Site icon Vistara News

ಬೆಂಗಳೂರಿನಲ್ಲಿ ಈ ಏರಿಯಾಗಳಲ್ಲಿ ಮುಂದಿನ ಮೂರು ದಿನ ಪವರ್‌ ಕಟ್‌!

Bengaluru Power Cut

ಬೆಂಗಳೂರು: ರಾಜಧಾನಿ ಬೆಂಗಳೂರಿನ ಜನತೆಗೆ ಬೆಸ್ಕಾಂ ಶಾಕ್‌ ಕೊಟ್ಟಿದ್ದು, ಸೀಮಿತ ಸಮಯದಲ್ಲಿ ಮಾತ್ರ ವಿದ್ಯುತ್‌ ಪೂರೈಕೆ ಆಗಲಿದೆ. ಸೋಮವಾರದಿಂದ(ಜೂನ್‌ 27) ಜೂನ್‌ 29ರ ವರೆಗೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಇದನ್ನೂ ಓದಿ | ಸಾಮಾನ್ಯರಿಗೆ ಮತ್ತೊಂದು ಬಿಗ್ ಶಾಕ್!: ವಿದ್ಯುತ್‌ ಮೀಟರ್‌ ಠೇವಣಿ ಹೆಚ್ಚಿಸಿದ ಬೆಸ್ಕಾಂ

ವಿದ್ಯುತ್ ಮಾರ್ಗಗಳ ನಿರ್ವಹಣೆ ಹಾಗೂ ಹೊಸದಾಗಿ ಕೇಬಲ್ ಅಳವಡಿಕೆ ಹಿನ್ನೆಲೆ ನಗರದ ಹಲವು ಬಡಾವಣೆಯಲ್ಲಿ ಪವರ್‌ ಕಟ್‌ ಆಗಲಿದೆ. ಈ ಕುರಿತು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ (ಬೆಸ್ಕಾಂ)ಪ್ರಕಟಣೆ ಹೊರಡಿಸಿದೆ.

ಯಾವ ಏರಿಯಾದಲ್ಲಿ ಕರೆಂಟು ಇರೋಲ್ಲ?

ಸೋಮವಾರ (27-6-2022) ಬೆಳಗ್ಗೆ 11 ರಿಂದ ಮಧ್ಯಾಹ್ನ 2ರ ವರೆಗೆ

ಕೋರಮಂಗಲದ 3,4,5 ಹಾಗೂ 6 ನೇ ಬ್ಲಾಕ್ ಗಳು, ಸಕ್ರಾ ಆಸ್ಪತ್ರೆ, ಔಟರ್ ರಿಂಗ್ ರೋಡ್‌ನ ಸಲಾರ್‌ಪುರಿಯಾ ಪ್ರದೇಶದಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಬೆಳಗ್ಗೆ 11 ರಿಂದ ಸಂಜೆ 5ವರೆಗೆ

ಪೂರ್ವ ವಲಯದಲ್ಲಿ ಹಳೇ ಬೈಯಪ್ಪನಹಳ್ಳಿ, ಕುಕ್ಸನ್ ರಸ್ತೆ, ಡೇವಿಸ್ ರಸ್ತೆ, ರಿಚರ್ಡ್ಸ್‌ ಪಾರ್ಕ್‌ ರಸ್ತೆ, ಆಯಿಲ್ ಮಿಲ್ ರಸ್ತೆ, ಸದಾಶಿವ ದೇವಸ್ಥಾನ ರಸ್ತೆ, ಕಾಮನಹಳ್ಳಿ ಮುಖ್ಯರಸ್ತೆ, ಕೆಎಚ್‌ಬಿ ಕಾಲನಿ, ಹಚಿನ್ಸ್ ರಸ್ತೆ, ಮೀಲರ್ ರಸ್ತೆ, ಬಾಣಸವಾಡಿ ರೈಲು ನಿಲ್ದಾಣ, ಲಿಂಗರಾಜಪುರ, ಐಟಿಸಿ ಮುಖ್ಯ ರಸ್ತೆ, ಜೀವನಹಳ್ಳಿ ಮತ್ತು ಬಾಣಸವಾಡಿ ಮುಖ್ಯ ರಸ್ತೆ ಸುತ್ತಮುತ್ತ ವಿದ್ಯುತ್ ವ್ಯತ್ಯಯವಾಗಲಿದೆ.

ಬೆಳಗ್ಗೆ 10 ರಿಂದ ಸಂಜೆ 5ವರೆಗೆ

ಪಶ್ಚಿಮ ವಲಯದಲ್ಲಿ ಬಿಎಂಟಿಸಿ ಬಸ್ ಡಿಪೋ ಶಂಕರಪ್ಪ ಎಸ್ಟೇಟ್ ಸೇರಿದಂತೆ ಉತ್ತರ ವಲಯದಲ್ಲಿ ಇಸ್ರೋ ಲೇಔಟ್‌ ಮತ್ತು ನ್ಯೂ ಬಿಇಎಲ್ ರಸ್ತೆಯಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಜೂನ್‌ 28 ರಂದು ಬೆಳಗ್ಗೆ 11 ರಿಂದ ಸಂಜೆ 5ವರೆಗೆ

ಬೆಂಗಳೂರು ಪೂರ್ವವಲಯದ ವ್ಯಾಪ್ತಿಯ ಪ್ರದೇಶಗಳಲ್ಲಿ ಎಚ್ಆರ್‌ಬಿಆರ್‌ ಲೇಔಟ್ ಎರಡು ಮತ್ತು ಮೂರನೇ ಬ್ಲಾಕ್, ಕಮ್ಮನಹಳ್ಳಿ ಮತ್ತು ಸುತ್ತಮುತ್ತಲಿನ ಪ್ರದೇಶಗಳು ಮತ್ತು ಬಾಣಸವಾಡಿಗಳಲ್ಲಿ ಪವರ್‌ ಕಟ್‌ ಆಗಲಿದೆ.

ಜೂನ್‌ 29 ರಂದು ಬೆಳಗ್ಗೆ 11 ರಿಂದ ಮಧ್ಯಾಹ್ನ 2ರ ವರೆಗೆ

ದಕ್ಷಿಣ ವಲಯದಲ್ಲಿ ಕೋರಮಂಗಲ 2ನೇ ಬ್ಲಾಕ್ ಮಡಿವಾಳ ಹೋಟಲ್ ‌ಮಾಲ್,  ಕೋರಮಂಗಲ 5ನೇ ಬ್ಲಾಕ್, ಇಂಡಸ್ಟ್ರಿಯಲ್ ಲೇಔಟ್

ಬೆಳಗ್ಗೆ 11 ರಿಂದ ಸಂಜೆ 5ರ ವರೆಗೆ

ಸಿಎಂಆರ್ ರಸ್ತೆ, ಎಚ್ಆರ್‌ಬಿಆರ್ ಲೇಔಟ್ 3ನೇ ಬ್ಲಾಕ್, ರಾಮಯ್ಯ ಲೇಔಟ್, ಕರವಳ್ಳಿ ರಸ್ತೆ ಮತ್ತು ಸುತ್ತಮುತ್ತಲ ಪ್ರದೇಶಗಳು ಸೇರಿದಂತೆ ಪೂರ್ವ ವಲಯದ ಕೆಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.

ಇದನ್ನೂ ಓದಿ | ಬೆಂಗಳೂರಿನಲ್ಲಾದ ಟ್ರಾನ್ಸ್‌ಫಾರ್ಮರ್ ಬ್ಲಾಸ್ಟ್ ದುರಂತದಿಂದ ಎಚ್ಚೆತ್ತ ಬೆಸ್ಕಾಂ

Exit mobile version