ಬೆಂಗಳೂರು: ಚಿತ್ರನಟ, ನಿರ್ದೇಶಕ ಮಾಸ್ಟರ್ ಆನಂದ್ (Master Anand) ಅವರಿಗೆ ನಿವೇಶನ ನೀಡುವುದಾಗಿ ನಂಬಿಸಿ 18.50 ಲಕ್ಷ ಪಡೆದು ವಂಚಿಸಲಾಗಿದೆ. ಈ ಕುರಿತು ರಿಯಲ್ ಎಸ್ಟೇಟ್ ಕಂಪನಿಯ ಮೇಲೆ ಮಾ. ಆನಂದ್ ದೂರು (fraud case) ದಾಖಲಿಸಿದ್ದಾರೆ.
70 ಲಕ್ಷ ರೂ. ಮೌಲ್ಯದ ಸೈಟ್ ಮಾರಾಟ ಮಾಡಿ 18.50 ಲಕ್ಷ ರೂ. ಮುಂಗಡ ಹಣವನ್ನು ಮಲ್ಟಿ ಲೀಪ್ ವೆಂಚರ್ಸ್ ಎಂಬ ಕಂಪನಿ ಪಡೆದಿತ್ತು. ಬಳಿಕ ಮಾಸ್ಟರ್ ಆನಂದ್‌ಗೆ ಆ ಸೈಟ್ ನೀಡದೆ ಬೇರೊಬ್ಬರಿಗೆ ಮಾರಾಟ ಮಾಡಿತ್ತು.
ಸೈಟ್‌ಗಾಗಿ ಅಡ್ವಾನ್ಸ್ ಪಡೆದು ಅಗ್ರಿಮೆಂಟ್ ಮಾಡಿಕೊಟ್ಟಿದ್ದ ಮಲ್ಟಿ ಲೀಪ್ ವೆಂಚರ್ಸ್ ಕಂಪನಿ, ಬಳಿಕ ಲೋನ್ ಮಾಡಿಸಿ ಕೊಡುವುದಾಗಿ ಸಬೂಬು ಹೇಳಿಕೊಂಡು ಬಂದಿತ್ತು. ಬಳಿಕ ಯಾವುದೇ ಮಾಹಿತಿ ನೀಡದೇ ಆನಂದ್‌ಗೆ ಮಾರಾಟ ಮಾಡಿದ್ದ ಸೈಟ್ ಅನ್ನು ಮತ್ತೊಬ್ಬರಿಗೆ ಮಾರಾಟ ಮಾಡಿತ್ತು. ಆ ಹಿನ್ನೆಲೆಯಲ್ಲಿ ಮಲ್ಟಿ ಲೀಪ್ ವೆಂಚರ್ಸ್‌ನ ಸಿಬ್ಬಂದಿ ಮನಿಕಾ ಸೇರಿ ಇತರರ ವಿರುದ್ಧ ದೂರು ದಾಖಲಿಸಲಾಗಿದೆ. ಚಂದ್ರಾ ಲೇಔಟ್ ಪೊಲೀಸ್ ಠಾಣೆಯಲ್ಲಿ ಮಾ.ಆನಂದ್ ಎಫ್‌ಐಆರ್ ದಾಖಲಿಸಿದ್ದಾರೆ.
ಇದನ್ನೂ ಓದಿ: ಮನೆ ಮಾಲೀಕನಿಂದ ಲಕ್ಷಾಂತರ ರೂ. ವಂಚನೆ; ಸೆಲ್ಫಿ ವಿಡಿಯೊ ಮಾಡಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ