Site icon Vistara News

Navodaya Vidyalaya: ಜು.16ರಂದು ಬೆಂಗಳೂರಿನಲ್ಲಿ ನವೋದಯ ಹಳೇ ವಿದ್ಯಾರ್ಥಿಗಳ ಸಭೆ

JAWAHAR NAVODAYA VIDYALAYA at BAGALUR

ಬೆಂಗಳೂರು: ಹೈದರಾಬಾದ್ ವಲಯದ ನವೋದಯ ವಿದ್ಯಾಲಯ ಸಮಿತಿ (Navodaya Vidyalaya) ವತಿಯಿಂದ ನಗರದ ಹೊರವಲಯದ ಬಾಗಲೂರಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಜುಲೈ 16ರಂದು ಬೆಳಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ʼಪ್ರಾದೇಶಿಕ ಹಳೆಯ ವಿದ್ಯಾರ್ಥಿಗಳ ಸಭೆ-2023ʼ (Regional Alumni Meet-2023) ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದಲ್ಲಿ ಕರ್ನಾಟಕ ಮಾತ್ರವಲ್ಲದೆ ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ಲಕ್ಷದ್ವೀಪ, ಪುದುಚೇರಿ
ಅಂಡಮಾನ್ ಮತ್ತು ನಿಕೋಬಾರ್​ನ 77ಕ್ಕೂ ಹೆಚ್ಚು ಶಾಲೆಗಳ ಸಾವಿರಾರು ಹಳೇ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.

ಹಳೇ ವಿದ್ಯಾರ್ಥಿ ವಿನಯ್‌ ಆಲಾಪ್‌ ಮಾತನಾಡಿ, ಭಾನುವಾರ ನಡೆಯಲಿರುವ ಹಳೆಯ ವಿದ್ಯಾರ್ಥಿಗಳ ಸಭೆಯಲ್ಲಿ 6 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ 72 ಜಿಲ್ಲೆಗಳ ಸುಮಾರು 6 ಸಾವಿರ ಹಳೆಯ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಇದೊಂದು ಬೃಹತ್‌ ಹಳೆಯ ವಿದ್ಯಾರ್ಥಿಗಳ ಸಭೆಯಾಗಿದೆ. ಇನ್ನು ಶಾಲೆಯಲ್ಲಿ ಓದಿದ ಬೆಂಗಳೂರು ಸುತ್ತಮುತ್ತಲಿನ ಹಳೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | Education Guide : ಎಲ್ಲರ ಶಿಕ್ಷಣಕ್ಕಾಗಿ ದೂರ ಶಿಕ್ಷಣ!

ಬಾಗಲೂರಿನ ನವೋದಯ ವಿದ್ಯಾಲಯ ಆವರಣದಲ್ಲಿ ಪ್ರಾದೇಶಿಕ ಹಳೆಯ ವಿದ್ಯಾರ್ಥಿಗಳ ಸಭೆಗಾಗಿ ಸಿದ್ಧತೆ.

ಮತ್ತೊಬ್ಬ ಹಳೇ ವಿದ್ಯಾರ್ಥಿ ದೊಡ್ಡಬಳ್ಳಾಪುರದ ಸೋಮೇಶ್‌ ನವೋದಯ ಪ್ರತಿಕ್ರಿಯಿಸಿ, ನವೋದಯ ವಿದ್ಯಾಲಯ ಕೇಂದ್ರ ಸರ್ಕಾರ ಅಧೀನದಲ್ಲಿರುವ ವಿದ್ಯಾಸಂಸ್ಥೆಯಾಗಿದೆ. ನಾವು ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪೂರೈಸಿ ಸುಮಾರು 25 ವರ್ಷಗಳೇ ಕಳೆದರೂ ಇಂದಿಗೂ ಆಗಾಗ ಸಂಸ್ಥೆಗೆ ಆಗಮಿಸಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡುತ್ತೇವೆ. ಸಂಸ್ಥೆಯ ಹಳೇ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಲೂ ಹಳೆ ವಿದ್ಯಾರ್ಥಿಗಳಿಂದ ಪ್ರತಿ ವರ್ಷ ಶಿಕ್ಷಕರಿಗೆ ಸನ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.

Exit mobile version