Site icon Vistara News

ಆಸ್ತಿ ತೆರಿಗೆ ವಸೂಲಿಯಲ್ಲಿ ಉಳ್ಳವರಿಗೊಂದು, ಸಾಮಾನ್ಯರಿಗೊಂದು ನ್ಯಾಯ ಮಾಡ್ತಿದ್ಯಾ ಬಿಬಿಎಂಪಿ?

ಬಿಬಿಎಂಪಿ

ಬೆಂಗಳೂರು: ನಿಮಗೆ ನೆನಪಿರಬಹುದು. ಕೋಟಿ ಕೋಟಿ ರೂ. ಆಸ್ತಿ ತೆರಿಗೆ ಕಟ್ಟಿಲ್ಲ ಎಂದು ಬಿಬಿಎಂಪಿ ಹಿಂದೊಮ್ಮೆ ನೋಟಿಸ್‌ ನೀಡಿ ಮಂತ್ರಿ ಮಾಲ್‌ಗೇ ಬೀಗ ಹಾಕಿದ್ದು ದೊಡ್ಡ ಸುದ್ದಿಯಾಗಿತ್ತು. ಇದಾದ ಬಳಿಕವೂ ಆಸ್ತಿ ತೆರಿಗೆ ಸರಿಯಾಗಿ ಪಾವತಿ ಆಗ್ತಿದ್ಯಾ ಅಂದರೆ ಅದಕ್ಕೆ ಅಧಿಕಾರಿಗಳಿಂದ ಬರುವ ಉತ್ತರ ʼಇಲ್ಲʼ ಎಂದು. ಹಾಗಾದರೆ ಆಸ್ತಿ ತೆರಿಗೆ ವಸೂಲಿ ವಿಚಾರದಲ್ಲಿ ಬಿಬಿಎಂಪಿ ಕಳ್ಳಾಟ ಆಡ್ತಿದ್ಯಾ? ಕೋಟಿ ಕೋಟಿ ಹಣ ಬಾಕಿ ಇದ್ರೂ ಮೃದು ಧೋರಣೆ ಯಾಕೆ? ಆಸ್ತಿ ತೆರಿಗೆ ವಸೂಲಿ ವಿಚಾರದಲ್ಲಿ ಬಿಬಿಎಂಪಿಯಿಂದ  ಉಳ್ಳವರಿಗೊಂದು ನ್ಯಾಯ, ಜನ ಸಾಮಾನ್ಯರಿಗೊಂದು ರೀತಿ ತಾರತಮ್ಯ ಮಾಡುತ್ತಿದ್ಯಾ? ಎಂಬ ಪ್ರಶ್ನೆ ಕಾಡುತ್ತದೆ.

ಇದನ್ನೂ ಓದಿ | BBMP ELECTION | ರಾಜ್ಯ ಸರ್ಕಾರಕ್ಕೆ ವಾರ್ಡ್‌ ಮರುವಿಂಗಡಣೆ ಪಟ್ಟಿ ಸಲ್ಲಿಸಿದ ಬಿಬಿಎಂಪಿ

ತೆರಿಗೆ ಪಾವತಿಯನ್ನು ಜನಸಾಮಾನ್ಯರು ಎರಡ್ಮೂರು ವರ್ಷ ಮಾಡಿಲ್ಲ ಅಂದ್ರೆ ಆಸ್ತಿ ಜಪ್ತಿಯ ನೋಟಿಸ್​ ಜಾರಿ ಮಾಡಲಾಗುತ್ತದೆ. ಆದರೆ ಪ್ರತಿಷ್ಠಿತ ಮಂತ್ರಿ ಮಾಲ್ ಟ್ಯಾಕ್ಸೂ ಕಟ್ಟಿಲ್ಲ, ಡೆಡ್​​ಲೈನ್​ಗೂ ಡೋಂಟ್​ಕೇರ್ ಅಂತಿದೆ. ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಪ್ರತಿಷ್ಠಿತ ಮಂತ್ರಿಮಾಲ್, ​​2019ರಿಂದ ಆಸ್ತಿ ತೆರಿಗೆ ಪಾವತಿಸಲು ಮೀನಮೇಷ ಎಣಿಸುತ್ತಿದೆ. 2019ರಿಂದ 2022ರವರೆಗೆ ಸುಮಾರು 37 ಕೋಟಿ ರೂಪಾಯಿ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ​

 ಪ್ರತಿವರ್ಷ ನಿಗದಿತ ಸಮಯಕ್ಕೆ ಸರಿಯಾಗಿ ಆಸ್ತಿ ತೆರಿಗೆ ಪಾವತಿಸದೆ ವಂಚನೆ ಮಾಡುತ್ತಿರುವ ಮಂತ್ರಿಮಾಲ್‌,  ಅಸಲು- ಬಡ್ಡಿ ಸೇರಿ 37 ಕೋಟಿ ರೂಪಾಯಿಯಷ್ಟು ​ ಪಾವತಿಸಬೇಕಿದೆ. ಈ ಹಿಂದೆಯೂ ಬಾಕಿ ತೆರಿಗೆ ಪಾವತಿಸಲು ಹಲವು ಬಾರಿ ಡೆಡ್​ಲೈನ್​ ನೀಡುತ್ತಾ ಬಂದಿದೆ. ಇದೀಗ ಮತ್ತೇ  ಡೆಡ್​ಲೈನ್​ಗಳೆಲ್ಲಾ ಮುಗಿದ್ರೂ ಶಿಸ್ತುಕ್ರಮಕ್ಕೆ ಬಿಬಿಎಂಪಿ ಮುಂದಾಗಿಲ್ಲ, ಹೀಗಾಗಿ ಅದ್ಯಾರ ಪ್ರಭಾವಕ್ಕೆ ಮಣಿದಿದ್ದಾರೆ ಅಧಿಕಾರಿಗಳು ಎಂಬ ಪ್ರಶ್ನೆ ಎದ್ದಿದೆ.

ಮಂತ್ರಿ ಮಾಲ್‌ನಿಂದ ಯಾವ್ಯಾವ ವರ್ಷದಲ್ಲಿ ಎಷ್ಟು ಆಸ್ತಿ ತೆರಿಗೆ ಬಾಕಿ ಇದೆ?

ವರ್ಷ – ಬಾಕಿ ಹಣ

2018-19: 67778276 ರೂ.

2019-20: 67778276 ರೂ.

2020-21: 67778276 ರೂ.

2021-22: 68871476 ರೂ.

2022-23: 68871476 ರೂ.

ಅಸಲು + ಬಡ್ಡಿ ಸೇರಿ = 37,02,32,005 ರೂ. ಬಾಕಿ

ಇದನ್ನೂ ಓದಿ | ಬಿಬಿಎಂಪಿ ಚುನಾವಣೆ | ಪರಿಶಿಷ್ಟ ಜಾತಿ, ಪಂಗಡ, ಹಿಂದುಳಿದ ವರ್ಗಕ್ಕೆ ಶೇ.50 ಮೀಸಲಾತಿ

​​

Exit mobile version