Site icon Vistara News

Property Tax: ಬೆಂಗಳೂರು ಆಸ್ತಿ ತೆರಿಗೆ; ಒನ್‌ ಟೈಮ್‌ ಸೆಟ್ಲ್‌ಮೆಂಟ್‌ ಪ್ರಯೋಜನ ಪಡೆಯಲು ಇಂದೇ ಲಾಸ್ಟ್‌ ಡೇಟ್‌

Property Tax

ಬೆಂಗಳೂರಿನ (bengaluru) ಎಂಟು ವಲಯಗಳ ಸುಮಾರು 2.88 ಲಕ್ಷ ಆಸ್ತಿಗಳ 548.94 ಕೋಟಿ ರೂ. ಮೊತ್ತದ ಆಸ್ತಿ ತೆರಿಗೆ (Property Tax) ಬಾಕಿ ಪಾವತಿಯಾಗದೆ ಉಳಿದಿದೆ ಎಂದು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ತಿಳಿಸಿದೆ. ಒನ್-ಟೈಮ್ ಇತ್ಯರ್ಥ ಯೋಜನೆಯಡಿಯಲ್ಲಿ (one-time settlement scheme) ಆಸ್ತಿ ತೆರಿಗೆಗೆ ಶೇ.5 ರಿಯಾಯಿತಿಯನ್ನು ಪಡೆಯಲು ಜುಲೈ 31 ಅಂತಿಮ ದಿನವಾಗಿದೆ.

ಒನ್-ಟೈಮ್ ಇತ್ಯರ್ಥ ಯೋಜನೆಯು ದಂಡಗಳ ಮೇಲೆ ಶೇ. 50 ರಿಯಾಯಿತಿ ಮತ್ತು ಆಸ್ತಿ ತೆರಿಗೆ ಡೀಫಾಲ್ಟರ್‌ಗಳಿಗೆ ಬಡ್ಡಿ ಪಾವತಿಗಳ ಮೇಲೆ ಶೇ. 100ರಷ್ಟು ರಿಯಾಯಿತಿಯನ್ನು ನೀಡುತ್ತದೆ.

ಬೆಂಗಳೂರು ನಗರ ಅಭಿವೃದ್ಧಿಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿರುವ ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಾರ್ಚ್‌ನಲ್ಲಿ ತೆರಿಗೆ ಸಂಗ್ರಹವನ್ನು ಸುಗಮಗೊಳಿಸಲು ಮತ್ತು ಆದಾಯವನ್ನು ಹೆಚ್ಚಿಸಲು ಹೊಸ ಆಸ್ತಿ ತೆರಿಗೆ ವ್ಯವಸ್ಥೆಯನ್ನು ಪರಿಚಯಿಸಿದ್ದರು. ಎಂದಿಗೂ ತೆರಿಗೆ ಪಾವತಿಸದ ಆಸ್ತಿ ಮಾಲೀಕರಿಗೆ ಒಂದು ಬಾರಿ ಪರಿಹಾರದ ಆಯ್ಕೆಯನ್ನು ಅವರು ಈ ಯೋಜನೆಯ ಅಡಿಯಲ್ಲಿ ಘೋಷಿಸಿದ್ದರು.

ಆಸ್ತಿ ಮಾಲೀಕರಿಗೆ ಪರಿಹಾರ ನೀಡಲು ಬೆಂಗಳೂರಿನಲ್ಲಿ ಬಾಕಿ ಉಳಿದಿರುವ ಆಸ್ತಿ ತೆರಿಗೆ ಪಾವತಿ ವಿಂಡೋವನ್ನು ಈ ವರ್ಷ ಏಪ್ರಿಲ್ 30ರಿಂದ ಜುಲೈ 31ರವರೆಗೆ ವಿಸ್ತರಿಸಲಾಗಿತ್ತು. ಜುಲೈ 31ರ ಗಡುವು ಮೀರಿದ ಬಳಿಕ ಅವಧಿ ವಿಸ್ತರಣೆಗೆ ಸರ್ಕಾರ ಮುಂದಾಗಿಲ್ಲ.

Property Tax


ಜುಲೈ 31 ರೊಳಗೆ ಬಾಕಿ ಪಾವತಿಸಲು ವಿಫಲರಾದವರನ್ನು ಆಗಸ್ಟ್ 1ರಿಂದ ಸುಸ್ತಿದಾರರೆಂದು ಪರಿಗಣಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದ್ದಾರೆ.

ಹೆಚ್ಚು ಬಾಕಿ ಯಾವ ವಲಯದ್ದು?

ಮಹದೇವಪುರ ವಲಯವು 60,000ಕ್ಕೂ ಹೆಚ್ಚು ಆಸ್ತಿಗಳೊಂದಿಗೆ ಮುಂಚೂಣಿಯಲ್ಲಿದ್ದು, ಒಟ್ಟು 124.23 ಕೋಟಿ ರೂ. ಬಾಕಿಯನ್ನು ಹೊಂದಿದೆ. ಬೊಮ್ಮನಹಳ್ಳಿ 45,381 ಆಸ್ತಿಗಳಿಂದ 71.10 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಅಂಕಿಅಂಶಗಳ ಪ್ರಕಾರ ಏಪ್ರಿಲ್ 1 ರಿಂದ ಜುಲೈ 29 ರ ನಡುವೆ 184.77 ಕೋಟಿ ರೂ. ಮೊತ್ತದ 1,07,344 ಆಸ್ತಿಗಳ ಆಸ್ತಿ ತೆರಿಗೆ ಪಾವತಿಸಲಾಗಿದೆ.

ಇದನ್ನೂ ಓದಿ: BJP Protest: ಪೊಲೀಸರ ದೌರ್ಜನ್ಯ ಖಂಡಿಸಿ ಪ್ರತಿಭಟನೆ; ಪುನೀತ್‌ ಕೆರೆಹಳ್ಳಿ ಮತ್ತೆ ವಶಕ್ಕೆ, ಪ್ರತಾಪ್‌ ಸಿಂಹ ವಿರುದ್ಧ ದೂರು

ಒಟ್ಟು 282.59 ಕೋಟಿ ರೂ. ಮೊತ್ತದ 16,904 ಆಸ್ತಿಗಳನ್ನು ಒಳಗೊಂಡ ಪರಿಷ್ಕರಣೆ ಪ್ರಕರಣಗಳು 2024ರ ಜುಲೈ 29ರವರೆಗೆ ಬಾಕಿ ಉಳಿದಿವೆ ಎಂದು ಅಂಕಿ ಅಂಶಗಳಿಂದ ಬಹಿರಂಗವಾಗಿದೆ.

ಬಿನ್ನಿಪೇಟೆ, ಬಸವನಗುಡಿ, ಹನುಮಂತನಗರ ಮತ್ತು ಜಯನಗರದಂತಹ ಪ್ರದೇಶಗಳನ್ನು ಒಳಗೊಂಡಿರುವ ಪಶ್ಚಿಮ ವಲಯವು ಅತಿ ಹೆಚ್ಚು ಬಾಕಿ ಉಳಿಸಿಕೊಂಡಿದೆ. ಇವು ಒಟ್ಟು ಸೇರಿ 3,474 ಆಸ್ತಿ ಪ್ರಕರಣಗಳನ್ನು ಒಳಗೊಂಡಿವೆ.

Exit mobile version