ಬೆಂಗಳೂರು: ಬೆಂಗಳೂರಿನಲ್ಲಿ ಜಲಕ್ಷಾಮ ತೀವ್ರವಾಗುತ್ತಿರುವಂತೆಯೇ (Water Scarcity) ವಾಟರ್ ಟ್ಯಾಂಕರ್‌ಗಳಿಗೆ (Water Tanker) ಭಾರಿ ಬೇಡಿಕೆ. ಈ ಬೇಡಿಕೆಯನ್ನು ಪೂರೈಸುವುದಕ್ಕಾಗಿ ಟ್ಯಾಂಕರ್ ಚಾಲಕರು ಧಾವಂತದಿಂದ ಓಡಿಸುತ್ತಾರೆ. ಹೀಗೆ ಧಾವಂತದಿಂದ ಓಡಿಸುವಾಗ ಪಾದಚಾರಿಯೊಬ್ಬರು (Man died after water tanker overturns) ಅದರಡಿಗೆ ಬಿದ್ದು ಮೃತಪಟ್ಟ ಘಟನೆ ಬೆಂಗಳೂರಿನಲ್ಲಿ (Road Accident) ನಡೆದಿದೆ.
ನಗರದ ಹೊರವಲಯದ ಪೀಣ್ಯ ಸೆಕೆಂಡ್ ಸ್ಟೇಜ್ ತಿಗಳರಪೇಟೆ ರಸ್ತೆಯಲ್ಲಿ ಈ ಘಟನೆ ನಡೆದಿದ್ದು, ಇಮಾನುದ್ದೀನ್ (20) ಸಾವನ್ನಪ್ಪಿದ ಪಾದಚಾರಿ. ಅವರು ಬುಧವಾರ ಬೆಳಗ್ಗೆ ಕೆಲಸಕ್ಕೆಂದು ಹೋಗುತ್ತಿದ್ದಾಗ ವೇಗವಾಗಿ ಬಂದ ವಾಟರ್ ಟ್ಯಾಂಕರ್ ಕಂಟ್ರೋಲ್ ತಪ್ಪಿ ಪಲ್ಟಿ.ಐಾಗಿದೆ. ಅದು ಉರುಳುತ್ತಾ ಹೋಗಿ ರಸ್ತೆಯಲ್ಲಿ ನಡೆದುಕೊಂಡು ಹೋಗುತಿದ್ದ ಇಮಾನುದ್ದೀನ್ ಮೇಲೆ ಪಲ್ಟಿಯಾಗಿದೆ. ಇಮಾನುದ್ದೀನ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಸ್ಥಳಕ್ಕೆ ಪೀಣ್ಯ ಸಂಚಾರಿ ಪೊಲೀಸರು ಭೇಟಿ ನೀಡಿದ್ದಾರೆ.
ಇದನ್ನೂ ಓದಿ : Road Accident : ತಿರುವಿನಲ್ಲಿ ಕಾದಿದ್ದ ಜವರಾಯ; ಬೈಕ್‌ಗೆ ಡಿಕ್ಕಿ ಹೊಡೆದ ಕಾರು, ದಂಪತಿ ಸಾವು
ದೇವನಹಳ್ಳಿ: ಟ್ರ್ಯಾಕ್ಟರ್-ಕ್ಯಾಂಟರ್ ಅಪಘಾತಕ್ಕೆ ಒಬ್ಬ ಬಲಿ
ದೇವನಹಳ್ಳಿ: ಟ್ರಾಕ್ಟರ್ ಮತ್ತು ಕ್ಯಾಂಟರ್ ನಡುವೆ ಸಂಭವಿಸಿದ ಅಪಘಾತದಲ್ಲಿ (Tractor-canter Accident) ವ್ಯಕ್ತಿಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ (Road accident). ದೇವನಹಳ್ಳಿ ತಾಲೂಕಿನ ಸಾವಕನಹಳ್ಳಿ ಗ್ರಾಮದ ಬಳಿ ಘಟನೆ ನಡೆದಿದ್ದು, ಎರಡು ವಾಹನಗಳಲ್ಲಿದ್ದ 8 ಜನಕ್ಕೆ ಗಂಭೀರ ಗಾಯಗಳಾಗಿವೆ. ಚಿಕ್ಕಬಳ್ಳಾಪುರ ಮೂಲದ ರವಿಕುಮಾರ್ ಮೃತ ದುರ್ದೈವಿ.
ಅಪಘಾತ ಹಿನ್ನೆಲೆ ರಸ್ತೆಯಲ್ಲಿ ಟ್ರಾಫಿಕ್ ಜಾಮ್ ಉಂಟಾಗಿದ್ದು, ಸ್ಥಳೀಯರು ಸೇರಿ ಗಾಯಾಳುಗಳ ರಕ್ಷಣೆ ಮಾಡಿ ದೇವನಹಳ್ಳಿಯ ಆಸ್ಪತ್ರೆಗಳಿಗೆ ರವಾನೆ ಮಾಡಿದ್ದರು. ವಿಶ್ವನಾಥಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಕ್ಕಳೊಂದಿಗೆ ರಸ್ತೆ ದಾಟುತ್ತಿದ್ದ ತಾಯಿಗೆ ಬಸ್ ಡಿಕ್ಕಿ, ಮಗು ಮೃತ್ಯು
ಹೊಸಕೋಟೆ: ಇಬ್ಬರು ಮಕ್ಕಳನ್ನು ಕೈಯಲ್ಲಿ ಹಿಡಿದುಕೊಂಡು ರಸ್ತೆ ದಾಟುತ್ತಿದ್ದ ಮಹಿಳೆಯೊಬ್ಬರಿಗೆ ಬಸ್ ಡಿಕ್ಕಿಯಾಗಿ ಒಂದು ಮಗು ಸ್ಥಳದಲ್ಲೇ ಪ್ರಾಣ ಕಳೆದುಕೊಂಡ ದಾರುಣ ಘಟನೆ (Child dies in Accident) ಹೊಸಕೋಟೆ ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಭವಿಸಿದೆ (Road accident).
ರಸ್ತೆ ದಾಟುತ್ತಿದ್ದ ತಾಯಿ ಮಕ್ಕಳಿಗೆ ಮೊದಲು ಒಂದು ಬೈಕ್ ಡಿಕ್ಕಿ ಹೊಡೆದಿತ್ತು. ಬೈಕ್ ಬಡಿದ ಕಾರಣ ಅವರು ರಸ್ತೆಗೆ ಬಿದ್ದರು. ಆಗ ಬಸ್ ಅವರ ಮೇಲೆ ಹರಿದಿದೆ.
ಆಂಧ್ರ ಪ್ರದೇಶ ಸಾರಿಗೆ ಸಂಸ್ಥೆಗೆ ಸೇರಿದ ಬಸ್ ಹೊಡೆದು ಒಂದು ಮಗು ಸ್ಥಳದಲ್ಲೇ ಮೃತಪಟ್ಟರೆ, ಗಾಯಾಳು ತಾಯಿ ಮಗುವಿಗೆ ನಗರದ ಸಿಲಿಕಾನ್ ಸಿಟಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳಕ್ಕೆ ಹೊಸಕೋಟೆ ಸಂಚಾರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.