Site icon Vistara News

Powerful Woman Award : ವಿಸ್ತಾರ ನ್ಯೂಸ್‌ ನಿರೂಪಕಿ ಪ್ರತಿಭಾ ಪ್ರಕಾಶ್‌ ಸೇರಿ 24 ಸಾಧಕಿಯರಿಗೆ ದಿಟ್ಟ ಮಹಿಳೆ ಪ್ರಶಸ್ತಿ

powerful Woman award

ಬೆಂಗಳೂರು: ಮಹಿಳೆಯರು ಪುರುಷರಿಗಿಂತಲೂ ಹೆಚ್ಚು ಪವರ್‌ಫುಲ್‌ ಮತ್ತು ಸ್ಟ್ರಾಂಗ್‌ (Women are strong). ಹೆಣ್ಣು ಸ್ಫೂರ್ತಿ, ಶಕ್ತಿ. ಅವಳಿಲ್ಲ ಎಂದರೆ ಬದುಕೇ ಇಲ್ಲ; ಹೀಗೆ ಹೆಣ್ಣಿನ ಶಕ್ತಿಯನ್ನು ಮುಕ್ತ ಕಂಠದಿಂದ ಪ್ರಶಂಸೆ ಮಾಡಿದರು ನಟ, ನಿರ್ದೇಶಕ, ನಿರ್ಮಾಪಕ ವಿ. ರವಿಚಂದ್ರನ್‌ (V Ravichandran).

ಬಿಬಿಎಂಪಿ ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ವತಿಯಿಂದ ಗುರುವಾರ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ (International Womens day) ಮತ್ತು ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕಿಯರಿಗೆ ದಿಟ್ಟ ಮಹಿಳೆ ಪ್ರಶಸ್ತಿ (Powerful Woman Award) ಪ್ರದಾನ ಮಾಡಿ ಅವರು ಮಾತನಾಡಿದರು. ವಿಸ್ತಾರ ನ್ಯೂಸ್‌ನ ಹಿರಿಯ ನಿರೂಪಕಿಯಾಗಿರುವ ಪ್ರತಿಭಾ ಪ್ರಕಾಶ್‌ ಸೇರಿದಂತೆ 24 ಮಂದಿ ಸಾಧಕರಿಗೆ ದಿಟ್ಟ ಮಹಿಳೆ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ನಾನು ಮನೆಯಿಂದ ಹೊರಗೆ ಹೋಗುವಾಗ ಹೆಂಡತಿ ಇಲ್ಲವೇ ಮಗಳ ಮುಖ ನೋಡಿಕೊಂಡು ಹೊರಗೆ ಹೋಗುತ್ತೇನೆ. ಇದರಿಂದ ಒಳ್ಳೆಯದಾಗುತ್ತದೆ ಎನ್ನುವುದು ನನ್ನ ನಂಬಿಕೆ ಎಂದು ಹೇಳಿದ ವಿ. ರವಿಚಂದ್ರನ್‌, ನಾನು ಅಮ್ಮನ ಜತೆ ಉತ್ತಮ ಒಡನಾಟ ಹೊಂದಿದ್ದೆ. ಹೀಗಾಗಿ ನನಗೆ ಇತರ ಮಹಿಳೆಯರ ಮೇಲೆ ಗೌರವ ಮೂಡಲು ಕಾರಣವಾಯಿತು. ನಾವು ಎಷ್ಟೇ ದೊಡ್ಡವರಾದರೂ ತಾಯಿಯ ಪಾಲಿಗೆ ಮಕ್ಕಳೇ ಆಗಿರುತ್ತೇವೆ ಎಂದರು.

ವಿಶ್ವ ಮಹಿಳಾ ದಿನಾಚರಣೆಯನ್ನು ಬಿಬಿಎಂಪಿ ಮುಖ್ಯ ಆಯುಕ್ತರಾದ ತುಷಾರ್ ಗಿರಿನಾಥ್, ಹಿರಿಯ ಚಲನಚಿತ್ರ ನಟ ರವಿಚಂದ್ರನ್‌, ನಟಿ ಮಾಲಾಶ್ರೀ ಜತೆಯಾಗಿ ಉದ್ಘಾಟಿಸಿದರು. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರಾದ ಸಿ.ಎಸ್.ಷಡಾಕ್ಷರಿ ಮತ್ತು ಐ.ಎ.ಎಸ್.ಅಧಿಕಾರಿಗಳಾದ ಮೌನೀಶ್ ಮೌದ್ಗೀಲ್, ಸ್ನೇಹಾಲ್, ಸೂರಳ್ಳ‌ ವಿಕಾಸ್ ಕಿಶೋರ್, ಡಾ. ಹರೀಶ್ ಕೆ.ಮತ್ತು ಕೆ.ಎ.ಎಸ್ ಅಧಿಕಾರಿ ಡಾ. ಮಂಜುನಾಥ ಸ್ವಾಮಿರವರು, ಅಧ್ಯಕ್ಷರಾದ ಎ.ಅಮೃತ್ ರಾಜ್ ಉಪಸ್ಥಿತರಿದ್ದರು.

ಇದನ್ನೂ ಓದಿ : Women’s Day 2024: ವುಮೆನ್ಸ್ ಡೇ ಫ್ಯಾಷನ್‌ಗೆ 5 ಸಿಂಪಲ್‌ ಸ್ಟೈಲಿಂಗ್‌ ಟಿಪ್ಸ್

ಬಿಬಿಎಂಪಿಯಲ್ಲಿ ಶೇ. 50ರಷ್ಟು ಮಹಿಳಾ ಉದ್ಯೋಗಿಗಳು

ತುಷಾರ್ ಗಿರಿನಾಥ್‌ ಅವರು ಮಾತನಾಡಿ, ಬಿಬಿಎಂಪಿಯಲ್ಲಿ ಶೇಕಡ 50ರಷ್ಟು ಮಹಿಳೆಯರಿಗೆ ಕೆಲಸ ಮಾಡುತ್ತಿದ್ದಾರೆ ಪೌರ ಕಾರ್ಮಿಕರಲ್ಲಿ ಶೇಕಡ 80ರಷ್ಟು ಮಹಿಳೆಯರು ಕಾರ್ಯನಿರ್ವಹಿಸುತ್ತಾ ಇದ್ದಾರೆ. ಬಿಬಿಎಂಪಿ ಇರುವುದು ನಾಗರಿಕರ ಸೇವೆ ಮಾಡಲು, ಒಳ್ಳೆಯ ಸೇವೆ ನೀಡಲು ಮಹಿಳಾ ಸಿಬ್ಬಂದಿಗಳು ಉತ್ತಮ ಸಹಕಾರ ನೀಡುತ್ತಿದ್ದಾರೆ. ಮಕ್ಕಳ ವಿದ್ಯಾಭ್ಯಾಸ, ಕುಟುಂಬದ ನಿರ್ವಹಣೆ ಅತ್ತೆ, ಮಾವ, ಪತಿಯ ನೋಡಿಕೊಂಡು ಕೆಲಸದಲ್ಲಿ ಉತ್ತಮ ಸೇವೆ ಮಾಡುವ ಮಹಿಳೆ ದಿಟ್ಟತನ ಮೆಚ್ಚಬೇಕು. ಮಹಿಳೆ ಮಾತೃ ಸ್ವರೂಪಿಯಾಗಿ ನಿಲ್ಲುತ್ತಾಳೆ ಎಂದು ಹೇಳಿದರು.

ಬಿಬಿಎಂಪಿ ನೌಕರದ ಸಂಘದ ಅಧ್ಯಕ್ಷರಾದ ಎ.ಅಮೃತ್ ರಾಜ್ ಅವರು ಮಾತನಾಡಿ, ಮಹಿಳೆ ತಾಯಿಯಾಗಿ, ಅಕ್ಕ ತಂಗಿ ವಿವಿಧ ರೂಪದಲ್ಲಿ, ಇಡೀ ಕುಟುಂಬವನ್ನು ಸಲಹುವಳು. ಮಹಿಳೆ ಅಬಲೆಯಲ್ಲ ಸಬಲೆ ಎಂದು ರೂಪಿಸಿದ್ದಾರೆ. ಚಲನಚಿತ್ರ, ನಾಟಕ, ಸಾಹಿತ್ಯ, ಕಲೆ ರಾಜಕೀಯ ವಿಜ್ಞಾನ ತಂತ್ರಜ್ಞಾನ ಕ್ಷೇತ್ರದಲ್ಲಿ ಮಹಿಳೆಯರು ಸಾಧನೆ ಮಾಡಿ ತೋರಿಸಿದ್ದಾರೆ. ಕುಟುಂಬ ಜೊತೆಯಲ್ಲಿ ಸಮಾಜದ ಅಭಿವೃ ಮಹಿಳೆಯರ ಪ್ರಮುಖ ಪಾತ್ರವಹಿಸಿದ್ದಾರೆ ಅಂತಹ ಸಾಧಕ ಮಹಿಳೆಯರಿಗೆ ಗೌರವಿಸುವ ಶುಭಾ ದಿನವೇ ವಿಶ್ವ ಮಹಿಳಾ ದಿನಾಚರಣೆ ಎಂದು ಹೇಳಿದರು.

ವಿಸ್ತಾರ ನ್ಯೂಸ್‌ ನಿರೂಪಕಿ ಪ್ರತಿಭಾ ಪ್ರಕಾಶ್‌ ಸೇರಿ ದಿಟ್ಟ ಮಹಿಳೆ ಪ್ರಶಸ್ತಿ ಪಡೆದ ಸಾಧಕಿಯರು

ಚಲನಚಿತ್ರ ನಟಿ ವಿನಯಪುಸಾದ್, ಖ್ಯಾತ ಹಿನ್ನಲೆ ಗಾಯಕಿ ಎಂ.ಡಿ.ಪಲ್ಲವಿ, ಯುನೈಟೆಡ್ ಆಸ್ಪತ್ರೆಯ ನಿರ್ದೇಶಕಿ ಡಾ. ವೀಣಾ ಸಿದ್ದಾರೆಡ್ಡಿ, ಸಹಾಯಕ ಪೊಲೀಸ್ ಆಯುಕ್ತರಾದ ಎಂ.ಸಿ.ಕವಿತಾ, ಚಲನಚಿತ್ರ ನಟಿ, ನಿರ್ದೇಶಕಿ ಶೀತಲ್ ಶೆಟ್ಟಿ, ಹಿರಿಯ ವಕೀಲ ಶೀದೇವಿ ಪಾಟೀಲ್, ಟಿ.ವಿ.9 ನಿರೂಪಕಿ ಶುಭಶ್ರೀ ಜೈನ್, ಹಿರಿಯ ಪತ್ರಕರ್ತೆ ಪ್ರತಿಮಾ ಭಟ್, ವಿಸ್ತಾರ ನ್ಯೂಸ್ ಹಿರಿಯ ನಿರೂಪಕಿ ಪ್ರತಿಭಾ ಪುಕಾಶ್, ಸಿಂಧಿ ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸುಚಿತ್ರಾ ಮತ್ತು ಬಿಬಿಎಂಪಿಯಲ್ಲಿ ಕಾರ್ಯನಿರ್ವಹಿಸುತ್ತಿರುವ 14 ಸಾಧಕ ಮಹಿಳೆಯರಿಗೆ ದಿಟ್ಟ ಮಹಿಳೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಪ್ರತಿಭಾ ಪ್ರಕಾಶ್

ಇದೇ ಸಂದರ್ಭದಲ್ಲಿ ಯುನೈಟೆಡ್ ಆಸ್ಪತ್ರೆ ವತಿಯಿಂದ ಉಚಿತ ಆರೋಗ್ಯ ತಪಾಸಣೆ ಮತ್ತು ಶೇಖರ್ ಕಣ್ಣಿನ ಆಸ್ಪತ್ರೆ ವತಿಯಿಂದ ಕಣ್ಣಿನ ಪರೀಕ್ಷೆ ಹಾಗೂ ಮಹಿಳೆಯರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿತ್ತು. ಸಂಘದ ಪದಾಧಿಕಾರಿಗಳಾದ ಸಾಯಿಶಂಕರ್ .ಎ.ಜಿ.ಬಾಬಣ್ಣ, ಸೋಮಶೇಖರ್, ಕೆ.ನರಸಿಂಹ, ಹೆಚ್.ಕೆ.ತಿಪ್ಪೇಶ್, ರೇಣುಕಾಂಬ, ಕೆ.ಮಂಜೇಗೌಡ, ಎಸ್.ಜಿ. ಸುರೇಶ್, ಮಂಜುನಾಥ್, ಉಮೇಶ್ ವಿ, ಸಂತೋಷ್ ಕುಮಾರ್ ನಾಯ್ಕ, ಸಂತೋಷ್ ಕುಮಾರ್, ಎಚ್.ಬಿ. ಹರೀಶ್ ರವರು ಉಪಸ್ಥಿತರಿದ್ದರು.

Exit mobile version