Site icon Vistara News

Psycho in Bangalore: ಬೆಂಗಳೂರಿನಲ್ಲಿ ಕಾಣಿಸಿಕೊಂಡಿದ್ದಾನೆ ವಿಕೃತ ಕಾಮಿ, ಉಡುಪು ಹುಷಾರು!

psychopath person in bangalore

ಬೆಂಗಳೂರು: ಮನೆ ಮನೆಗೂ ಹೋಗಿ ಮಹಿಳೆಯರ ಉಡುಪುಗಳ ಹುಡುಕುವ ವಿಕೃತ ಕಾಮಿಯೊಬ್ಬ (psycho in bangalore) ಬೆಂಗಳೂರಿನಲ್ಲಿ ಕಂಡುಬಂದಿದ್ದು, ನಿವಾಸಿಗಳು ಆತಂಕಿತರಾಗಿದ್ದಾರೆ.

ಲಗ್ಗೆರೆಯ ವಿಧಾನಸೌಧ ಲೇಔಟ್ ಆಸುಪಾಸಿನಲ್ಲಿ ಈತ ಕಾರ್ಯಾಚರಿಸುತ್ತಿದ್ದು, ಇಲ್ಲಿನ ನಿವಾಸಿಗಳಿಗೆ ಆತನ ಭಯ ಆವರಿಸಿಕೊಂಡಿದೆ. ಸಂಜೆಯ ಹೊತ್ತಿಗೆ ಮನೆ ಹುಡುಕುವ ನೆಪದಲ್ಲಿ ಬರುವ ಈ ವಿಕೃತ ಕಾಮಿ, ಯಾರಾದರೂ ಕೇಳಿದರೆ ಮನೆ ಹುಡುಕುತ್ತಿದ್ದೇನೆ ಎನ್ನುತ್ತಾನೆ. ಸಾಮಾನ್ಯವಾಗಿ ಜನ ಕಡಿಮೆ ಇರುವ, ಒಂಟಿ ಮಹಿಳೆಯರು ಇರುವ ಮನೆಗಳನ್ನು ಆರಿಸಿಕೊಳ್ಳುವುದು ಗೊತ್ತಾಗಿದೆ.

ಸ್ನಾನದ ಮನೆ ಬಳಿ ಹೋಗಿ ಮೊಬೈಲ್‌ನಲ್ಲಿ ಶೂಟ್ ಮಾಡುವುದು, ಮಹಿಳೆಯರು ಒಂಟಿಯಾಗಿ ಓಡಾಡುತ್ತಿದ್ದರೆ ಅವರನ್ನು ಮೊಬೈಲ್‌ನಲ್ಲಿ ಶೂಟ್‌ ಮಾಡಿಕೊಳ್ಳುವುದು ಕಂಡುಬಂದಿದೆ. ವಿಚಾರಿಸಲು ಹೋದರೆ ಪರಾರಿಯಾಗಿದ್ದಾನೆ. ಮನೆಯ ಹೊರಗೆ ಒಣಹಾಕಿರುವ ಮಹಿಳೆಯರ ಉಡುಪು ಹಿಡಿದುಕೊಂಡು ಅಸಭ್ಯವಾಗಿ ವರ್ತಿಸುವ ದೃಶ್ಯವೂ ವಿಡಿಯೋದಲ್ಲಿ ಸೆರೆಯಾಗಿದೆ.

ಇದರಿಂದಾಗಿ ಒಂಟಿ ಮಹಿಳೆಯರಿಗೆ ವಿಕೃತ ಕಾಮಿಯ ಭಯ ಶುರುವಾಗಿದೆ. ಸದ್ಯ ವಿಕೃತಕಾಮಿಯ ಉಪಟಳದಿಂದ ಭಯಭೀತರಾಗಿರುವ ಈ ಪ್ರದೇಶದ ಜನ ರಾಜಗೋಪಾಲನಗರ ಠಾಣೆಗೆ ದೂರು ನೀಡಿದ್ದಾರೆ.

ಈ ಹಿಂದೆಯೂ ಬೆಂಗಳೂರಿನಲ್ಲಿ ಇಂಥ ಹಲವು ವಿಕೃತಕಾಮಿಗಳು ಕಂಡುಬಂದಿದ್ದರು. ಅವರನ್ನು ಪೊಲೀಸರು ಹೆಡೆಮುರಿ ಕಟ್ಟಿದ್ದರು. ಉಮೇಶ್‌ ರೆಡ್ಡಿ ಎಂಬ ವಿಕೃತಿಕಾಮಿ ಕೊಲೆಗಾರನಾಗಿ ಪರಿವರ್ತನೆಯಾಗಿದ್ದು, ನಂತರ ಜೈಲಿನ ಕಂಬಿ ಎಣಿಸಿದ್ದು ಬೆಂಗಳೂರಿಗರ ಮನಃಪಟಲದಲ್ಲಿ ಇನ್ನೂ ದಾಖಲಾಗಿದೆ.

ಇದನ್ನೂ ಓದಿ: ಇದೆಂಥ ಕೇಡುಗಾಲ; ಮೇಕೆ ಮೇಲೆಯೇ ಗ್ಯಾಂಗ್‌ರೇಪ್‌ ಮಾಡಿದ ವಿಕೃತ ಕಾಮಿಗಳು

Exit mobile version