Education Guide Distance Education courses and Programs in karnataka Education Guide : ಎಲ್ಲರ ಶಿಕ್ಷಣಕ್ಕಾಗಿ ದೂರ ಶಿಕ್ಷಣ! - Vistara News

ಪ್ರಮುಖ ಸುದ್ದಿ

Education Guide : ಎಲ್ಲರ ಶಿಕ್ಷಣಕ್ಕಾಗಿ ದೂರ ಶಿಕ್ಷಣ!

ಔಪಚಾರಿಕ ಶಿಕ್ಷಣದಿಂದ ವಂಚಿತರಾಗಿರುವವರಿಗೆ ದೂರ ಶಿಕ್ಷಣ (Distance Education) ವರದಾನವಾಗಿದ್ದು, ಈ ಶಿಕ್ಷಣ ಪಡೆಯುವುದು ಹೇಗೆಂಬ ಮಾಹಿತಿ (Education Guide) ಇಲ್ಲಿದೆ.

VISTARANEWS.COM


on

distance education
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Education Guide

ಉನ್ನತ ಶಿಕ್ಷಣವು ಎಲ್ಲರಿಗೂ ಎಲ್ಲೆಡೆ ದೊರೆಯಬೇಕು, ಮನೆ ಬಾಗಿಲಿನಲ್ಲಿಯೇ ಶಿಕ್ಷಣ ದೊರೆಯುವಂತಾಗಬೇಕು ಎಂಬ ಉದ್ದೇಶದಿಂದ ದೂರ ಶಿಕ್ಷಣ ವ್ಯವಸ್ಥೆಯನ್ನು (Distance Education) ಜಾರಿಗೆ ತರಲಾಗಿದೆ. ಔಪಚಾರಿಕ ಶಿಕ್ಷಣದಿಂದ ವಂಚಿತರಾಗಿರುವವರಿಗೆ ಇದು ವರದಾನವಾಗಿದೆ.

1985 ರಲ್ಲಿ ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ (ಇಗ್ನೊ) ಸ್ಥಾಪನೆಯೊಂದಿಗೆ ನಮ್ಮ ದೇಶದಲ್ಲಿ ದೂರ ಶಿಕ್ಷಣವು (education news) ಪ್ರಾರಂಭವಾಗಿದ್ದು, ಇಂದು ಮುಕ್ತ ವಿಶ್ವವಿದ್ಯಾಲಯ ಹೆಸರಿನಲ್ಲಿ ಚಾಲ್ತಿಯಲ್ಲಿದೆ. ಸರ್ಕಾರದ ಕೆಲ ಹುದ್ದೆಗಳ ನೇಮಕಾತಿ ಸೇರಿದಂತೆ ದೂರ ಶಿಕ್ಷಣ ಪಡೆದವರಿಗೆ ಈಗ ಎಲ್ಲೆಡೆ ಅವಕಾಶ ಲಭ್ಯವಾಗುತ್ತಿದೆ. ಮುಖ್ಯವಾಗಿ ಪದವಿ ಪಡೆದವರು ಉನ್ನತ ಶಿಕ್ಷಣವನ್ನು ದೂರ ಶಿಕ್ಷಣದ ಮೂಲಕ ಪಡೆಯುವುದು ಸಾಮಾನ್ಯವಾಗಿದೆ. ಇದು ವೃತ್ತಿ ಜೀವನದಲ್ಲಿ ಹೆಚ್ಚಿನ ಅವಕಾಶಗಳನ್ನು ಕೂಡ ನೀಡುತ್ತಿದೆ.

ಕಾರಣಾಂತರಗಳಿಂದ ಔಪಚಾರಿಕ ಶಿಕ್ಷಣ ಪಡೆಯಲು ನಿಮಗೆ ಸಾಧ್ಯವಾಗುವುದಿಲ್ಲ ಎಂದಾಗಿದ್ದರೆ ನೀವು ದೂರ ಶಿಕ್ಷಣವನ್ನು ಪಡೆಯಬಹುದು. ಇಂದು ವಿಜ್ಞಾನ, ತಂತ್ರಜ್ಞಾನ ವಿಷಯಗಳನ್ನು ಕೂಡ ದೂರ ಶಿಕ್ಷಣದ ಮೂಲಕ ಪಡೆಯುವ ಅವಕಾಶವನ್ನು ಕಲ್ಪಿಸಲಾಗಿದೆ. ದೇಶದ ಬಹುತೇಕ ವಿಶ್ವವಿದ್ಯಾನಿಲಯಗಳಿಗೆ ದೂರ ಶಿಕ್ಷಣ ನೀಡಲು ವಿಶ್ವವಿದ್ಯಾನಿಲಯ ಧನಸಹಾಯ ಆಯೋಗವು (ಯುಜಿಸಿ) ಅನುಮತಿ ನೀಡಿದೆ. ನಮ್ಮ ರಾಜ್ಯದ ಮಂಗಳೂರು ವಿವಿ, ಮೈಸೂರು ವಿವಿ, ಕುವೆಂಪು ವಿವಿ, ಬೆಂಗಳೂರು ವಿವಿಗಳಲ್ಲಿ ದೂರ ಶಿಕ್ಷಣದ ಕೋರ್ಸ್‌ಗಳಿದ್ದವು. ಆದರೆ ರಾಜ್ಯ ಸರ್ಕಾರವು ಸಾಂಪ್ರದಾಯಿಕ ವಿವಿಗಳಲ್ಲಿನ ದೂರ ಶಿಕ್ಷಣ (education news) ಚಟುವಟಿಕೆಗಳನ್ನು ನಿಲ್ಲಿಸುವ ತೀರ್ಮಾನ ತೆಗೆದುಕೊಂಡಿದ್ದು, ಈ ಸಂಬಂಧ ಕಾಯ್ದೆ ರೂಪಿಸಿದೆ. ಹೀಗಾಗಿ ರಾಜ್ಯದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾತ್ರ ದೂರ ಶಿಕ್ಷಣವನ್ನು ನೀಡುತ್ತಿದೆ.

ಶಿಕ್ಷಣಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ (Click Here) ಕ್ಲಿಕ್‌ ಮಾಡಿ.

ಜನಪ್ರಿಯವಾಗುತ್ತಿರುವ ಕರಾಮುವಿವಿ

ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು (KSOU) 1996 ರಿಂದ ದೂರ ಶಿಕ್ಷಣವನ್ನು ನೀಡುವ ಕೆಲಸ ಮಾಡುತ್ತಿದೆ. ʻಎಲ್ಲರಿಗೂ ಉನ್ನತ ಶಿಕ್ಷಣ, ಎಲ್ಲೆಡೆʼ ಎಂಬ ಧ್ಯೇಯವಾಕ್ಯದೊಂದಿಗೆ ಈ ವಿವಿಯು ಕೆಲಸ ಮಾಡುತ್ತಿದ್ದು, ನ್ಯಾಕ್‌ನಿಂದ A+ ಗ್ರೇಡ್‌ ಪಡೆದುಕೊಂಡಿದೆ. ರಾಜ್ಯವು ಉನ್ನತ ಶಿಕ್ಷಣದಲ್ಲಿ ಮುಂದಿದ್ದು, ಇದಕ್ಕೆ ಈ ವಿವಿಯ ಕೊಡುಗೆಯು ಅಪಾರವಾಗಿದೆ. ಮೈಸೂರಿನಲ್ಲಿ ಪ್ರಧಾನ ಕಚೇರಿ ಹೊಂದಿರುವ ಮುಕ್ತ ವಿವಿಯು ರಾಜ್ಯಾದ್ಯಂತ 34 ಪ್ರಾದೇಶಿಕ ಕಚೇರಿಗಳನ್ನು ಹೊಂದಿದೆ. ರಾಜ್ಯದಲ್ಲಿ ಪ್ರತಿ ಜಿಲ್ಲೆಗೊಂದು ಪ್ರಾದೇಶೀಕ ಕೇಂದ್ರ ತೆರೆಯಲು ತೀರ್ಮಾನಿಸಿದೆ. 64 ಕೋರ್ಸ್‌ಗಳು ಲಭ್ಯವಿದ್ದು, ಇನ್ನೂ 51 ಹೊಸ ಕೋರ್ಸ್‌ಗಳನ್ನು ಆರಂಭಿಸಲು ಉದ್ದೇಶಿಸಿದೆ.

ದೇಶದಲ್ಲಿ ಒಟ್ಟು 16 ಸರ್ಕಾರಿ ಮುಕ್ತ ವಿವಿಗಳಿದ್ದು, ಮೈಸೂರು ಮುಕ್ತವಿವಿಯು ಸದ್ಯ ದೇಶದಲ್ಲಿಯೇ ಎರಡನೇ ಅತ್ಯುತ್ತಮ ಮುಕ್ತ ವಿವಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಪತಿ ಬಾರಿ ಸುಮಾರು 18 ಸಾವಿರ ವಿದ್ಯಾರ್ಥಿಗಳು ಇಲ್ಲಿ ಶಿಕ್ಷಣಕ್ಕಾಗಿ ಪ್ರವೇಶ ಪಡೆಯುತ್ತಿದ್ದಾರೆ. ಸದ್ಯವೇ ಆನ್‌ಲೈನ್‌ ಕೋರ್ಸ್‌ಗಳನ್ನು ಆರಂಭಿಸಲು ಮುಕ್ತ ವಿವಿ ಉದ್ದೇಶಿಸಿದೆ. ಇ-ಬುಕ್‌, ಇ-ಲೈಬ್ರರಿ ಸೌಲಭ್ಯ, ಡಿಜಿಟಲ್‌ ಶಿಕ್ಷಣ ನೀಡುವ ಸೌಕರ್ಯಗಳನ್ನು ವಿವಿಯು ಹೊಂದಿದೆ. ರೇಡಿಯೋ, ಆಡಿಯೊ-ವಿಡಿಯೋ ಉಪನ್ಯಾಸಗಳ ಮೂಲಕ ಹಾಗೂ ‘ಇನ್-ಹೌಸ್ ಸ್ಟುಡಿಯೋ’ಗಳ ಮೂಲಕ ಅತ್ಯುತ್ತಮ ಶಿಕ್ಷಣವನ್ನು ಒದಗಿಸಲಾಗುತ್ತಿದೆ.

ಮುಕ್ತ ವಿವಿಯ ವಿಶೇಷತೆಗಳಿವು;

  • ವಿಶಾಲ ಅತ್ಯಾಧುನಿಕ ಹಾಗೂ ಹಸಿರುಮಯ ಕ್ಯಾಂಪಸ್‌.
  • ಆಧುನಿಕ ಐಸಿಟಿ ತಂತ್ರಜ್ಞಾನ ಬೆಂಬಲಿತ ಬೋಧನಾ ಸೌಲಭ್ಯಗಳು.
  • ಅನುಭವಿ ಹಾಗೂ ನುರಿತ ಬೋಧನಾ ಸಿಬ್ಬಂದಿ.
  • ಸುಸಜ್ಜಿತ ಪ್ರಯೋಗಾಲಯಗಳು.
  • ಸುಸಜ್ಜಿತ ಗ್ರಂಥಾಲಯ ಹಾಗೂ ಇಂಟರ್ನೆಟ್‌ ಸೌಲಭ್ಯ.
  • ಪ್ರಾದೇಶಿಕ ಕೇಂದ್ರಗಳು ಹಾಗೂ ಲರ್ನರ್‌ ಸಪೋರ್ಟ್‌ ಸೆಂಟರ್‌.
  • ಗುಣಮಟ್ಟದ ಸ್ವಯಂ ಕಲಿಕಾ ಸಾಮಗ್ರಿಗಳು (ಎಸ್‌ಎಲ್‌ಎಂ)
  • ವೃತ್ತಿ ಸಂಬಂಧಿ ಸಲಹೆ ಹಾಗೂ ನೇಮಕಾತಿಯಲ್ಲಿ ನೆರವು.

ಎಂಬಿಎ (MBA) ಎಂ. ಕಾಮ್ (M.com), ಮೀಡಿಯಾಕ್ಕೆ ಸಂಬಂಧಿಸಿದ ಕೋರ್ಸ್‌ಗಳು, ಎಂಎ(MA) ಈ ವಿವಿಯಲ್ಲಿ ಹೆಚ್ಚು ಬೇಡಿಕೆಯಿರುವ ಕೋರ್ಸ್‌ಗಳಾಗಿವೆ. ಪ್ರತಿ ವರ್ಷ ಎರಡು ಬಾರಿ (ಜನವರಿ ಮತ್ತು ಜೂನ್‌ನಲ್ಲಿ) ಕೋರ್ಸ್‌ಗಳಿಗೆ ಅಡ್ಮಿಷನ್‌ ಮಾಡಿಕೊಳ್ಳಲಾಗುತ್ತದೆ. ಅಡ್ಮಿಷನ್‌ ಪ್ರಕ್ರಿಯೆಗಳು ಕೂಡ ಆನ್‌ಲೈನ್‌ನಲ್ಲಿಯೇ ನಡೆಯುತ್ತದೆ. ಶುಲ್ಕವನ್ನೂ ಆನ್‌ಲೈನ್‌ನಲ್ಲಿಯೇ ಪಾವತಿಸಬಹುದಾಗಿರುತ್ತದೆ. ಕೋಚಿಂಗ್ ತರಗತಿಗಳಿಗೆ ಬರುವ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ಗಳಲ್ಲಿ ವಸತಿ ಸೌಲಭ್ಯ, ಕೌಶಲ್ಯ ಅಭಿವೃದ್ಧಿ ಕಾರ್ಯಕ್ರಮಗಳು, ಉದ್ಯೋಗ ಮೇಳಗಳನ್ನು ನಡೆಸುತ್ತಾ ಈ ವಿವಿಯು ಗಮನ ಸೆಳೆದಿದೆ.

ಜುಲೈ ಆವೃತ್ತಿಯ ಪ್ರವೇಶಾತಿಗಾಗಿ ಇಲ್ಲಿ ಕ್ಲಿಕ್ (Click Here) ಮಾಡಿ. (ಆಗಸ್ಟ್‌ 31 ಕೊನೆಯ ದಿನ.

ಮುಕ್ತ ವಿವಿಯಲ್ಲಿ ಯಾವೆಲ್ಲಾ ಶಿಕ್ಷಣ ಪಡೆಯಬಹುದು? ತಿಳಿಯಲು ಇಲ್ಲಿ ಕ್ಲಿಕ್ (Click Here) ಮಾಡಿ.

ಯಾವ ಕೋರ್ಸಿಗೆ ಎಷ್ಟು ಶುಲ್ಕ ತಿಳಿಯಲು ಇಲ್ಲಿ ಕ್ಲಿಕ್ (Click Here) ಮಾಡಿ.

ವಿವಿಯ ವೆಬ್‌ಸೈಟ್‌ ವಿಳಾಸ: https://ksoumysuru.ac.in/kannada/index.php

ಎನ್‌ಐಓಎಸ್‌ನಲ್ಲಿಯೂ ಓದಬಹುದು!

ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ 1989 ರಲ್ಲಿ ರಾಷ್ಟ್ರೀಯ ಮುಕ್ತ ಶಾಲೆ ಸ್ಥಾಪಿಸಿದೆ. 2002 ರಿಂದ ಇದಕ್ಕೆ ʻನ್ಯಾಷನಲ್‌ ಇನ್‌ಸ್ಟಿಟ್ಯೂಟ್‌ ಆಫ್‌ ಓಪನ್ ಸ್ಕೂಲ್ (NIOS) ಎಂದು ಮರು ನಾಮಕರಣ ಮಾಡಲಾಗಿದ್ದು, ಕೇಂದ್ರ ಕಚೇರಿ ನೊಯಿಡಾದಲ್ಲಿದೆ. ನಮ್ಮ ಬೆಂಗಳೂರು ಸೇರಿದಂತೆ 20 ಪ್ರಾದೇಶಿಕ ಕೇಂದ್ರಗಳು, 6500ಕ್ಕೂ ಹೆಚ್ಚು ಮಾನ್ಯತೆ ಪಡೆದ ಸಂಸ್ಥೆಗಳು (ಅಧ್ಯಯನ ಕೇಂದ್ರಗಳು), 1500 ಕ್ಕೂ ಹೆಚ್ಚಿನ ಮಾನ್ಯತೆ ಪಡೆದ ವ್ರತ್ತಿಸಂಬಂಧಿ ಸಂಸ್ಥೆಗಳು (ಅಧ್ಯಯನ ಕೇಂದ್ರಗಳು), ಮತ್ತು ಕೆಲವು ವಿಶೇಷ ಮಾನ್ಯತೆ ಪಡೆದ ಸಂಸ್ಥೆಗಳ ಮೂಲಕ ಶಿಕ್ಷಣ ನೀಡುವ ಕೆಸಲ ಮಾಡುತ್ತಿದೆ.

ಪ್ರಪಂಚದ ಅತೀ ಬೃಹತ್ ಮುಕ್ತ ಶಾಲೆ ಎಂದು ಪ್ರಸಿದ್ಧಿ ಪಡೆದಿರುವ ಎನ್‌ಐಓಎಸ್‌ನಲ್ಲಿ ವರ್ಷವಿಡಿ ಆನ್‌ಲೈನ್‌ನಲ್ಲಿ ಕೋರ್ಸ್‌ಗಳಿಗೆ ಪ್ರವೇಶ ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಎನ್‌ಸಿಆರ್‌ಟಿ ಜಾರಿಗೆ ತಂದ ಪಠ್ಯಕ್ರಮದ ಪ್ರಕಾರವೇ ಇಲ್ಲಿ ಶಿಕ್ಷಣ ನೀಡಲಾಗುತ್ತಿದ್ದು, ವಿದ್ಯಾರ್ಥಿಗಳಿಗೆ ಮಾಧ್ಯಮಾ ಮತ್ತು ವಿಷಯ ಸಂಯೋಜನೆಯ ಆಯ್ಕೆಯಲ್ಲಿ ಮುಕ್ತ ಆವಕಾಶ ನೀಡಲಾಗಿರುತ್ತದೆ. ಕನ್ನಡ ಸೇರಿದಂತೆ ಎಲ್ಲ ಪ್ರಾದೇಶಿಕ ಭಾಷೆಗಳಲ್ಲಿಯೂ ಇಲ್ಲಿ ಶಿಕ್ಷಣ ಲಭ್ಯ. 10 ನೇ ತರಗತಿಯಿಂದ ಉನ್ನತ ಶಿಕ್ಷಣದವರೆಗೆ ಇಲ್ಲಿ ಶಿಕ್ಷಣ ಪಡೆಯಬಹುದಾಗಿದೆ. ಇಲ್ಲಿ ನೀಡುವ ಪ್ರಮಾಣ ಪತ್ರವನ್ನು ದೇಶದ ಬಹುತೇಕ ಎಲ್ಲಾ ಶಿಕ್ಷಣ ಮಂಡಳಿಗಳು, ಸಂಸ್ಥೆಗಳು ಮತ್ತು ವಿಶ್ವವಿದ್ಯಾನಿಲಯಗಳು ಪರಿಗಣಿಸಲಿದ್ದು, ಮುಂದಿನ ಶಿಕ್ಷಣಕ್ಕೆ ಪ್ರವೇಶ ನಿಡುತ್ತವೆ. ಬಹುತೇಕ ಸರ್ಕಾರಿ ಉದ್ಯೋಗದ ನೇಮಕಾತಿ ಸಂದರ್ಭದಲ್ಲಿಯೂ ಪರಿಗಣಿಸಲಾಗುತ್ತದೆ.

ಬೆಂಗಳೂರಿ ಪ್ರಾದೇಶಿಕ ಕಚೇರಿಯವೆ ವೆಬ್‌ ವಿಳಾಸ ಇಂತಿದೆ: https://rcbengaluru.nios.ac.in

ಇಗ್ನೋದಲ್ಲಿಯೂ ಕಲಿಕೆಯ ಅವಕಾಶ

ಇಂದಿರಾ ಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವಿವಿದ್ಯಾಲಯ (IGNOU) ಕೂಡ ಬೆಂಗಳೂರಿನಲ್ಲಿ ಪ್ರಾದೇಶಿಕ ಕಚೇರಿ ಹೊಂದಿದ್ದು, ರಾಜ್ಯದ ವಿದ್ಯಾರ್ಥಿಗಳಿಗೆ ದೂರ ಶಿಕ್ಷಣ ನೀಡುವ ಕೆಲಸ ಮಾಡುತ್ತಿದೆ. ಪದವಿ, ಸ್ನಾತಕೋತ್ತರ ಪದವಿ, ಪಿಜಿ ಡಿಪ್ಲೊಮಾ ಮತ್ತು ಸರ್ಟಿಫಿಕೇಷನ್‌ ಕೋರ್ಸ್‌ಗಳನ್ನು ಇಲ್ಲಿ ಮಾಡಬಹುದಾಗಿದೆ. ರಾಜ್ಯಾದ್ಯಂತ 55 ಅಧ್ಯಯನ ಕೇಂದ್ರಗಳನ್ನು ಈ ವಿವಿಯು ಹೊಂದಿದ್ದು, ಉತ್ತಮವಾದ ಶಿಕ್ಷಣವನ್ನು ನೀಡುವ ಕೆಲಸ ಮಾಡುತ್ತಿದೆ.

ರಾಜ್ಯದಲ್ಲಿನ ಅಧ್ಯಯನ ಕೇಂದ್ರಗಳ ಮಾಹಿತಿಗೆ ಇಲ್ಲಿ ಕ್ಲಿಕ್‌ (Click Here) ಮಾಡಿ.

ಬೆಂಗಳೂರಿ ಪ್ರಾದೇಶಿಕ ಕಚೇರಿಯವೆ ವೆಬ್‌ ವಿಳಾಸ ಇಂತಿದೆ: http://rcbangalore.ignou.ac.in

ಎಚ್ಚರಿಕೆ ವಹಿಸಿ!

ಯಾವುದೇ ಕರೆಸ್ಪಾಂಡೆನ್ಸ್‌ ಪದವಿ ಮಾದುವುದಕ್ಕೂ ಮೊದಲು ವಿದ್ಯಾರ್ಥಿಗಳು ಆ ಕೋರ್ಸ್‌ ಯುಜಿಸಿಯಿಂದ ಮಾನ್ಯತೆ ಪಡೆದಿದೆಯೇ ಎಂಬುದನ್ನು ಪರಿಶೀಲಿಸಿಕೊಳ್ಳಬೇಕು. ಇಂದು ಅನೇಕ ಖಾಸಗಿ ಶಿಕ್ಷಣ ಸಂಸ್ಥೆಗಳೂ ದೂರ ಶಿಕ್ಷಣವನ್ನು ನೀಡುತ್ತಿದ್ದು, ಇವು ಅಗತ್ಯ ಎಲ್ಲ ಮಾನ್ಯತೆ ಪಡೆದುಕೊಂಡಿವೆಯೇ ಎಂಬುದನ್ನು ಪರಿಶೀಲಿಸಿಯೇ ವಿದ್ಯಾರ್ಥಿಗಳು ಕೋರ್ಸ್‌ ಮಾಡಲು ಮುಂದಾಗಬೇಕು. ಮಾನ್ಯತೆ ಪಡೆಯದ ವಿವಿಗಳಲ್ಲಿ, ಶಿಕ್ಷಣ ಸಂಸ್ಥೆಗಳಲ್ಲಿ ಕೋರ್ಸ್‌ ಮಾಡಿದರೆ ಅದು ಉಪಯೋಗಕ್ಕೆ ಬಾರದು.

ಇದನ್ನೂ ಓದಿ : Education Guide : ಸುಲಭದ ಮತ್ತು ಗುಣಮಟ್ಟದ ಶಿಕ್ಷಣಕ್ಕೆ ಸ್ವಯಂ ಯೋಜನೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Ayudha Puja: ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮ; ಭಕ್ತಾಧಿಗಳಿಂದ ದೇವಸ್ಥಾನಗಳು ಹೌಸ್‌ಫುಲ್‌

Ayudha Puja: ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮ ಮನೆ ಮಾಡಿದ್ದು, ಭಕ್ತಾಧಿಗಳಿಂದ ದೇವಸ್ಥಾನಗಳು ಹೌಸ್‌ಫುಲ್‌ ಆಗಿವೆ. ಸವಾರರು ತಮ್ಮ ವಾಹನಗಳಿಗೆ ಪೂಜೆ ಸಲ್ಲಿಸಲು ದೇವಸ್ಥಾನಕ್ಕೆ ಲಗ್ಗೆ ಇಟ್ಟಿದ್ದರು.

VISTARANEWS.COM


on

By

Ayudha Puja celebrations across the karnataka state Temples housefull by devotees
Koo

ಬೆಂಗಳೂರು: ನಾಡಿನೆಲ್ಲೆಡೆ ಆಯುಧ ಪೂಜಾ (Ayudha Puja) ಸಂಭ್ರಮ ಜೋರಾಗಿದೆ. ಆಯುಧ ಪೂಜೆಯ ಸಲುವಾಗಿ ನಗರದ ದೇವಸ್ಥಾನಗಳಲ್ಲಿ ವಿಶೇಷ ಪೂಜೆ ನಡೆಯುತ್ತಿದೆ.

ಬನಶಂಕರಿ, ಆ್ಯಕ್ಸಿಡೆಂಡ್ ಗಣೇಶ, ಸರ್ಕಲ್ ಮಾರಮ್ಮ, ಕಾಡುಮಲ್ಲೆಶ್ವರಂ ದೇವಸ್ಥಾನಕ್ಕೆ ಭಕ್ತರು ದೌಡಾಯಿಸಿದ್ದಾರೆ. ಬೆಳಗಿನಿಂದಲೇ ಪಂಚಾಭಿಷೇಕ ನೇರಿವೇರಿದ್ದು, ವಿಶೇಷ ಅಲಂಕಾರ ಮಾಡಿ ನಂತರ ಭಕ್ತಾಧಿಗಳಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

Ayudha Puja celebrations across the karnataka state  Temples housefull by devotees

ಅಲ್ಲದೇ ಮನೆಗಳಲ್ಲಿ ಆಯುಧಗಳಿಗೆ ಪೂಜೆ ಮಾಡಿ ಸಲ್ಲಿಸಿದ್ದು, ವಾಹನಗಳಿಗೆ ಪೂಜೆ ಮಾಡುವ ಸಲುವಾಗಿ ಸಾಕಷ್ಟು ಸಂಖ್ಯೆಯಲ್ಲಿ ದೇವಸ್ಥಾನಕ್ಕೆ ವಾಹನ ಸವಾರರು ಆಗಮಿಸುತ್ತಿದ್ದಾರೆ. ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ಸರ್ಕಲ್ ಮಾರಮ್ಮ ದೇವಸ್ಥಾನದಲ್ಲಿ ಆಯುಧ ಪೂಜೆಯ ಸಂಭ್ರಮ ಜೋರಾಗಿತ್ತು. ದೇವಿಗೆ ಮುತ್ತಿನ ಅಲಂಕಾರ ಮಾಡಲಾಗಿದ್ದು, ಬೆಳಗ್ಗೆಯಿಂದ ದೇವಿಗೆ ವಿಶೇಷ ಪೂಜೆ ಪುರಸ್ಕಾರ ನಡೆದಿದೆ.

Ayudha Puja celebrations across the karnataka state  Temples housefull by devotees

ಭಕ್ತರು ತಮ್ಮ ವಾಹನಗಳಿಗೆ ಪೂಜೆ ಮಾಡಿಸಲು ಮುಗಿಬಿದ್ದಿದ್ದರು. ಹೀಗಾಗಿ ಸರ್ಕಲ್ ಮಾರಮ್ಮ ದೇವಸ್ಥಾನದ ಸುತ್ತ ಟ್ರಾಫಿಕ್ ಜಾಮ್‌ ಉಂಟಾಗಿತ್ತು. ಟ್ರಾಫಿಕ್‌ ಕ್ಲಿಯರ್‌ ಮಾಡಲು ಪೊಲೀಸರು ಹರಸಾಹಸ ಪಡಬೇಕಾಯಿತು. ಇಂದು ಶುಕ್ರವಾರ ಬೆಳಗ್ಗೆಯಿಂದ ಸಂಜೆಯವೆಗೂ ದೇವಸ್ಥಾನದಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ನಡೆಯಲಿದೆ.

ವಿಸ್ತಾರ ನ್ಯೂಸ್‌ ಕಚೇರಿಯಲ್ಲೂ ಆಯುಧ ಪೂಜೆ ಸಂಭ್ರಮ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಮಳೆ

Karnataka Weather : ದಕ್ಷಿಣದಿಂದ ಉತ್ತರ ಒಳನಾಡಿನವರೆಗೂ ಗುಡುಗು ಸಹಿತ ವ್ಯಾಪಕ ಮಳೆ ಮುನ್ಸೂಚನೆ

Karnataka Weather Forecast : ದಕ್ಷಿಣದಿಂದ ಉತ್ತರ ಒಳನಾಡಿನವರೆಗೂ ಗುಡುಗು ಸಹಿತ ವ್ಯಾಪಕ ಮಳೆಯಾಗುವ (Rain News) ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.

VISTARANEWS.COM


on

By

karnataka Weather Forecast
Koo

ಬೆಂಗಳೂರು: ದಕ್ಷಿಣ ಮತ್ತು ಉತ್ತರ ಒಳನಾಡು ಮತ್ತು ಮಲೆನಾಡು ಪ್ರದೇಶಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ (Heavy Rain News) ಸಾಧ್ಯತೆಯಿದೆ. ಕರಾವಳಿಯಲ್ಲಿ ಗುಡುಗು ಜತೆಗೆ ಸಾಧಾರಣ ಮಳೆಯೊಂದಿಗೆ ಪ್ರತ್ಯೇಕ ಸ್ಥಳಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.

ದಕ್ಷಿಣ ಒಳನಾಡಿನ ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ಮೈಸೂರು, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು ಸೇರಿದಂತೆ ವಿಜಯನಗರದಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಒಳನಾಡಿನ ಕೊಪ್ಪಳ, ರಾಯಚೂರು, ವಿಜಯಪುರ, ಬಳ್ಳಾರಿ, ಬೆಳಗಾವಿ, ಧಾರವಾಡ, ಗದಗ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ. ಉಳಿದ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಮಲೆನಾಡಿನಲ್ಲಿ ಭಾರಿ ಮಳೆ

ಮಲೆನಾಡಿನ ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆಯಾಗುವ ಸಾಧ್ಯತೆ ಇದೆ. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಒಳನಾಡಿನಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಬೆಂಗಳೂರು ಸುತ್ತಮುತ್ತ ಚದುರಿದಂತೆ ವ್ಯಾಪಕವಾಗಿ ಮಧ್ಯಮ ಮಳೆಯಾಗಲಿದೆ. ಕೆಲವೆಡೆ ಗುಡುಗು ಸಹಿತ ಭಾರಿ ಮಳೆಯಾಗಲಿದೆ.

ಒಳನಾಡಿನ ಜಿಲ್ಲೆಗಳಿಗೆ ಅಲರ್ಟ್‌

ಗುಡುಗು ಸಹಿತ ಭಾರಿ ಮಳೆಯಾಗಲಿದ್ದು, ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ದಾವಣಗೆರೆ ಮತ್ತು ತುಮಕೂರು ಜಿಲ್ಲೆಗಳಿಗೆ ಐಎಂಡಿ ಯೆಲ್ಲೋ ಅಲರ್ಟ್ ಘೋಷಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಭವಿಷ್ಯ

Dina Bhavishya : ನಂಬಿದ ವ್ಯಕ್ತಿಗಳಿಂದ ಈ ರಾಶಿಯವರು ಮೋಸ ಹೋಗುತ್ತೀರಿ

Dina Bhavishya: ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವಿನ ಮಾಸ, ಶುಕ್ಲ ಪಕ್ಷದ ಅಷ್ಟಮಿ ದಿನವಾದ ಇಂದು ದ್ವಾದಶ ರಾಶಿಗಳ ಭವಿಷ್ಯ ಹೇಗಿದೆ ಎಂಬ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

VISTARANEWS.COM


on

By

Dina Bhavishya
Koo

ಚಂದ್ರನು ಮಕರ ರಾಶಿಯಿಂದ ಶುಕ್ರವಾರ ಮಧ್ಯಾಹ್ನ 12:31ಕ್ಕೆ ಕುಂಭ ರಾಶಿಯನ್ನು ಪ್ರವೇಶಿಸುತ್ತಾನೆ. ಇದರಿಂದಾಗಿ ಮೇಷ, ಕಟಕ, ಸಿಂಹ, ವೃಶ್ಚಿಕ, ಮಕರ, ಮೀನ ರಾಶಿಯವರಿಗೆ ಚಂದ್ರನ ಬಲ ದೊರೆಯಲಿದೆ. ಇಂದಿನ ದಿನ ಭವಿಷ್ಯವನ್ನು (Dina Bhavishya) ನೋಡುವುದಾದರೆ, ಮೇಷ ರಾಶಿಯವರು ಯಾವುದಾದರೂ ಮೂಲದಿಂದ ಆರ್ಥಿಕ ಲಾಭ ಬರಲಿದೆ. ಅತಿರೇಕದ ಮಾತುಗಳು ಜಗಳ ಉಂಟುಮಾಡಬಹುದು, ಮಾತಿನಲ್ಲಿ ಹಿಡಿತವಿರಲಿ. ಆರೋಗ್ಯದಲ್ಲಿ ಕೊಂಚ ಮಟ್ಟಿಗೆ ಏರುಪೇರು ಉಂಟಾಗುವ ಸಾಧ್ಯತೆ ಇದೆ. ವೃಷಭ ರಾಶಿಯವರು ಭಾವನಾತ್ಮಕ ವಿಷಯಗಳಿಂದ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ದಿನದ ಮಟ್ಟಿಗೆ ಖರ್ಚು ಇರಲಿದೆ. ಕುಟುಂಬದ ಆಪ್ತರಿಂದ ಆಮಂತ್ರಣ ಸಿಗಲಿದೆ. ಆರೋಗ್ಯದ ಕುರಿತು ವಿಶೇಷ ಕಾಳಜಿ ಅವಶ್ಯ. ಉದ್ಯೋಗಿಗಳಿಗೆ ಶುಭಫಲ. ಇದೂ ಸೇರಿದಂತೆ ದ್ವಾದಶ ರಾಶಿಗಳ ಇಂದಿನ ಭವಿಷ್ಯ ಹೇಗಿದೆ? ಪಂಚಾಂಗ ಏನು ಹೇಳುತ್ತದೆ ಎಂಬುದನ್ನು ತಿಳಿಯೋಣ.

ಇಂದಿನ ಪಂಚಾಂಗ (kannada panchanga) (11-10-2024)

ಶ್ರೀ ಶಕೇ 1946, ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಶರದ್ ಋತು, ಆಶ್ವಿನ ಮಾಸ, ಶುಕ್ಲ ಪಕ್ಷ.
ತಿಥಿ: ಅಷ್ಟಮಿ 06.40/ ನವಮಿ 05.44 ವಾರ: ಶುಕ್ರವಾರ
ನಕ್ಷತ್ರ: ಉತ್ತರಾಷಾಡ 29:24 ಯೋಗ: ಸುಕರ್ಮ 26:45
ಕರಣ: ಭವ 12:06 ಅಮೃತಕಾಲ: ರಾತ್ರಿ 11:05 ರಿಂದ 12:40
ದಿನದ ವಿಶೇಷ: ಶರನ್ನವರಾತ್ರಿ ಒಂಬತ್ತನೇ ದಿವಸ ಬ್ರಹ್ಮಚಾರಿಣಿ ಅವತಾರ.

ಸೂರ್ಯೋದಯ : 06:09   ಸೂರ್ಯಾಸ್ತ : 06:03

ರಾಹುಕಾಲ: ಬೆಳಗ್ಗೆ 10.30 ರಿಂದ 12.00
ಗುಳಿಕಕಾಲ: ಬೆಳಗ್ಗೆ
7.30 ರಿಂದ 9.00
ಯಮಗಂಡಕಾಲ: ಮಧ್ಯಾಹ್ನ 3.00 ರಿಂದ 4.30

ದ್ವಾದಶ ರಾಶಿ ಭವಿಷ್ಯ (Dina Bhavishya in Kannada)

Horoscope Today

ಮೇಷ: ಯಾವುದಾದರೂ ಮೂಲದಿಂದ ಆರ್ಥಿಕ ಲಾಭ ಬರಲಿದೆ. ಅತಿರೇಕದ ಮಾತುಗಳು ಜಗಳ ಉಂಟುಮಾಡಬಹುದು, ಮಾತಿನಲ್ಲಿ ಹಿಡಿತವಿರಲಿ. ಆರೋಗ್ಯದಲ್ಲಿ ಕೊಂಚ ಮಟ್ಟಿಗೆ ಏರುಪೇರು ಉಂಟಾಗುವ ಸಾಧ್ಯತೆ ಇದೆ. ಕೌಟುಂಬಿಕವಾಗಿ ಮಿಶ್ರ ಫಲ.
ಅದೃಷ್ಟ ಸಂಖ್ಯೆ: 1

Horoscope Today

ವೃಷಭ: ಭಾವನಾತ್ಮಕ ವಿಷಯಗಳಿಂದ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ದಿನದ ಮಟ್ಟಿಗೆ ಖರ್ಚು ಇರಲಿದೆ. ಕುಟುಂಬದ ಆಪ್ತರಿಂದ ಆಮಂತ್ರಣ ಸಿಗಲಿದೆ. ಆರೋಗ್ಯದ ಕುರಿತು ವಿಶೇಷ ಕಾಳಜಿ ಅವಶ್ಯ. ಉದ್ಯೋಗಿಗಳಿಗೆ ಶುಭಫಲ. ಕೌಟುಂಬಿಕವಾಗಿ ಶುಭ ಫಲ.
ಅದೃಷ್ಟ ಸಂಖ್ಯೆ: 1

Horoscope Today

ಮಿಥುನ: ಏಕಪಕ್ಷೀಯ ವ್ಯಾಮೋಹದಿಂದ ಒತ್ತಡ ಸಾಧ್ಯತೆ ಕಡಿಮೆ ಮಾಡಿಕೊಳ್ಳಿ. ಆಹ್ಲಾದಕಾರಿ ಮನಸ್ಥಿತಿಯಲ್ಲಿರುತ್ತೀರಿ. ಭರವಸೆಯ ಹೊಸ ಅವಕಾಶಗಳು ಸಿಗುವ ಸಾಧ್ಯತೆ ಇದೆ. ಆರ್ಥಿಕ ಪ್ರಗತಿ ಮಧ್ಯಮ. ಆರೋಗ್ಯ ಪರಿಪೂರ್ಣವಾಗಿರಲಿದೆ. ಉದ್ಯೋಗಿಗಳಿಗೆ ಶುಭ ಫಲ.ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 8

Horoscope Today

ಕಟಕ: ಅತ್ಯಂತ ಪ್ರಭಾವಿ ಜನರ ಬೆಂಬಲ ನಿಮ್ಮ ನೈತಿಕ ಸ್ಥೈರ್ಯವನ್ನು ಹೆಚ್ಚಿಸುತ್ತದೆ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ವ್ಯಾಪಾರ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಅತಿರೇಕದಲ್ಲಿ ಯಾವುದೇ ಮಾತುಗಳು ಅಪಾಯ ತರಬಹುದು. ಉದ್ಯೋಗಿಗಳಿಗೆ ಒತ್ತಡ ಹೆಚ್ಚಲಿದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 2

Horoscope Today

ಸಿಂಹ: ಕೋಪದಿಂದ ಕಾರ್ಯದಲ್ಲಿ ಹಾನಿಯಾಗಲಿದೆ. ಆರ್ಥಿಕ ಪ್ರಗತಿ ಇರಲಿದೆ. ಸಂಬಂಧಿಗಳೊಂದಿಗೆ ಕಾಲ ಕಳೆಯುವ ಸಾಧ್ಯತೆ ಇದೆ. ಹೇಳಿಕೆಯ ಮಾತುಗಳು ಕುಟುಂಬದ ವಾತಾವರಣ ಕೆಡಿಸುವುದು ಎಚ್ಚರಿಕೆ ಇರಲಿ. ಸಹದ್ಯೋಗಿಗಳಿಂದ ಕಿರಿಕಿರಿಯಾಗಲಿದೆ. ಆರೋಗ್ಯದ ಕಾಳಜಿ ಇರಲಿ.ಕೌಟುಂಬಿಕವಾಗಿ ಸಾಧಾರಣ ಫಲ. ಅದೃಷ್ಟ ಸಂಖ್ಯೆ: 1

Horoscope Today

ಕನ್ಯಾ: ಮನರಂಜನೆಗಾಗಿ ಸಮಯ ಕಳೆಯುವ ಸಾಧ್ಯತೆ ಇದೆ. ಆಪ್ತರೊಂದಿಗೆ ಮಾತುಕತೆಯಲ್ಲಿ ತೊಡಗುವಿರಿ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಪಾಲುದಾರಿಕೆ ಹೂಡಿಕೆ ವ್ಯವಹಾರದಲ್ಲಿ ತೊಡಗುವುದು ಬೇಡ. ಉದ್ಯೋಗಿಗಳಿಗೆ ಕಿರಿಕಿರಿಯಾಗಲಿದೆ. ನಂಬಿದ ವ್ಯಕ್ತಿಗಳು ನಿಮ್ಮನ್ನು ಮೋಸಗೊಳಿಸಬಹುದು. ತಪ್ಪು ತಿಳುವಳಿಕೆ ಉಂಟಾಗುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 8

ಭವಿಷ್ಯ ಮತ್ತು ಜ್ಯೋತಿಷ್ಯಕ್ಕೆ ಸಂಬಂಧಿಸಿದ ಲೇಖನ/ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ (Click Here) ಮಾಡಿ

Horoscope Today

ತುಲಾ: ಸಕಾರಾತ್ಮಕ ಆಲೋಚನೆಗಳಿಂದ ಕಾರ್ಯದಲ್ಲಿ ಯಶಸ್ಸು.ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಹಳೆಯ ವಿಚಾರ ಕೆದಕಿ ಮನಸ್ಸಿಗೆ ಘಾಸಿ ಮಾಡಿಕೊಳ್ಳುವುದು ಬೇಡ. ಆರೋಗ್ಯ ಮಧ್ಯಮವಾಗಿರಲಿದೆ. ಉದ್ಯೋಗಿಗಳಿಗೆ ಮಿಶ್ರ ಫಲ. ಕೌಟುಂಬಿಕವಾಗಿ ಸಾಧಾರಣ ಫಲ.
ಅದೃಷ್ಟ ಸಂಖ್ಯೆ: 1

Horoscope Today

ವೃಶ್ಚಿಕ: ದೀರ್ಘಕಾಲದ ಅನಾರೋಗ್ಯಕ್ಕೆ ಪರಿಹಾರ ಸಿಗಲಿದೆ. ಹೂಡಿಕೆ, ವ್ಯಾಪಾರ ವ್ಯವಹಾರಗಳಲ್ಲಿ ಆರ್ಥಿಕ ಪ್ರಗತಿ ಇರಲಿದೆ. ಉದ್ಯೋಗಿಗಳಿಗೆ ಹೊಸ ಭರವಸೆ ಮೂಡಲಿದೆ. ಅಮೂಲ್ಯ ವಸ್ತುಗಳು ಕೈಗೆ ಸಿಗುವುದರಿಂದ ಸಂತಸ. ಕೌಟುಂಬಿಕವಾಗಿ ಶುಭಫಲ. ಅದೃಷ್ಟ ಸಂಖ್ಯೆ: 3

Horoscope Today

ಧನಸ್ಸು: ಭೂಮಿ ಸಂಬಂಧಿ ವ್ಯವಹಾರ, ಹಣಕಾಸು ವ್ಯವಹಾರದಲ್ಲಿ ಲಾಭ ಇರಲಿದೆ. ಪ್ರಯಾಣ ಮಾಡುವ ಸಾಧ್ಯತೆ ಇದೆ. ಆರೋಗ್ಯ ಪರಿಪೂರ್ಣವಾಗಿರಲಿದೆ. ಸಹದ್ಯೋಗಿಗಳಿಂದ ಸಹಕಾರ ಸಿಗಲಿದೆ. ವಿವಾಹ ಅಪೇಕ್ಷಿತರಿಗೆ ಕಂಕಣ ಬಲ. ಕುಟುಂಬದಲ್ಲಿ ಹೊಸ ಭರವಸೆ.ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 9

Horoscope Today

ಮಕರ: ಭರವಸೆಯ ಹೊಸ ಜೀವನ ಶುರುವಾಗಲಿದೆ. ದೀರ್ಘಕಾಲದ ಹೂಡಿಕೆ ವ್ಯವಹಾರದಲ್ಲಿ, ಆರ್ಥಿಕ ಪ್ರಗತಿ ಇರಲಿದೆ. ನೀವು ಮಾಡಿದ ಕೆಲಸ ಕಾರ್ಯಗಳ ಫಲಿತಾಂಶ ಬೇರೆಯವರು ತೆಗೆದುಕೊಂಡು ಪ್ರಶಂಸೆ ಪಡುವ ಸಾಧ್ಯತೆ, ಎಚ್ಚರಿಕೆ ಇರಲಿ. ಆರೋಗ್ಯ ಪರಿಪೂರ್ಣ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 9

Horoscope Today

ಕುಂಭ: ಬಾಕಿ ಇರುವ ಕೆಲಸ ಕಾರ್ಯಗಳು ಪೂರ್ಣವಾಗಲಿದೆ. ಅವಶ್ಯಕ ವಸ್ತುಗಳ ಖರೀದಿ. ಅಷ್ಟೇ ಆರ್ಥಿಕ ಲಾಭ ಇರಲಿದೆ. ಕುಟುಂಬದಲ್ಲಿ ಭಿನ್ನಾಭಿಪ್ರಾಯ ಮೂಡುವ ಸಾಧ್ಯತೆ ಇದೆ, ಮಾತು ಬೆಳೆಸುವುದು ಬೇಡ.ಸಾಮಾಜಿಕ ಕಾರ್ಯದಲ್ಲಿ ತೊಡಗುವ ಸಾಧ್ಯತೆ ಇದೆ.
ಆರೋಗ್ಯ ಪರಿಪೂರ್ಣವಾಗಿರಲಿದೆ. ಕೌಟುಂಬಿಕವಾಗಿ ಶುಭ ಫಲ. ಅದೃಷ್ಟ ಸಂಖ್ಯೆ: 7

Horoscope Today

ಮೀನ: ಹಳೆಯ ನೋವು ಉಲ್ಬಣಗೊಳ್ಳವ ಸಾಧ್ಯತೆ ಇದೆ, ಆರೋಗ್ಯದ ಕಡೆಗೆ ಗಮನ ಇರಲಿ. ಆರ್ಥಿಕ ಪ್ರಗತಿ ಸಾಧಾರಣವಾಗಿರಲಿದೆ. ಅಗತ್ಯ ವಸ್ತುಗಳ ಖರೀದಿಯಿಂದ ಖರ್ಚು ಇರಲಿದೆ. ಸಂಬಂಧಿಗಳೊಂದಿಗೆ ಮಾತುಕತೆಯಲ್ಲಿ ತೊಡಗುವಿರಿ. ಉದ್ಯೋಗಿಗಳಿಗೆ ಒತ್ತಡ.ಕೌಟುಂಬಿಕವಾಗಿ ಮಿಶ್ರ ಫಲ. ಅದೃಷ್ಟ ಸಂಖ್ಯೆ: 5

Horoscope Today

ವಿದ್ವಾನ್ ಶ್ರೀ ನವೀನಶಾಸ್ತ್ರಿ ರಾ. ಪುರಾಣಿಕ
ಖ್ಯಾತ ಜ್ಯೋತಿಷಿ ಹಾಗೂ ಉಪನ್ಯಾಸಕರು

M: 9481854580 | pnaveenshastri@gmail.com

Continue Reading

ಮಳೆ

Karnataka Weather : ಚಿಕ್ಕಮಗಳೂರಿನಲ್ಲಿ ಅಬ್ಬರಿಸುತ್ತಿರುವ ಮಳೆ; ನಾಳೆಗೂ ಭಾರಿ ವರ್ಷಧಾರೆ

Karnataka Weather Forecast: ಚಿಕ್ಕಮಗಳೂರಿನಲ್ಲಿ ಗುರುವಾರ ಮಳೆ ಅಬ್ಬರಿಸಿದ್ದು, ನಾಳೆ ಶುಕ್ರವಾರಕ್ಕೆ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ.

VISTARANEWS.COM


on

By

karnataka Weather Forecast
Koo

ಬೆಳಗಾವಿ/ಚಿಕ್ಕಮಗಳೂರು: ಬೆಳಗಾವಿಯಲ್ಲಿ ಧಾರಾಕಾರ ಮಳೆಯಿಂದಾಗಿ ಮನೆಗಳಿಗೆ (Rain News) ನೀರು ನುಗ್ಗಿದೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲೂಕಿನ ದೇವಲಾಪೂರ ಗ್ರಾಮದಲ್ಲಿ ಮಳೆರಾಯನ (Karnataka Weather Forecast) ಅಟ್ಟಹಾಸಕ್ಕೆ ಉಡಚ್ಚಮ್ಮಾ ದೇವಿ ದೇವಸ್ಥಾನಕ್ಕೆ ನೀರು ನುಗ್ಗಿದೆ. ಕಳೆದ ಒಂದು ಗಂಟೆಗಳ ಕಾಲ ಸುರಿದ ಭಾರಿ‌ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿದೆ. ದೇವಲಾಪೂರ ಮತ್ತು ಯರಡಾಲ ರಸ್ತೆ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ವಾಹನ ಸಂಚಾರ ಬಂದ್‌ ಆಗಿತ್ತು. ಮಳೆರಾಯನ ಆರ್ಭಟಕ್ಕೆ ಜಮೀನುಗಳು ನೀರುಪಾಲಾಗಿದ್ದು, ರೈತರು ಸಂಕಷ್ಟ ಅನುಭವಿಸಿದರು.

ಚಿಕ್ಕಮಗಳೂರಿನಲ್ಲೂ ಮಳೆ ಆರ್ಭಟ

ಚಿಕ್ಕಮಗಳೂರಿನ ಚಾರ್ಮಾಡಿ ಘಾಟಿಯಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ರಸ್ತೆಗೆ ಗುಡ್ಡದ ಮಣ್ಣು ಬಿದ್ದಿದ್ದು, 2 ಜೆಸಿಬಿಯಿಂದ ನಿರಂತರ ಮಣ್ಣು ತೆರವಿನ ಕಾರ್ಯ ನಡೆಯುತ್ತಿದೆ. ಸುರಿಯುತ್ತಿರುವ ಮಳೆ ಮಧ್ಯೆಯೇ ತೆರವು ಕಾರ್ಯ ನಡೆಯುತ್ತಿದೆ. ಇನ್ನು ಅಪಾರ ಪ್ರಮಾಣದಲ್ಲಿ ನೀರು ಹರಿದು ರಸ್ತೆ ಬದಿ ಗುಂಡಿಗಳು ನಿರ್ಮಾಣವಾಗಿದೆ. ಹೀಗಾಗಿ ಅಧಿಕಾರಿಗಳು ತಾತ್ಕಾಲಿಕವಾಗಿ ಮಣ್ಣನ್ನು ಹಾಕಿ ಗುಂಡಿಗಳನ್ನು ಮುಚ್ಚುತ್ತಿದ್ದಾರೆ. ಪ್ರಯಾಣಿಕರು ಎಚ್ಚರಿಕೆಯಿಂದ ವಾಹನ ಚಲಾಯಿಸುವಂತೆ ಮನವಿ ಮಾಡಿದ್ದಾರೆ.

ಮಳೆ ಜತೆ ಸರ್ಕಾರಿ ಆಸ್ಪತ್ರೆಗೆ ಡ್ರೈನೇಜ್ ನೀರು ನುಗ್ಗಿದೆ. ಚಿಕ್ಕಮಗಳೂರು ಸರ್ಕಾರಿ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ಕಳೆದ ರಾತ್ರಿ ಸುರಿದ ಮಳೆಯಿಂದ ಸರ್ಕಾರಿ ಆಸ್ಪತ್ರೆ ಜಲಾವೃತಗೊಂಡಿದೆ. ಆಸ್ಪತ್ರೆಯಲ್ಲಿ ನೀರು ತುಂಬಿದ್ದರಿಂದ ರೋಗಿಗಳು ಪರದಾಟಬೇಕಾಯಿತು. ಮಳೆ ನೀರಿನ ಜತೆಗೆ ಡ್ರೈನೇಜ್ ನೀರು ಸೇರಿ ಕೆಟ್ಟ ವಾಸನೆ ಬರುತ್ತಿದ್ದು, ರೋಗಿಗಳು ಪರದಾಡಬೇಕಾಯಿತು.

ಚಿಕ್ಕಮಗಳೂರಿನಲ್ಲಿ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಕುದುರೆಮುಖ, ಸಂಸೆ, ಹೊರನಾಡು ಸುತ್ತಮುತ್ತ ಮಳೆ ಅಬ್ಬರಿಸುತ್ತಿದೆ. ಕಳಸ ಪಟ್ಟಣದಲ್ಲೂ ಧಾರಾಕಾರ ಮಳೆಯಾಗುತ್ತಿದೆ. ಭಾರಿ ಮಳೆಯಿಂದ ಕಾಫಿ-ಅಡಿಕೆ ಬೆಳೆಗಾರರು ಆತಂಕಕ್ಕೀಡಾಗಿದ್ದಾರೆ. ಮಲೆನಾಡಿನಾದ್ಯಂತ ಬೆಳೆಗ್ಗೆಯಿಂದಲೂ ಮೋಡ ಕವಿದ ವಾತವರಣ ಇದೆ.

ಉಕ್ಕಿ ಹರಿದ ಇಂದಿರಮ್ಮನ ಕೆರೆ

ಧಾರವಾಡದಲ್ಲಿ ಸುರಿದ ನಿರಂತರ ಮಳೆಗೆ ಅಳ್ನಾವರ ತಾಲೂಕಿನ ಇಂದಿರಮ್ಮನ ಕೆರೆ ತುಂಬಿ ಹರಿಯುತ್ತಿದೆ. ಕೆರೆ ಕೋಡಿ ಬಿದ್ದು ತುಂಬಿ ಹರಿಯುತ್ತಿರುವ ದೃಶ್ಯ ನೋಡಲು ಗ್ರಾಮಸ್ಥರು ಮುಗಿಬಿದ್ದಿದ್ದರು. ಕೆಲ ಯುವಕರು ಕೆರೆ ಕೋಡಿ ಬಿದ್ದು ಹರಿಯುತ್ತಿದ್ದ ನೀರಿನಲ್ಲಿ ದಾಟುವ ಹುಚ್ಚುತನ ಪ್ರದರ್ಶಿಸಿದ್ದರು. ಯುವಕನ ಹುಚ್ಚಾಟಕ್ಕೆ ಗ್ರಾಮಸ್ಥರು ಆಕ್ರೋಶ ಹೊರಹಾಕಿದರು.

ಕಳೆದ ಬುಧವಾರ ರಾತ್ರಿಯಿಡೀ ಸುರಿದ ಭಾರಿ ಮಳೆಗೆ ವಿದ್ಯಾಕಾಶಿ ಜನರು ತತ್ತರಿಸಿ ಹೋಗಿದ್ದರು. ಧಾರವಾಡದಲ್ಲಿ ಮಳೆಯು ಅವಾಂತರವೇ ಸೃಷ್ಟಿಸಿತ್ತು. ಮಳೆಯ ನೀರು ನಿಂತಿರುವ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಧಾರವಾಡದ ಸಂಪಿಗೆನಗರ, ನಿಲಸಿಟಿ, ಶ್ರೀಶ ರೆಸಿಡೆನ್ಸಿ, ವ್ಯಾಸ ವಿಹಾರ ಲೇಔಟ್‌ನ ತುಂಬ ನೀರು ನಿಂತಿದ್ದರಿಂದ, ಜನರು ಮನೆಯಿಂದ ಹೊರ ಬರಲು ಆಗದೆ ಪರದಾಡಿದರು. ರಾಜಕಾಲುವೆ ಇಲ್ಲದಿರುವುದೇ ಇದಕ್ಕೆ ಕಾರಣವೆಂದು ದೂರಿದರು. ಸ್ಥಳಕ್ಕೆ ಬಂದ ಅಧಿಕಾರಿಗಳ ವಿರುದ್ಧ ದೂರುಗಳ ಪಟ್ಟಿ ನೀಡಿದ್ದರು.

ಧಾರವಾಡದಲ್ಲಿ ಮಳೆ ಅವಾಂತರ

ರಾತ್ರಿಯಿಡೀ ಸುರಿದ ಮಳೆಗೆ ಕಟಾವಿಗೆ ಬಂದಿದ್ದ ಬೆಳೆಗಳು ನೀರಲ್ಲಿ ಹೋಮವಾಗಿದೆ. ಲಕ್ಷಾಂತರ ರೂ ಮೌಲ್ಯದ ಬೆಳೆಗಳು ಮಳೆಗೆ ನೆಲಸಮವಾಗಿದೆ. ಧಾರವಾಡ ತಾಲೂಕಿನ ಕವಲಗೇರಿ ಗ್ರಾಮದ ರೈತರು ಕಂಗಾಲಾಗಿದ್ದಾರೆ. ಮಳೆಗೆ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದ್ದು, ವಾಹನ ಸವಾರರು ಪರದಾಡಬೇಕಾಯಿತು. ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಶಿರಕೋಳ ಗ್ರಾಮ ಜಲಾವೃತಗೊಂಡಿದೆ. ಮಳೆಯ ಆರ್ಭಟಕ್ಕೆ ಮನೆಗಳೆಲ್ಲ ಕೆರೆಯಂತೆ ನಿರ್ಮಾಣವಾಗಿದ್ದು, ಮಳೆ ಬಂದಾಗೆಲ್ಲ ಇದೆ ಸಮಸ್ಯೆ ಅನುಭವಿಸುವಂತಾಗಿದೆ.

ಲಕ್ಷ್ಮೇಶ್ವರ-ದೊಡ್ಡೂರ ರಸ್ತೆ ಸಂಪರ್ಕ ಕಡಿತ

ಬೆಳಗಿನ ಜಾವ ಸುರಿದ ಭಾರಿ ಮಳೆಗೆ ಹಳ್ಳಕೊಳ್ಳ ತುಂಬಿ ಹರಿಯುತ್ತಿದೆ. ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ದೊಡ್ಡೂರ ಬಳಿ ಹಳ್ಳದಲ್ಲಿ ನೀರು ತುಂಬಿ ಹರಿದಿದ್ದು, ಲಕ್ಷ್ಮೇಶ್ವರ-ದೊಡ್ಡೂರ ರಸ್ತೆ ಸಂಪರ್ಕ ಕಡಿತಗೊಂಡಿದೆ. ವಾಹನ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಹಳ್ಳದಲ್ಲಿ ಬೆಳೆ ಕಟಾವು ಯಂತ್ರ ಸಿಲುಕಿದ್ದರಿಂದ ರೈತರು ಪರದಾಡಿದರು. ಪ್ರತಿ ಬಾರಿ ಮಳೆಯಾದರೆ ಇದೇ ಸಂಕಷ್ಟ ಎದುರಾಗುತ್ತದೆ. ಸೇತುವೆ ನಿರ್ಮಾಣಕ್ಕೆ ಅನೇಕ ಬಾರಿ ಮನವಿ ಮಾಡಿದ್ದರು ಕ್ಯಾರೆ ಅಂತಿಲ್ಲ ಎಂದು ಆಕ್ರೋಶ ಹೊರಹಾಕಿದರು.

Continue Reading
Advertisement
Ayudha Puja celebrations across the karnataka state Temples housefull by devotees
ಬೆಂಗಳೂರು1 ಗಂಟೆ ago

Ayudha Puja: ನಾಡಿನೆಲ್ಲೆಡೆ ಆಯುಧ ಪೂಜೆ ಸಂಭ್ರಮ; ಭಕ್ತಾಧಿಗಳಿಂದ ದೇವಸ್ಥಾನಗಳು ಹೌಸ್‌ಫುಲ್‌

karnataka Weather Forecast
ಮಳೆ8 ಗಂಟೆಗಳು ago

Karnataka Weather : ದಕ್ಷಿಣದಿಂದ ಉತ್ತರ ಒಳನಾಡಿನವರೆಗೂ ಗುಡುಗು ಸಹಿತ ವ್ಯಾಪಕ ಮಳೆ ಮುನ್ಸೂಚನೆ

Dina Bhavishya
ಭವಿಷ್ಯ8 ಗಂಟೆಗಳು ago

Dina Bhavishya : ನಂಬಿದ ವ್ಯಕ್ತಿಗಳಿಂದ ಈ ರಾಶಿಯವರು ಮೋಸ ಹೋಗುತ್ತೀರಿ

karnataka Weather Forecast
ಮಳೆ20 ಗಂಟೆಗಳು ago

Karnataka Weather : ಚಿಕ್ಕಮಗಳೂರಿನಲ್ಲಿ ಅಬ್ಬರಿಸುತ್ತಿರುವ ಮಳೆ; ನಾಳೆಗೂ ಭಾರಿ ವರ್ಷಧಾರೆ

Actor Darshan
ಬೆಂಗಳೂರು21 ಗಂಟೆಗಳು ago

Actor Darshan : ನಟ ದರ್ಶನ್‌ ಜಾಮೀನು ಭವಿಷ್ಯ ಅ.14ಕ್ಕೆ ನಿರ್ಧಾರ; ವಾದ-ಪ್ರತಿವಾದ ಆಲಿಸಿ ಆದೇಶ ಕಾಯ್ದಿರಿಸಿದ ಕೋರ್ಟ್‌

Fake journalist arrested for targeting bakeries For money
ಬೆಂಗಳೂರು22 ಗಂಟೆಗಳು ago

Fake journalist : ಜನ ಸಾಮಾನ್ಯರ ಬಳಿ ಸುಲಿಗೆ ಮಾಡುತ್ತಿದ್ದ ನಕಲಿ‌ ಪತ್ರಕರ್ತ ಅರೆಸ್ಟ್‌

Murder case
ತುಮಕೂರು24 ಗಂಟೆಗಳು ago

Murder Case : ಬುದ್ದಿವಾದ ಹೇಳಿದ್ದಕ್ಕೆ ತಾಯಿಯನ್ನೇ ಕೊಂದ ಮಗನಿಗೆ ಜೀವಾವಧಿ ಶಿಕ್ಷೆ ವಿಧಿಸಿದ ಕೋರ್ಟ್‌

Ratan Tata missed england's royal honour to take care of sick dogs
ದೇಶ1 ದಿನ ago

Ratan Tata : ಕಾಯಿಲೆ ಬಿದ್ದ ನಾಯಿಗಳನ್ನು ನೋಡಿಕೊಳ್ಳಲು ಇಂಗ್ಲೆಂಡ್‌ನ ರಾಯಲ್‌ ಸನ್ಮಾನವನ್ನೇ ಮಿಸ್‌ ಮಾಡಿದ್ದರು ರತನ್‌ ಟಾಟಾ!

Ratan Tata joined the company as an ordinary employee but Why is he the guru of the industry
ದೇಶ1 ದಿನ ago

Ratan Tata : ರತನ್‌ ಟಾಟಾ ಕಂಪನಿ ಸೇರಿದ್ದು ಸಾಮಾನ್ಯ ಉದ್ಯೋಗಿಯಾಗಿ! ಉದ್ಯಮ ರಂಗದ ಗುರು ಆಗಿದ್ದೇಗೆ?

Ratan Tata
ದೇಶ1 ದಿನ ago

Ratan Tata : ಕೈಗಾರಿಕೋದ್ಯಮದ ರತ್ನ ʻರತನ್‌ ಟಾಟಾʼ ಇನ್ನಿಲ್ಲ; ಖ್ಯಾತ ಉದ್ಯಮಿಯ ನಿಧನಕ್ಕೆ ಗಣ್ಯರ ಸಂತಾಪ

galipata neetu
ಕಿರುತೆರೆ11 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ1 ವರ್ಷ ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ1 ವಾರ ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 ತಿಂಗಳುಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌