ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ರೋಡ್ ರೇಜ್ (Road Rage) ಕೇಸ್‌ಗಳು ಹೆಚ್ಚಾಗುತ್ತಿವೆ. ಪೊಲೀಸರ ಯಾವ ವಾರ್ನಿಂಗ್‌ಗಳು ಕೂಡ ವರ್ಕೌಟ್ ಆಗುತ್ತಿಲ್ಲ ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಬೆಂಗಳೂರಿನ ಬಿಇಎಲ್ ರಸ್ತೆಯಲ್ಲಿ ನಿವೃತ್ತ ಬ್ರಿಗೇಡಿಯರ್ ರವಿ ಮುನಿಸ್ವಾಮಿ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ.
ಕಾರಿನಲ್ಲಿ ಹೋಗುತ್ತಿದ್ದ ರವಿ ಮುನಿಸ್ವಾಮಿಗೆ ಕಿಡಿಗೇಡಿಗಳು ಅಡ್ಡ ಹಾಕಿದ್ದಾರೆ. ಏನೆಂದು ಕೇಳಲು ರವಿ ಅವರು ಕಾರಿನ ಗ್ಲಾಸ್ ಇಳಿಸಿದ್ದಾರೆ. ಆಗ ಗಾಡಿ ಕೀ ಕಿತ್ತುಕೊಂಡು, ಅವಾಚ್ಯ ಶಬ್ಧಗಳಿಂದ ನಿಂದಿಸಿ ನಿವೃತ್ತ ಯೋಧನನ್ನು ಕಾರಿನಿಂದ ಹೊರಗೆಳೆದಿದ್ದಾರೆ. ಅಷ್ಟೆ ಅಲ್ಲದೆ ಮೂವರು ಸುತ್ತುವರಿದು ಬೆಲ್ಟ್ ಹಾಗೂ ಕೈಗಳಿಂದ ಹಲ್ಲೆ ನಡೆಸಿದ್ದಾರೆ.
ರವಿ ಮುನಿಸ್ವಾಮಿಯವರೇ ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದಂತೆ ಅವರು ಹಲ್ಲೆ ನಡೆಸುತ್ತಿದ್ದ ವೇಳೆ ತನಗೆ ವಯಸಾದ ಕಾರಣ ನಾನು ಅಸಹಾಯಕನಾಗಿದ್ದೆ ಎಂದು ಹೇಳಿಕೊಂಡಿದ್ದಾರೆ. ಘಟನೆ ವೇಳೆ ಎದೆ ಭಾಗ, ಕೈ ಬೆರಳಿಗೆ ಗಾಯವಾಗಿದೆ. ಅಷ್ಟೆ ಅಲ್ಲದೆ ಆರೋಪಿಗಳು ಹಲ್ಲೆ ನಡೆಸಿ ಮೊಬೈಲ್ ಅನ್ನು ಒಡೆದು ಹಾಕಿದ್ದಾರೆಂದು ಆರೋಪಿಸಿದ್ದಾರೆ.
ರವಿ ಮುನಿಸ್ವಾಮಿ ನಿವೃತ್ತ ಬ್ರಿಗೇಡಿಯರ್ ಹಾಗೂ ಕಳೆದ ಬಾರಿ ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿದ್ದರು. ಸದ್ಯ ಸದಾಶಿವನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ.
ಇದನ್ನೂ ಓದಿ: Robbery case : ಎಎಸ್‌ಐ ಬೈಕ್ ಎಗರಿಸಿ ಹೆದ್ದಾರಿಯಲ್ಲಿ ರಾಬರಿ; ಖತರ್ನಾಕ್ ಗ್ಯಾಂಗ್ ಅರೆಸ್ಟ್
ಮೆಜೆಸ್ಟಿಕ್ ಟು ಲಾಲ್‌ಬಾಗ್‌ಗೆ ಆಟೋ ಚಾರ್ಜ್ 400 ರೂ; ಸೆಕೆಂಡ್‌ಗೆ 5ರೂ ಏರಿಕೆಗೆ ಪ್ರಯಾಣಿಕ ಕಕ್ಕಾಬಿಕ್ಕಿ
ಬೆಂಗಳೂರು: ಬೆಂಗಳೂರಲ್ಲಿ ಆಟೋ ಮೀಟರ್‌ಗೆ ಪ್ರಯಾಣಿಕರೊಬ್ಬರು (Auto Fare) ಬೆಚ್ಚಿ ಬಿದ್ದಿದ್ದಾರೆ. ಅಲಾಮ್ ಸುಲ್ತಾನ್ ಎಂಬಾತ ಮೆಜೆಸ್ಟಿಕ್‌ನಿಂದ ಆಟೋ ಹಿಡಿದು ಲಾಲ್ ಬಾಗ್‌ಗೆ ಬಂದು ಇಳಿದಿದ್ದರು. ಈ ವೇಳೆ ಆಟೋ ಮೀಟರ್ ಚಾರ್ಜ್ ಕಂಡು ಶಾಕ್ ಆಗಿದ್ದರು.
ಯಾಕಂದರೆ ಮೆಜೆಸ್ಟಿಕ್‌ನಿಂದ ಲಾಲ್‌ಬಾಗ್ 5 ರಿಂದ 6 ಕಿ.ಮೀ ಅಷ್ಟೇ ಅಂತರವಿದ್ದು, ಆಟೋ ಚಾರ್ಜ್ 400 ರೂಪಾಯಿ ತೋರಿಸಿತ್ತು. ಅಂದರೆ ಸೆಕೆಂಡ್‌ಗೆ 5 ರೂಪಾಯಿನಂತೆ ಮೀಟರ್ ಚಾರ್ಜ್ ಆಗಿತ್ತು. ಆಟೋ ಚಾಲಕನಿಗೆ ಅಲಾಮ್ ಇದನ್ನೂ ಪ್ರಶ್ನಿಸಿದ್ದಕ್ಕೆ 400 ರೂಪಾಯಿ ಆದರೂ ಡಬಲ್ ಮೀಟರ್ ಚಾರ್ಚ್ ಕೊಡಬೇಕೆಂದು ಡಿಮ್ಯಾಂಡ್ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಅಲಾಮ್ ಸುಲ್ತಾನ್ ಈ ಬಗ್ಗೆ ಫೋಟೊ ಸಮೇತ ಪೊಲೀಸರಿಗೆ ಪೋಸ್ಟ್ ಮಾಡಿ ದೂರು ನೀಡಿದ್ದಾರೆ. ಇನ್ನೂ ಹೆಚ್ಚುವರಿ ಹಣ ಕೊಡದ ಹಿನ್ನೆಲೆಯಲ್ಲಿ ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿರುವ ಆರೋಪವೂ ಕೇಳಿ ಬಂದಿದೆ.
ಇದನ್ನೂ ಓದಿ: Theft Case : ಹಗಲಿನಲ್ಲಿ ಸ್ವಿಗ್ಗಿ ಡೆಲಿವರಿ ಬಾಯ್; ರಾತ್ರಿಯಲ್ಲಿ ಬೈಕ್ ಕದಿಯುವ ಕಳ್ಳ
ಟಿನ್ ಫ್ಯಾಕ್ಟರಿಯಿಂದ ಉಬರ್ ಆಟೋ ಹತ್ತಿದವನಿಗೆ 1 ಕೋಟಿ ರೂ. ಚಾರ್ಜ್
ಬೆಂಗಳೂರು: ಆಂಧ್ರ ಪ್ರದೇಶದಿಂದ ಬೆಂಗಳೂರಿಗೆ ಬಂದಿದ್ದ ಆ ವ್ಯಕ್ತಿ ತುರ್ತು ಕೆಲಸಕ್ಕೆಂದು ಉಬರ್ ಆಟೋ (Uber Auto) ಬುಕ್ ಮಾಡಿದ್ದರು. ಟಿನ್ ಫ್ಯಾಕ್ಟರಿಯಿಂದ ಆಟೋ ಹತ್ತಿ ಕೋರಮಂಗಲಕ್ಕೆ ಇಳಿದ ಪ್ರಯಾಣಿಕ (Uber Auto Fare) ತಬ್ಬಿಬ್ಬಾಗಿದ್ದರು. ಯಾಕೆಂದರೆ ಟಿನ್ ಫ್ಯಾಕ್ಟರಿಯಿಂದ ಕೋರಮಂಗಲಕ್ಕೆ ಜಸ್ಟ್ 15 ಕಿ.ಮೀ ದೂರದ ಪ್ರಯಾಣಕ್ಕೆ ಆಟೋ ಚಾರ್ಜ್ 500-1000 ರೂ. ಅಲ್ಲ ಬದಲಿಗೆ 1 ಕೋಟಿ ರೂ. (Uber Auto Fare) ತೋರಿಸಿತ್ತು.
ಆ್ಯಪ್ ಆಧಾರಿತ ಉಬರ್ ಆಟೋ ಬುಕ್ ಮಾಡಿ ಪ್ರಯಾಣಿಸಿದ ಆಂಧ್ರ ಪ್ರಯಾಣಿಕ ನಿಜಕ್ಕೂ ಕಕ್ಕಾಬಿಕ್ಕಿಯಾಗಿದ್ದರು. ಕೆಲಸ ನಿಮಿತ್ತ ಹೊರಹೋಗಲು ಉಬರ್ ಆಟೋ ಬುಕ್ ಮಾಡಿ ಟಿನ್‌ಫ್ಯಾಕ್ಟರಿಯಿಂದ ಆಟೋ ಹತ್ತಿ ಕೋರಮಂಗಲದಲ್ಲಿ ಬಂದು ಇಳಿದಿದ್ದರು. ಆಟೋ ಚಾರ್ಜ್ ಕೊಡೊಣಾ ಎಂದು ಪಾಕೆಟ್‌ನಿಂದ ಪರ್ಸ್ ತೆಗೆದು ಮೊಬೈಲ್ ನೋಡಿದಾಗ ಶಾಕ್‌ವೊಂದು ಕಾದಿತ್ತು.
ಉಬರ್ ಆ್ಯಪ್‌ನಲ್ಲಿ ತೋರಿಸಿದ ಆಟೋ ಚಾರ್ಜ್ ನೋಡಿ, ಒಂದು ಕ್ಷಣ ತಲೆ ತಿರುಗುವಂತೆ ಮಾಡಿತ್ತು. ಯಾಕಂದರೆ ಟಿನ್ ಫ್ಯಾಕ್ಟರಿಯಿಂದ ಕೋರಮಂಗಲಗೆ 1,03,11,055 ರೂ. ಆಟೋ ಚಾರ್ಜ್ ತೋರಿತ್ತು. 207 ರೂ. ಆಗಿದ್ದ ಜಾಗದಲ್ಲಿ ಕೋಟಿ ರೂ. ನೋಡುತ್ತಿದ್ದಂತೆ ಬೆಚ್ಚಿಬಿದ್ದಿದ್ದ.
ಸದ್ಯ ಕೋಟಿ ರೂ. ಆಟೋ ಚಾರ್ಜ್ ತೋರಿಸುತ್ತಿದ್ದ ಉಬರ್ ಆ್ಯಪ್‌ನ ವಿಡಿಯೊ ಮಾಡಿ ಪ್ರಯಾಣಿಕ ಸೋಶಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡಿದ್ದಾರೆ. ಇಂತಹ ಆ್ಯಪ್ ಆಧಾರಿತ ಆಟೋಗಳನ್ನು ಬಳಕೆ ಮಾಡದಂತೆ ಮನವಿ ಮಾಡಿದ್ದಾರೆ. ಕೂಡಲೇ ಇಂತಹ ಆ್ಯಪ್‌ಗಳ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಪ್ರಯಾಣಿಕರಿಂದ ಕಂಪೆನಿಗಳು ಹೇಗೆಲ್ಲ ಸುಲಿಗೆ ಮಾಡುತ್ತವೆ. 100-200ಪ್ರಯಾಣದ ಶುಲ್ಕಕ್ಕೆ 1 ಕೋಟಿ ರೂ. ತೋರಿಸುತ್ತಿದೆ ಎಂದು ಕಿಡಿಕಾರಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ