ಬೆಂಗಳೂರು: ಜೂನ್ 3 ಅಥವಾ 4ನೇ ವಾರದಲ್ಲಿ ಪಿಯು ಫಲಿತಾಂಶ ಪ್ರಕಟವಾಗಲಿದೆ. ಈಗಾಗಲೇ ಪಿಯು ಬೋರ್ಡ್ ತಾತ್ಕಾಲಿಕ ದಿನಾಂಕ ಸಿದ್ದಪಡಿಸಿದೆ. ಮೂರನೇ ವಾರವಾದರೆ ಜೂ.24 ಮತ್ತು ಕೊನೆ ವಾರವಾದರೆ ಜೂ.28ಕ್ಕೆ ಫಲಿತಾಂಶ ನೀಡಲು ಸಿದ್ದತೆ ನಡೆಸಿದೆ. SSLC ಫಲಿತಾಂಶದ ರೀತಿಯೇ ವಿದ್ಯಾರ್ಥಿಗಳ ಮೊಬೈಲ್ ಅಲ್ಲಿ ರಿಸಲ್ಟ್ ಬರಲಿದ್ದು, ಮೆಸೇಜ್ ಮೂಲಕ ಫಲಿತಾಂಶ ರವಾನೆ ಆಗಲಿದೆ.
ಏ.22 ರಿಂದ ಮೇ 18ರವರೆಗೆ ದ್ವಿತೀಯ ಪಿಯು ಪರೀಕ್ಷೆ ನಡೆದಿತ್ತು. ಸದ್ಯ ಮೌಲ್ಯಮಾಪನ ಕಾರ್ಯ ಅರ್ಧದಷ್ಟು ಮುಗಿದಿದೆ. ಒಟ್ಟು 6,84,255 ವಿದ್ಯಾರ್ಥಿಗಳು ಈ ಬಾರಿ ಪರೀಕ್ಷೆಗೆ ನೊಂದಣಿ ಮಾಡಿದ್ದರು.
ಇದನ್ನೂ ಓದಿ | NEET-PG ಫಲಿತಾಂಶ ಪ್ರಕಟ: ರಿಸಲ್ಟ್ ಚೆಕ್ ಮಾಡೋದು ಹೀಗೆ
ಫಲಿತಾಂಶ ನೀಡುವ ವಿಚಾರದಲ್ಲಿ ವಿಳಂಬ ಆಗುವುದಿಲ್ಲ. ಹೆಚ್ಚು ಉಪನ್ಯಾಸಕರನ್ನು ಬಳಸಿಕೊಂಡು ಮೌಲ್ಯಮಾಪನ ಕಾರ್ಯಗಳು ಆಗುತ್ತಿದೆ. ವೃತ್ತಿಪರ ಕೋರ್ಸ್ ಪ್ರವೇಶಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಸಚಿವರ ಸಮಯ ಸಿಕ್ಕ ಬಳಿಕ ಫಲಿತಾಂಶದ ದಿನಾಂಕ ಪ್ರಕಟವಾಗುತ್ತದೆ. ಎಲ್ಲ ಅಂದುಕೊಂಡಂತೆ ಆದರೆ ಜೂನ್ 3ನೇ ವಾರವೇ ಫಲಿತಾಂಶ ಪ್ರಕಟಗೊಳ್ಳಲಿದೆ ಎಂದು ಪಿಯು ಬೋರ್ಡ್ ನಿರ್ದೇಶಕ ಆರ್. ರಾಮಚಂದ್ರನ್ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ | UPSC result 2022: ಯುಪಿಎಸ್ಸಿ ಫಲಿತಾಂಶ ಪ್ರಕಟ; ಹೆಣ್ಣುಮಕ್ಕಳೇ ಟಾಪ್ 4