ್ಟೀಕರಿಸುತ್ತಿದೆ ಎಂಬ ಅಂಶವನ್ನು ಸಮರ್ಥಿಸಲು ಹಲವು ಉದಾಹರಣೆಗಳನ್ನು ನೀಡಿದೆ.

ಬಹುಸಂಖ್ಯಾತ ಹಿಂದೂಗಳಿಗೆ ಶೂನ್ಯ

  1. ಒಬಿಸಿ, ಎಸ್‌ಸಿ ಎಸ್ಟಿ ನಿಗಮಗಳಿಗೆ ಯಾವುದೇ ಹಣವನ್ನು ಕೊಟ್ಟಿಲ್ಲ: ಒಬಿಸಿ ಎಸ್‌ಸಿ-ಎಸ್ಟಿ ನಿಗಮಗಳಿಗೆ ಶೂನ್ಯ
  2. ರಾಜ್ಯದ ಹಿಂದು ದೇವಾಲಯಗಳಿಗೆ ಶೂನ್ಯ
  3. ರಾಜ್ಯದ ರೈತರಿಗೆ ಶೂನ್ಯ
  4. ಗುಳೆ ಹೋಗುತ್ತಿರುವ ಕೂಲಿ ಕಾರ್ಮಿಕರಿಗೆ ಶೂನ್ಯ

ಅಲ್ಪಸಂಖ್ಯಾತರಿಗೆ ಬಂಪರ್‌

  1. ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ರೂ. ಅನುದಾನ
  2. ರಾಜ್ಯಾದ್ಯಂತ ಟಿಪ್ಪು ಜಯಂತಿ ಆಚರಣೆ
  3. ಇನ್ಮುಂದೆ ಶಾಲೆ ಕಾಲೇಜುಗಳಲ್ಲಿ ಹಿಜಾಬ್‌ ಧರಿಸಲು ಅವಕಾಶ
  4. ಪಿಎಫ್‌ಐ ಕೆಎಫ್‌ಡಿ ಭಯೋತ್ಪಾದಕ ಸಂಘಟನೆಗಳ ಮೇಲಿನ 175 ಕೇಸ್‌ ವಾಪಸ್‌
  5. ಮೈಸೂರು ವಿಮಾನ ನಿಲ್ದಾಣಕ್ಕೆ ಟಿಪ್ಪು ಹೆಸರು

ಹೀಗೆ ಕಾಂಗ್ರೆಸ್‌ ಸರ್ಕಾರದ‌ ಹಲವು ನಿರ್ಧಾರಗಳ ಬಗ್ಗೆ ಬಿಜೆಪಿ ಟೀಕೆ ಮಾಡಿದೆ.

ಹಿಂದುಗಳಿಗೆ ಅನ್ಯಾಯ ಎಂದ ಎನ್‌. ರವಿ ಕುಮಾರ್‌

ಪೋಸ್ಟರ್‌ ಬಿಡುಗಡೆ ಮಾಡಿ ಮಾತನಾಡಿದ ವಿಧಾನ ಪರಿಷತ್‌ ಸದಸ್ಯ ಹಾಗೂ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್‌. ರವಿ ಕುಮಾರ್‌ ಅವರು, ಕರ್ನಾಟಕದಲ್ಲಿ 125 ವರ್ಷಗಳಲ್ಲಿ ಕಂಡರಿಯದ ಕಿತ್ತು ತಿನ್ನುವ ಬರಗಾಲದ ಪರಿಸ್ಥಿತಿ ಇದೆ. ಕುಡಿಯಲು ನೀರಿಲ್ಲ; ದನಕರುಗಳಿಗೆ ನೀರಿಲ್ಲ. ಕೆರೆಕಟ್ಟೆಗಳಲ್ಲಿ ನೀರಿಲ್ಲ. ವಿಪರೀತ ಮಳೆ ಕಡಿಮೆ ಆಗಿ ರೈತರು ಸಂಕಷ್ಟದಲ್ಲಿದ್ದಾರೆ. ರೈತರಿಗೆ ಒಂದು ಪೈಸೆಯೂ ಪರಿಹಾರ ಕೊಡದೆ, ಅಲ್ಪಸಂಖ್ಯಾತರ ಅಭಿವೃದ್ಧಿಗೆ 10 ಸಾವಿರ ಕೋಟಿ ಕೊಡುವುದಾಗಿ ಸುವರ್ಣ ಸೌಧದಲ್ಲಿ ಅಧಿವೇಶನ ನಡೆಯುವಾಗ ಹುಬ್ಬಳ್ಳಿಯ ಮೌಲ್ವಿಗಳ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯನವರು ಪ್ರಕಟಿಸಿದ್ದಾರೆ. ಆದರೆ, ಹಿಂದೂ ದೇವಾಲಯಗಳಿಗೆ ಒಂದು ಪೈಸೆ ಇಲ್ಲ ಎಂದು ಆಕ್ಷೇಪ ಸೂಚಿಸಿದರು.

ಎಸ್‍ಸಿ, ಎಸ್‍ಟಿಗಳ ಅಭಿವೃದ್ಧಿಗೆ ಮೀಸಲಿಟ್ಟ ಹಣದಲ್ಲಿ 11 ಸಾವಿರ ಕೋಟಿಯನ್ನು ತೆಗೆದಿದ್ದಾರೆ. ಇನ್ನೊಂದೆಡೆ ಅಲ್ಪಸಂಖ್ಯಾತರಿಗೆ 10 ಸಾವಿರ ಕೋಟಿ ನೀಡಿದ್ದಾರೆ. ಇದೆಷ್ಟು ಸರಿ ಎಂದು ಕೇಳಿದರು. ರೈತರ ಬೆನ್ನುಮೂಳೆ ಮುರಿಯುವ ಸರಕಾರ ಇದೆಂದು ಟೀಕಿಸಿದರು. ‘ಬಹುಸಂಖ್ಯಾತ ಹಿಂದೂಗಳಿಗೆ ಶೂನ್ಯ; ಬಹುಸಂಖ್ಯಾತರಿಗೆ ಬಂಪರ್’ ಎಂಬ ಪೋಸ್ಟರ್ ಬಿಡುಗಡೆ ಮಾಡಲಾಗಿದೆ ಎಂದು ರವಿ ಕುಮಾರ್‌ ಹೇಳಿದರು.

ಇದನ್ನೂ ಓದಿ: Hijab Row : ಮತ್ತೆ ಹಿಜಾಬ್‌ಗೆ ಅವಕಾಶದಿಂದ ದ್ವೇಷ ಸೃಷ್ಟಿ; ಬಿವೈ ವಿಜಯೇಂದ್ರ ಕೆಂಡಾಮಂಡಲ

ಎಸ್‍ಸಿ, ಎಸ್‍ಟಿಗಳಿಗೆ ಶೂನ್ಯ, ರಾಜ್ಯದ ಹಿಂದೂ ದೇವಾಲಯಗಳಿಗೆ ಶೂನ್ಯ, ರಾಜ್ಯದ ರೈತರಿಗೆ ಶೂನ್ಯ ಎಂದ ಅವರು, ಇನ್ನೊಂದೆಡೆ ಅಲ್ಪಸಂಖ್ಯಾತರ ಅಭಿವೃದ್ಧಿಗೆ 10 ಸಾವಿರ ಕೋಟಿ ಕೊಟ್ಟಿದ್ದಾರೆ. ಶಾಲಾ ಕಾಲೇಜಿನಲ್ಲಿ ಟಿಪ್ಪು ಜಯಂತಿ ಆಚರಣೆ, ಹಿಜಾಬ್ ಧರಿಸಲು ಅವಕಾಶ, ಪಿಎಫ್‍ಐ ಭಯೋತ್ಪಾದಕರ 175 ಕೇಸ್ ವಾಪಸ್ ಪಡೆದಿದ್ದಾರೆ ಎಂದು ಖಂಡಿಸಿದರು.

Exit mobile version