ಬೆಂಗಳೂರು: ರೀಲ್ಸ್ ಮಾಡುತ್ತಾ ಮಾಡುತ್ತಾ ಪರಿಚಯವಾದವನ ಜತೆಗೆ ತನ್ನ ಪತ್ನಿ ಪರಾರಿಯಾಗಿದ್ದು, ಆಕೆಯನ್ನು ಹುಡುಕಿಕೊಡಿ ಎಂದು ಪತಿಯೊಬ್ಬರು ಪೊಲೀಸರಿಗೆ ದೂರು ನೀಡಿದ್ದಾರೆ.
ಮನೆಯಲ್ಲಿ ಕೂತು ಸದಾ ರೀಲ್ಸ್ ಮಾಡುತ್ತಿದ್ದ ಪತ್ನಿ, ಓಡಿಹೋಗುವಾಗ ತಮ್ಮ ಎರಡು ಮಕ್ಕಳಲ್ಲಿ ಒಬ್ಬ ಮಗನನ್ನೂ ಕರೆದೊಯ್ದಿದ್ದಾಳೆ ಎಂದು ಪತಿ ಅಲವತ್ತುಕೊಂಡಿದ್ದಾರೆ.
ನಮಿತಾ ಕುಮಾರಿ ಎಂಬ ಹೆಸರಿನ ಈಕೆಗೆ ಒಂಬತ್ತು ವರ್ಷದ ಹಿಂದೆ ಜೋಸೆಫ್ ಆಂತೋನಿ ಎಂಬವರ ಜೊತೆ ಮದುವೆಯಾಗಿತ್ತು. ದಂಪತಿಗೆ ಇಬ್ಬರು ಮಕ್ಕಳೂ ಇದ್ದಾರೆ. ಇತ್ತೀಚೆಗೆ ಸದಾ ಹಾಡುಗಳ ರೀಲ್ಸ್ ಮಾಡಿ ಮೊಬೈಲ್ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡುತ್ತಿದ್ದವಳಿಗೆ ಅದರ ಮೂಲಕವೇ ದೆಹಲಿ ಮೂಲದ ವ್ಯಕ್ತಿಯೊಬ್ಬನ ಪರಿಚಯ ಆಗಿತ್ತು. ಆರು ತಿಂಗಳ ಹಿಂದೆ ದೆಹಲಿಯ ದೀಪಕ್ ಮೆಹರಾ ಎಂಬಾತ ಆಕೆಯ ಗೆಳೆತನ ಬೆಳೆಸಿದ್ದ.
ಆತನೊಂದಿಗೆ ಆಕೆ ವಾಟ್ಸಪ್ ಕಾಲ್ ಕೂಡ ಮಾಡಿ ಮಾತನಾಡುತ್ತಿದ್ದಳು. ಒಮ್ಮೆ ದೆಹಲಿಯಿಂದ ನಗರಕ್ಕೆ ಬಂದು ನಮಿತಾಳನ್ನು ಆತ ಭೇಟಿಯಾಗಿದ್ದ. ಈ ವಿಚಾರ ಗೊತ್ತಾಗಿ ಮನೆಯಲ್ಲಿ ಜಗಳವಾಗಿತ್ತು. ಜೋಸೆಫ್ ಆಂತೋನಿ ಹಲವು ಬಾರಿ ಬುದ್ಧಿ ಹೇಳಿದ್ದರು. ಆದರೆ ಗೆಳೆಯನನ್ನು ಬಿಡಲೊಲ್ಲದ ನಮಿತಾ ಕೊನೆಗೆ ತನ್ನ ನಾಲ್ಕು ವರ್ಷದ ಮಗನನ್ನೂ ಕರೆದುಕೊಂಡು ಎಸ್ಕೇಪ್ ಆಗಿದ್ದಾಳೆ. ಹೋಗುವ ಮುನ್ನ ಮೊಬೈಲನ್ನು ನೀರಿನಲ್ಲಿ ಹಾಕಿ ಎಸ್ಕೇಪ್ ಆಗಿದ್ದಾಳೆ. ಪತ್ನಿಯನ್ನು ಹುಡುಕಿಕೊಡಿ ಎಂದು ಆಂತೋನಿ ಯಶವಂತಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಇದನ್ನೂ ಓದಿ: Illicit relationship: ಕೆಳಮನೆ ಪತ್ನಿ- ಮೇಲ್ಮನೆ ಗಂಡ ಪರಾರಿ ಪ್ರಕರಣ: ಮರಳಿ ಬಂದರೂ ಮನೆಗೆ ಬರಲಿಲ್ಲ!