Site icon Vistara News

Robbery Case : `ಗೇ’ ಆ್ಯಪ್‌ನಲ್ಲಿ ಸಿಕ್ಕ ಮಹಾಶೂರ; ಮೀಟ್‌ ಮಾಡಲು ಬಂದವ ಲೂಟ್‌ ಮಾಡಿದ!

gay app robbery case in Bengaluru

ಬೆಂಗಳೂರು: ಈಗಂತೂ ಆನ್‌ಲೈನ್‌ನಲ್ಲಿ ನೂರಾರು ಡೇಟಿಂಗ್‌ ಆ್ಯಪ್‌ಗಳು (Dating App) ಸಿಗುತ್ತವೆ. ಇದರ ಹಿಂದೆ ಬಿದ್ದ ಯುವಜನತೆ ಮೋಸ ಹೋಗುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿದೆ. ಸದ್ಯ ಆಡುಗೋಡಿಯಲ್ಲಿ ಗ್ರೈಂಡರ್ (GRINDR) ಎಂಬ ಗೇ ಡೇಟಿಂಗ್‌ ಆ್ಯಪ್‌ (Gay App) ಮೂಲಕ ಪರಿಚಯ ಆದವನೇ ದರೋಡೆಕೋರನಾಗಿ ಎಲ್ಲವನ್ನೂ (Robbery Case) ದೋಚಿ ಹೋಗಿದ್ದಾನೆ.

ನದೀಂ ಎಂಬಾತನಿಗೆ ಗ್ರೈಂಡರ್ ಗೇ ಡೇಟಿಂಗ್‌ ಆ್ಯಪ್‌ನಲ್ಲಿ ಫರ್ಹಾನ್ ಎಂಬಾತ ಪರಿಚಿತನಾಗಿದ್ದ. ಕೆಲ ದಿನಗಳ ಕಾಲ ಮಾತುಕತೆಯಲ್ಲಿದ್ದ ಇವರ ಸ್ನೇಹವು ಮತ್ತೊಂದು ಹಂತಕ್ಕೆ ತಲುಪಿತ್ತು. ಭೇಟಿ ಮಾಡುವ ಉದ್ದೇಶದಿಂದ ಕಳೆದ ನ. 22ರಂದು ನದೀಂ, ಗೇ ಆ್ಯಪ್‌ನಲ್ಲಿ ಆರ್ಡರ್‌ ಮಾಡಿ ಫರ್ಹಾನ್‌ನನ್ನು ಕರೆಸಿಕೊಂಡಿದ್ದ.

ಸಂಜೆ ಸುಮಾರು 4 ಗಂಟೆಗೆ ನದೀಂ ಮನೆಗೆ ಬಂದಿದ್ದ ಫರ್ಹಾನ್‌ ಕೆಲಕಾಲ ಮಾತುಕತೆಯಲ್ಲಿ ತೊಡಗಿದ್ದರು. ಈ ನಡುವೆ ವಾಷ್‌ ರೂಂಗೆ ಎಂದು ಒಳಹೋದ ಫರ್ಹಾನ್‌ ತನ್ನ ಗ್ಯಾಂಗ್‌ಗೆ ಕಾಲ್‌ ಮಾಡಿ ಕರೆಸಿಕೊಂಡಿದ್ದ. 4-5 ಮಂದಿ ಮನೆಯ ಬಾಗಿಲನ್ನು ಬಡಿದು ತೆಗೆಯುವಂತೆ ಬೆದರಿಸಿದ್ದಾರೆ. ಈ ವೇಳೆ ಭಯಗೊಂಡ ನದೀಂ ಫರ್ಹಾನ್‌ ಇದ್ದ ವಾಷ್‌ ರೂಮ್‌ನ ಬಾಗಿಲು ಲಾಕ್‌ ಮಾಡಿದ್ದಾರೆ.

ಇದನ್ನೂ ಓದಿ:Road Accident : ಬರ್ತ್‌ಡೇ ದಿನವೇ ಡೆತ್‌ಡೇ; ಸ್ನೇಹಿತರಿಬ್ಬರ ಪ್ರಾಣ ತೆಗೆದ ಬಸ್‌!

ಬಳಿಕ ಮನೆಯ ಬಾಗಿಲು ಬಡಿಯುತ್ತಿದ್ದ ಅಪರಿಚಿತರಿಗೆ ನೀವು ಇಲ್ಲಿಂದ ಹೋಗಿ ಇಲ್ಲದಿದ್ದರೆ ಪೊಲೀಸ್‌ರಿಗೆ ಫೋನ್‌ ಮಾಡುವುದಾಗಿ ನದೀಂ ಹೇಳಿದ್ದಾನೆ. ಈ ವೇಳೆ ವಾಷ್ ರೂಂ ಬಾಗಿಲಿನ ಲಾಕ್‌ ಮುರಿದು ಹೊರಗೆ ಬಂದ ಫರ್ಹಾನ್‌, ಮನೆಯ ಬಾಗಿಲು ತೆಗೆದಿದ್ದಾನೆ. ಬಾಗಿಲು ತೆರೆಯದಂತೆ ಕೇಳಿಕೊಂಡರೂ, ಅಪರಿಚಿತರ ಒಳಬರಲು ಸಹಾಯ ಮಾಡಿದ್ದಾನೆ ಎಂದು ನದೀಂ ದೂರಲ್ಲಿ ಉಲ್ಲೇಖಿಸಿದ್ದಾರೆ.

ಬಾಗಿಲು ತೆರೆಯುತ್ತಿದ್ದ ಒಳನುಗ್ಗಿದ ಅಪರಿಚಿತರು, ಅವಾಚ್ಯ ಶಬ್ದಗಳಿಂದ ನಿಂದಿಸಿ ದೊಣ್ಣೆಯಿಂದ ದೈಹಿಕವಾಗಿ ಹೆಲ್ಲೆ ಮಾಡಿ ಜೀವ ಬೇದರಿಕೆ ಹಾಕಿದ್ದಾರೆ. ಮಾತ್ರವಲ್ಲದೇ ನದೀಂ ಬಳಿಯಿದ್ದ 45 ಸಾವಿರ ಮೌಲ್ಯದ ಮೊಬೈಲ್, ದುಬಾರಿ ವಾಚ್‌ಗಳು ಸೇರಿ ಗೂಗಲ್ ಹಾಗೂ ಫೋನ್ ಪೇ ಮೂಲಕ ಹಣವನ್ನು ವರ್ಗಾಯಿಸಿಕೊಂಡು ಪರಾರಿ ಆಗಿದ್ದಾರೆ.

ಸದ್ಯ ಫರ್ಹಾನ್ ಹಾಗು ಇನ್ನಿತರರ ವಿರುದ್ಧ ನದೀಂ ದೂರು ನೀಡಿದ್ದಾರೆ. ಆಡುಗೋಡಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆಯನ್ನು ನಡೆಸುತ್ತಿದ್ದು, ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version