Site icon Vistara News

ಪಾಶ್ ಕಾರಲ್ಲಿ ಬರೋ ಜೋಡಿ ಮಾಡೋ ಕೆಲಸ ನೋಡಿ!

pots theft

ಬೆಂಗಳೂರು: ನೋಡೋದಕ್ಕೆ ಇವರು ಎಜುಕೇಟೆಡ್. ಆದ್ರೆ ಎಜುಕೇಟೆಡ್ ಮಾಡೋ ಕೆಲಸವನ್ನು ನೀವು ಸಿಸಿ ಕ್ಯಾಮೆರಾದಲ್ಲಿ ನೋಡಬಹುದು. ಐಷಾರಾಮಿ ಕಾರಲ್ಲಿ ಬಂದು ಸಿಲ್ಲಿ ಕೆಲಸ ಮಾಡುತ್ತಾರೆ. ಈ ಕೃತ್ಯದ ಬಗ್ಗೆ ದೂರು ನೀಡುವುದಕ್ಕೂ ದೂರುದಾರರಿಗೆ ಮುಜುಗರವಾಗುತ್ತದೆ.

ಇವರು ಐ ಟ್ವೆಂಟಿ ಕಾರಿನಲ್ಲಿ ಬರುತ್ತಾರೆ. ಮನೆಯ ಹೊರಗೆ ಇಟ್ಟಿರುವ ಗಿಡಗಳ ಪಾಟ್‌ಗಳನ್ನು ಕದಿಯುತ್ತಾರೆ. ಇಬ್ಬರು ಯುವಕ ಯುವತಿಯರಿಂದ ಈ ಕೃತ್ಯ ನಡೆದಿದೆ. ಬಸವನಗುಡಿ ಬಳಿಯ ಸ್ಟುಡಿಯೋ ಮುಂದಿದ್ದ ದೊಡ್ಡ ಪತ್ರೆ ಗಿಡದ ಪಾಟ್‌ಗಳನ್ನು ಈ ಜೋಡಿ ಕದ್ದಿದೆ.

ಯುವತಿ ಗ್ಲಾಸ್ ಕ್ಲೀನ್ ಮಾಡೋ ನಾಟಕ ಆಡುತ್ತಿದ್ದರೆ ಮತ್ತೊಬ್ಬ ಡಿಕ್ಕಿಗೆ ಪಾಟ್ ತುಂಬಿಸುತ್ತಾನೆ. ಯಾರಾದರೂ ನೋಡಿದರೆ ಅನುಮಾನ ಬಾರದಿರಲಿ ಎಂದು ಗ್ಲಾಸ್ ಒರೆಸುವ ನಾಟಕವಾಡುತ್ತಾಳೆ ಯುವತಿ. ಯುವಕ ಯುವತಿಯ ಈ ಕಳ್ಳತನದ ಕೃತ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಬನಶಂಕರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕೃತ್ಯ ನಡೆದಿದೆ.

ಇದನ್ನು ಓದಿ | Honey trap | ಕ್ರೈಂ ಪೊಲೀಸರೆಂದು ₹ 14 ಲಕ್ಷ ಸುಲಿಗೆ ಮಾಡಿದ ದುಷ್ಕರ್ಮಿಗಳು

Exit mobile version