Site icon Vistara News

Road Accident | ಸ್ಕೂಟರ್‌ಗೆ ಲಾರಿ ಡಿಕ್ಕಿ; ರಸ್ತೆ ಅಪಘಾತದಲ್ಲಿ ನವವಿವಾಹಿತೆ ಸಾವು

accident

ಬೆಂಗಳೂರು: ಸ್ಕೂಟರ್‌ಗೆ ಲಾರಿ ಡಿಕ್ಕಿ ಹೊಡೆದ (Road Accident) ಪರಿಣಾಮ ಸ್ಥಳದಲ್ಲಿಯೇ ಮಹಿಳೆಯೊಬ್ಬರು ಮೃತಪಟ್ಟಿದ್ದಾರೆ. ಸಿನಿಮಾ ನೋಡಿ ಮನೆಗೆ ವಾಪಸ್‌ ಆಗುವಾಗ ಕಲ್ಯಾಣನಗರದ ಜಂಕ್ಷನ್ ಬಳಿ ನವ ದಂಪತಿಯ ದ್ವಿಚಕ್ರ ವಾಹನವೊಂದಕ್ಕೆ ಲಾರಿ ಡಿಕ್ಕಿ ಹೊಡೆದಿದೆ.

ಶ್ವೇತಾ (23) ಮೃತಪಟ್ಟ ದುರ್ದೈವಿ. ಜತೆಗೆ ಇದ್ದ ಪತಿ ಆನಂದ್ (28) ಸ್ಥಿತಿ ತೀರ ಗಂಭೀರವಾಗಿದೆ. ಇತ್ತೀಚೆಗಷ್ಟೆ ಮದುವೆಯಾಗಿತ್ತು. ಗಾಯಗೊಂಡಿರುವ ಆನಂದ್ ಅವರಿಗೆ ಎಚ್‌ಬಿಆರ್ ಮುಖ್ಯ ರಸ್ತೆ ಬಳಿ ಇರುವ ಆಲ್ಟಿಯಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.  

ಛಿದ್ರವಾಗಿರುವ ಆಕ್ವೀವಾ ಹೋಂಡಾ ವಾಹನ

ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಶ್ವೇತಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಅಂಬೇಡ್ಕರ್‌ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬಾಣಸವಾಡಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ | Bike Accident | ಬೈಕ್-ಕಾರು ನಡುವೆ ಅಪಘಾತ; ಸಾಗರದ ಬ್ಯಾಕೋಡು ಬ್ಯಾಂಕ್ ಉದ್ಯೋಗಿ ಸಾವು

Exit mobile version