ಬೆಂಗಳೂರು: ರೇಣುಕಾಸ್ವಾಮಿ ಬರ್ಬರ ಹತ್ಯೆ (Renuka Swamy Murder) ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಶರಣಾಗಲು ಡೆವಿಲ್ ಗ್ಯಾಂಗ್ ಹಲವರಿಗೆ ಆಮಿಷ ತೋರಿಸಿದ್ದರು ಎನ್ನಲಾಗಿದೆ. ರೇಣುಕಾಸ್ವಾಮಿ ಕೊಲೆ ಬಳಿಕ ವಿನಯ್, ಲಕ್ಷ್ಮಣ್, ನಾಗರಾಜ್ ಸೇರಿ ಇಟಿಯಾಸ್ ಕಾರು ಚಾಲಕ ರವಿ ಅಲಿಯಾಸ್ ರವಿಶಂಕರ್‌ಗೆ ಆಮಿಷವೊಡ್ಡಿದ್ದರಂತೆ.
ನೀನು ಪೊಲೀಸರ ಎದುರು ಸರೆಂಡರ್ ಆಗು ಬೇಕಾದಷ್ಟು ಹಣವನ್ನು ಕೊಡುತ್ತೇವೆ ಎಂದಿದ್ದರಂತೆ. ಈ ವೇಳೆ ಹೆದರಿಕೊಂಡ ರವಿ ತಾನು ಬಂದಿದ್ದ ಇಟಿಯಾಸ್ ಕಾರಿನಲ್ಲೆ ಜಗದೀಶ್ ಅಲಿಯಾಸ್ ಜಗ್ಗ ಮತ್ತು ಅನುಕುಮಾರ್ ಜತೆಗೆ ಚಿತ್ರದುರ್ಗಕ್ಕೆ ತೆರಳಿದ್ದ. ಆದರೆ ಹೀಗೆ ಚಿತ್ರದುರ್ಗಕ್ಕೆ ತೆರಳುವಾಗ ದಾರಿ ಮಧ್ಯೆ ಜಗ್ಗ ಮತ್ತು ಅನು ಮೃತ ರೇಣುಕಾಸ್ವಾಮಿ ಧರಿಸಿದ್ದ ಚಿನ್ನಾಭರಣ ತಂದಿರುವುದು ಪತ್ತೆಯಾಗಿದೆ.
ಮರುದಿನ ಮಾಧ್ಯಮಗಳಲ್ಲಿ ಕೊಲೆ ಕೇಸ್‌ನಲ್ಲಿ ಆರೋಪಿಗಳು ಬಂಧನವಾಗಿರುವ ವಿಚಾರವನ್ನು ರವಿ ನೋಡಿದ್ದ. ಬಳಿಕ ನೇರವಾಗಿ ಚಿತ್ರದುರ್ಗ ಡಿವೈಎಸ್‌ಪಿ ಕಛೇರಿಗೆ ಆಗಮಿಸಿದ ಆರೋಪಿ ರವಿ ಅಲಿಯಾಸ್ ರವಿಶಂಕರ್ ಪೊಲೀಸರಿಗೆ ಶರಣಾಗಿದ್ದ.
ಇದನ್ನೂ ಓದಿ: Actor Darshan: ದರ್ಶನ್ ಪತ್ನಿ ವಿಜಯಲಕ್ಷ್ಮಿ ವಿರುದ್ಧ ಪವಿತ್ರಾ ಗೌಡ ಮಾಜಿ ಪತಿಯಿಂದ ಕೇಸ್!
ದರ್ಶನ್ ಪರ ಇನ್ನೂ ಯಾಕೆ ಬೇಲ್‌ಗೆ ಅರ್ಜಿ ಸಲ್ಲಿಕೆ ಮಾಡಿಲ್ಲ? ವಕೀಲರು ಹೇಳೋದು ಏನು?
ಬೆಂಗಳೂರು:ಚಿತ್ರದುರ್ಗದ ರೇಣುಕಾಸ್ವಾಮಿ ಭೀಕರ ಹತ್ಯೆ (Renuka Swamy Murder) ಪ್ರಕರಣದಲ್ಲಿ ಇಂದು ಮತ್ತೆ ನ್ಯಾಯಾಲಯದ ಮುಂದೆ ನಟ ದರ್ಶನ್ (Actor Darshan) ಸೇರಿ ಎಲ್ಲ ಬಂಧಿತ 17 ಆರೋಪಿಗಳನ್ನು ಪೊಲೀಸರು ಹಾಜರುಪಡಿಸಲಿದ್ದಾರೆ. ನ್ಯಾಯಾಲಯ (Court) ಆರೋಪಿಯನ್ನು ಮತ್ತೆ ಪೊಲೀಸ್ ಕಸ್ಟಡಿಗೆ (Police custody) ನೀಡಲಿದೆಯೇ ಅಥವಾ ನ್ಯಾಯಾಂಗ ಬಂಧನ (Judicial custody) ವಿಧಿಸಿ ಪರಪ್ಪನ ಅಗ್ರಹಾರಕ್ಕೆ ಕಳಿಸಲಿದೆಯೇ ಎಂದು ತಿಳಿದುಬರಲಿದೆ. ನಟ ದರ್ಶನ್ ಪರ ವಕೀಲ ರಂಗನಾಥ್ ರೆಡ್ಡಿ, ಅನಿಲ್ ಬಾಬು ಆರೋಪಿಗಳ ಭೇಟಿಗೆ ಪೊಲೀಸ್ ಠಾಣೆಗೆ ಬಂದಿದ್ದಾರೆ. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು ಹೀಗೆ.
ʻʻಇವತ್ತು ಆರೋಪಿಗಳನ್ನು ಐದು ಗಂಟೆಗಳ ಒಳಗಡೆ ಪ್ರೊಡ್ಯೂಸ್ ಮಾಡಬೇಕು. ಬಹುತೇಕ ತನಿಖೆ ಮುಗಿದಿರಬಹುದು. ಬೇಲ್ ಸಂಬಂಧ ನಾವು ಚರ್ಚೆ ಮಾಡಿದ್ದೇವೆ. ದರ್ಶನ್ ಜತೆ ಮಾತಾಡಿದ್ದೇವೆ. ಅವರ ಆರೋಗ್ಯ ಚೆನ್ನಾಗಿದೆ. ಜಾಮೀನು ಅರ್ಜಿ ಹಾಕೋದಕ್ಕೆ ಇನ್ನೂ ಸಮಯ ಇದೆ. ಇನ್ನೂ ಕೆಲವು ದಿನ ಸಮಯ ಹಿಡಿಯುತ್ತೆ. ಒಂದು ವಾರ ಬೇಕಾಗಬಹುದು. ನಾವು ಚರ್ಚೆ ಮಾಡಿ ನಂತರ ಮೂವ್ ಮಾಡುತ್ತೇವೆʼʼಎಂದು ಅನಿಲ್ ಬಾಬು ಹೇಳಿಕೆ ನೀಡಿದರು
ದರ್ಶನ್ ಪರ ವಕೀಲ ರಂಗನಾಥ್ ರೆಡ್ಡಿ ಮಾತನಾಡಿ ʻʻಕಸ್ಟಡಿಗೆ ಕೇಳೋದು ತನಿಖಾಧಿಕಾರಿಗಳ ನಿರ್ಧಾರ. ಆದರೆ ಬಹುತೇಕ ತನಿಖೆ ಮುಗಿದಿರಬಹುದು. ನಿನ್ನೆ ಆರೋಪಿಗಳಿಗೆ ಡಿಎನ್ಎ ಟೆಸ್ಟ್ ಮಾಡಿದ್ದಾಗಿದೆ. ಪರೀಕ್ಷೆಗೆ ಕೋರ್ಟ್ ಅನುಮತಿ ಬೇಕು, ಸ್ಯಾಂಪಲ್ ಪಡೆಯಲು ಬೇಕಾಗುತ್ತದೆ. ಆದರೆ ಪೊಲೀಸರು ತಗೊಂಡಿದ್ದಾರಾ ಇಲ್ವೊ ಗೊತ್ತಿಲ್ಲ. ಡಿಎನ್ಎ ಟೆಸ್ಟ್ ಮಾಡಿದ್ರಾ ಇಲ್ವೊ ಅನ್ನೋದು ನಮಗೆ ಗೊತ್ತಿಲ್ಲ. ಅದೇಲ್ಲಾ ಚಾರ್ಜ್‌ಶೀಟ್‌ನಲ್ಲಿ ಇರುತ್ತದೆ. ಅಲ್ಲಿ ನಮಗೆ ಗೊತ್ತಾಗುತ್ತೆʼʼಎಂದರು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ