ಬೆಂಗಳೂರು: ರಾಜಧಾನಿಯಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು, ಇನ್ನೂ ಮೂರು ದಿನ ಇದೇ ರೀತಿಯ ಪರಿಸ್ಥಿತಿ ಇರಲಿದೆ ಎಂದು ಹವಾಮಾನ ಇಲಾಖೆ ಅಂದಾಜಿಸಿದೆ. ನಿರಂತರ ಮಳೆಯಾದರೆ ಹಲವು ಏರಿಯಾಗಳು ಮುಳುಗಡೆಯಾಗಲಿವೆ ಎಂದು ಪಾಲಿಕೆ ಅಂದಾಜಿಸಿದೆ.
ಬೆಂಗಳೂರಿನಲ್ಲಿ ನಿರಂತರವಾಗಿ ಒಂದು ಗಂಟೆ ಕಾಲ ಮಳೆ ಬಂದರೆ 8 ಲೇಔಟ್‌ಗಳು ಮುಳುಗುವ ಸಾಧ್ಯತೆ ಇದೆಯಂತೆ. ಇದರಲ್ಲಿ ನಿಮ್ಮ ಲೇಔಟ್ ಕೂಡ ಇದೆಯಾ ಎಂದು ಗಮನಿಸಿಕೊಳ್ಳಿ:
• ಲಗ್ಗೆರೆ
• ಆರ್ ಆರ್ ನಗರದ ಪ್ರಮೋದಾ ಲೇಔಟ್
• ಕೆ.ಆರ್ ಪುರಂನ ಅನುಗ್ರಹ ಲೇಔಟ್
• ಸಾಯಿಲೇಟ್, ಪೈ ಲೇಔಟ್
• ಗುರುರಾಜ್ ಲೇಔಟ್
• ಬ್ಯಾಟರಾಯನಪುರದ ಜೆಎನ್‌ಆರ್‌ಸಿ ಲೇಔಟ್
• ಡಾಲರ್ಸ್ ಕಾಲೋನಿಯ ಆರ್‌ಎಂಎ ಬಡಾವಣೆ ಜಲಾವೃತ ಆಗುವ ಸಾಧ್ಯತೆ.
70 ಎಂಎಂ ಮಳೆ ಬಂದರೆ 8 ಲೇಔಟ್‌ಗಳು ಸಂಪೂರ್ಣ ಜಲಾವೃತ ಆಗುತ್ತವೆ ಎಂದು ಬಿಬಿಎಂಪಿ ಗುರುತಿಸಿದೆ. ಸೋಮವಾರ ರಾತ್ರಿಯ ಮಳೆಗೆ ಅನುಗ್ರಹ ಲೇಔಟ್‌ನಲ್ಲಿ ಮೊಳಕಾಲೆತ್ತರಕ್ಕೆ ನೀರು ನಿಂತಿದ್ದು, ನೂರಾರು ಮನೆಗಳಲ್ಲಿ ನೀರು ತುಂಬಿಕೊಂಡಿದೆ. ಇಂಥ ಪರಿಸ್ಥಿತಿ ಎದುರಿಸಲು ಪಾಲಿಕೆ ಕ್ವಿಕ್ ರೆಸ್ಪಾನ್ಸ್ ಟೀಮ್ ರಚನೆ ಮಾಡಿದೆ. ರಾಜಕಾಲುವೆ ತಂಡ, ಮರ ಕತ್ತರಿಸುವ ತಂಡ, ರೆಸ್ಕ್ಯೂ ಟೀಮ್‌ಗಳನ್ನು ರಚಿಸಿದ್ದು, ಅಗ್ನಿಶಾಮಕ ದಳಕ್ಕೂ ಮಾಹಿತಿ ನೀಡಲಾಗಿದೆ.
ಇದನ್ನೂ ಓದಿ : Rain News | ಹವಾಮಾನ ಇಲಾಖೆ ಎಚ್ಚರಿಕೆ, ಮಂಗಳವಾರ ಬೆಳಗ್ಗೆಯೂ ಈ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ