Site icon Vistara News

Rajyasabha Election : ಅಜಯ್‌ ಮಾಕೆನ್‌ಗೆ ರಾಜ್ಯದಿಂದ ಟಿಕೆಟ್‌; ನಾಸಿರ್‌ ಹುಸೇನ್‌, ಜಿ.ಸಿ.ಗೆ ಮತ್ತೆ ಅದೃಷ್ಟ

Rajyasabha Election Ajay Maken

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ (Rajyasabha Election) ನಾಲ್ಕು ಸ್ಥಾನಗಳಿಗೆ ನಡೆಯುವ ಚುನಾವಣೆಗೆ ಕಾಂಗ್ರೆಸ್‌ ತನ್ನ ಅಭ್ಯರ್ಥಿಗಳ ಪಟ್ಟಿಯನ್ನು (Candidates list) ಬಿಡುಗಡೆ ಮಾಡಿದೆ. ರಾಜ್ಯದಿಂದ ‌ ಡಾ. ಸಯ್ಯದ್‌ ನಾಸಿರ್‌ ಹುಸೇನ್‌ (Dr. sayyad Nasit hussain), ಜಿ.ಸಿ ಚಂದ್ರಶೇಖರ್‌ (GC Chandrashekhar) ಮತ್ತು ಕಾಂಗ್ರೆಸ್‌ನ ಹಿರಿಯ ನಾಯಕ ಅಜಯ್‌ ಮಾಕೆನ್‌ (Ajay Maken) ಅವರಿಗೆ ಟಿಕೆಟ್‌ ನೀಡಲಾಗಿದೆ. ಈ ಹಿಂದೆ ಕಾಂಗ್ರೆಸ್‌ನಿಂದ ರಾಜ್ಯಸಭಾ ಸದಸ್ಯರಾಗಿದ್ದವರ ಪೈಕಿ ಎಲ್‌. ಹನುಮಂತಯ್ಯ (L Hanumantaiah) ಅವರಿಗೆ ಟಿಕೆಟ್‌ ನಿರಾಕರಿಸಲಾಗಿದೆ. ನಸೀರ್‌ ಹುಸೇನ್‌ ಮತ್ತು ಜಿ.ಸಿ. ಚಂದ್ರಶೇಖರ್‌ ಅವರಿಗೆ ಮತ್ತೆ ಟಿಕೆಟ್‌ ನೀಡಲಾಗಿದೆ.

ರಾಜ್ಯದಲ್ಲಿ ನಾಲ್ಕು ಸ್ಥಾನಗಳಿದ್ದು, ಇದರಲ್ಲಿ ಮೂರನ್ನು ಕಾಂಗ್ರೆಸ್‌ ಗೆಲ್ಲುವಲ್ಲಿ ಕಾಂಗ್ರೆಸ್‌ ಸಫಲವಾಗಲಿದೆ. ಒಟ್ಟು 135+1 ಕಾಂಗ್ರೆಸ್‌ ಶಾಸಕರ ಪೈಕಿ ಒಬ್ಬೊಬ್ಬ ಅಭ್ಯರ್ಥಿಗೆ ತಲಾ 35 ಮತಗಳನ್ನು ಹಂಚಲಾಗುತ್ತದೆ. ಬಿಜೆಪಿ ಮತ್ತು ಜೆಡಿಎಸ್‌ ಮೈತ್ರ ಕೂಟಕ್ಕೆ ಒಂದು ಸ್ಥಾನ ಸಿಗಲಿದ್ದು, ಬಿಜೆಪಿ ನಾರಾಯಣ ಭಾಂಡಗೆ ಅವರನ್ನು ಆಯ್ಕೆ ಮಾಡಿದೆ. ರಾಜ್ಯಸಭೆ ಚುನಾವಣೆಗೆ ನಾಮಪತ್ರ ಸಲ್ಲಿಸಲು ಗುರುವಾರ ಕೊನೆಯ ದಿನವಾಗಿದೆ.

ಇದನ್ನೂ ಓದಿ: Rajya Sabha Election: ಜೆ.ಪಿ.ನಡ್ಡಾ, ಅಶೋಕ್‌ ಚೌಹಾಣ್‌ಗೆ ರಾಜ್ಯಸಭೆ ಬಿಜೆಪಿ ಟಿಕೆಟ್ ಘೋಷಣೆ

Rajyasabha Elections Candidates Ajay maken

ಕರ್ನಾಟದಿಂದ ಸ್ಥಾನ ಪಡೆದ ಅಜಯ್‌ ಮಾಕೆನ್‌

ಕಾಂಗ್ರೆಸ್‌ನ ಹಿರಿಯ ನಾಯಕ ಅಜಯ್‌ ಮಾಕೆನ್‌ ಅವರಿಗೆ ಈ ಬಾರಿ ರಾಜ್ಯದಿಂದ ರಾಜ್ಯಸಭಾ ಸ್ಥಾನವನ್ನು ನೀಡಲಾಗಿದೆ. 60 ವರ್ಷದ ಮಾಕೆನ್‌ ಅವರು ಪ್ರಸಕ್ತ ಎಐಸಿಸಿ ಕೋಶಾಧಿಕಾರಿಯಾಗಿ ಮತ್ತು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (CWC) ಸದಸ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅವರು ಮನಮೋಹನ್‌ ಸಿಂಗ್‌ ಸರ್ಕಾರದಲ್ಲಿ ಮಂತ್ರಿಯಾಗಿದ್ದರು. ದಿಲ್ಲಿಯಲ್ಲಿ ಶೀಲಾ ದೀಕ್ಷಿತ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ಅಜಯ್‌ ಮಾಕೆನ್‌ ಸಚಿವರಾಗಿದ್ದರು.

ಎರಡು ಬಾರಿ ಸಂಸದರಾಗಿ ಮತ್ತು ಮೂರು ಬಾರಿ ದಿಲ್ಲಿ ವಿಧಾನಸಭೆ ಶಾಸಕರಾಗಿ ಆಯ್ಕೆಯಾಗಿದ್ದ ಅವರು ದಿಲ್ಲಿ ಪ್ರದೇಶ ಕಾಂಗ್ರೆಸ್‌ ಸಮಿತಿ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದರು.

2012-13ರ ಅವಧಿಯಲ್ಲಿ ಅವರು ಕೇಂದ್ರದಲ್ಲಿ ವಸತಿ ಮತ್ತು ನಗರ ಬಡತನ ನಿವಾರಣಾ ಸಚಿವರಾಗಿದ್ದರು. 2011-12ರಲ್ಲಿ ಕ್ರೀಡೆ ಮತ್ತು ಯುವಜನ ಸೇವೆ ಸಚಿವರಾಗಿದ್ದರು. 2009-2011ರಲ್ಲಿ ಗೃಹ ಸಚಿವರಾಗಿ, 2006-07ರಲ್ಲಿ ನಗರಾಭಿವೃದ್ಧಿ ಇಲಾಖೆಯ ಸಚಿವರಾಗಿದ್ದರು.

ಪಟ್ಟಿ ಬಿಡುಗಡೆಗೆ ಮುನ್ನ ಭಾರಿ ಜಟಾಪಟಿ: ಜಿ.ಸಿ ಪರ ಡಿಕೆಶಿ ಬ್ಯಾಟಿಂಗ್‌

ರಾಜ್ಯಸಭೆಗೆ ರಾಜ್ಯದಿಂದ ಯಾರನ್ನು ಆಯ್ಕೆ ಮಾಡಬೇಕು ಎಂಬ ವಿಚಾರದಲ್ಲಿ ಕಳೆದ ಕೆಲವು ದಿನಗಳಿಂದ ಭಾರಿ ಚರ್ಚೆ ನಡೆದಿದ್ದು, ಬುಧವಾರ ಅದು ತುರೀಯ ಸ್ಥಿತಿ ತಲುಪಿತ್ತು. ಈ ಬಾರಿ ಎಲ್‌. ಹನುಮಂತಯ್ಯ ಅವರಿಗೆ ಟಿಕೆಟ್‌ ಇಲ್ಲ ಎನ್ನುವುದು ಬಹುತೇಕ ಖಚಿತವಾಗಿತ್ತು. ಅವರ ಸ್ಥಾನವನ್ನು ಕೇಂದ್ರ ನಾಯಕರಿಗೆ ಮೀಸಲು ಇಡಲಾಗಿತ್ತು.

ನಾಸಿರ್‌ ಹುಸೇನ್‌ ಅವರಿಗೆ ಮರಳಿ ಟಿಕೆಟ್‌ ನೀಡುವುದು ಫೈನಲ್‌ ಆಗಿತ್ತು. ಆದರೆ, ಜಿ.ಸಿ. ಚಂದ್ರಶೇಖರ್‌ಗೆ ಸಿಗುವುದೋ ಇಲ್ಲವೋ ಅನ್ನುವುದರ ಬಗ್ಗೆ ಗೊಂದಲವಿತ್ತು. ಕೊನೆ ಹಂತದಲ್ಲಿ ಸಿಎಂ ಸಿದ್ದರಾಮಯ್ಯ ಅವರು ಗೋವಿಂದರಾಜು ಪರವಾಗಿ ಬ್ಯಾಟಿಂಗ್ ಆರಂಭ ಮಾಡಿದ್ದರು. ಆದರೆ, ಡಿ.ಕೆ ಶಿವಕುಮಾರ್‌ ಮಾತ್ರ ಜಿಸಿ‌ ಚಂದ್ರಶೇಖರ ಮುಂದುವರೆಸುವಂತೆ ಪಟ್ಟು ಹಿಡಿದಿದ್ದರು.

ಒಂದು ವೇಳೆ ಜಿಸಿ ಚಂದ್ರಶೇಖರ್ ಬದಲಾವಣೆ ಮಾಡಬೇಕು ಎಂದಾದರೆ ವಿನಯ್ ಕಾರ್ತಿಕ್ ಅವರಿಗೆ ಕೊಡಿ ಎಂದು ಡಿ.ಕೆ.ಶಿವಕುಮಾರ್‌ ಪಟ್ಟು ಹಿಡಿದಿದ್ದರು. ಅಂತಿಮವಾಗಿ ಜಿ.ಸಿ ಚಂದ್ರಶೇಖರ್‌ ಅವರಿಗೇ ಅವಕಾಶ ಸಿಕ್ಕಿದೆ.

ಇದನ್ನೂ ಓದಿ: ರಾಜಸ್ಥಾನದಿಂದ ರಾಜ್ಯಸಭೆ ಕಣಕ್ಕಿಳಿದ ಸೋನಿಯಾ ಗಾಂಧಿ; ರಾಯ್‌ಬರೇಲಿ ಯಾರಿಗೆ?

Exit mobile version