ಬೆಂಗಳೂರು: ವಾಟರ್ ಟ್ಯಾಂಕರ್ (Water Tanker) ಚಾಲಕನೊಬ್ಬನ (Tanker Driver) ನಿರ್ಲಕ್ಷ್ಯ ಹಾಗೂ ವೇಗದ ಚಾಲನೆಗೆ ಎಂಬಿಬಿಎಸ್ ವಿದ್ಯಾರ್ಥಿಯೊಬ್ಬ (MBBS Student) ಬಲಿಯಾಗಿದ್ದಾನೆ. ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಿನ್ನೆ ಸಂಜೆ ಈ ರಸ್ತೆ ಅಪಘಾತ (Road Accident) ನಡೆದಿದೆ.
ರಸ್ತೆಯ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ 23 ವರ್ಷದ ಇಶಾನ್ ಎಂಬ ಎಂಬಿಬಿಎಸ್ ವಿದ್ಯಾರ್ಥಿಗೆ. ಎದುರುಗಡೆಯಿಂದ ಯಮನಂತೆ ಬಂದ ವಾಟರ್ ಟ್ಯಾಂಕರ್ ಅಪ್ಪಳಿಸಿದೆ. ವಿದ್ಯಾರ್ಥಿಗೆ ಗುದ್ದಿ, ಇಶಾನ್ ಮೇಲೆಯೇ ಹರಿದಿದೆ. ಇಷ್ಟಾದರೂ ಚಾಲಕ ತಕ್ಷಣ ನಿಲ್ಲಿಸದೆ ಮುಂದೆ (Hit and Run) ಸಾಗಿದ್ದಾನೆ. ಚಲಿಸುತ್ತಿದ್ದ ಟ್ಯಾಂಕರ್ ಅನ್ನು ದ್ವಿಚಕ್ರ ವಾಹನ ಸವಾರರು ತಡೆದು ನಿಲ್ಲಿಸಿ ಚಾಲಕನನ್ನು ಹಿಡಿದಿದ್ದಾರೆ.
ಸ್ಥಳಕ್ಕೆ ಬಂದು ಮಗನ ಮೃತ ದೇಹ ನೋಡಿದ ತಾಯಿಯ ಆಕ್ರಂದನ ಮುಗಿಲು ಮುಟ್ಟಿದೆ. ಬಿಕ್ಕಿ ಬಿಕ್ಕಿ ಅತ್ತ ತಾಯಿ ಅಲ್ಲೇ ಪ್ರಜ್ಞೆ ತಪ್ಪಿ ಬಿದ್ದಿದ್ದು, ಅವರನ್ನು ಕುಟುಂಬಸ್ಥರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಇಶಾನ್ ಎಂಬಿಬಿಎಸ್ ಫೈನಲ್ ಇಯರ್ ಸ್ಟೂಡೆಂಟ್ ಆಗಿದ್ದು, ಇವರ ಕುಟುಂಬ ಮಾನ್ಯತಾ ಟೆಕ್ ಪಾರ್ಕ್‌ನಲ್ಲಿ ವಾಸವಿತ್ತು. ನಿನ್ನೆ ಸಂಜೆ ಸ್ನೇಹಿತನನ್ನು ಮೀಟ್ ಆಗಲು ಥಣಿಸಂದ್ರ ಬಳಿ ಈತ ಬಂದಿದ್ದ ವೇಳೆ ದುರ್ಘಟನೆ ನಡೆದಿದೆ.
ಮದ್ಯ ಸೇವಿಸಿ ಹಳಿ ಮೇಲೆ ಮಲಗಿದ್ದವರ ಮೇಲೆ ಹರಿದ ರೈಲು, ಮೂವರು ಯುವಕರ ಸಾವು
ಕೊಪ್ಪಳ: ರೇಲ್ವೆ ಟ್ರ್ಯಾಕ್ (Railway Track) ಮೇಲೆ ಮದ್ಯ ಸೇವಿಸಿ (Liquor) ಅಲ್ಲೇ ಮಲಗಿದ್ದ ಯುವಕರ ಮೇಲೆ ರೈಲು (Train Accident) ಹರಿದಿದ್ದು, ಸ್ಥಳದಲ್ಲಿಯೇ ಮೂರು ಜನ ಯುವಕರು ಸಾವಿಗೀಡಾಗಿದ್ದಾರೆ. ಈ ಘೋರ ದುರಂತ (Horrible Accident) ಕೊಪ್ಪಳ ಜಿಲ್ಲೆ (Koppala news) ಗಂಗಾವತಿ ನಗರದಲ್ಲಿ ನಿನ್ನೆ ರಾತ್ರಿ ನಡೆದಿದೆ.
ಮೃತ ಯುವಕರನ್ನು ಮೌನೇಶ್ ಪತ್ತಾರ(23), ಸುನೀಲ್ (23), ವೆಂಕಟ ಭೀಮನಾಯ್ಕ (20) ಎಂದು ಗುರುತಿಸಲಾಗಿದೆ. ಮೂವರೂ ಗಂಗಾವತಿಯವರಾಗಿದ್ದಾರೆ. ಇವರು ಕುಡಿದ ಮತ್ತಿನಲ್ಲಿ ರೇಲ್ವೆ ಟ್ರ್ಯಾಕ್ ಮೇಲೆ ಮಲಗಿದ್ದರು ಎಂಬುದಕ್ಕೆ ಸ್ಥಳದಲ್ಲಿದ್ದ ಮದ್ಯದ ಬಾಟಲಿಗಳು ಸಾಕ್ಷಿಯಾಗಿವೆ. ರೈಲು ಹುಬ್ಬಳ್ಳಿಯಿಂದ ಸಿಂಧನೂರಿಗೆ ತೆರಳುತ್ತಿತ್ತು. ಮದ್ಯದ ಅಮಲಿನಲ್ಲಿ ರೈಲಿನ ಆಗಮನ ಯುವಕರಿಗೆ ಗೊತ್ತಾಗಿರಲಿಕ್ಕಿಲ್ಲ ಎನ್ನಲಾಗಿದೆ. ಗದಗ ರೇಲ್ವೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಳೆ ಅನಾಹುತ; ಮನೆಗೋಡೆ ಕುಸಿದು ಇಬ್ಬರು ಕಂದಮ್ಮಗಳು ಸೇರಿ 3 ಸಾವು
ಹಾವೇರಿ: ರಾಜ್ಯದಲ್ಲಿ ಮಳೆ ಅನಾಹುತ ಸೃಷ್ಟಿಸುತ್ತಿದೆ. ಹಾವೇರಿಯಲ್ಲಿ ಮಳೆಗೆ ಒದ್ದೆಯಾದ ಮನೆಗೋಡೆ ಕುಸಿದು ಎರಡು ಕಂದಮ್ಮಗಳು ಹಾಗೂ ಒಬ್ಬ ಮಹಿಳೆ ಸಾವಿಗೀಡಾಗಿದ್ದಾರೆ. ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಮಾದಾಪುರ ಗ್ರಾಮದಲ್ಲಿ ದುರಂತ ಸಂಭವಿಸಿದೆ.
ಅಮೂಲ್ಯ ಹಾಗೂ ಅನನ್ಯ ಮೃತಪಟ್ಟ ಎರಡು 2 ವರ್ಷದ ಅವಳಿಜವಳಿ ಕಂದಮ್ಮಗಳಾಗಿವೆ. ಇವರ ತಾಯಿ ಚೆನ್ನಮ್ಮ (30) ಕೂಡ ಮೃತಪಟ್ಟಿದ್ದಾರೆ. ಮನೆಯೊಳಗಿದ್ದ ಇಬ್ಬರಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮನೆ ಬೀಳುತ್ತಿದ್ದಂತೆ ಅಕ್ಕಪಕ್ಕದ ಮನೆಯವರು ರಕ್ಷಣೆಗೆ ಧಾವಿಸಿದ್ದು, ಮೃತ ದೇಹಗಳನ್ನ ಹೊರ ತೆಗೆದು ಗಾಯಾಳುಗಳನ್ನು ರಕ್ಷಿಸಿದ್ದಾರೆ. ಗಾಯಾಳುಗಳು ಸವಣೂರು ತಾಲೂಕು ಆಸ್ಪತ್ರೆಗೆ ದಾಖಲಾಗಿದ್ದಾರೆ. ಸವಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇದನ್ನೂ ಓದಿ: Illicit relationship : ಪರ ಪುರುಷನೊಂದಿಗೆ ಓಡಿ ಹೋದ ಪತ್ನಿ; ಮರ್ಯಾದೆಗೆ ಅಂಜಿ ಪತಿ ಆತ್ಮಹತ್ಯೆ