Site icon Vistara News

ಗಂಡನ ಕಿರುಕುಳ, ಸೀಮಂತ ಮಾಡಿದ ಮೂರೇ ದಿನಕ್ಕೆ ಗರ್ಭಿಣಿ ಆತ್ಮಹತ್ಯೆ

pregnant suicide

ಬೆಂಗಳೂರು: ಸೀಮಂತ ಮಾಡಿದ ಮೂರೇ ದಿನಕ್ಕೆ 8 ತಿಂಗಳ ಗರ್ಭಿಣಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

10 ತಿಂಗಳ ಹಿಂದೆಯಷ್ಟೆ ಮದುವೆಯಾಗಿದ್ದ ಸೌಂದರ್ಯ ಎಂಬವರು ಆತ್ಮಹತ್ಯೆ ಮಾಡಿಕೊಂಡವರು. ಸಂತೋಷ್ ಎಂಬಾತನನ್ನು ಪ್ರೀತಿಸಿ ಮದುವೆಯಾಗಿದ್ದರು. ಪತಿ ಪತ್ನಿ ಇಬ್ಬರೂ ಖಾಸಗಿ ಗಾರ್ಮೆಂಟ್ಸ್‌ ಉದ್ಯೋಗಿಗಳಾಗಿದ್ದರು. ಪತಿ ಸಂತೋಷ್ ನೀಡುತ್ತಿದ್ದ ಕಿರುಕುಳವೇ ಆಕೆಯ ಆತ್ಮಹತ್ಯೆಗೆ ಕಾರಣ ಎಂದು ಸೌಂದರ್ಯ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ. ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪತಿ ಸಂತೋಷ್‌ನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ.

Exit mobile version