ಬೆಂಗಳೂರು: ಬೆಸ್ಕಾಂ ಅಧಿಕಾರಿಗಳು ದುರಸ್ತಿ ಕಾಮಗಾರಿಯನ್ನು ಕೈಗೆತ್ತಿಕೊಂಡಿದ್ದು ಈ ಕಾರಣದಿಂದ ನಗರದ ಹಲವೆಡೆ ವಿದ್ಯುತ್ ವ್ಯತ್ಯಯ (Power Cut) ಉಂಟಾಗಲಿದೆ. ಆಗಸ್ಟ್ 21 ಮತ್ತು 22 ರಂದು ಕರೆಂಟ್ ಕಟ್ ಆಗಲಿದ್ದು, ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ಜಯನಗರದ ದಕ್ಷಿಣ ವಲಯ, ಉತ್ತರ ವಲಯ, ಪೂರ್ವ ಮತ್ತು ಪಶ್ಚಿಮ ವಲಯದ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.
ಆಗಸ್ಟ್ 21ರಂದು ಈ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯ
ಪೂರ್ವ ಮತ್ತು ದಕ್ಷಿಣ ವಲಯದ ಗರುಡಾ ಮಾಲ್, ಏರ್ ಫೋರ್ಸ್ ಆಸ್ಪತ್ರೆ, ದೊಮ್ಮಲೂರು, ಆಸ್ಟಿನ್ ಟೌನ್, ವಿವೇಕ್ ನಗರ, ಟ್ರಿನಿಟಿ ಚರ್ಚ್, ವಿಜಯ ಬ್ಯಾಂಕ್, ಹೋಟೆಲ್ ತಾಜ್, ವಿಕ್ಟೋರಿಯಾ ಲೇಔಟ್, ಮ್ಯೂಸಿಯಂ ರಸ್ತೆ, ಆಲ್ಬರ್ಟ್ ಸ್ಟ್ರೀಟ್, ಕಿಂಗ್ ಸ್ಟ್ರೀಟ್, ಮ್ಯೂಸಿಯಂ ಅಡ್ಡರಸ್ತೆ, ಲ್ಯಾವೆಲ್ಲೆ ರಸ್ತೆ, ಸೇಂಟ್ ಮಾರ್ಕ್ ರಸ್ತೆ, ವೈ.ಜಿ.ಪಾಳ್ಯ, ಕೆಎಸ್‌ಆರ್‌ಪಿ, ಐಟಿಸಿ ಹೋಟೆಲ್, ರಿಚ್ಮಂಡ್ ರಸ್ತೆ, ವನ್ನೆರ್‌ಪೇಟ್, ಲೈಫ್ ಸ್ಟೈಲ್, ಎಂಜಿ ರಸ್ತೆ, ಕಾನ್ವೆಂಟ್ ರಸ್ತೆ, ಎಸ್‌ಎಲ್ ಅಪಾರ್ಟ್‌ಮೆಂಟ್, ರಿಚ್‌ಮಂಡ್ ಟೌನ್, ನಂಜಪ್ಪ ಸರ್ಕಲ್, ಸ್ಟೇನ್ ಗಾರ್ಡನ್, ರಿಚ್‌ಮಂಡ್ ಪಾರ್ಕ್, ಲಾಂಗ್‌ಫೋರ್ಡ್ ರಸ್ತೆ, ಬ್ರೈಟ್ ಸ್ಟ್ರೀಟ್, ಫುಡ್‌ವರ್ಲ್ಡ್ ರಸ್ತೆ, ಜಾನ್ಸನ್ ಮಾರುಕಟ್ಟೆ, ಬಿಡಬ್ಲ್ಯೂಎಸ್‌ಎಸ್‌ಬಿ ನೀರು ಸರಬರಾಜು, ಲಾಂಗ್‌ಫೋರ್ಡ್ ರಸ್ತೆ , ಅಶೋಕನಗರ, ಶಾಪರ್ ಸ್ಟಾಪ್, ಮಾರ್ಕಂ ರಸ್ತೆ, ಬ್ರಿಗೇಡ್ ರಸ್ತೆ, ವಾಣಿಜ್ಯ ಕಾಲೇಜು, ರಿಚ್ಮಂಡ್ ವೃತ್ತ, ವಿಟ್ಲ ಮಲ್ಯ ರಸ್ತೆ, ಸಿದ್ದಯ್ಯ ರಸ್ತೆ, ವುಡ್ ಸ್ಟ್ರೀಟ್, ಕ್ಯಾಸಲ್ ಸ್ಟ್ರೀಟ್, ನೀಲಸಂದ್ರ, ಆನೆಪಾಳ್ಯ
ಆಗಸ್ಟ್ 22 ರಂದು ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ಪೂರ್ವ ಮತ್ತು ದಕ್ಷಿಣ ವಲಯದ ಆರ್‌ಬಿಐ ಲೇಔಟ್, ಕೊತ್ತನೂರ್, ಜೆ.ಪಿ.ನಗರ 5ನೇ ಹಂತ, ಶ್ರೇಯಸ್ ಕಾಲೋನಿ, ಗೌರವ್ ನಗರ, ನಟರಾಜ ಲೇಔಟ್, ನೃಪತುಂಗ ನಗರ, ಜಂಬೂಸವಾರಿ ದಿನ್ನೆ, ಚುಂಚುಘಟ್ಟ, ಬ್ರಿಗೇಡ್ ಮಿಲೇನಿಯಂ ಮತ್ತು ಬ್ರಿಗೇಡ್ ಗಾರ್ಡೇನಿಯಾ ಅಪಾರ್ಟ್‌ಮೆಂಟ್‌ಗಳು ಮತ್ತು ಉಪ-ಕೇಂದ್ರದ ಸುತ್ತಮುತ್ತಲಿನ ಪ್ರದೇಶಗಳು, ಎಚ್.ಆರ್. ಮುಖ್ಯ ರಸ್ತೆ, NGR ಲೇಔಟ್, ಚಂದ್ರಾ ಲೇಔಟ್, ಕೆಂಗೇರಿ, ಮೈಸೂರು ರಸ್ತೆ ಸುತ್ತಮುತ್ತಲಿನ ಪ್ರದೇಶ ವಿದ್ಯುತ್ ವ್ಯತ್ಯಯವಾಗುವ ಬಗ್ಗೆ ಬೆಸ್ಕಾಂ ಮಾಹಿತಿ ನೀಡಿದೆ.
ಇದನ್ನೂ ಓದಿ | ಬೆಸ್ಕಾಂ ಕಾಲ್ ಸೆಂಟರ್ ಹೆಸರಿನಲ್ಲಿ ದೋಖಾ, ಗ್ರಾಹಕನ ಅಕೌಂಟ್‌ನಿಂದ 6 ಲಕ್ಷ ರೂ. ಮಾಯ!