Site icon Vistara News

ಅಕ್ರಮ ಸಂಬಂಧ ನಿಜ; ಅನಂತರಾಜು ಸಾವಿಗೆ ನಾನು ಕಾರಣಳಲ್ಲ ಎಂದ ರೇಖಾ

anantaraju bjp ಅನಂತರಾಜು

ಬೆಂಗಳೂರು: ಬಿಜೆಪಿ ಕಾರ್ಯಕರ್ತ ಅನಂತರಾಜು ಜತೆಗೆ ಅಕ್ರಮ ಸಂಬಂಧ ಹೊಂದಿದ್ದು ನಿಜ. ನಾವಿಬ್ಬರೂ ಒಪ್ಪಿತ ಸಂಬಂಧದಲ್ಲಿದ್ದೆವು ಎಂಬುದು ನಿಜವಾಗಿದ್ದರೂ ಅನಂತರಾಜು ಅವರ ಪತ್ನಿ ನನ್ನ ಮೇಲೆ ಹನಿಟ್ರ್ಯಾಪ್‌ ಆರೋಪ ಮಾಡಿರುವುದು ಸುಳ್ಳು ಎಂದು ರೇಖಾ ತಿಳಿಸಿದ್ದಾರೆ.

ಬ್ಯಾಡರಹಳ್ಳಿ ಪೊಲೀಸ್‌ ಠಾಣೆಗೆ ವಿಚಾರಣೆಗೆ ಆಗಮಿಸಿದ ವೇಳೆ ಮಾಧ್ಯಮಗಳೊಂದಿಗೆ ರೇಖಾ ಮಾತನಾಡಿದರು. ನಾನು ಹನಿಟ್ರ್ಯಾಪ್‌ ಮಾಡಿದ್ದೇನೆ ಎಂದು ಸುಮಾ ಹೇಳಿದ್ದಾರೆ. ಅದು ಹನಿಟ್ರ್ಯಾಪ್‌ ಅಲ್ಲ, ನಾವಿಬ್ಬರೂ ಒಪ್ಪಿತ ಸಂಬಂಧದಲ್ಲಿದ್ದೆವು. ಇದರ ಬಗ್ಗೆ ಪತ್ನಿ ಸುಮಾಗೂ ತಿಳಿದಿತ್ತು. ಆದರೂ ಅವರು ಹನಿಟ್ರ್ಯಾಪ್‌ ಎಂದು ದೂರು ನೀಡಿದ್ದಾರೆ. ನಾವು ಒಪ್ಪಿತ ಸಂಬಂಧದಲ್ಲಿದ್ದೇವೆ ಎಂದು ಹೇಳಿದರೂ ಸುಮಾ ಅವರು ಪದೇಪದೆ ನನಗೆ ಫೋನ್‌ ಮಾಡುತ್ತಲೇ ಇದ್ದರು. ನೀವಿಬ್ಬರೂ ಮಾಡಿದ ತಪ್ಪಿಗೆ ಶಿಕ್ಷೆ ಕೊಡಿಸುತ್ತೇನೆ ಎಂದಿದ್ದರು.

ನಾನು ಅಕ್ರಮ ಸಂಬಂಧ ಇಟ್ಟುಕೊಂಡಿದ್ದೆ ಎನ್ನುವುದು ತಪ್ಪು. ಆದರೆ ಅನಂತರಾಜು ಅವರು ಸಾಯಲು ನಾನು ಕಾರಣವಲ್ಲ. ಈ ಎಲ್ಲ ಮಾಹಿತಿಯನ್ನೂ ಡಿಸಿಪಿ ಅವರಿಗೆ ಕೊಟ್ಟಿದ್ದೇನೆ. ಇದರ ಬಗ್ಗೆ ನಿಖರ ತನಿಖೆ ಆಗಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹಸಚಿವ ಆರಗ ಜ್ಞಾನೇಂದ್ರ ಅವರನ್ನು ಕೋರಿಕೊಳ್ಳುತ್ತೇನೆ. ಅನಂತರಾಜು ಬಿಜೆಪಿ ಕಾರ್ಯಕರ್ತ ಆಗಿರಬಹುದು, ಆದರೆ ನನಗೆ ಅನ್ಯಾಯ ಆಗದಂತೆ ನೋಡಿಕೊಳ್ಳಲು ಮನವಿ ಮಾಡುತ್ತೇನೆ. ನನಗೆ ಹಾಗೂ ಮಕ್ಕಳಿಗೆ ಜೀವಬೆದರಿಕೆ ಇದೆ. ಹೀಗೆ ಏನೇ ಆದರೂ ಸುಮಾ ಅವರೇ ಕಾರಣ ಎಂದು ಪೊಲೀಸ್‌ ದೂರು ನೀಡುತ್ತೇನೆ ಎಂದರು.

ಇದನ್ನೂ ಓದಿ | ಬಿಜೆಪಿ ಮುಖಂಡ ಅನಂತರಾಜು ಸೂಸೈಡ್ ಕೇಸ್ ಗೆ ಮೇಜರ್ ಟ್ವಿಸ್ಟ್!

ಆತಂಕ ಹುಟ್ಟಿಸಿದ ರೇಖಾ

ಬ್ಯಾಡರಹಳ್ಳಿ ಠಾಣೆಯ ಎದುರು ಮಾಧ್ಯಮಗಳೊಂದಿಗೆ ಮಾತನಾಡಿದ ನಂತರ, ಒತ್ತಡದಲ್ಲಿದ್ದ ರೇಖಾ ನಡೆದೇ ಮನೆ ಕಡೆಗೆ ಹೊರಟರು. ಈ ವೇಳೆ ರಸ್ತೆಯಲ್ಲಿ ಆಗಮಿಸುತ್ತಿದ್ದ ವಾಹನಗಳನ್ನು ನೋಡದೆ ರಸ್ತೆ ದಾಟಲು ಮುಂದಾದರು. ಇದನ್ನು ಕಂಡ ಬಿಎಂಟಿಸಿ ಬಸ್‌ ಚಾಲಕ, ಬಸ್ಸನ್ನು ನಿಲ್ಲಿಸಿದ್ದಾರೆ. ಸ್ಥಳೀಯರೊಬ್ಬರು ಕೂಡಲೆ ರೇಖಾ ಅವರನ್ನು ರಸ್ತೆ ಬದಿಕೆ ಕರೆದುಕೊಂಡು ಬಂದಿದ್ದಾರೆ.

ಹೊಸ ಆಡಿಯೋ ಬಿಡುಗಡೆ

ಈಗಾಗಲೆ ಅನಂತರಾಜು ಪತ್ನಿ ಸುಮಾ ಹಾಗೂ ರೇಖಾ ನಡುವಿನ ಅನೇಕ ಆಡಿಯೋಗಳು ಬಿಡುಗಡೆ ಆಗಿವೆ. ಇದೀಗ ಬುಧವಾರ ಬೆಳಗ್ಗೆ ಇನ್ನೊಂದು ಆಡಿಯೋ ಹೊರಬಂದಿದೆ. ಇದರಲ್ಲಿ ಮಾತನಾಡಿರುವ ಸುಮಾ, “ಬೇಕೆಂದೇ ಅನಂತರಾಜು ಸೂಸೈಡ್‌ ಪ್ರಕರಣ ಪೆಂಡಿಂಗ್‌ನಲ್ಲಿ ಇಟ್ಟಿದ್ದೇವೆ. ಸಾಯೋದಕ್ಕೆ ಮುನ್ನ ಅವನು ಡೆತ್‌ ನೋಟ್‌ ಬರೆದಿಟ್ಟಿದ್ದಾನೆ. ಅದನ್ನು ಯಾವಾಗ ಬೇಕಾದರೂ ಉಪಯೋಗಿಸಿಕೊಳ್ಳಬಹುದು. ನನ್ನ ಮಕ್ಕಳ ಭವಿಷ್ಯಕ್ಕೆ ಯಾವ ಮಟ್ಟಕ್ಕೆ ಬೇಕಾದರೂ ಇಳಿಯುತ್ತೇನೆ.

ನಾನು ತುಂಬಾ ಸೈಲೆಂಟು, ತುಂಬಾ ವೈಲೆಂಟು. ನಾನು ಅವನಿಗೆ ಟಾರ್ಚರ್‌ ಕೊಡೋದನ್ನು ತಡೆಯುವುದಕ್ಕೆ ಹರಿಹರ ಬ್ರಹ್ಮನಿಂದಲೂ ಸಾಧ್ಯವಿಲ್ಲ. ನಿನ್ನ ಜತೆ ಅವನು ಸೇರಿದಾಗಲೇ ಎಲ್ಲ ಮುಗಿಯಿತು. ಅವನ ಸಾವೇ ಇದಕ್ಕೆಲ್ಲ ಕೊನೆ. ಚಿತ್ರಹಿಂಸೆ ಕೊಟ್ಟು, ದಿನವೂ ನರಳಿ ನರಳಿ ಸಾಯುತ್ತಾನೆ” ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ರೇಖಾ, “ಒಂದು ಚಾನ್ಸ್‌ ಕೊಟ್ಟು ನೋಡಿ ಎಂದು ಸುಮಾ ಗೋಗರೆಯುತ್ತಾರೆ. “ಯಾವುದೇ ಚಾನ್ಸ್‌ ಕೊಡುವುದಿಲ್ಲ ಎಂದು ಸುಮಾ ಹೇಳಿರುವುದು ಆಡಿಯೋದಲ್ಲೆ ಕೇಳಿಬಂದಿದೆ. ಈ ಆಡಿಯೋ ಸತ್ಯವಾಗಿದ್ದು, ಎಫ್‌ಎಸ್‌ಎಲ್‌ ಪರೀಕ್ಷೆ ನಡೆಸುವಂತೆ ರೇಖಾ ತಿಳಿಸಿದ್ದಾರೆ. ಅಗತ್ಯಬಿದ್ದರೆ ತಾವೂ ಮಂಪರು ಪರೀಕ್ಷೆಗೆ ಒಳಗಾಗಲು ಸಿದ್ದಾವಾಗಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ | Udupi Suicide | ‘ಕೆಟ್ಟ ನಿರ್ಧಾರ ತೆದುಕೊಂಡಿದ್ದೇವೆ’ ಎಂದಿದ್ದೇ ಪ್ರೇಮಿಗಳ ಕೊನೆ ಮೆಸೇಜ್‌

Exit mobile version