ನೋಟಿಸ್ ಬೋರ್ಡ
Navodaya Vidyalaya: ಜು.16ರಂದು ಬೆಂಗಳೂರಿನಲ್ಲಿ ನವೋದಯ ಹಳೇ ವಿದ್ಯಾರ್ಥಿಗಳ ಸಭೆ
Navodaya Vidyalaya: ಬೆಂಗಳೂರಿನ ಬಾಗಲೂರಿನ ನವೋದಯ ವಿದ್ಯಾಲಯದಲ್ಲಿ ಜುಲೈ 16ರಂದು ಬೆಳಗ್ಗೆ 9ಗಂಟೆಗೆ ʼಪ್ರಾದೇಶಿಕ ಹಳೆಯ ವಿದ್ಯಾರ್ಥಿಗಳ ಸಭೆ-2023ʼ ಆಯೋಜಿಸಲಾಗಿದೆ.
ಬೆಂಗಳೂರು: ಹೈದರಾಬಾದ್ ವಲಯದ ನವೋದಯ ವಿದ್ಯಾಲಯ ಸಮಿತಿ (Navodaya Vidyalaya) ವತಿಯಿಂದ ನಗರದ ಹೊರವಲಯದ ಬಾಗಲೂರಿನ ಜವಾಹರ್ ನವೋದಯ ವಿದ್ಯಾಲಯದಲ್ಲಿ ಜುಲೈ 16ರಂದು ಬೆಳಗ್ಗೆ 9ರಿಂದ ಸಂಜೆ 6 ಗಂಟೆವರೆಗೆ ʼಪ್ರಾದೇಶಿಕ ಹಳೆಯ ವಿದ್ಯಾರ್ಥಿಗಳ ಸಭೆ-2023ʼ (Regional Alumni Meet-2023) ಹಮ್ಮಿಕೊಳ್ಳಲಾಗಿದೆ.
ಕಾರ್ಯಕ್ರಮದಲ್ಲಿ ಕರ್ನಾಟಕ ಮಾತ್ರವಲ್ಲದೆ ಆಂಧ್ರ ಪ್ರದೇಶ, ತೆಲಂಗಾಣ, ಕೇರಳ, ಲಕ್ಷದ್ವೀಪ, ಪುದುಚೇರಿ
ಅಂಡಮಾನ್ ಮತ್ತು ನಿಕೋಬಾರ್ನ 77ಕ್ಕೂ ಹೆಚ್ಚು ಶಾಲೆಗಳ ಸಾವಿರಾರು ಹಳೇ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ.
ಹಳೇ ವಿದ್ಯಾರ್ಥಿ ವಿನಯ್ ಆಲಾಪ್ ಮಾತನಾಡಿ, ಭಾನುವಾರ ನಡೆಯಲಿರುವ ಹಳೆಯ ವಿದ್ಯಾರ್ಥಿಗಳ ಸಭೆಯಲ್ಲಿ 6 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ 72 ಜಿಲ್ಲೆಗಳ ಸುಮಾರು 6 ಸಾವಿರ ಹಳೆಯ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಇದೊಂದು ಬೃಹತ್ ಹಳೆಯ ವಿದ್ಯಾರ್ಥಿಗಳ ಸಭೆಯಾಗಿದೆ. ಇನ್ನು ಶಾಲೆಯಲ್ಲಿ ಓದಿದ ಬೆಂಗಳೂರು ಸುತ್ತಮುತ್ತಲಿನ ಹಳೆ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ | Education Guide : ಎಲ್ಲರ ಶಿಕ್ಷಣಕ್ಕಾಗಿ ದೂರ ಶಿಕ್ಷಣ!
ಮತ್ತೊಬ್ಬ ಹಳೇ ವಿದ್ಯಾರ್ಥಿ ದೊಡ್ಡಬಳ್ಳಾಪುರದ ಸೋಮೇಶ್ ನವೋದಯ ಪ್ರತಿಕ್ರಿಯಿಸಿ, ನವೋದಯ ವಿದ್ಯಾಲಯ ಕೇಂದ್ರ ಸರ್ಕಾರ ಅಧೀನದಲ್ಲಿರುವ ವಿದ್ಯಾಸಂಸ್ಥೆಯಾಗಿದೆ. ನಾವು ಸಂಸ್ಥೆಯಲ್ಲಿ ವಿದ್ಯಾಭ್ಯಾಸ ಪೂರೈಸಿ ಸುಮಾರು 25 ವರ್ಷಗಳೇ ಕಳೆದರೂ ಇಂದಿಗೂ ಆಗಾಗ ಸಂಸ್ಥೆಗೆ ಆಗಮಿಸಿ ವಿದ್ಯಾರ್ಥಿಗಳಿಗೆ ವೃತ್ತಿ ಮಾರ್ಗದರ್ಶನ ನೀಡುತ್ತೇವೆ. ಸಂಸ್ಥೆಯ ಹಳೇ ವಿದ್ಯಾರ್ಥಿಗಳು ಇಂದು ಉನ್ನತ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಈಗಲೂ ಹಳೆ ವಿದ್ಯಾರ್ಥಿಗಳಿಂದ ಪ್ರತಿ ವರ್ಷ ಶಿಕ್ಷಕರಿಗೆ ಸನ್ಮಾನ ಮಾಡುತ್ತೇವೆ ಎಂದು ಹೇಳಿದ್ದಾರೆ.
ಕರ್ನಾಟಕ
Dakshin Bharat Utsav: ಪ್ರವಾಸೋದ್ಯಮ ಉತ್ತೇಜಿಸಲು ಖಾಸಗಿ ವಲಯಕ್ಕೆ 550 ಸ್ಮಾರಕ ದತ್ತು: ಸಚಿವ ಎಚ್.ಕೆ. ಪಾಟೀಲ್
Dakshin Bharat Utsav: ರಾಜ್ಯದಲ್ಲಿ ಸುಮಾರು 550 ಸ್ಮಾರಕಗಳನ್ನು ಸಂರಕ್ಷಿಸಿ ಅಭಿವೃದ್ಧಿಪಡಿಸಲು ಸರ್ಕಾರ ಯೋಜನೆ ರೂಪಿಸಿದೆ. ಇಷ್ಟು ಸ್ಮಾರಕಗಳು ಖಾಸಗಿ ವಲಯಗಳಿಗೆ ದತ್ತು ಸ್ವೀಕಾರಕ್ಕೆ ಲಭ್ಯವಿದೆ ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದ್ದಾರೆ.
ಬೆಂಗಳೂರು: ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿಗೆ ಖಾಸಗಿ ವಲಯ ಉತ್ಸುಕವಾಗಿದ್ದು, ಖಾಸಗಿ ವಲಯದ ಈ ಸ್ವಯಂ ಪ್ರೇರಿತ ಆಸಕ್ತಿಯಿಂದಾಗಿ ಪ್ರವಾಸೋದ್ಯಮ ಕ್ಷೇತ್ರಕ್ಕೆ (Dakshin Bharat Utsav) 500 ಕೋಟಿ ರೂ.ಗೂ ಅಧಿಕ ಬಂಡವಾಳ ಹರಿದು ಬರಲಿದೆ ಎಂದು ಪ್ರವಾಸೋದ್ಯಮ, ಕಾನೂನು ಮತ್ತು ಸಂಸದೀಯ ಸಚಿವ ಎಚ್.ಕೆ. ಪಾಟೀಲ್ ತಿಳಿಸಿದರು.
ನಗರದಲ್ಲಿ ಡಿಸೆಂಬರ್ 14 ರಿಂದ 16 ರವರೆಗೆ ‘ದಕ್ಷಿಣ ಭಾರತ್ ಉತ್ಸವ’ ನಡೆಯುವ ಹಿನ್ನೆಲೆಯಲ್ಲಿ ಶುಕ್ರವಾರ ಆಯೋಜಿಸಿದ್ದ ಸಮಾವೇಶ ಪೂರ್ವ (ಕರ್ಟನ್ ರೈಸರ್) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಸುಮಾರು 550 ಸ್ಮಾರಕಗಳನ್ನು ರಕ್ಷಿಸಲು, ಸಂರಕ್ಷಿಸಿ ಅಭಿವೃದ್ಧಿಪಡಿಸಲು ಸರ್ಕಾರ ಯೋಜನೆಯನ್ನು ರೂಪಿಸಿದೆ. ಇಷ್ಟು ಸ್ಮಾರಕಗಳು ಖಾಸಗಿ ವಲಯಗಳಿಗೆ ದತ್ತು ಸ್ವೀಕಾರಕ್ಕೆ ಲಭ್ಯವಿದೆ ಎಂದು ತಿಳಿಸಿದರು.
ದತ್ತು ನೀಡುವ ಸ್ಮಾರಕಗಳು, ದೇವಾಲಯಗಳು, ಚರ್ಚ್‌ಗಳು, ಮಸೀದಿಗಳು ಮತ್ತು ಇತರ ಪಾರಂಪರಿಕ ಸ್ಥಳಗಳಾಗಿರಬಹುದು, ಅವುಗಳನ್ನು ಪ್ರವಾಸೋದ್ಯಮಕ್ಕೆ ತೆರೆಯಲಾಗುವುದು. ಈ ಮೂಲಕ ರಾಜ್ಯದಲ್ಲಿ ಹೂಡಿಕೆ ಮತ್ತು ಉದ್ಯೋಗ ಸೃಷ್ಟಿ ಅವಕಾಶಗಳು ಹೆಚ್ಚು ಸೃಷ್ಟಿಯಾಗುತ್ತವೆ. ಈ ವಿನೂತನ ಕಾರ್ಯಕ್ರಮವನ್ನು ಸೆಪ್ಟೆಂಬರ್ 25 ರಂದು ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಇದನ್ನೂ ಓದಿ | Sub Registrar Office: ಸಬ್ ರಿಜಿಸ್ಟ್ರಾರ್ ಕಚೇರಿ ಅವಧಿ ವಿಸ್ತರಣೆ; ಸೆ.30ವರೆಗೆ ಮಾತ್ರ ಅನ್ವಯ
ರಾಜ್ಯದಲ್ಲಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಸ್ವಯಂಪ್ರೇರಣೆಯಿಂದ ಹೂಡಿಕೆ ಮಾಡುವ ಖಾಸಗಿ ವಲಯದ ನಿರ್ಧಾರವನ್ನು ಶ್ಲಾಘಿಸಿದ ಸಚಿವರು, ಇದರ ಹಿಂದೆ ಲಾಭದ ಉದ್ದೇಶವಿಲ್ಲ, ಪ್ರವಾಸಿಗರ ಆಕರ್ಷಣೆ ಮತ್ತು ಆ ಮೂಲಕ ಜಗತ್ತಿಗೆ ಕರ್ನಾಟಕವನ್ನು ಪರಿಚಯಿಸುವ ಮಹತ್ವದ ಕಾರ್ಯ ಆಗಲಿದೆ ಎಂದು ಪ್ರತಿಪಾದಿಸಿದರು.
ಪ್ರಸ್ತುತ ರಾಜ್ಯವು ಯುನೆಸ್ಕೋದಿಂದ ಮಾನ್ಯತೆ ಪಡೆದಿರುವ ನಾಲ್ಕು ಪಾರಂಪರಿಕ ತಾಣಗಳನ್ನು ಹೊಂದಿದ್ದು, ಮುಂದಿನ ದಿನಗಳಲ್ಲಿ ಅವುಗಳಿಗೆ ಭೇಟಿ ನೀಡುವವರ ಸಂಖ್ಯೆ ಹೆಚ್ಚಾಗಲಿದೆ. ಯುನೆಸ್ಕೋ ಈ ವರ್ಷ ಗುರುತಿಸಿರುವ ನಾಲ್ಕನೇ ತಾಣವೆಂದರೆ ಹೊಯ್ಸಳರ ಬೇಲೂರು, ಹಳೇಬೀಡು ಮತ್ತು ಸೋಮನಾಥಪುರದ ದೇಗುಲಗಳು. ಈ ಹಿಂದೆ ಹಂಪಿ, ಪಟ್ಟದಕಲ್ಲು ಮತ್ತು ಪಶ್ಚಿಮ ಘಟ್ಟಗಳನ್ನು ಯುನೆಸ್ಕೊ ವಿಶ್ವ ಪಾರಂಪರಿಕ ತಾಣಗಳಲ್ಲಿ ಗುರುತಿಸಿತ್ತು ಎಂದ ಸಚಿವರು, ರಾಜ್ಯ ಸರ್ಕಾರದ ʼಶಕ್ತಿʼ ಯೋಜನೆ ಯಶಸ್ಸಿನ ಪರಿಣಾಮ ಪ್ರವಾಸಿ ಕೇಂದ್ರಗಳು ಮತ್ತು ದೇಗುಲಗಳಿಗೆ ಹೆಚ್ಚಿನ ಸಾರ್ವಜನಿಕರು ಭೇಟಿ ನೀಡುವಂತೆ ಆಗಿದೆ ಎಂದು ತಿಳಿಸಿದರು.
ಸವದತ್ತಿ ದೇವಸ್ಥಾನವು ವಾರ್ಷಿಕವಾಗಿ 1.25 ಕೋಟಿಗೂ ಅಧಿಕ ಪ್ರವಾಸಿಗರನ್ನು ಆಕರ್ಷಿಸಿದೆ. ಕರ್ನಾಟಕವು ಸಾಂಸ್ಕೃತಿಕ ಪರಂಪರೆ, ಮನೋಹರ ಪರಿಸರ ಪ್ರೇಕ್ಷಣೀಯ ಸ್ಥಳಗಳು, ಸಾಹಸ ಅನ್ವೇಷಣೆ ಕೇಂದ್ರಗಳು, ಸಮುದ್ರ ಸಾಗರ ಪ್ರವಾಸೋದ್ಯಮ, ತೀರ್ಥಕ್ಷೇತ್ರ ಹೀಗೆ ವಿವಿಧ ಪ್ರವಾಸೋದ್ಯಮ ಮಾರ್ಗಗಳನ್ನು ಹೊಂದಿದ್ದು, ಈ ಅಂಶಗಳು ರಾಜ್ಯ ಪ್ರವಾಸೋದ್ಯಮ ಕ್ಷೇತ್ರದ ಅಭಿವೃದ್ಧಿಗೆ ಸಹಕಾರಿಯಾಗಿವೆ ಎಂದರು.
ಪ್ರವಾಸೋದ್ಯಮ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಕಪಿಲ್ ಮೋಹನ್ ಅವರು ಮಾತನಾಡಿ, ‘ದಕ್ಷಿಣ ಭಾರತ ಉತ್ಸವದ ಪರಿಕಲ್ಪನೆಯನ್ನು ಸ್ವಾಗತಿಸುವುದಾಗಿ ತಿಳಿಸಿ, ಒಟ್ಟಾರೆ ಪ್ರವಾಸೋದ್ಯಮವನ್ನು ಉತ್ತೇಜಿಸಲು ದಕ್ಷಿಣ ಭಾರತದ ರಾಜ್ಯಗಳು ಒಗ್ಗೂಡುವ ಅಗತ್ಯವಿದೆ ಎಂದು ಹೇಳಿದರು.
ಇದನ್ನೂ ಓದಿ | Power Generation: ರಾಜ್ಯದ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಕುಸಿದಿರುವುದು ಏಕೆ: ಅಧಿಕಾರಿಗಳಿಗೆ ಸಿಎಂ ಪ್ರಶ್ನೆ
“ನಾವು ಒಟ್ಟಿಗೆ ಕೆಲಸ ಮಾಡಿ, ತಡೆರಹಿತ ಏಕೀಕೃತ ಪ್ರವಾಸೋದ್ಯಮ ಮತ್ತು ಪ್ರಯಾಣ ಉದ್ಯಮವನ್ನು ತರೋಣ.” ಪಶ್ಚಿಮ ಘಟ್ಟಗಳು, ರಾಜ್ಯಗಳಲ್ಲಿ ವ್ಯಾಪಿಸಿರುವ ದಕ್ಷಿಣ ಪ್ರಸ್ಥಭೂಮಿ ಮತ್ತು ಅನೇಕ ಪಾರಂಪರಿಕ ತಾಣಗಳು ಪ್ರವಾಸೋದ್ಯಮ ಸ್ನೇಹಿ ಯೋಜನೆಗಳಿಗೆ ಹೇಗೆ ಸಾಮರ್ಥ್ಯವನ್ನು ಹೊಂದಿವೆ ಎಂಬುದನ್ನು ಉಲ್ಲೇಖಿಸಿ ಅವರು ವಿವರಿಸಿದರು.
ಸ್ವಾಗತ ಭಾಷಣ ಮಾಡಿದ ಎಫ್‌ಕೆಸಿಸಿಐ ಅಧ್ಯಕ್ಷ ಬಿ.ವಿ.ಗೋಪಾಲ್ ರೆಡ್ಡಿ, ಡಿಸೆಂಬರ್ 14 ರಿಂದ 16 ರವರೆಗೆ ಬೆಂಗಳೂರು ಅರಮನೆ ಮೈದಾನದಲ್ಲಿ ಆಯೋಜಿರುವ ‘ದಕ್ಷಿಣ ಭಾರತ ಉತ್ಸವ’ವು ದಕ್ಷಿಣ ಭಾರತದ ಶ್ರೀಮಂತ ಸಾಂಸ್ಕೃತಿಕ, ಐತಿಹಾಸಿಕ ಪರಂಪರೆಯನ್ನು ಪ್ರದರ್ಶಿಸುತ್ತದೆ. ಪ್ರವಾಸೋದ್ಯಮದಲ್ಲಿ ಮುಕ್ತ ಹೂಡಿಕೆ ಅವಕಾಶಗಳನ್ನು ನೀಡುತ್ತದೆ. ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಕೇರಳ ಮತ್ತು ಪುದುಚೇರಿ ದಕ್ಷಿಣ ರಾಜ್ಯಗಳಲ್ಲಿ ಪ್ರವಾಸೋದ್ಯಮ ಸಂಬಂಧಿತ ಚಟುವಟಿಕೆಗಳಲ್ಲಿ ಹೂಡಿಕೆ ಮಾಡಲು ಈ ‘ಉತ್ಸವʼ ಸಣ್ಣ ಮತ್ತು ಮಧ್ಯಮ ಉದ್ಯಮಗಳಿಗೆ ವೇದಿಕೆಯಾಗಿದೆ, ಹೀಗಾಗಿ ಇದರಿಂದ ರಾಜ್ಯಗಳಿಗೆ ಆದಾಯವನ್ನು ತರುವುದಲ್ಲದೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಬಲ್ಲದು ಎಂದರು.
ಈ ಶೃಂಗಸಭೆಗೆ ಆತಿಥ್ಯ ವಹಿಸಲಿರುವ ಕರ್ನಾಟಕವು ಅನೇಕ ಪಾರಂಪರಿಕ ತಾಣಗಳನ್ನು ಹೊಂದಿದ್ದು, ಸ್ಮಾರಕಗಳಿಗೆ ಧಕ್ಕೆಯಾಗದಂತೆ ಪ್ರವಾಸಿ ಸ್ಥಳಗಳಾಗಿ ಅಭಿವೃದ್ಧಿಪಡಿಸಬಹುದು ಎಂದ ಅವರು, ಕರ್ನಾಟಕ ರಾಜ್ಯವು ಯುನೆಸ್ಕೋ ವಿಶ್ವ ಪರಂಪರೆಯ ತಾಣಗಳನ್ನು, 600 ಭಾರತದ ಪುರಾತತ್ವ ಸಮೀಕ್ಷೆ(ASI) ಸಂರಕ್ಷಿತ ಸ್ಮಾರಕಗಳು ಮತ್ತು 800 ರಾಜ್ಯ ಸಂರಕ್ಷಿತ ಸ್ಮಾರಕಗಳ ವೈಶಿಷ್ಟ್ಯತೆಯನ್ನು ಹೊಂದಿರುವುದು ರಾಜ್ಯದ ಹಿರಿಮೆ ಹೆಚ್ಚಿಸಿದೆ ಎಂದರು.
ಇದನ್ನೂ ಓದಿ | Mysore Dasara 2023: ಬರ ಹಿನ್ನೆಲೆ ಸರಳವಾಗಿ ದಸರಾ ಆಚರಿಸಲು ರಾಜ್ಯ ಸರ್ಕಾರ ನಿರ್ಧಾರ
ಎಫ್‌ಕೆಸಿಸಿಐ ಪ್ರವಾಸೋದ್ಯಮ ಸಮಿತಿಯ ಅಧ್ಯಕ್ಷ ಜಿ.ಕೆ.ಶೆಟ್ಟಿ ಅವರು ಮಾತನಾಡಿ, ದಕ್ಷಿಣ ರಾಜ್ಯಗಳಲ್ಲಿ ‘ದಕ್ಷಿಣ ಭಾರತ ಉತ್ಸವವನ್ನು ಸರದಿಯ ಆಧಾರದ ಮೇಲೆ ನಡೆಸಲಾಗುವುದು. ದಕ್ಷಿಣ ಭಾರತದಲ್ಲಿ ಪ್ರವಾಸೋದ್ಯಮವನ್ನು ಸುಧಾರಿಸಲು ಎಫ್‌ಕೆಸಿಸಿಐ ಸಕ್ರಿಯವಾಗಿ ಭಾಗವಹಿಸುತ್ತದೆ. ದಕ್ಷಿಣದ ರಾಜ್ಯಗಳ ನಡುವಿನ ಸಂಪರ್ಕವನ್ನು ಸುಧಾರಿಸುವ ಮೂಲಕ, ಪ್ರವಾಸಿಗರ ಸಂಚಾರವನ್ನು ಹೆಚ್ಚಿಸುತ್ತದೆ, ಉದ್ಯೋಗಾವಕಾಶಗಳನ್ನು ಸೃಷ್ಟಿಸುತ್ತದೆ ಮತ್ತು ವಿದೇಶಿ ವಿನಿಮಯವನ್ನು ತರುತ್ತದೆ ಎಂದು ವಿವರಿಸಿದರು.
ರಾಜ್ಯದ ಹೊಯ್ಸಳರ ಮೂರು ದೇಗುಲಗಳು ಯೂನೆಸ್ಕೋದ ವಿಶ್ವ ಪಾರಂಪರಿಕ ತಾಣ ಪಟ್ಟಿಗೆ ಸೇರ್ಪಡೆಗೋಂಡಿರುವುದು ರಾಜ್ಯದ ಪ್ರವಾಸೋದ್ಯಮ ಕ್ಷೇತ್ರವನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯಲಿದೆ. ಇದರಿಂದ ರಾಜ್ಯವು ಹೆಚ್ಚಿನ ಪ್ರವಾಸಿಗರನ್ನು ಆಕರ್ಷಿಸಲಿದೆ. ಹೀಗಾಗಿ 550 ಸ್ಮಾರಕಗಳನ್ನು ದತ್ತು ನೀಡುವ ಮೂಲಕ ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿಗೆ ಚಿಂತನೆ ನಡೆಸಲಾಗಿದೆ. ಆ ಮೂಲಕ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಬಂಡವಾಳ ಆಕರ್ಷಣೆ ಮತ್ತು ಉದ್ಯೋಗ ಸೃಷ್ಟಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಮುಂದಡಿ ಇರಿಸಿದೆ
| ಎಚ್.ಕೆ. ಪಾಟೀಲ್, ಪ್ರವಾಸೋದ್ಯಮ ಸಚಿವರು
ಕ್ರೀಡೆ
Isha Gramotsavam: ಸೆ.23ರಂದು ಕೊಯಮತ್ತೂರಿನಲ್ಲಿ ʼಈಶ ಗ್ರಾಮೋತ್ಸವʼದ ಫೈನಲ್ಸ್
Isha Gramotsavam: ಈಶ ಗ್ರಾಮೋತ್ಸವದ 15ನೇ ಆವೃತ್ತಿಯಲ್ಲಿ 194 ಗ್ರಾಮೀಣ ಸ್ಥಳಗಳಲ್ಲಿ ಕ್ಲಸ್ಟರ್ ಮತ್ತು ವಿಭಾಗೀಯ ಮಟ್ಟದ ಸ್ಪರ್ಧೆಗಳನ್ನು ನಡೆಸಿದ್ದು, ದಕ್ಷಿಣ ಭಾರತದ ಐದು ರಾಜ್ಯಗಳಿಂದ 60,000ಕ್ಕೂ ಹೆಚ್ಚು ಆಟಗಾರರು ಭಾಗವಹಿಸಿದ್ದಾರೆ. ಫೈನಲ್ಸ್ ಪಂದ್ಯಗಳು ಕೊಯಮತ್ತೂರಿನಲ್ಲಿ ಸೆ.23ರಂದು ನಡೆಯಲಿವೆ.
ಕೊಯಮತ್ತೂರು: ಈಶ ಫೌಂಡೇಶನ್‌ನಿಂದ ಆಯೋಜಿರುವ ಈಶ ಗ್ರಾಮೋತ್ಸವ (Isha Gramotsavam) ಭಾರತದ ಗ್ರಾಮೀಣ ಕ್ರೀಡೆಗಳನ್ನು ವಿಶ್ವಕ್ಕೆ ಪರಿಚಯಿಸಿದೆ. ಈಶ ಗ್ರಾಮೋತ್ಸವ ಅಂತಿಮ ಹಂತಕ್ಕೆ ತಲುಪಿದ್ದು, ಗ್ರಾಮೀಣ ಭಾರತದ ಅತಿದೊಡ್ಡ ಕ್ರೀಡಾಕೂಟದ ಫೈನಲ್ಸ್ ಪಂದ್ಯಗಳನ್ನು ಸೆ.23ರಂದು ತಮಿಳುನಾಡಿನ ಕೊಯಮತ್ತೂರಿನ 112 ಅಡಿ ಎತ್ತರದ ಆದಿಯೋಗಿ ಪ್ರತಿಮೆ ಬಳಿ ಆಯೋಜಿಸಲಾಗಿದೆ.
ಸದ್ಗುರು ಜಗ್ಗಿ ವಾಸುದೇವ್ ಅವರ ಸಾಮಾಜಿಕ ಉಪಕ್ರಮವಾದ ಈಶ ಗ್ರಾಮೋತ್ಸವವು, ಗ್ರಾಮೀಣ ಜನರ ಜೀವನದಲ್ಲಿ ಕ್ರೀಡೋತ್ಸಾಹ ಮತ್ತು ವಿನೋದಶೀಲತೆಯನ್ನು ತರುವ ಗುರಿಯನ್ನು ಹೊಂದಿದ್ದು, ಸೆಪ್ಟೆಂಬರ್ 23 ರಂದು ಕೊಯಮತ್ತೂರಿನಲ್ಲಿ ನಡೆಯುವ ಫೈನಲ್‌ನಲ್ಲಿ ಸದ್ಗುರು ಜಗ್ಗಿ ವಾಸುದೇವ್ ಅವರ ಜತೆ ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವ ಅನುರಾಗ್ ಠಾಕೂರ್ ಅವರು ಭಾಗವಹಿಸಿ ಭಾರತದ ಗ್ರಾಮೀಣ ಕ್ರೀಡಾ ಕೌಶಲದ ಪ್ರದರ್ಶನಕ್ಕೆ ಸಾಕ್ಷಿಯಾಗಲಿದ್ದಾರೆ.
ಗ್ರಾಮೀಣ ಜನರು ಒಟ್ಟಾಗಿ ಸೇರಲು, ಭಾಗವಹಿಸಲು ಮತ್ತು ಅವರ ಜೀವನದಲ್ಲಿ ಕ್ರೀಡೋತ್ಸಾಹ ಮತ್ತು ವಿನೋದಶೀಲತೆಯನ್ನು ತರಲು ಈಶ ಗ್ರಾಮೋತ್ಸವ ಆಯೋಜಿಸಲಾಗಿದೆ. ಆದ್ದರಿಂದ ಇದರಲ್ಲಿ ವೃತ್ತಿಪರರಿಗೆ ಭಾಗವಹಿಸಲು ಅವಕಾಶವಿಲ್ಲ. ದಕ್ಷಿಣ ಭಾರತದ 5 ರಾಜ್ಯಗಳು ಮತ್ತು 1 ಕೇಂದ್ರಾಡಳಿತ ಪ್ರದೇಶದಿಂದ 60,000ಕ್ಕೂ ಹೆಚ್ಚು ಆಟಗಾರರು ಈಶ ಗ್ರಾಮೋತ್ಸವದಲ್ಲಿ ಭಾಗವಹಿಸಿದ್ದರು.
ಈಶ ಗ್ರಾಮೋತ್ಸವದ 15ನೇ ಆವೃತ್ತಿಯು, 194 ಗ್ರಾಮೀಣ ಸ್ಥಳಗಳಲ್ಲಿ ಕ್ಲಸ್ಟರ್ ಮತ್ತು ವಿಭಾಗೀಯ ಮಟ್ಟದ ಸ್ಪರ್ಧೆಗಳನ್ನು ನಡೆಸುವ ಮೂಲಕ, ದಕ್ಷಿಣ ಭಾರತದ ಐದು ರಾಜ್ಯಗಳಿಂದ (ಕರ್ನಾಟಕ, ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶ ಮತ್ತು ಪುದುಚೇರಿ) 60,000ಕ್ಕೂ ಹೆಚ್ಚು ಆಟಗಾರರ ಭಾಗವಹಿಸುವಿಕೆಗೆ ಸಾಕ್ಷಿಯಾಗಿದೆ. 10,000ಕ್ಕೂ ಹೆಚ್ಚು ಗ್ರಾಮೀಣ ಮಹಿಳೆಯರು – ಬಹುತೇಕ ಗೃಹಿಣಿಯರು ಕಬಡ್ಡಿ ಮತ್ತು ಥ್ರೋಬಾಲ್ನಂತಹ ಆಟಗಳಲ್ಲಿ ಭಾಗವಹಿಸಿದ್ದಾರೆ. ಈ ಮೂಲಕ ಈಶ ಗ್ರಾಮೋತ್ಸವವು ಭಾರತದ ಗ್ರಾಮೀಣ ಮಹಿಳೆಯರನ್ನು ಸಬಲೀಕರಣಗೊಳಿಸುವ ಒಂದು ಶಾಂತ ಕ್ರಾಂತಿಗೆ ಸಾಕ್ಷಿಯಾಗಿದೆ.
In the heart of rural southern India, Isha Gramotsavam has emerged as a powerful catalyst for transformation. Isha Foundation's tireless efforts are turning desolate villages, formerly plagued by addiction and despair, into thriving spaces of joy, unearthing latent talents and… pic.twitter.com/KJV2cy1jhw
— Isha Foundation (@ishafoundation) September 12, 2023
ಈಶ ಗ್ರಾಮೋತ್ಸವದ ಹಿಂದಿನ ಸಂಭ್ರಮದ ಮನೋಭಾವದ ಬಗ್ಗೆ ಸದ್ಗುರು ಜಗ್ಗಿ ವಾಸುದೇವ್ ಅವರು ಪ್ರತಿಕ್ರಿಯಿಸಿ, “ಈಶ ಗ್ರಾಮೋತ್ಸವವು ಕ್ರೀಡೆಯ ಮೂಲಕ ಆಚರಿಸುವ ಒಂದು ಜೀವನದ ಆಚರಣೆಯಾಗಿದೆ. ಒಂದು ಆಟವು ಎಲ್ಲಾ ಸಾಮಾಜಿಕ ಭಿನ್ನತೆಗಳನ್ನು ಮೀರಿ ಜನರನ್ನು ಒಂದುಗೂಡಿಸಬಹುದು; ಇದು ಕ್ರೀಡೆಯ ಶಕ್ತಿಯಾಗಿದೆ – ಇದು ಆಚರಣೆಯ ಉತ್ಸಾಹದ ಮೂಲಕ ಜಾತಿ, ಧರ್ಮ ಮತ್ತು ಇತರ ಗುರುತುಗಳನ್ನು ಅಳಿಸಬಹುದು” ಎಂದು ತಿಳಿಸಿದ್ದಾರೆ.
“ಇದು ಸ್ಪರ್ಧಾತ್ಮಕ ಕ್ರೀಡಾಪಟುವಾಗುವುದರ ಬಗ್ಗೆ ಅಲ್ಲ, ಜೀವನಕ್ಕಾಗಿ ವಿನೋದಶೀಲರಾಗುವುದರ ಬಗ್ಗೆ. ನೀವು ಸಂಪೂರ್ಣ ಭಾಗವಹಿಸುವಿಕೆ ಮತ್ತು ಒಳಗೊಳ್ಳುವಿಕೆಯೊಂದಿಗೆ ಚೆಂಡನ್ನು ಎಸೆಯಲು ಸಾಧ್ಯವಾದರೆ, ಒಂದು ಚೆಂಡು ಜಗತ್ತನ್ನು ಬದಲಾಯಿಸಬಹುದು. ಸಂಪೂರ್ಣ ಒಳಗೊಳ್ಳುವಿಕೆಯಿಂದ ಆಡುವ ಸಂತೋಷವನ್ನು ನೀವು ತಿಳಿದುಕೊಳ್ಳುವಂತಾಗಲಿ” ಎಂದು ಅವರು ತಮ್ಮ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ.
ವಿಜೇತ ತಂಡಗಳಿಗೆ ಬೃಹತ್ ಬಹುಮಾನ
2004ರಿಂದ ನಡೆಸಿಕೊಂಡು ಬರುತ್ತಿರುವ ಈಶ ಗ್ರಾಮೋತ್ಸವದಲ್ಲಿ ಈ ವರ್ಷ, ಪುರುಷರಿಗೆ ವಾಲಿಬಾಲ್, ಮಹಿಳೆಯರಿಗೆ ಥ್ರೋಬಾಲ್ ಮತ್ತು ತಮಿಳುನಾಡಿನೊಂದಿಗೆ ಗ್ರಾಮೀಣ ಆಟಗಳನ್ನು ಮತ್ತು ಹೆಚ್ಚುವರಿಯಾಗಿ ಪುರುಷರು ಮತ್ತು ಮಹಿಳೆಯರಿಗಾಗಿ ಕಬಡ್ಡಿಯನ್ನು ಒಳಗೂಡಿಸಲಾಗಿದೆ. ವಾಲಿಬಾಲ್ ಮತ್ತು ಥ್ರೋಬಾಲ್ ವಿಜೇತರು ಕ್ರಮವಾಗಿ 5 ಲಕ್ಷ ಮತ್ತು 2 ಲಕ್ಷ ಮತ್ತು ಕಬಡ್ಡಿಯಲ್ಲಿ ವಿಜೇತರಾದ ಪುರುಷ ಮತ್ತು ಮಹಿಳಾ ತಂಡಗಳು ಕ್ರಮವಾಗಿ 5 ಲಕ್ಷ ಮತ್ತು 2 ಲಕ್ಷ ರೂಪಾಯಿ ಬಹುಮಾನವನ್ನು ಪಡೆಯುತ್ತವೆ. ಸ್ಪರ್ಧಾತ್ಮಕ ಆಟಗಾರರು 55 ಲಕ್ಷ ಮೌಲ್ಯದ ಬೃಹತ್ ಬಹುಮಾನದ ಮೊತ್ತದಿಂದ ಗೆಲ್ಲುವ ಅವಕಾಶವನ್ನೂ ಹೊಂದಿದ್ದಾರೆ.
ಈಶ ಗ್ರಾಮೋತ್ಸವದ ಸಂಘಟನಾ ತಂಡದ ಭಾಗವಾದ ಸ್ವಾಮಿ ನಕುಜ ಪ್ರತಿಕ್ರಿಯಿಸಿ, “ಈಶ ಗ್ರಾಮೋತ್ಸವದ ಒಂದು ವಿಶೇಷ ಅಂಶವೆಂದರೆ ತಂಡದ ಎಲ್ಲಾ ಆಟಗಾರರು ಒಂದೇ ಗ್ರಾಮದವರು. ಇದು ವೃತ್ತಿಪರ ಆಟಗಾರರ ಪಂದ್ಯಾವಳಿಯಲ್ಲ ಆದರೆ, ಪ್ರತಿಯೊಬ್ಬರನ್ನು ಆಡಲು ಪ್ರೋತ್ಸಾಹಿಸುವ ವೇದಿಕೆಯಾಗಿದೆ. ಪ್ರತಿಯೊಬ್ಬರನ್ನೂ ಯಾವುದಾದರೊಂದು ಆಟದಲ್ಲಿ ತೊಡಗಿಸಿಕೊಳ್ಳಲು ಪ್ರೋತ್ಸಾಹಿಸುವುದರಿಂದ ಹಿಡಿದು, ಗ್ರಾಮೀಣ ಆಟಗಳ ಮೋಜನ್ನು ಪುನರುಜ್ಜೀವನಗೊಳಿಸುವುದು ಮತ್ತು ನಶಿಸುತ್ತಿರುವ ಸಾಂಪ್ರದಾಯಿಕ ಕಲಾ ಪ್ರಕಾರಗಳನ್ನು ಪುನರುಜ್ಜೀವನಗೊಳಿಸುವವರೆಗೆ, ಈ ಸಂಪೂರ್ಣ ಉಪಕ್ರಮವನ್ನು ಎಚ್ಚರಿಕೆಯಿಂದ ರಚಿಸಲಾಗಿದೆ. ಇದರಿಂದಾಗಿ ಇಡೀ ಹಳ್ಳಿಯು ಒಂದು ಸಂಭ್ರಮಾಚರಣೆಯಾಗಿ ಒಟ್ಟುಗೂಡುತ್ತದೆ ಮತ್ತು ಗ್ರಾಮೀಣ ಜೀವನದ ಹುರುಪನ್ನು ಮರಳಿ ತರುತ್ತದೆ.” ಎಂದು ಹೇಳಿದ್ದಾರೆ.
ಈಶ ಔಟ್ರೀಚ್‌ನಿಂದ ಆಯೋಜನೆ
ಈಶ ಗ್ರಾಮೋತ್ಸವದ ಹಿಂದಿನ ಆವೃತ್ತಿಗಳು, 8,412 ತಂಡಗಳು ಮತ್ತು ಒಟ್ಟು 1,00,167 ಆಟಗಾರರ ಭಾಗವಹಿಸುವಿಕೆಗೆ ಸಾಕ್ಷಿಯಾಗಿವೆ. ಈಶ ಗ್ರಾಮೋತ್ಸವವನ್ನು ಆಯೋಜಿಸುತ್ತಿರುವ “ಈಶ ಔಟ್ರೀಚ್”, ಕ್ರೀಡೆ ಮತ್ತು ಯುವ ವ್ಯವಹಾರಗಳ ಸಚಿವಾಲಯದಿಂದ, ರಾಷ್ಟ್ರೀಯ ಕ್ರೀಡಾ ಪ್ರಚಾರ ಸಂಸ್ಥೆ (NSPO) ಎಂದು ಗುರುತಿಸಲ್ಪಟ್ಟಿದೆ. ಈಶ ಔಟ್ರೀಚ್ 2018 ರಲ್ಲಿ, ಕ್ರೀಡಾ ಅಭಿವೃದ್ಧಿಗಾಗಿ ರಾಷ್ಟ್ರಪತಿಗಳಿಂದ “ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ್” ಪ್ರಶಸ್ತಿಯನ್ನು ಪಡೆದುಕೊಂಡಿದೆ.
ಇದನ್ನೂ ಓದಿ | Asian Games 2023 : ಏಷ್ಯನ್ ಗೇಮ್ಸ್ನ ಮೊದಲ ಪಂದ್ಯದಲ್ಲಿಯೇ ದಾಖಲೆ ಬರೆದ ಭಾರತ ಮಹಿಳಾ ಕ್ರಿಕೆಟ್ ತಂಡ
ಕ್ರಿಕೆಟ್ ದಂತಕಥೆ ಸಚಿನ್ ತೆಂಡೂಲ್ಕರ್, ಒಲಿಂಪಿಕ್ ಪದಕ ವಿಜೇತರಾದ ರಾಜವರ್ಧನ್ ಸಿಂಗ್ ರಾಥೋಡ್ ಮತ್ತು ಕರ್ಣಂ ಮಲ್ಲೇಶ್ವರಿ ಅವರಂತಹ ಕ್ರೀಡಾ ಗಣ್ಯರು ಈ ಹಿಂದೆ ಕ್ರೀಡಾ ಉತ್ಸವದ ಫೈನಲ್‌ನಲ್ಲಿ ವಿಶೇಷ ಅತಿಥಿಗಳಾಗಿ ಭಾಗವಹಿಸಿದ್ದರು. ಮಿಥಾಲಿ ರಾಜ್, ಪಿವಿ ಸಿಂಧು, ವೀರೇಂದ್ರ ಸೆಹ್ವಾಗ್, ಶಿಖರ್ ಧವನ್ ಈಶ ಗ್ರಾಮೋತ್ಸವಕ್ಕೆ ಬೆಂಬಲ ನೀಡಿದ್ದಾರೆ.
ಕರ್ನಾಟಕ
Transport Strike: ಅ.5ಕ್ಕೆ ಸಾರಿಗೆ ನೌಕರರ ಪ್ರತಿಭಟನೆ; ವಿವಿಧ ಬೇಡಿಕೆ ಈಡೇರಿಸಲು ಆಗ್ರಹ
Transport Strike: ರಾಜ್ಯ ಸಾರಿಗೆ ನಿಗಮಗಳ ನೌಕರರ ಒಕ್ಕೂಟದಿಂದ ಅ.5ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ನಡೆಯಲಿದೆ.
ಬೆಂಗಳೂರು: ಸೇವೆಯಿಂದ ವಜಾ ಆಗಿರುವ ಸಿಬ್ಬಂದಿಗೆ ನ್ಯಾಯ ಒದಗಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮತ್ತೊಮ್ಮೆ ಪ್ರತಿಭಟನೆ ನಡೆಸಲು ಸಾರಿಗೆ ನೌಕರರು ಮುಂದಾಗಿದ್ದಾರೆ. ಈ ಹಿಂದಿನ ಸರ್ಕಾರ ನೌಕರರಿಗೆ ಭರವಸೆ ನೀಡಿ ಕೈತೊಳೆದುಕೊಂಡಿದೆ, ಹೀಗಾಗಿ ಹಾಲಿ ಸರ್ಕಾರ ನೌಕರರ ಸಮಸ್ಯೆಗಳನ್ನು ಆಲಿಸಿ ಪರಿಹರಿಸಬೇಕು ಎಂದು ಆಗ್ರಹಿಸಿ ರಾಜ್ಯ ಸಾರಿಗೆ ನಿಗಮಗಳ ನೌಕರರ ಒಕ್ಕೂಟ ಅ.5ರಂದು ಪ್ರತಿಭಟನೆ (Transport Strike) ನಡೆಸಲು ನಿರ್ಧರಿಸಿದೆ.
2021ರಲ್ಲಿ ಮುಷ್ಕರ ನಡೆಸಿದಾಗ ಸಾವಿರಾರು ನೌಕರರನ್ನು ವಜಾ ಮಾಡಲಾಗಿತ್ತು. ಒಕ್ಕೂಟದ ಜತೆ ಸಂಧಾನ ಮಾಡಿದ್ದ ಬಿಜೆಪಿ ಸರ್ಕಾರ ಬೇಡಿಕೆ ಈಡೇರಿಸುವುದಾಗಿ ಮಾತು ಕೊಟ್ಟಿತ್ತು. ಅದರೆ, ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಹಾಲಿ ಸರ್ಕಾರ ನೌಕರರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿ ಒಕ್ಕೂಟ ಪ್ರತಿಭಟನೆ ಮಾಡಲು ನಿರ್ಧರಿಸಿದೆ. ಫ್ರೀಡಂ ಪಾರ್ಕ್‌ನಲ್ಲಿ ನಡೆಯುವ ಪ್ರತಿಭಟನೆಯಲ್ಲಿ 500ಕ್ಕೂ ಹೆಚ್ಚು ಸಿಬ್ಬಂದಿ ಭಾಗಿಯಾಗಲಿದ್ದಾರೆ. ಸಾಂಕೇತಿಕ ಪ್ರತಿಭಟನೆಗೆ ಸರ್ಕಾರ ಸ್ಪಂದಿಸದಿದ್ದರೆ ಮುಷ್ಕರ ನಡೆಸುವುದಾಗಿ ಸಾರಿಗೆ ನೌಕರರ ಒಕ್ಕೂಟ ಎಚ್ಚರಿಕೆ ನೀಡಿದೆ.
ಇದನ್ನೂ ಓದಿ | Women’s Reservation Bill: ಲೋಕಸಭೆಯಲ್ಲಿ ಮಹಿಳಾ ಮೀಸಲು ವಿಧೇಯಕ ಪಾಸ್; 454 ಸಂಸದರ ಬೆಂಬಲ!
ಬಿಜೆಪಿ ಸರ್ಕಾರ ತೆಗೆದುಕೊಂಡ ನಿರ್ಣಯಗಳಿಂದ ಇಂದಿಗೂ 300ಕ್ಕೂ ಅಧಿಕ ಸಿಬ್ಬಂದಿ ಬೀದಿ ಪಾಲಾಗಿದ್ದಾರೆ. ಅವರಿಗೆ ನ್ಯಾಯ ನೀಡುವ ಜತೆಗೆ ಹತ್ತು ಪ್ರಮುಖ ಬೇಡಿಕೆಗಳನ್ನು ಸರ್ಕಾರ ಈಡೇರಿಸಲೇಬೇಕಿದೆ ಎಂದು ಒಕ್ಕೂಟದ ಪದಾಧಿಕಾರಿಗಳು ತಿಳಿಸಿದ್ದಾರೆ.
ಒಕ್ಕೂಟದ ಬೇಡಿಕಗಳು ಏನು?
- 2020ರ ಜ.1ರಿಂದ ಅನ್ವಯವಾಗುವಂತೆ ವೇತನ ಹೆಚ್ಚಳದ ಬಾಕಿ ಹಣ ನೀಡಬೇಕು.
- 2020ರ ಜ.1ರಿಂದ ರಿಂದ ನಿವೃತ್ತ ನೌಕರರ ವೇತನ ಹೆಚ್ಚಳದ ಫಿಕ್ಸೇಷನ್ ಆಗಬೇಕು.
- ತುಟ್ಟಿ ಭತ್ಯೆ ಬಾಕಿ ಹಣ ನೀಡಬೇಕು.
- 2021ರ ಮುಷ್ಕರದ ವೇಳೆ BJP ಸರ್ಕಾರ ತೆಗೆದುಕೊಂಡಿರುವ ಎಲ್ಲಾ ರೀತಿಯ ಶಿಕ್ಷೆಗಳು ಹಿಂಪಡೆಯಬೇಕು.
- ಎಲೆಕ್ಟ್ರಿಕ್ ಬಸ್‌ಗಳನ್ನು ಸಾರಿಗೆ ನಿಗಮಗಳೇ ಓಡಿಸಬೇಕು.
- ಕೇಂದ್ರ ಸರ್ಕಾರ FAME-2 ಯೋಜನೆ ( ಎಲೆಕ್ಟ್ರಿಕ್ ಬಸ್‌ಗಳನ್ನು) ಖಾಸಗಿಯವರ ಮೂಲಕ ಓಡಿಸುವ ಖಾಸಗೀಕರಣವನ್ನು ವಿರೋಧಿಸಬೇಕು.
- BMTC ಯಲ್ಲಿ ಡಬ್ಬಲ್ ಡ್ಯೂಟಿ ಮಾಡಿಸಿ 4 ಗಂಟೆಗಳ ಕಾಲ OT ನೀಡುವುದನ್ನು ನಿಲ್ಲಿಸಿ, ಕಾನೂನು ಬದ್ಧವಾಗಿ ಡಬಲ್ ವೇತನ ನೀಡಬೇಕು.
- ಕಿರುಕುಳಗಳು/ ದೌರ್ಜನ್ಯದ/ ಭ್ರಷಾಚಾರದ ಆಡಳಿತಕ್ಕೆ ಕಡಿವಾಣ ಹಾಕಬೇಕು.
- ಗುತ್ತಿಗೆ ಕಾರ್ಮಿಕರ ನೇಮಕಾತಿ ವಿರೋಧಿಸಬೇಕು
- ಆಡಳಿತ ವರ್ಗ ಏಕ ಪಕ್ಷೀಯವಾಗಿ ಸುತ್ತೋಲೆಗಳನ್ನು ತರುವ ಪದ್ಧತಿ ನಿಲ್ಲಿಸಿ, ಕಾರ್ಮಿಕ ಸಂಘಗಳ ಜತೆ ಮಾತುಕತೆ ನಡೆಸಿ ಉತ್ತಮ ಕೈಗಾರಿಕಾ ಬಾಂದವ್ಯ ರೂಪಿಸಬೇಕು.
ಇದನ್ನೂ ಓದಿ | Gift Politics : ಗಿಫ್ಟ್ ಕೊಟ್ಟು ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರವನ್ನು ವಜಾ ಮಾಡಿ: ಎಚ್.ಡಿ. ಕುಮಾರಸ್ವಾಮಿ
ಉದ್ಯೋಗ
Toyota Kaushalya 2023: ಟೊಯೊಟಾ ಕೌಶಲ್ಯ ಕಾರ್ಯಕ್ರಮದಲ್ಲಿ ಯುವತಿಯರಿಗೆ ಅವಕಾಶ; ತರಬೇತಿಗೆ ಅರ್ಜಿ ಆಹ್ವಾನ
Toyota Kaushalya 2023: ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ) 2023ನೇ ಸಾಲಿನ ʼಟೊಯೊಟಾ ಕೌಶಲ್ಯ ಕಾರ್ಯಕ್ರಮʼದಲ್ಲಿ ಆಟೋಮೊಬೈಲ್ ಸಂಬಂಧಿತ ವಿವಿಧ ಕೋರ್ಸ್‌ಗಳಿಗೆ ಯುವತಿಯರಿಂದ ಅರ್ಜಿ ಆಹ್ವಾನಿಸಿದೆ.
ಬೆಂಗಳೂರು/ರಾಮನಗರ: ‘ಸ್ಕಿಲ್ ಇಂಡಿಯಾʼ ಅಭಿಯಾನವನ್ನು ನಿರಂತರವಾಗಿ ಬೆಂಬಲಿಸುತ್ತಿರುವ ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ), 2023ನೇ ಸಾಲಿನ ʼಟೊಯೊಟಾ ಕೌಶಲ್ಯ ಕಾರ್ಯಕ್ರಮʼದಲ್ಲಿ (Toyota Kaushalya 2023) ಯುವತಿಯರ ಪ್ರವೇಶಕ್ಕೆ ಅವಕಾಶ ನೀಡಿದೆ. ವಿಶ್ವದರ್ಜೆಯ ತಾಂತ್ರಿಕ ತರಬೇತಿ ನೀಡಿ ಯುವತಿಯರನ್ನು ಸಬಲೀಕರಣಗೊಳಿಸುವುದು ಕಾರ್ಯಕ್ರಮದ ಉದ್ದೇಶವಾಗಿದ್ದು, ಆಸಕ್ತರು ತರಬೇತಿಗೆ ಅರ್ಜಿ ಸಲ್ಲಿಸಬಹುದಾಗಿದೆ.
ತರಬೇತಿ ಮಹಾನಿರ್ದೇಶಕರ (ಡಿಜಿಟಿ) ಸಹಯೋಗದೊಂದಿಗೆ ಈ ಕಾರ್ಯಕ್ರಮವು ಕರ್ನಾಟಕದ ಯುವ, ಸೌಲಭ್ಯ ವಂಚಿತ ಮಹಿಳೆಯರಿಗೆ ಆಟೋಮೋಟಿವ್ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡಲು ಅನನ್ಯ ಅವಕಾಶವನ್ನು ನೀಡುತ್ತದೆ. ಇದಕ್ಕೂ ಮೊದಲು ಜೂನ್ 23ರಂದು ಯುವಕರನ್ನು ತರಬೇತಿಗೆ ಆಹ್ವಾನಿಸಲಾಗಿತ್ತು. ಪ್ರಸ್ತುತ ಈ ಕಾರ್ಯಕ್ರಮವು ಇಲ್ಲಿಯವರೆಗೆ ಶೇ.8ರಷ್ಟು ಯುವತಿಯರಿಗೆ ಅವಕಾಶ ಕಲ್ಪಿಸಿದೆ. 2025ರ ಅಂತ್ಯದ ವೇಳೆಗೆ ಶೇ. 30 ಯುವತಿಯರಿಗೆ ಪ್ರವೇಶ ನೀಡುವ ಗುರಿಯನ್ನು ಹೊಂದಿದೆ.
ಇದನ್ನೂ ಓದಿ | SBI recruitment 2023: ಭಾರತೀಯ ಸ್ಟೇಟ್ ಬ್ಯಾಂಕ್‌ನಲ್ಲಿ ತರಬೇತಿ ಹುದ್ದೆಗಳಿಗೆ ಅರ್ಜಿ ಆಹ್ವಾನ
ಯುವತಿಯರಿಗೆ ವಿಶ್ವದರ್ಜೆಯ ತಾಂತ್ರಿಕ ತರಬೇತಿ ಒದಗಿಸುವ ಮತ್ತು ಉತ್ತಮ ತಂತ್ರಜ್ಞರಾಗಲು ಅಗತ್ಯವಾದ ಕೌಶಲ್ಯ, ಜ್ಞಾನದೊಂದಿಗೆ ಅವರನ್ನು ಸಬಲೀಕರಣಗೊಳಿಸುವ ಗುರಿಯನ್ನು ಹೊಂದಿರುವ ಈ ಕಾರ್ಯಕ್ರಮದಲ್ಲಿ ಆಟೋಮೋಟಿವ್ ವೆಲ್ಡ್ ತಂತ್ರಜ್ಞ, ಆಟೋಮೋಟಿವ್ ಪೇಂಟ್ ತಂತ್ರಜ್ಞ, ಆಟೋಮೋಟಿವ್ ಅಸೆಂಬ್ಲಿ ತಂತ್ರಜ್ಞ ಮತ್ತು ಮೆಕಾಟ್ರಾನಿಕ್ಸ್ ತಂತ್ರಜ್ಞಾನದಲ್ಲಿ ವಿಶೇಷ ಕೋರ್ಸ್‌ಗಳಿವೆ.
ಅರ್ಹತಾ ಮಾನದಂಡ
- 18-22 ವರ್ಷ ವಯಸ್ಸಿನ ಯುವತಿಯರು
- ಕನಿಷ್ಠ ಶೈಕ್ಷಣಿಕ ಅರ್ಹತೆ: 10ನೇ ತರಗತಿ ತೇರ್ಗಡೆ / 12ನೇ ತರಗತಿ ಉತ್ತೀರ್ಣ ಅಥವಾ ಅನುತ್ತೀರ್ಣ.
- ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಭಾಷೆಯಲ್ಲಿ ಪ್ರಾವೀಣ್ಯತೆ
- ಕರ್ನಾಟಕದಲ್ಲಿ ವಾಸವಿರಬೇಕು.
- ಆಯ್ಕೆಯಾದ ಸ್ಪರ್ಧಿಗಳು ತರಗತಿ ಮತ್ತು ಕೆಲಸದ ಅಭಿವೃದ್ಧಿ ಎರಡನ್ನೂ ಒಳಗೊಂಡಿರುವ ಸಮಗ್ರ ತರಬೇತಿ ಕಾರ್ಯಕ್ರಮದ ಪ್ರಯೋಜನ ಪಡೆಯುತ್ತಾರೆ.
- ಈ ಕಾರ್ಯಕ್ರಮವು 2.5 ತಿಂಗಳ ತರಗತಿಯ ತರಬೇತಿಯನ್ನು ಒಳಗೊಂಡಿದೆ ಮತ್ತು ನಂತರ 21.5 ತಿಂಗಳ ಶಾಪ್ ಫ್ಲೋರ್ ಪ್ರಾಯೋಗಿಕ ತರಬೇತಿಯನ್ನು ಹೊಂದಿದೆ. ಹೆಚ್ಚುವರಿಯಾಗಿ, ಆಸಕ್ತರಿಗೆ ಒಂದು ವರ್ಷದ ಅಪ್ರೆಂಟಿಸ್‌ಶಿಪ್ ಅವಕಾಶ ಲಭ್ಯವಿದೆ.
ಟೊಯೊಟಾ ಕೌಶಲ್ಯ ಕಾರ್ಯಕ್ರಮದ ಮುಖ್ಯಾಂಶಗಳು
- ಮೊದಲ ವರ್ಷ ರೂ.14,505 ಮತ್ತು ಎರಡನೇ ವರ್ಷ ರೂ.15,560 ಸ್ಟೈಫಂಡ್.
- ಇಎಸ್ಐ, ಸಮವಸ್ತ್ರ, ಕ್ಯಾಂಟೀನ್ ಮತ್ತು ಪಿಎಫ್ ಸೌಲಭ್ಯ.
- 24X7 ಭದ್ರತೆಯೊಂದಿಗೆ ಅತ್ಯಾಧುನಿಕ ಹಾಸ್ಟೆಲ್ ಸೌಲಭ್ಯ
- ಇನ್ ಡೋರ್ ಮತ್ತು ಔಟ್ ಡೋರ್ ಗೇಮ್ಸ್, ಕಂಪ್ಯೂಟರ್ ಕೊಠಡಿ, ಫಿಟ್ ನೆಸ್ ಕೇಂದ್ರ, ಗ್ರಂಥಾಲಯ, ಕ್ಲಿನಿಕ್ ಮತ್ತು ಕ್ಯಾಂಟೀನ್ ಸೌಲಭ್ಯ.
- ಕೋರ್ಸ್ ಪೂರ್ಣಗೊಳಿಸುವ ಪ್ರಮಾಣಪತ್ರ, ರಾಷ್ಟ್ರೀಯ ತರಬೇತಿ ಪ್ರಮಾಣಪತ್ರ, ಮತ್ತು ಕೌಶಲ್ಯ ಅಭಿವೃದ್ಧಿ ಪ್ರಮಾಣಪತ್ರ (ಎಎಸ್‌ಡಿಸಿ)
- ಆಯ್ಕೆ ಪ್ರಕ್ರಿಯೆಯು ನೋಂದಣಿ, ಮುಖಾಮುಖಿ ಸಂದರ್ಶನ, ವೈದ್ಯಕೀಯ ಪರೀಕ್ಷೆಗಳು, ಹಿನ್ನೆಲೆ ಪರಿಶೀಲನೆ, ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಗೆ ಕುಟುಂಬ ಭೇಟಿ ಮತ್ತು ಕಾರ್ಯಕ್ರಮಕ್ಕೆ ಸೇರುವುದನ್ನು ಒಳಗೊಂಡಿರುತ್ತದೆ.
ಟೊಯೊಟಾ ಕೌಶಲ್ಯ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು, ನೋಂದಣಿ ಲಿಂಕ್‌ಗೆ ಭೇಟಿ ನೀಡಿ
ಟಿಕೆಎಂನ ಹಿರಿಯ ಉಪಾಧ್ಯಕ್ಷ ಮತ್ತು ಮುಖ್ಯ ಮಾನವ ಸಂಪನ್ಮೂಲ ಅಧಿಕಾರಿ ಜಿ.ಶಂಕರ್ ಅವರು ಮಾತನಾಡಿ, “ಆರ್ಥಿಕವಾಗಿ ಹಿಂದುಳಿದಿರುವ ವಿದ್ಯಾರ್ಥಿಗಳಲ್ಲಿ ಕೌಶಲ್ಯ ಹೆಚ್ಚಿಸಲು ಮತ್ತು ಆಟೊಮೊಬೈಲ್ ಕ್ಷೇತ್ರದಲ್ಲಿ ಲಿಂಗ ಸಮಾನತೆಯನ್ನು ಉತ್ತೇಜಿಸುವಲ್ಲಿ ಟಿಟಿಟಿಐ ಒಂದು ದಶಕದಿಂದ ನಿರ್ಣಾಯಕ ಪಾತ್ರ ವಹಿಸಿದೆ. ವಿಶ್ವದರ್ಜೆಯ ತಂತ್ರಜ್ಞರನ್ನು ಸೃಷ್ಟಿಸುವ ಮೂಲಕ, ಸಂಸ್ಥೆಯು ಸುತ್ತಮುತ್ತಲಿನ ಸಮುದಾಯಗಳ ಮೇಲೆ ಪರಿಣಾಮ ಬೀರುವುದಲ್ಲದೆ, ‘ಸ್ಕಿಲ್ ಇಂಡಿಯಾ’ ಎಂಬ ವಿಶಾಲ ರಾಷ್ಟ್ರೀಯ ಕಾರ್ಯಕ್ರಮಕ್ಕೆ ಕೊಡುಗೆ ನೀಡಿದೆ. ಇಲ್ಲಿಯವರೆಗೆ ಸುಮಾರು 1000 ವಿದ್ಯಾರ್ಥಿಗಳು ತಮ್ಮ ಕೌಶಲ್ಯಗಳಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ. ಆಟೋಮೊಬೈಲ್ ಉದ್ಯಮದ ಬೆಳವಣಿಗೆಗೆ ಅಗತ್ಯವಾದ ಅಂತಾರಾಷ್ಟ್ರೀಯ ಮಾನದಂಡಗಳ ಜ್ಞಾನವನ್ನು ಪಡೆದಿದ್ದಾರೆ. ಅವರ ಯಶಸ್ಸು ವ್ಯಕ್ತಿಗಳನ್ನು ಸಬಲೀಕರಣಗೊಳಿಸುವ ಮತ್ತು ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಉತ್ಕೃಷ್ಟತೆಯನ್ನು ಬೆಳೆಸುವ ಸಂಸ್ಥೆಯ ಸಮರ್ಪಣೆ ಮತ್ತು ಬದ್ಧತೆಗೆ ಸಾಕ್ಷಿಯಾಗಿದೆ ಎಂದು ತಿಳಿಸಿದ್ದಾರೆ.
ಟೊಯೊಟಾ ಕೌಶಲ್ಯ ಕಾರ್ಯಕ್ರಮವು ಯುವತಿಯರ ಪ್ರವೇಶವು ಲಿಂಗ ಸಮಾನತೆಯನ್ನು ಸಾಧಿಸುವ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿದೆ. ಅತ್ಯುತ್ತಮ ಆಟೋಮೊಬೈಲ್ ತರಬೇತಿಯನ್ನು ನೀಡುವ ಮೂಲಕ ಮತ್ತು ಭವಿಷ್ಯಕ್ಕಾಗಿ ಮೌಲ್ಯವನ್ನು ನಿರ್ಮಿಸುವ ಮೂಲಕ ಯುವ ಸಮುದಾಯವನ್ನು ಬೆಳೆಸಲು ಪ್ರಯತ್ನಿಸುತ್ತಿರುವ ಸಮಯದಲ್ಲಿ ನೂತನ ಕಾರ್ಯಕ್ರಮ ಹೊರಹೊಮ್ಮಿದೆ ಎಂದು ಹೇಳಿದ್ದಾರೆ.
ಉದ್ಯೋಗ ಸಾಮರ್ಥ್ಯ ಹೆಚ್ಚಿಸಲು ಅನನ್ಯ ಅವಕಾಶ
ಟಿಟಿಟಿಐ ಅಡಿಯಲ್ಲಿ ಅಭಿವೃದ್ಧಿಪಡಿಸಲಾದ ಟೊಯೊಟಾ ಕೌಶಲ್ಯ ಕಾರ್ಯಕ್ರಮವು ಎರಡು ವರ್ಷಗಳ ಉಚಿತ ವಸತಿ ಕೋರ್ಸ್ ಅನ್ನು ನೀಡುತ್ತದೆ. ಇದು ಯುವ ಸಮುದಾಯಕ್ಕೆ ಉತ್ಪಾದನಾ ಉದ್ಯಮ ಸಂಬಂಧಿತ ಕೌಶಲ್ಯಗಳನ್ನು ಪಡೆಯಲು ಮತ್ತು ಅವರ ಉದ್ಯೋಗ ಸಾಮರ್ಥ್ಯವನ್ನು ಹೆಚ್ಚಿಸಲು ಅನನ್ಯ ಅವಕಾಶವನ್ನು ಒದಗಿಸುತ್ತದೆ. ಈ ಕಾರ್ಯಕ್ರಮವು ಸೈದ್ಧಾಂತಿಕ ಕಲಿಕೆಯನ್ನು ಆನ್-ದಿ-ಜಾಬ್ ತರಬೇತಿ (ಒಜೆಟಿ) ಯೊಂದಿಗೆ ಸಂಯೋಜಿಸುವ ‘ಕಲಿಯಿರಿ ಮತ್ತು ಸಂಪಾದಿಸಿ’ ವಿಧಾನವನ್ನು ಅನುಸರಿಸುತ್ತದೆ.
ತಮ್ಮ ತರಬೇತಿಯ ಸಮಯದಲ್ಲಿ ಈ ಮಹತ್ವಾಕಾಂಕ್ಷಿ ವಿದ್ಯಾರ್ಥಿಗಳು ಆಯಾ ಕ್ಷೇತ್ರಗಳಲ್ಲಿ ಮಾಸ್ಟರ್ ತರಬೇತುದಾರರಾಗಿರುವ ಅನುಭವಿ ಮೇಲ್ವಿಚಾರಕರಿಂದ ಮಾರ್ಗದರ್ಶನ ಪಡೆಯುವ ಭಾಗ್ಯವನ್ನು ಹೊಂದಿದ್ದು, ಗುಣಮಟ್ಟದ ತರಬೇತಿಯನ್ನು ಪಡೆಯುತ್ತಾರೆ. ಕೈಗಾರಿಕಾ ಸಂಸ್ಕೃತಿ ಮತ್ತು ಮಾನದಂಡಗಳಿಗೆ ಅನುಗುಣವಾಗಿ ಪರಿಣತಿಯನ್ನು ಅಭಿವೃದ್ಧಿಪಡಿಸುತ್ತಾರೆ. ಪ್ರಶಿಕ್ಷಣಾರ್ಥಿಗಳಿಗೆ ಉನ್ನತ ಕೌಶಲ್ಯ, ಆಳವಾದ ಜ್ಞಾನ ಮತ್ತು ಆರೋಗ್ಯಕರ ದೇಹ ಮತ್ತು ಮನಸ್ಸಿನ ತರಬೇತಿಯನ್ನು ಸಹ ನೀಡಲಾಗುವುದು.
ಅತ್ಯುತ್ತಮ ಉದ್ಯೋಗಾವಕಾಶ
ಇದಲ್ಲದೆ, ಟೊಯೊಟಾ ತಾಂತ್ರಿಕ ತರಬೇತಿ ಸಂಸ್ಥೆ (ಟಿಟಿಟಿಐ) ಕರ್ನಾಟಕದ ಆರ್ಥಿಕವಾಗಿ ಹಿಂದುಳಿದ ಹಿನ್ನೆಲೆಯ ಶೈಕ್ಷಣಿಕವಾಗಿ ಆಧಾರಿತ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುವಲ್ಲಿ ಮುಂಚೂಣಿಯಲ್ಲಿದೆ. ಅವರನ್ನು ನುರಿತ ತಂತ್ರಜ್ಞರಾಗಿ ಬೆಳೆಸುವತ್ತ ಗಮನ ಹರಿಸಿದೆ. ಟಿಟಿಟಿಐನ ಪದವೀಧರರು ನಿರಂತರವಾಗಿ ಹೆಚ್ಚಿನ ಉದ್ಯೋಗಾವಕಾಶಗಳನ್ನು ಪಡೆಯುತ್ತಿದ್ದು, ಕರ್ನಾಟಕ, ಭಾರತ ಮತ್ತು ವಿದೇಶಗಳಲ್ಲಿ ಅತ್ಯುತ್ತಮ ಉದ್ಯೋಗಾವಕಾಶಗಳಿಗೆ ಪ್ರವೇಶ ಪಡೆಯುತ್ತಿದ್ದಾರೆ.
ಇದನ್ನೂ ಓದಿ | Job News : ಅರಣ್ಯ ಇಲಾಖೆಯಲ್ಲಿ 310 ವೀಕ್ಷಕ ಹುದ್ದೆ ಭರ್ತಿ; ಅರ್ಜಿ ಸಲ್ಲಿಕೆ ಹೇಗೆ, ಕೊನೇ ದಿನಾಂಕ ಎಂದು?
ಕೌಶಲ್ಯ ಅಭಿವೃದ್ಧಿ ಕ್ಷೇತ್ರದಲ್ಲಿ ಟಿಟಿಟಿಐನ ಪ್ರಯತ್ನಗಳನ್ನು ಜಪಾನ್ ಇಂಡಿಯಾ ಇನ್ಸ್ಟಿಟ್ಯೂಟ್ ಫಾರ್ ಮ್ಯಾನುಫ್ಯಾಕ್ಚರಿಂಗ್ (ಜೆ.ಐ.ಎಂ) ನಂತಹ ಸಂಸ್ಥೆಗಳು ಗುರುತಿಸಿವೆ. ಇದು ಮೇಕ್ ಇನ್ ಇಂಡಿಯಾ ಮತ್ತು ಸ್ಕಿಲ್ ಇಂಡಿಯಾ ಮಿಷನ್ ಕಾರ್ಯಕ್ರಮಕ್ಕೆ ತನ್ನ ಬದ್ಧತೆಯನ್ನು ಬಲಪಡಿಸುತ್ತದೆ. ತನ್ನ ಅಸ್ತಿತ್ವದ ಅವಧಿಯಲ್ಲಿ ಟಿಟಿಟಿಐ ಹೆಮ್ಮೆಯಿಂದ 950ಕ್ಕೂ ಹೆಚ್ಚು ಪದವೀಧರರು ತಮ್ಮ ತರಬೇತಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಅವರಲ್ಲಿ ಹಲವರು ರಾಷ್ಟ್ರೀಯ ಕೌಶಲ್ಯ ಸ್ಪರ್ಧೆ ಮತ್ತು ವಿಶ್ವ ಕೌಶಲ್ಯ ಸ್ಪರ್ಧೆಯಂತಹ ಗೌರವಾನ್ವಿತ ಸ್ಪರ್ಧೆಗಳಲ್ಲಿ ಗಮನಾರ್ಹ ಸಾಧನೆಗಳನ್ನು ಮಾಡಿದ್ದಾರೆ. ಆ ಮೂಲಕ ರಾಷ್ಟ್ರೀಯ ಹೆಮ್ಮೆಯ ಪ್ರಜ್ಞೆಯನ್ನು ಮೂಡಿಸಿದ್ದಾರೆ.
-
ವಿದೇಶ19 hours ago
Akshardham : ವಿದೇಶದಲ್ಲಿನ ಅತೀ ದೊಡ್ಡ ದೇವಾಲಯ ಉದ್ಘಾಟನೆಗೆ ಸಜ್ಜು; ಏನಿದರ ವಿಶೇಷ?
-
ಕರ್ನಾಟಕ17 hours ago
PSI Scam : ಪಿಎಸ್ಐ ನೇಮಕಾತಿ ಅಕ್ರಮ; ಕೊನೆಗೂ ಅಮೃತ್ ಪಾಲ್ಗೆ ಜಾಮೀನು
-
ದೇಶ12 hours ago
Swara Bhasker: ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ ಸ್ವರಾ ಭಾಸ್ಕರ್, ಮಗಳ ಹೆಸರು ‘ರಾಬಿಯಾ’
-
ಕರ್ನಾಟಕ13 hours ago
Weather Update: ಭಾರತದಲ್ಲಿ ಮುಗೀತು ಮಳೆಗಾಲ! ಎಷ್ಟು ಮಳೆ ಕೊರತೆ, ಬರಗಾಲ ಪಕ್ಕಾ?
-
South Cinema16 hours ago
Darshan Thoogudeepa: ನಟ ದರ್ಶನ್ ವಿರುದ್ಧ ಮಂಡ್ಯದಲ್ಲಿ ರೈತರ ಆಕ್ರೋಶ; ಕ್ಷಮೆಗೆ ಆಗ್ರಹ
-
ಅಂಕಣ19 hours ago
ವಿಧಾನಸೌಧ ರೌಂಡ್ಸ್: ಜೆಡಿಎಸ್ಗೆ ಸಂಜೀವಿನಿಯಾದ ಬಿಜೆಪಿ ಮೈತ್ರಿ; ಬೆಂಗಳೂರು ದಕ್ಷಿಣದಿಂದ ಕಾಂಗ್ರೆಸ್ ಅಚ್ಚರಿ ಅಭ್ಯರ್ಥಿ?
-
ದೇಶ17 hours ago
Army Jawan: ಯೋಧನ ಮೇಲೆ ಹಲ್ಲೆ ನಡೆಸಿ, ಬೆನ್ನಿನ ಮೇಲೆ ‘ಪಿಎಫ್ಐ’ ಎಂದು ಬರೆದ ದುರುಳರು!
-
ದೇಶ9 hours ago
Lawyer Sara Sunny: ಸುಪ್ರೀಂ ಕೋರ್ಟ್ನಲ್ಲಿ ಮೊದಲ ಬಾರಿಗೆ ಸಂಜ್ಞೆ ಭಾಷೆಯಲ್ಲಿ ವಾದ ಮಂಡನೆ! ಇತಿಹಾಸ ಸೃಷ್ಟಿಸಿದ ಸಾರಾ