Site icon Vistara News

Psycho in Bangalore: ಬೆಂಗಳೂರಿನಲ್ಲೊಬ್ಬ ಸೈಕೋ, ಸೆಕ್ಯುರಿಟಿ ಗಾರ್ಡ್‌ಗಳೇ ಈತನ ಟಾರ್ಗೆಟ್!

touseef psychopath targetting security

ಬೆಂಗಳೂರು: ರಾಜಧಾನಿಯಲ್ಲಿ ಇನ್ನೊಬ್ಬ ವಿಚಿತ್ರ ಸೈಕೋ (Psycho in Bangalore) ಕಂಡುಬಂದಿದ್ದಾನೆ. ಇವನ ಟಾರ್ಗೆಟ್‌ ಮಹಿಳೆಯರಾಗಲೀ ಮಕ್ಕಳಾಗಲೀ ಅಲ್ಲ. ಬದಲಾಗಿ ಈತ ಒಂಟಿ ಸೆಕ್ಯುರಿಟಿ ಗಾರ್ಡ್‌ಗಳನ್ನೇ ಹುಡುಕಿ ಇರಿದುಹಾಕುತ್ತಾನೆ!

ಇದೀಗ ಈ ಸೈಕೋ ಕ್ರಿಮಿನಲ್‌ನ (Psychopath) ಅಟ್ಟಹಾಸಕ್ಕೆ ಸೆಕ್ಯುರಿಟಿ ಗಾರ್ಡ್‌ಗಳು ವಿಲವಿಲ ಅನ್ನುತ್ತಿದ್ದಾರೆ. ಈಗಾಗಲೇ ಹಲವು ಪೊಲೀಸ್‌ ಠಾಣೆಗಳಿಗೆ ಈತ ಬೇಕಾಗಿದ್ದಾನೆ. ಮಧ್ಯರಾತ್ರಿಯೇ ಈತನ ಕಾರ್ಯಾಚರಣೆ. ಕಂಠಪೂರ್ತಿ ಕುಡಿದು, ಮಾದಕ ವಸ್ತುಗಳಿಂದ ನಶೆ ಏರಿಸಿಕೊಂಡು ಬರುವ ಈತ ಮಧ್ಯರಾತ್ರಿ ಎರಡರಿಂದ ಮೂರು ಗಂಟೆ ಅವಧಿಯಲ್ಲಿ ಬಲಿಪಶುಗಳನ್ನು ಹುಡುಕುತ್ತಾ ಓಡಾಡುತ್ತಾನೆ.

ತೌಸೀಫ್ ಎಂಬಾತ‌ನೇ ಈ ಸೈಕೋಪಾತ್. ಈತ ಈಗಾಗಲೇ ಆರ್.ಟಿ ನಗರ, ಸಂಜಯ್ ನಗರ, ಜೆ.ಸಿ ನಗರ, ಕೆ.ಜಿ ಹಳ್ಳಿಯಲ್ಲಿ ಸೆಕ್ಯುರಿಟಿ ಗಾರ್ಡ್‌ಗಳಿಗೆ ಇರಿದಿದ್ದಾನೆ. ಕಳೆದ ಬಾರಿ ಮಾಜಿ‌ ಸಿಎಂ ಮನೆ ಬಳಿಯೂ ಸೆಕ್ಯುರಿಟಿಗೆ ಚೂರಿಯಿಂದ ಇರಿದಿದ್ದಾನೆ. ಸಾಯಿಸುವ ಉದ್ದೇಶದಿಂದಲೇ ಈತ ಹರಿತವಾದ ಡ್ಯಾಗರ್‌ನಿಂದ ಇರಿಯುತ್ತಾನೆ.

ಸೊಲ್ಯುಶನ್ ಹಾಗೂ ಡ್ಯಾಗರ್ ಈತನ ಜೇಬಿನಲ್ಲಿ ಕಾಯಂ ಆಗಿ ಇರುತ್ತವೆ. ಮಧ್ಯರಾತ್ರಿ ಒಂಟಿ ಸೆಕ್ಯುರಿಟಿ ಗಾರ್ಡ್‌ಗಳನ್ನು ಹುಡುಕಿಕೊಂಡು ಓಡಾಡುವ ಈ ಕ್ರಿಮಿನಲ್‌ 2 ದಿನಗಳ ಹಿಂದೆ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಹಲವು ಪೊಲೀಸ್ ಠಾಣೆಗಳಲ್ಲಿ ಈತನ ವಿರುದ್ಧ ದೂರು ದಾಖಲಾಗಿತ್ತು. ಈತನಿಗಾಗಿ ಮೂರು ದಿನ ಹಗಲು ರಾತ್ರಿ ಪೊಲೀಸರು ಸಿಸಿಟಿವಿ ಫಾಲೋ ಮಾಡಿದ್ದರು. ಆರ್.ಟಿ ನಗರ 80 FT ರೋಡ್ ಬಳಿ ಪೊಲೀಸರ ಬಲೆಗೆ ಬಿದ್ದಿದ್ದಾನೆ. ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ಯತ್ನಿಸಿದರೂ ಫಲಕಾರಿಯಾಗಿಲ್ಲ.

ಇದನ್ನೂ ಓದಿ: Husband Harassment | ಪಾರ್ಟಿ ಮಾಡಿ ಗೆಳೆಯರ ಜತೆ ಮಲಗು ಎಂದು ಪತ್ನಿಗೆ ಪೀಡಿಸುತ್ತಿದ್ದ ಸೈಕೋಪಾಥ್‌! ವಿಡಿಯೊ ಮಾಡಿ ವಿಕೃತಿ

Exit mobile version