Site icon Vistara News

Road Accident : ಅಡ್ಡ ಬಂದ ನಾಯಿ ಮರಿ ಮೇಲೆ ಬೈಕ್ ಹತ್ತಿಸಿದ ಸವಾರ

Road Accident

ಬೆಂಗಳೂರು: ಇಬ್ಬರು ಹುಡುಗಿಯರನ್ನು ಕೂರಿಸಿಕೊಂಡು ತ್ರಿಬಲ್ ರೈಡಿಂಗ್ ಹೋಗುತ್ತಿದ್ದ ಯುವಕನೊರ್ವ ಅಡ್ಡ ಬಂದ ನಾಯಿ ಮರಿ ಮೇಲೆ ಬೈಕ್‌ (Road Accident) ಹತ್ತಿಸಿದ್ದಾನೆ. ಬೆಂಗಳೂರಿನ ವರ್ತೂರು ಮುಖ್ಯರಸ್ತೆಯಲ್ಲಿ ಘಟನೆ ನಡೆದಿದೆ.

ಏಕಾಏಕಿ ನಾಯಿ ಮರಿಯೊಂದು ಬೈಕ್‌ಗೆ ಅಡ್ಡ ಬಂದಿದೆ. ಈ ವೇಳೆ ಬೈಕ್‌ ಟಯರ್ ಹರಿದಿದೆ. ಬೈಕ್ ಟಯರ್ ಹತ್ತಿದ ಕಾರಣ ನಾಯಿ ಮರಿ ಬಿದ್ದು ಒದ್ದಾಡಿದೆ. ಅಲ್ಲೆ ಇದ್ದ ಮತ್ತೊಬ್ಬ ಯುವಕ ನಾಯಿ ಮರಿ ಬಳಿ ಬಂದು ರಸ್ತೆ ಪಕ್ಕ ಹಾಕಿದ್ದಾನೆ. ನಾಯಿ ಮರಿ ಮೇಲೆ ಬೈಕ್ ಹತ್ತಿಸುವ ವಿಡಿಯೊ ಕಾರ್ ಡ್ಯಾಶ್ ಬೋರ್ಡ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಯುವತಿ ಅಸ್ವಸ್ಥ, ಆಸ್ಪತ್ರೆಗೆ ಬಸ್‌ ತಿರುಗಿಸಿದ ಚಾಲಕ, ನಿರ್ವಾಹಕ

ಕರಾವಳಿಯ ಖಾಸಗಿ ಬಸ್‌ನ ಚಾಲಕ, ನಿರ್ವಾಹಕರು ಮಾನವೀಯತೆ ಮೆರೆದಿದ್ದಾರೆ. ಅಸ್ವಸ್ಥಗೊಂಡಿದ್ದ ಯುವತಿಗಾಗಿ ಆಸ್ಪತ್ರೆಗೆ ಬಸ್ ಕೊಂಡೊಯ್ದಿದ್ದಾರೆ. ಉಡುಪಿ ನಗರದಲ್ಲಿ ಸೋಮವಾರ ಬೆಳಗ್ಗೆ ಘಟನೆ ನಡೆದಿದೆ. ನವೀನ್ ಬಸ್‌ನ ಚಾಲಕ ಶಶಿಕಾಂತ್, ನಿರ್ವಾಹಕ ಸಲೀಂ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಶಿರ್ವದಿಂದ ಉಡುಪಿಗೆ ಬರುತ್ತಿದ್ದ ಖಾಸಗಿ ಬಸ್, ಉಡುಪಿಯ ಹಳೆ ತಾಲೂಕಿನ ಕಚೇರಿ ಬರುವಾಗ ಯುವತಿಯೊಬ್ಬಳು ಅಸ್ವಸ್ಥಳಾಗಿದ್ದಾಳೆ. ಬಸ್ಸಿನಲ್ಲೇ ವಾಂತಿ ಮಾಡಿ ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದಳು. ಆಕೆಯ ಸ್ಥಿತಿ ಕಂಡ ಚಾಲಕ, ನಿರ್ವಾಹಕರು ತಕ್ಷಣವೇ ಹತ್ತಿರದ ಟಿಎಂಎ ಪೈ ಆಸ್ಪತ್ರೆಗೆ ‌ಬಸ್ ಅನ್ನು ತಿರುಗಿಸಿದ್ದಾರೆ.

ತಕ್ಷಣವೇ ಪ್ರಥಮ ಚಿಕಿತ್ಸೆಗೆ ವ್ಯವಸ್ಥೆ ಮಾಡಿ ಬಳಿಕ ಯುವತಿ ಮನೆಯವರಿಗೆ ಮಾಹಿತಿ ನೀಡಿದ್ದಾರೆ. ಯುವತಿ ಮನೆಯವರು ಬರುವ ತನಕ ಬಸ್ ಸಿಬ್ಬಂದಿ ಅಲ್ಲೆ ಇದ್ದು, ಸಹಕಾರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version